Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಮನ್  ಕಿ  ಬಾತ್


ನನ್ನೊಲವಿನ ದೇಶವಾಸಿಗಳೇ, ನಮಸ್ಕಾರ.  ನೀವು ರೇಡಿಯೋದಲ್ಲಿ ನನ್ನ ಮನದ ಮಾತು ಕೇಳುತ್ತಾ ಇರಬಹುದು.  ಆದರೆ, ನಿಮ್ಮ ಮನಸ್ಸು ಮಕ್ಕಳ ಪರೀಕ್ಷೆ ಆರಂಭವಾಗಿರುವ ಕಡೆ ಹರಿದಿರಬಹುದು.  ಕೆಲವು ಮಕ್ಕಳಿಗೆ 10ನೇ – 12ನೇ ತರಗತಿ ಪರೀಕ್ಷೆ ಪ್ರಾಯಶಃ ಮಾರ್ಚ್ ಒಂದರಿಂದಲೇ ಆರಂಭವಾಗುತ್ತಿರಬಹುದು.  ಆದುದರಿಂದ ಅದೇ ನಿಮ್ಮ ಮನಸ್ಸಿನಲ್ಲಿ ಹರಿದಾಡುತ್ತಿರಬಹುದು.  ನಾನೂ ಸಹ ನಿಮ್ಮ ಈ ಯಾತ್ರೆಯಲ್ಲಿ ನಿಮ್ಮೊಡನೆ ಶಾಮೀಲಾಗಲು ಬಯಸುವೆ.  ನಿಮಗೆ ನಿಮ್ಮ ಮಕ್ಕಳ ಪರೀಕ್ಷೆಯ ಬಗ್ಗೆ ಎಷ್ಟು ಚಿಂತೆ  ಯಿದೆಯೋ, ನನಗೂ ಅಷ್ಟೇ ಚಿಂತೆ ಉಂಟು.  ಆದರೆ, ನಾವು ಪರೀಕ್ಷೆ, ಅನ್ನು ನೋಡುವ ವಿಧಾನ ಬದಲಿಸಿಕೊಂಡರೆ ಆಗ ಪ್ರಾಯಶಃ ನಾವು ಚಿಂತಾಮುಕ್ತರಾಗಲೂ ಸಾಧ್ಯ.  ನಾನು ನನ್ನ ಹಿಂದಿನ ಮನದ ಮಾತಿನಲ್ಲಿ ನೀವು ನರೇಂದ್ರ ಮೋದಿ ಆಪ್  ಗೆ   ನಿಮ್ಮ ಅನುಭವ, ನಿಮ್ಮ ಸಲಹೆ ನನಗೆ ಖಂಡಿತವಾಗಿಯೂ ಕಳುಹಿಸಿ ಎಂದು ಹೇಳಿದ್ದೆ.  ನನಗೆ ಸಂತೋಷ ತಂದ ಸಂಗತಿಯೆಂದರೆ ಶಿಕ್ಷಕರು, ಬಹಳ ಯಶಸ್ವೀ ಕೆರಿಯರ್ ಮಾಡಿಕೊಡುವಂತಹ ವಿದ್ಯಾರ್ಥಿಗಳು, ತಂದೆ – ತಾಯಿಗಳು, ಸಮಾಜದ ಕೆಲವು ಚಿಂತಕರು ಬಹಳಷ್ಟು ಸಂಗತಿಗಳನ್ನು ಬರೆದು ಕಳುಹಿಸಿದ್ದಾರೆ.  ಎರಡು ಸಂಗತಿಗಳಂತೂ ನನ್ನ ಮನಸ್ಸಿಗೆ ನಾಟಿತು.  
ವಿಷಯದ ಮೇಲೆ ಸರಿಯಾದ ಹತೋಟಿಯನ್ನು ಪತ್ರ ಬರೆದವರೆಲ್ಲರೂ ಹೊಂದಿರುವರು.   ಎರಡನೆಯ ಸಂಗತಿ ಎಂದರೆ ಇಷ್ಟು ಸಾವಿರಾರು ಸಂಖ್ಯೆಯಲ್ಲಿ ಪತ್ರಗಳು ಬಂದಿರುವುದೇ, ಪ್ರಾಯಶಃ ಇದು ಬಹಳ ಮಹತ್ವಪೂರ್ಣ ವಿಷಯ ಎಂಬುದನ್ನು ನಾನು ಒಪ್ಪುವೆ.  ಆದರೆ, ಬಹಳಷ್ಟು ನಾವು ಪರೀಕ್ಷೆ ವಿಷಯವನ್ನು, ಶಾಲೆಯ ಪರಿಸರದ ವರೆಗೆ ಅಥವಾ ಕುಟುಂದ ವರೆಗೆ ಅಥವಾ ವಿದ್ಯಾರ್ಥಿಗಳ ವರೆಗೆ ಸೀಮಿತಗೊಳಿಸಿಬಿಟ್ಟಿದ್ದೇವೆ.  ನನ್ನ ಆಪ್   ನಲ್ಲಿ ಬಂದಿರುವ ಸಲಹೆಗಳಿಂದ ನನಗನಿಸುತ್ತದೆ, ಇದು ಬಹಳವೇ ದೊಡ್ಡ, ಇಡೀ ರಾಷ್ಟ್ರದಲ್ಲಿ ಸತತವಾಗಿ ವಿದ್ಯಾರ್ಥಿಗಳಲ್ಲಿ ಈ ವಿಷಯ ಕುರಿತು, ಚರ್ಚೆ ನಡೆಯುತ್ತಿರಬೇಕು ಎಂದು ನನಗನಿಸುತ್ತದೆ.  ನಾನು ಇಂದು ನನ್ನ ಮನದ ಮಾತಿನಲ್ಲಿ ವಿಶೇಷವಾಗಿ ತಂದೆ – ತಾಯಿಗಳೊಡನೆ, ಪರೀಕ್ಷಾರ್ಥಿಗಳೊಡನೆ ಹಾಗೂ ಅವರ ಶಿಕ್ಷಕರೊಡನೆ ಮಾತನಾಡಲು ಬಯಸುವೆ.  ನಾನೇನು ಕೇಳಿರುವೆ, ನಾನೇನು ಓದಿರುವೆ, ನನಗೇನು ತಿಳಿಸಲಾಗಿದೆ, ಅವುಗಳಿಂದಲೂ ಕೆಲವು ಮಾತುಗಳನ್ನು ತಿಳಿಸುವೆ.  ಕೆಲವು ನನಗನ್ನಿಸುವುದನ್ನು ಜೋಡಿಸುವೆ.  ಆದರೆ, ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳಿಗೆ ನನ್ನ 25 – 30 ನಿಮಿಷಗಳ ಈ ಮಾತು ಬಹಳ ಪ್ರಯೋಜನಕಾರಿ ಆಗಲಿದೆ ಎಂಬುದು ನನ್ನ ಅಭಿಮತ.
ನನ್ನೊಲವಿನ ವಿದ್ಯಾರ್ಥಿ ಮಿತ್ರರೇ, ನಾನು ಹೇಳುವ ಮಾತಿಗೆ ಮುನ್ನ ಇಂದಿನ ಮನದ ಮಾತಿನ ಆರಂಭವನ್ನು, ವಿಶ್ವದ ಸುವಿಖ್ಯಾತ, ಆರಂಭದ ಆಟಗಾರನೊಡನೆ ಏಕೆ ಆರಂಭಿಸಬಾರದು?  ಜೀವನದಲ್ಲಿ ,ಯಶಸ್ಸಿನ ಶಿಖರವೇರಲು ಯಾವ ಸಂಗತಿಗಳು ಅವರಿಗೆ ನೆರವಾದವು ಎಂಬ, ಅವರ ಅನುಭವ ನಿಮಗೆ, ಖಂಡಿತವಾಗಿಯೂ ಉಪಯೋಗಕ್ಕೆ ಬೀಳಲಿದೆ.  ಭಾರತದ ಯುವಕರ ಅಭಿಮಾನಕ್ಕೆ ಪಾತ್ರರಾದ ಭಾರತರತ್ನ ಶ್ರೀಮಾನ್ ಸಚಿನ್ ತೆಂಡೂಲ್ಕರ್ ಕಳುಹಿಸಿರುವ ಸಂದೇಶವನ್ನು ನಾನು ನಿಮಗೆ ಕೇಳಿಸಬಯಸುವೆ.
 
”ನಮಸ್ಕಾರ, ನಾನು ಸಚಿನ್ ತೆಂಡೂಲ್ಕರ್ ಮಾತನಾಡುತ್ತಿರುವೆ, ಇನ್ನು ಕೆಲವೇ ದಿನಗಳಲ್ಲಿ ಪರೀಕ್ಷೆಗಳು ಆರಂಭವಾಗಲಿವೆ ಎಂಬುದು ನನಗೆ ಗೊತ್ತು.  ನಿಮ್ಮಲ್ಲಿ ಕೆಲವರು ಟೆನ್ಷನ್ ನಲ್ಲಿ ಇರಬಹುದು.  ನಿಮಗೆ ನನ್ನದು ಒಂದೇ ಒಂದು ಸಂದೇಶ, ನಿಮ್ಮಿಂದ ನಿರೀಕ್ಷೆಗಳನ್ನು ನಿಮ್ಮ ತಂದೆ – ತಾಯಿಗಳು ಮಾಡುವರು, ನಿಮ್ಮ ಶಿಕ್ಷಕರು ಮಾಡುವರು .  ನಿಮ್ಮ ಕುಟುಂಬದ ಇತರ ಸದಸ್ಯರು ಮಾಡುವರು , ಗೆಳೆಯರು ಮಾಡುವರು.  ನೀವು ಎಲ್ಲೇ ಹೋಗಲಿ ಎಲ್ಲರೂ ನಿಮ್ಮನ್ನು ನಿಮ್ಮ ಪರೀಕ್ಷೆ ತಯಾರಿ ಹೇಗೆ ನಡೆದಿದೆ ಎಂದು ಕೇಳುವವರೆ, ಶೇಕಡಾ ಎಷ್ಟು ಅಂಕ ಸ್ಕೋರ್  ಮಾಡುವೆ ಎಂದು ಕೇಳುವವರೇ, ನಾನು ನಿಮಗೆ ಹೇಳುವುದಿಷ್ಟೆ – ಸ್ವತಃ ನಿಮಗೆ ನೀವೇ ಒಂದು ಟಾರ್ಗೆಟ್ 
ಇಟ್ಟುಕೊಳ್ಳಿ.  ಉಳಿದವರ ನಿರೀಕ್ಷೆಯ ಒತ್ತಡಕ್ಕೆ ಸಿಲುಕಬೇಡಿ.  ನೀವು ಖಂಡಿತವಾಗಿಯೂ ಪರಿಶ್ರಮಪಡಿ.  ಆದರೆ, ಒಂದು ವಾಸ್ತವಿಕ ಸಾಧಿಸಲು ಸಾಧ್ಯವಾಗಬಲ್ಲ ಟಾರ್ಗೆಟ್ಟನ್ನು, ಗುರಿಯನ್ನು ನಿಮಗೆ ನೀವೇ ಸೆಟ್ ಮಾಡಿಕೊಳ್ಳಿ ಮತ್ತು ಆ ಟಾರ್ಗೆಟ್ ತಲುಪಲು ಪ್ರಯತ್ನಪಡಿ.  ನಾನು ಕ್ರಿಕೆಟ್ ಆಟ ಆಡುತ್ತಿದ್ದಾಗ ನನ್ನಿಂದಲೂ ಬಹಳಷ್ಟು ನಿರೀಕ್ಷೆಗಳು ವ್ಯಕ್ತವಾಗುತ್ತಿದ್ದವು.  ಕಳೆದ 24 ವರ್ಷಗಳಲ್ಲಿ ಹಲವಾರು ಕಠಿಣ ಕ್ಷಣಗಳು ಎದುರಾಗಿವೆ ಮತ್ತು ಕೆಲವೊಮ್ಮೆ ಒಳ್ಳೆಯ ಕ್ಷಣಗಳೂ ಬಂದಿವೆ.  ಆದರೆ, ಜನರ ನಿರೀಕ್ಷೆಗಳು ಸದಾಕಾಲವೂ ಇರುತ್ತಿತ್ತು ಮತ್ತು ಸಮಯ ಕಳೆದಂತೆಲ್ಲಾ ಅವು ಹೆಚ್ಚುತ್ತಲೇ ಹೋದವು.  ನಿರೀಕ್ಷೆಗಳು ಹೆಚ್ಚುತ್ತಲೇ ಹೋದವು.  ಇದಕ್ಕೆ ಒಂದು ಪರಿಹಾರ ಕಂಡುಕೊಳ್ಳುವ ಅಗತ್ಯ ಬಹಳವಾಗಿತ್ತು.  ಆಗ ನಾನು ಹೀಗೆಯೇ ಯೋಚಿಸಿ, ನಾನು ನನ್ನ ಸ್ವಂತದ ನಿರೀಕ್ಷೆಗಳನ್ನು ಹೊಂದಿರುವೆ ಹಾಗೂ ಸ್ವತಃ ನನಗೆ ನಾನೇ ಟಾರ್ಗೆಟ್ ಸೆಟ್ ಮಾಡಿಕೊಳ್ಳುವೆ ಎಂಬ ತೀರ್ಮಾನಕ್ಕೆ ಬಂದೆ.  ಒಂದು ವೇಳೆ ನನಗೆ ನಾನೇ ಗುರಿ ನಿಗದಿಪಡಿಸಿಕೊಂಡು ಹಾಗೂ ಅದನ್ನು ಸಾಧಿಸಲು ನನಗೆ ಸಾಧ್ಯವಾಗುವುದಾದರೆ, ನಾನು ನಿಶ್ಚಿತ  ವಾಗಿಯೂ ದೇಶಕ್ಕಾಗಿ ಏನೋ ಒಂದಿಷ್ಟು ಒಳ್ಳೆಯ ಕೆಲಸ ಮಾಡುತ್ತಿರುವೆ ಎಂದು ನನಗನ್ನಿಸುತ್ತಿತ್ತು ಮತ್ತು ಆ ಗುರಿಗಳನ್ನೇ ನಾನು ಯಾವಾಗಲೂ ಸಾಧಿಸಲು ಪ್ರಯತ್ನಪಡುತ್ತಿದ್ದೆ.  ನನ್ನ ದೃಷ್ಟಿ ಚೆಂಡಿನ ಮೇಲೆ ಫೋಕಸ್ ಆಗಿರುತ್ತಿತ್ತು ಮತ್ತು ಟಾರ್ಗೆಟ್ ಗಳು ತಂತಾನೆ ನಿಧಾನವಾಗಿ ಸಾಧಿಸುತ್ತಾ ಹೋದವು.  ನಿಮ್ಮ ಆಲೋಚನೆ ಸಕಾರಾತ್ಮಕವಾಗಿರುವುದು ಬಹಳ ಅಗತ್ಯ ಎಂದು ನಾನು ನಿಮಗೆ ತಿಳಿಸಬಯಸುವೆ.  ಪಾಸಿಟಿವ್ ಯೋಚನೆಯಿಂದ ಪಾಸಿಟಿವ್ ಫಲಿತಾಂಶಗಳು ಹಿಂಬಾಲಿಸುತ್ತವೆ.  ಆದುದರಿಂದ ನೀವು ಖಂಡಿತವಾಗಿಯೂ ಪಾಟಿಸಿವ್ ಆಗಿರಿ ಹಾಗೂ ಮೇಲಿನವ ನಿಮಗೆ ಖಂಡಿತವಾಗಿಯೂ ಒಳ್ಳೆಯ ಫಲಿತಾಂಶ ನೀಡುವನು.  ಈ ಬಗ್ಗೆ ನನಗೆ ಸಂಪೂರ್ಣ ವಿಶ್ವಾಸವಿದೆ ಮತ್ತು ಪರೀಕ್ಷೆಗಳಿಗಾಗಿ ನಿಮಗೆ ಶುಭ ಹಾರೈಕೆಗಳನ್ನು ನಾನು ನೀಡುವೆ.  ಟೆನ್ಷನ್ ಬಿಟ್ಟು ಪರೀಕ್ಷೆ ಪೇಪರ್ ಬರೆಯಿರಿ ಹಾಗೂ ಉತ್ತಮ ಫಲಿತಾಂಶ ಗಳಿಸಿ, ಗುಡ್  ಲಕ್  ”.
 
ಸ್ನೇಹಿತರೇ, ನೋಡಿದಿರಾ, ತೆಂಡೂಲ್ಕರ್ ಜೀ ಏನು ಹೇಳುತ್ತಿದ್ದಾರೆ ಎಂದು, ಈ ನಿರೀಕ್ಷೆ  ಎಂಬ  ಹೊರೆಯ ಕೆಳಗೆ ಹೂತುಹೋಗಬೇಡಿ.  ನಿಮ್ಮ ಭವಿಷ್ಯ ರೂಪಿಸಿಕೊಳ್ಳುವುದು ನಿಮ್ಮದೇ ಹೊಣೆ.  ನೀವು ಸ್ವತಃ ನಿಮ್ಮ ಗುರಿ ನಿಗದಿಪಡಿಸಿ.  ಸ್ವತಃ ನಿಮ್ಮ ಟಾರ್ಗೆಟ್ ಸಿದ್ಧಪಡಿಸಿ ಮುಕ್ತ ಮನಸ್ಸಿನಿಂದ, ಮುಕ್ತ ಯೋಚನೆಯೊಂದಿಗೆ, ಮುಕ್ತ ಸಾಮರ್ಥ್ಯ ದೊಡನೆ ಇದನ್ನು ಮಾಡಿ.  ಸಚಿನ್ ಜೀ ಅವರ ಈ ಮಾತು ನಿಮಗೆ ಕೆಲಸಕ್ಕೆ ಬರುವುದು ಎಂಬ ವಿಶ್ವಾಸ ನನ್ನದು ಹಾಗೂ ಈ ಸಂಗತಿ ಸರಿಯಾಗಿದೆ.  ಪ್ರತಿಸ್ಪರ್ಧೆ ಏಕೆ?  ಅನುಸ್ಪರ್ಧೆ ಯಾಕಾಗಬಾರದು?  ಅಂದರೆ ನಮಗೆ ನಾವು ನಾವೇ ಸ್ಪರ್ಧೆಗೆ ಒಡ್ಡಿಕೊಳ್ಳಬಾರದೇಕೆ?  ಇತರರೊಡನೆ ಸ್ಪರ್ಧಿಸುವುದರಲ್ಲಿ ಸಮಯವನ್ನು ಹಾಳು ಮಾಡುವುದೇಕೆ?  ನಮಗೆ ನಾವೇ ಏಕೆ ಸ್ಪರ್ಧೆಗೆ ಒಡ್ಡಿಕೊಳ್ಳಬಾರದು?  ನಾವು ನಮ್ಮನ್ನು ನಾವೇ ನಮ್ಮ ಹಿಂದಿನ ದಾಖಲೆಗಳನ್ನು ಮುರಿಯುವ ತೀರ್ಮಾನ ಏಕೆ ಮಾಡಬಾರದು?  ನೋಡಿ ನೀವು ಮುನ್ನಡೆಯುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಹಾಗೂ ನೀವು ನಿಮ್ಮದೇ ಹಿಂದಿನ ದಾಖಲೆಗಳನ್ನು ಮುರಿದರೆನ್ನಿ ಆಗ ನಿಮ್ಮ ಸಂತೋಷಕ್ಕೆ, ಆನಂದಕ್ಕೆ ಇತರರ ಕಡೆಯಿಂದ ಅಪೇಕ್ಷೆಯೂ ಇರುವುದಿಲ್ಲ.  ಒಂದು ರೀತಿಯ ಒಳಗಿನಿಂದ ಸಂತೋಷ ಪ್ರಕಟವಾಗುತ್ತದೆ.
 
ಸ್ನೇಹಿತರೇ, ಪರೀಕ್ಷೆಯನ್ನು ಅಂಕಗಳ ಆಟ ಎಂದು ಪರಿಗಣಿಸಬೇಡಿ.  ಎಲ್ಲಿಗೆ ಮುಟ್ಟಿದೆ, ಎಷ್ಟು ಮುಟ್ಟಿದೆ, ಆ ಲೆಕ್ಕಾಚಾರದಲ್ಲೂ ಸಿಲುಕಿಹಾಕಿಕೊಳ್ಳಬೇಡಿ.  ಜೀವನವನ್ನು ಯಾವುದಾದರೂ ಮಹತ್ವದ ಉದ್ದೇಶದೊಡನೆ ಜೋಡಿಸಿಕೊಳ್ಳಬೇಕು.  ಒಂದು ಕನಸನ್ನು ಮುಂದಿಟ್ಟು ಕೊಂಡು ಸಾಗಬೇಕು.  ಸಂಕಲ್ಪಬದ್ಧರಾಗಬೇಕು.  ಈ ಪರೀಕ್ಷೆಗಳಂತೂ ನಾವು ಸರಿದಾರಿಯಲ್ಲಿ ಹೋಗುತ್ತಿದ್ದೆವೋ, ಇಲ್ಲವೋ ಎನ್ನುವುದರ ಲೆಕ್ಕಾಚಾರ ಮಾಡುತ್ತವೆ.  ನಮ್ಮ ವೇಗ ಸರಿ ಇದೆಯೋ, ಇಲ್ಲವೋ ಎನ್ನುವ ಲೆಕ್ಕಾಚಾರ ಮಾಡುತ್ತವೆ.  ಹೀಗಾಗಿ ನಿಮ್ಮ ಕನಸು ವಿಶಾಲ, ವಿರಾಟ್ ರೂಪದ್ದಾಗಿದ್ದರೆ, ಆಗ ಪರೀಕ್ಷೆ ಎಂಬುದು ತಂತಾನೆ ಒಂದು ಆನಂದೋತ್ಸವವಾಗಿ ಪರಿವರ್ತನೆ ಆಗಿಬಿಡುತ್ತದೆ.  ಪ್ರತಿ ಪರೀಕ್ಷೆಯೂ ಆ ಮಹಾ ಉದ್ದೇಶದ ಸಾಕಾರಗೊಳ್ಳುವ ಒಂದು ಹೆಜ್ಜೆಯಾಗಲಿದೆ.  ಪ್ರತಿಯೊಂದು ಯಶಸ್ಸು, ಆ ಮಹಾನ್ ಉದ್ದೇಶದ ಪ್ರಾಪ್ತಿಯ ‘ ಕೀಲಿಕೈ ‘ ಆಗಿಬಿಡಲಿದೆ.  ಆದುದರಿಂದ ಈ ವರ್ಷ ಏನಾದೀತು, ಈ ಪರೀಕ್ಷೆಯಲ್ಲಿ ಏನಾಗಿ ಬಿಡುತ್ತದೆ ಎಂಬುದಕ್ಕಷ್ಟೇ ಸೀಮಿತಗೊಳ್ಳಬೇಡಿ.  ಒಂದು ಅತಿ ದೊಡ್ಡ ಉದ್ದೇಶವನ್ನು ಇಟ್ಟುಕೊಂಡು ನಡೆಯಿರಿ ಮತ್ತು ಅದರಲ್ಲಿ ಯಾವಾಗಲಾದರು ಅಪೇಕ್ಷೆಗಿಂತ ಸ್ವಲ್ಪ ಕಡಿಮೆ ಸಾಧಿಸಿದರೂ ನಿರಾಶೆ ಉಂಟಾಗುವುದಿಲ್ಲ.  ಬದಲಿಗೆ ತೀವ್ರ ಒತ್ತು ಕೊಡುವ ಹಾಗೂ ಶಕ್ತಿ ಉಪಯೋಗಿಸುವ ಮತ್ತು ಪ್ರಯತ್ನಿಸುವ ಧೈರ್ಯ ಬರುತ್ತದೆ.  ಸಾವಿರಾರು ಜನ ನನಗೆ ನನ್ನ ಚಿಚಿಠಿನಲ್ಲಿ, ಮೊಬೈಲ್ ಫೋನ್ ಮೂಲಕ ಸಣ್ಣ ಸಣ್ಣ ಸಂಗತಿಗಳನ್ನು ಬರೆದಿದ್ದಾರೆ.  ಆರೋಗ್ಯಪೂರ್ಣ ಶರೀರದಲ್ಲಿ ಆರೋಗ್ಯವಂತ ಮನಸ್ಸಿರುತ್ತದೆ ಎಂಬ ಬಗ್ಗೆ ಶ್ರೇಯ್ ಗುಪ್ತಾ ಅವರು ಒತ್ತು ಹಾಕಿದ್ದಾರೆ.  ವಿದ್ಯಾರ್ಥಿಗಳು ತಮ್ಮ ಓದಿನ ಜೊತೆಗೆ ತಮ್ಮ ಆರೋಗ್ಯದ ಬಗ್ಗೆಯೂ ಗಮನ ಹರಿಸಲಿ, ಆದರಿಂದ ನೀವು ಪರೀಕ್ಷೆಯಲ್ಲಿ ಆರೋಗ್ಯವಂತರಾಗಿ, ಚೆನ್ನಾಗಿ ಬರೆಯಲು ಸಾಧ್ಯವಾದೀತು.  ಅಂದರೆ, ಈಗ ನೀವು ಅಂತಿಮ ದಿನಗಳ ಪರೀಕ್ಷೆ ತಯಾರಿಯಲ್ಲಿದ್ದೀರಿ, ಈಗ ನಿಮ್ಮನ್ನು ಬಸ್ಕಿ ಹೊಡೆಯಲು ಆರಂಭಿಸಿ ಎಂದು, ಮೂರು ಕಿಲೋ ಮೀಟರ್, 5 ಕಿಲೋ ಮೀಟರ್ ಓಡಲು ಹೋಗಿ ಎಂದಂತೂ ನಾನು ಹೇಳಲಾರೆ.  ಆದರೆ, ಒಂದು ಮಾತಂತೂ ಸರಿ.  ಅದೇನೆಂದರೆ, ವಿಶೇಷವಾಗಿ ಪರೀಕ್ಷಾ ದಿನಗಳಲ್ಲಿ ನಿಮ್ಮ ದಿನಚರಿ ಹೇಗಿರುತ್ತದೆಯೋ, ಅದೇ ರೀತಿ 365 ದಿವಸಗಳೂ ನಮ್ಮ ದಿನಚರಿ, ನಮ್ಮ ಕನಸುಗಳು ಮತ್ತು ಸಂಕಲ್ಪಗಳಿಗೆ ಅನುರೂಪವಾಗಿ ಇರಬೇಕು ಎಂದು.
 
ಶ್ರೀ ಪ್ರಭಾಕರ್ ರೆಡ್ಡಿ ಜೀಯವರ ಒಂದು ಮಾತಿನೊಡನೆ ನನ್ನ ಸಹಮತವಿದೆ.  ಸರಿಯಾದ ಸಮಯಕ್ಕೆ ಮಲಗಿ, ಬೆಳಿಗ್ಗೆ ಬೇಗನೆ ಎದ್ದು ಓದಿನ ರಿವಿಷನ್ ಮಾಡಬೇಕು ಎಂದು ಅವರು ವಿಶೇಷವಾಗಿ ಆಗ್ರಹಪಡಿಸಿದ್ದಾರೆ.  ಪರೀಕ್ಷಾ ಕೇಂದ್ರಕ್ಕೆ ಅಡ್ಮಿಷನ್ ಕಾರ್ಡ್ ಮತ್ತು ಇತರೆ ವಸ್ತುಗಳೊಡನೆ ಸಮಯಕ್ಕಿಂತ ಮುಂಚೆ ತಲುಪುವುದು ಅಗತ್ಯ.  ಈ ಮಾತನ್ನು ಪ್ರಭಾಕರ್ ರೆಡ್ಡಿ ಜೀ ಹೇಳಿದ್ದಾರೆ.  ಪ್ರಾಯಶಃ ನನಗೆ ಈ ಸಂಗತಿ ಹೇಳುವ ಧೈರ್ಯ ಇಲ್ಲ.  ಏಕೆಂದರೆ ನಾನು ನಿದ್ದೆಗೆ ಹೋಗುವ ವಿಚಾರದಲ್ಲಿ ಸ್ವಲ್ಪ ಉಡಾಫೆಯವನು ಹಾಗೂ ನಾನು ಬಹಳ ಕಡಿಮೆ ಸಮಯ ನಿದ್ದೆ ಮಾಡುವೆ ಎಂದು ನನ್ನ ಅನೇಕ ಮಿತ್ರರೂ ಸಹ ನನ್ನ ಮೇಲೆ ದೂರು ವ್ಯಕ್ತಪಡಿಸುತ್ತಲೇ  ಇರುತ್ತಾರೆ.  ಇದೊಂದು ನನ್ನ ದೌರ್ಬಲ್ಯ.  ನಾನೂ ಇದನ್ನು ಸರಿಪಡಿಸಿಕೊಳ್ಳಬಯಸುವೆ ಹಾಗೂ ಈ ವಿಚಾರದಲ್ಲಿ ನನ್ನ ಸಹಮತ ಇದೆ.  ನಿಗದಿತ ನಿದ್ರೆ ಮಾಡುವ ಸಮಯ ಸುಖ ನಿದ್ರೆ ನಿಮ್ಮ ದಿನದ ಚಟುವಟಿಕಗಳಷ್ಟೇ  ಮಹತ್ವಪೂರ್ಣ ಹಾಗೂ ಇದು ಸಾಧ್ಯವಾಗಬಲ್ಲ ಸಂಗತಿ.  ನಾನು ಭಾಗ್ಯವಂತ, ನಾನು ಕಡಿಮೆ ಸಮಯ ನಿದ್ದೆ ಮಾಡಬಹುದು, ಆದರೆ ಅದು ಬಹಳವೇ ಗಾಢ ನಿದ್ರೆಯಾಗಿರುತ್ತದೆ ಮತ್ತು ಇದರಿಂದಾಗಿ ನನ್ನ ಕೆಲಸವೂ ಸುಸೂತ್ರ ನಡೆದು ಹೋಗುತ್ತದೆ.  ಆದರೆ, ನಿಮ್ಮಲ್ಲಿ ನಾನೊಂದು ಆಗ್ರಹ ಮಾಡುವೆ.  ಮಲಗಲು ಹೋಗುವ ಮುನ್ನ ಕೆಲವರು ಬಹಳ ಹೊತ್ತು ಸುದೀರ್ಘ ಟೆಲಿಫೋನ್ ಸಂಭಾಷಣೆಯಲ್ಲಿ ನಿರತವಾಗುವುದು ಹವ್ಯಾಸವಾಗಿದೆ.  ಆಮೇಲೆ ಅದೇ ಯೋಚನೆಯ ಲಹರಿ ಹರಿದಾಡುತ್ತಿರುವಾಗಲಂತೂ ನಿದ್ರೆ ಬರುವುದಾದರೂ ಹೇಗೆ?  ಈಗ ನಾನು ನಿದ್ದೆ ಮಾಡುವ ಮಾತನಾಡುತ್ತಿರುವುದರಿಂದ ಪರೀಕ್ಷೆಗಾಗಿ ನಿದ್ರೆ ಮಾಡಿ ಎಂದು ನಾನು ಹೇಳುತ್ತಿರುವೆ ಎಂದು ತಪ್ಪಾಗಿ ಭಾವಿಸಬಾರದು. ನಾನು ಪರೀಕ್ಷೆ ಸಮಯದಲ್ಲಿ ನೀವು ಚೆನ್ನಾಗಿ ಪರೀಕ್ಷೆ ಬರೆಯುವುದಕ್ಕಾಗಿ ಟೆನ್ಷನ್ ಮುಕ್ತ ಸ್ಥಿತಿಗಾಗಿ ನಿದ್ರೆಯ ವಿಚಾರ ಹೇಳುತ್ತಿರುವೆ.  ನಿದ್ದೆ ಮಾಡುತ್ತಿರಿ ಎಂದು ನಾನು ಹೇಳುತ್ತಿಲ್ಲ.  ಇಲ್ಲವಾದರೆ ಪರೀಕ್ಷೆಯಲ್ಲಿ ಒಂದು ವೇಳೆ ಕಡಿಮೆ ಮಾರ್ಕ್ಸ್  ಗಳು ಬಂದಲ್ಲಿ ಹಾಗೂ ತಾಯಿಯಾದವಳು ಮಗನೇ ಏಕೆ ಕಡಿಮೆ ಮಾರ್ಕ್ಸ್   ತೆಗೆದುಕೊಂಡಿರುವೆ ಎಂದಾಗ, ಮೋದಿ ಜೀಯವರು ಮಲಗಲು ಹೇಳಿದ್ದಾರೆ ಎಂದು ನೀವು ಎಲ್ಲಾದರೂ ಸಬೂಬು ಹೇಳಿಬಿಡಬೇಡಿ.  ಆ ರೀತಿ ಮಾಡಬಾರದು.  ನನಗೆ ವಿಶ್ವಾಸ ಇದೆ, ನೀವು ಹಾಗೆ ಮಾಡುವುದಿಲ್ಲ ಎಂದು.
 
ಹಾಗೆ ನೋಡಿದರೆ ಜೀವನದಲ್ಲಿನ  ಶಿಸ್ತು –  ಯಶಸ್ಸುಗಳ  ಆಧಾರ.  ಅತಿ ಬಲಪಡಿಸಲು ಅತಿ ದೊಡ್ಡ ಅಂಶವಾಗುತ್ತದೆ.  ಒಂದು ಸಬಲ ತಳಪಾಯ ಶಿಸ್ತಿನಿಂದ ಬರುತ್ತದೆ ಹಾಗೂ ಯಾರು ಆಯೋಜಿತರಾಗಿರುತ್ತಾರೋ, ಅಶಿಸ್ತಿನವರಾಗಿರುತ್ತಾರೋ, ಬೆಳಿಗ್ಗೆ ಮಾಡುವ ಕೆಲಸವನ್ನು ರಾತ್ರಿ ತಡವಾಗಿ ಮಾಡುತ್ತಾರೋ, ಅವರಿಗೆ ಕೆಲಸ ಪೂರ್ಣಗೊಂಡಿತು ಎಂದಂತೂ ಅನ್ನಿಸುತ್ತದೆ.  ಆದರೆ, ಅದೆಷ್ಟು ಶಕ್ತಿ ಪೋಲಾಗುತ್ತದೆ ಹಾಗೂ ಪ್ರತಿ ಕ್ಷಣವೂ ಬಿಗುವಿನಿಂದ ಕೂಡಿರುತ್ತದೆ.  ನಮ್ಮ ಶರೀರದಲ್ಲೂ ಯಾವುದಾದರೂ ಒಂದು ಭಾಗ ಸ್ವಲ್ಪ ತೊಂದರೆಗೆ ಒಳಗಾದರೂ ಇಡೀ ಶರೀರ ಸ್ವಾಬಾವಿಕವಾಗಿ ಇಲ್ಲದಿರುವ ಅನುಭವ ಉಂಟಾಗುತ್ತದೆ.  ಅಷ್ಟೇ ಅಲ್ಲ ನಮ್ಮ ದಿನಚರಿ ಕೂಡಾ ಅಯೋಮಯವಾಗಿಬಿಡುತ್ತದೆ.  ಆದುದರಿಂದ ನಾವು ಯಾವುದೇ ಸಂಗತಿಯನ್ನು ಕ್ಷುಲ್ಲಕ ಎಂದು ಭಾವಿಸದಿರೋಣ.  ನೋಡಿ, ಯಾವುದು ನಿರ್ಧಾರಿತವಾಗಿರುತ್ತದೆ ಎಂದು ನಿಮಗನ್ನಿಸಿರುತ್ತದೆಯೋ, ಅವುಗಳಲ್ಲಿ ರಾಜಿ ಮಾಡಿಕೊಳ್ಳುವ ಚಟಕ್ಕೆ ನೀವು ಸಿಲುಕಿಹಾಕಿಕೊಳ್ಳಬೇಡಿ, ತೀರ್ಮಾನ ಮಾಡಿ, ಮಾಡಿನೋಡಿ.
 
ಗೆಳೆಯರೇ, ಆಗಾಗ ನಾನು ನೋಡಿರುವೆ ಪರೀಕ್ಷೆಗೆ ತೆರಳುವ ವಿದ್ಯಾರ್ಥಿಗಳಲ್ಲಿ ಎರಡು ನಮೂನೆಯವರು ಇರುತ್ತಾರೆ.  ತಾನೇನು ಓದಿದೆ, ಏನು ಕಲಿತೆ, ಯಾವ ವಿಚಾರದಲ್ಲಿ ತನಗೆ ಸಾಮರ್ಥ್ಯವಿದೆ, ಅವುಗಳ ಬಗ್ಗೆ ಗಮನ ಕೇಂದ್ರೀಕರಿಸುವವರು ಒಂದು ನಮೂನೆ.  ಗೆಳೆಯ, ಎಂತಹ ಪ್ರಶ್ನೆ ಬರುತ್ತದೆ ಗೊತ್ತಿಲ್ಲ, ಉತ್ತರಿಸುವನೋ ಇಲ್ಲವೋ ಗೊತ್ತಿಲ್ಲ.  ಪ್ರಶ್ನೆಪತ್ರಿಕೆ ಕಠಿಣವೋ ಸುಲಭವೋ ಗೊತ್ತಿಲ್ಲ ಎಂದು ಯೋಚಿಸುವ ವಿದ್ಯಾರ್ಥಿಗಳು ಇನ್ನೊಂದು ನಮೂನೆ.  ಈ ಎರಡೂ ನಮೂನೆಯ ವಿದ್ಯಾರ್ಥಿಗಳನ್ನ  ನೋಡಿರಲಿಕ್ಕೆ ಸಾಕು.  ಪ್ರಶ್ನೆಪತ್ರಿಕೆ ಹೇಗಿರುತ್ತದೆ ಎನ್ನುವ ಆತಂಕದಲ್ಲಿ ಇರುವವರಿಗೆ ಆ ಆತಂಕ ಅವರ ಫಲಿತಾಂಶದ ಮೋಲೂ ನಕಾರಾತ್ಮಕ ಪ್ರಭಾವ ಬೀರಬಹುದು.  ತನ್ನ ಬಳಿ ಇರುವ ಸಾಮರ್ಥ್ಯದ ಬಗ್ಗೆ ವಿಶ್ವಾಸ ಹೊಂದಿ ಹೋಗುವವರು ಏನೇ ಬರಲಿ ಎದುರಿಸಿ ಬಿಡುತ್ತಾರೆ.  ಈ ಸಂಗತಿಯನ್ನು ನನಗಿಂತ ಹೆಚ್ಚು ಇನ್ನು ಯಾರಾದರೂ ಉತ್ತಮ ರೀತಿಯಲ್ಲಿ ಹೇಳಬಲ್ಲವರಿದ್ದರೆ ಅವರು ವಿಶ್ವದಲ್ಲಿ ಎಂತೆಂಥಹ ಚದುರಂಗದ ಆಟಗಾರರನ್ನು ಚೆಕ್ ಮೇಟ್ ಮಾಡಿ ಬಿಟ್ಟಿರುವ ಚೆಸ್ ಚಾಂಪಿಯನ್ ವಿಶ್ವನಾಥನ್ ಆನಂದ್ ಅವರು.  ಅವರು ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಾರೆ.  ಬನ್ನಿ ಈ ಪರೀಕ್ಷೆಯ ಚೆಕ್ ಮೇಟ್ ಮಾಡಲು ಅವರಿಂದಲೇ ವಿಧಾನ ಕಲಿತುಕೊಳ್ಳಿ.  ” ಹಲೋ ನಾನು ವಿಶ್ವನಾಥನ್ ಆನಂದ್, ಮೊದಲಿಗೆ ನಿಮಗೆಲ್ಲರಿಗೂ ಪರೀಕ್ಷೆಯಲ್ಲಿ ಶುಭ ಹಾರೈಸುವುದರೊಂದಿಗೆ ಆರಂಭಿಸುವೆ.  ಆಮೇಲೆ ನನ್ನ ಪರೀಕ್ಷೆಗಳಿಗೆ ನಾನು ಹೇಗೆ ಹೋಗುತ್ತಿದ್ದೆ ಎಂಬ ಅನುಭವಗಳ ಕುರಿತು ಒಂದಿಷ್ಟು ಹೇಳುವೆ.  ಜೀವನದಲ್ಲಿ ನಂತರ ನಾವು ಎದುರಿಸುವ ಸಮಸ್ಯೆಗಳ ರೀತಿಯಲ್ಲೇ ಈ ಪರೀಕ್ಷೆಗಳು ಎಂಬುದನ್ನು ನಾನು ಅರಿತುಕೊಂಡೆ.  ನಿಮಗೆ ಸರಿಯಾದ ವಿಶ್ರಾಂತಿ ಇರಬೇಕು.  ರಾತ್ರಿ ಒಳ್ಳೆ ನಿದ್ರೆ ಮಾಡಬೇಕು.  ಹೊಟ್ಟೆ ತುಂಬಾ ಊಟ ಮಾಡಿರಬೇಕು.  ಖಂಡಿತವಾಗಿಯೂ ನೀವು  ಹಸಿದುಕೊಂಡು ಇರಬಾರದು.  ಅತಿಮುಖ್ಯ ಸಂಗತಿಯೆಂದರೆ ನೀವು ಶಾಂತಚಿತ್ತರಾಗಿರಬೇಕು.  ಇದು ಚದುರಂಗದ ಆಟಕ್ಕೆ ಅತಿ ಅನುರೂಪ.  ನೀವು ಆಡುತ್ತಿದ್ದಾಗ ಯಾವ ಕಾಯಿ ಕಾಣಿಸಿಕೊಳ್ಳುತ್ತದೆ ಎಂಬುದು ನಿಮಗೆ ಗೊತ್ತಿರುವುದಿಲ್ಲ.  ತರಗತಿಯಲ್ಲಿ ಪರೀಕ್ಷೆಗೆ ಯಾವ ಪ್ರಶ್ನೆ ಬರುತ್ತದೆ ಎಂಬುದು ಗೊತ್ತಿರುವುದಿಲ್ಲವೋ ಹಾಗೆ.  ಆದುದರಿಂದ ನೀವು ಶಾಂತಚಿತ್ತರಾಗಿ ಚೆನ್ನಾಗಿ ಊಟ ಮಾಡಿ, ನಿದ್ದೆ ಮಾಡಿದ್ದರೆ, ಆಗ ಸರಿಯಾದ ಕ್ಷಣಕ್ಕೆ, ಸರಿಯಾದ ಉತ್ತರವನ್ನು ನಿಮ್ಮ ಮೆದುಳು ನೆನಪಿಗೆ ತಂದು ಕೊಡುವುದು ಎಂಬುದು ನಿಮಗೆ ಗೊತ್ತಾಗುತ್ತದೆ.  ಆದುದರಿಂದ ಶಾಂತವಾಗಿರಿ.  ನಿಮ್ಮ ಮೇಲೆ ನೀವು ಅತಿಯಾದ ಒತ್ತಡ ಹಾಕಿಕೊಳ್ಳದಿರುವುದು ಬಹಳ ಮುಖ್ಯ.  ಅತಿಯಾದ ನಿರೀಕ್ಷೆಗಳನ್ನೂ ಇಟ್ಟುಕೊಳ್ಳಬೇಡಿ.  ವರ್ಷದುದ್ದಕ್ಕೂ ನನಗೆ ಪಾಠ ಮಾಡಿದ್ದು ನನಗೆ ನೆನಪಿನಲ್ಲಿ ಇದೆಯಾ, ನಾನು ಈ ಪ್ರಶ್ನೆಗಳನ್ನು ಬಿಡಿಸಲು ಸಾಧ್ಯವೇ ಎಂದಷ್ಟೇ ಸವಾಲಾಗಿ ಇದನ್ನು ನೋಡಿ.  ಕೊನೆಯ ಗಳಿಗೆಯಲ್ಲಿ ಬಹಳ ಮುಖ್ಯವಾದ ಸಂಗತಿಗಳನ್ನು ತಿರುವಿಹಾಕಿ ನೀವು ನೋಡಬೇಕಾದ ಸಂಗತಿಗಳು ನಮಗನಿಸಿದ ವಿಷಯಗಳು ನೀವು ವಿಶೇಷವಾಗಿ ನೆನಪಿನಲ್ಲಿ ಇಟ್ಟುಕೊಳ್ಳಲಾಗದ ಸಂಗತಿಗಳ ಮೇಲೆ  ಕಣ್ಣಾಡಿಸಿ.  ಪರೀಕ್ಷಾ ಸಭಾಂಗಣದಲ್ಲಿ ನೀವು ಉತ್ತರ ಬರೆಯುವಾಗ ನಿಮ್ಮ ಶಿಕ್ಷಕರು ಹಾಗೂ ವಿದ್ಯಾರ್ಥಿಗಳೊಡನೆ ಸಂಭವಿಸಿದ ಕೆಲವು  ಘಟನೆಗಳನ್ನೂ ಸಹ ನೀವು ನೆನಪು ಮಾಡಿಕೊಳ್ಳಿ.  ಇದರಿಂದ ಹಲವು ವಿಷಯಗಳನ್ನು ನೆನಪು ಮಾಡಿಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ.  ನಿಮಗೆ ಕಷ್ಟವೆನಿಸಿದ ಪ್ರಶ್ನೆಗಳನ್ನು ನೀವು ಪುನಃ ಓದಿದರೆ ಅವು ನಿಮ್ಮ ತಲೆಯಲ್ಲಿ ತಾಜಾ ಆಗಿ ಉಳಿದಿರುವುದು ನಿಮ್ಮ ಅನುಭವಕ್ಕೆ ಬಂದು ನೀವು ಪರೀಕ್ಷೆ ಬರೆಯುತ್ತಿರುವಾಗ ಅಂತಹ  ಪ್ರಶ್ನೆಗಳಿಗೆ ಉತ್ತಮ ಉತ್ತರ ಬರೆಯಲು ನಿಮಗೆ ಸಾಧ್ಯವಾದೀತು.  ಆದುದರಿಂದ ಶಾಂತವಾಗಿರಿ.  ರಾತ್ರಿ ಒಳ್ಳೆ ನಿದ್ದೆ ಮಾಡಿ.  ಅತಿಯಾದ ವಿಶ್ವಾಸ ಬೇಡ.  ಆದರೆ, ನಿರಾಶಾವಾದಿಯಾಗಿಯೂ ಇರಬೇಡಿ.  ನೀವು ಭಯಪಟ್ಟಿ ಕೊಂಡದ್ದಕ್ಕಿಂತ ಈ ಪರೀಕ್ಷೆಗಳು ಉತ್ತಮವಾಗಿ ಇರುವುದು ನನಗೆ ಯಾವಾಗಲೂ ಅನುಭವಕ್ಕೆ ಬಂದಿದೆ.  ಆದುದರಿಂದ ಆತ್ಮವಿಶ್ವಾಸ ಹೊಂದಿರಿ ಹಾಗೂ ನಿಮಗೆಲ್ಲಾ ಶುಭ ಹಾರೈಕೆಗಳು.
 
ವಿಶ್ವನಾಥನ್ ಆನಂದ್ ಅವರು ನಿಜವಾಗಿಯೂ ಬಹಳ ಮಹತ್ವಪೂರ್ಣ ಸಂಗತಿಗಳನ್ನು ತಿಳಿಸಿಕೊಟ್ಟಿದ್ದಾರೆ ಹಾಗೂ ಅವರು ಅಂತಾರಾಷ್ಟ್ರೀಯ ಚೆಸ್ ಪಂದ್ಯವಾಡುವಾಗ ಅದೆಷ್ಟು ಆರೋಗ್ಯವಂತರಾಗಿ ಕುಳಿತಿರುವರು ಹಾಗೂ ಧ್ಯಾನಾಸಕ್ತ ಸ್ಥಿತಿಯಲ್ಲಿ ಇರುವರು ಎನ್ನುವುದನ್ನು ನೀವು ನೋಡಿರಬಹುದು.  ಅವರ ಕಣ್ಣುಗಳು ಅತ್ತಇತ್ತ ಸರಿಯುತ್ತಿರುವುದಿಲ್ಲ ಎನ್ನುವುದನ್ನು ನೀವು ನೋಡಿರುವುದಕ್ಕೆ ಸಾಕು. ಪಕ್ಷಿಯ ಕಣ್ಣುಗಳ ಮೇಲೆ ಅರ್ಜುನನ ಕಣ್ಣಿನ ದೃಷ್ಟಿ ಅದೆಷ್ಟು ತದೇಕಚಿತ್ತವಾಗಿರುತ್ತಿದ್ದವು. ಎನ್ನುವುದನ್ನು ನಾವು ಕೇಳಿದ್ದುಂಟಲ್ಲವೇ, ಬಿಲ್ ಕುಲ್ ಅದೇ ರೀತಿಯಲ್ಲಿ ವಿಶ್ವನಾಥನ್ ಅವರು ಆಟ ಆಡುತ್ತಿದ್ದಾಗ ಥೇಟ್ ಅವರ ಕಣ್ಣುಗಳೂ ಸಹ ಬೃಹತ್ ಗುರಿಯತ್ತಲೇ ನೆಟ್ಟಿರುತ್ತವೆ. ಹಾಗೂ ಇದು ಅವರೊಳಗಿನ ಶಾಂತಿಯ ಅಭಿವ್ಯಕ್ತಿಯಾಗಿದೆ. ಯಾರಾದರೂ ಹೇಳಿದಾಕ್ಷಣ ಈ ಆಂತರಿಕ ಶಾಂತಿ ಬಂದುಬಿಡುತ್ತದೆ ಎಂದು ಹೇಳುವುದು ಕಠಿಣ ಎಂಬ ಮಾತಂತೂ ಸರಿ. ಆದರೆ ಪ್ರಯತ್ನಪಡುವುದು ಅಗತ್ಯ. ನಗುನಗುತ್ತಾ ಏಕೆ ಮಾಡಬಾರದು? ಆಗ ನೋಡಿ ನೀವು ನಗುತ್ತಲೇ ಇರುವಿರಿ. ಪರೀಕ್ಷೆಯ ದಿನವೂ ನಗುಮೊಗವನ್ನೇ ಹೊಂದಿರುವಿರಿ. ಆಗ ತಂತಾನೆ ಶಾಂತಿ ಮೂಡಲಾರಂಭಿಸುತ್ತದೆ. ನೀವು ಗೆಳೆಯರೊಡನೆ ಮಾತನಾಡುತ್ತಿಲ್ಲ ಅಥವಾ ಒಂಟಿಯಾಗಿ ನಡೆಯುತ್ತಿದ್ದೀರಿ. ಸಪ್ಪೆಮೋರೆಯೊಂದಿಗೆ ಇದ್ದೀರಿ ಕೊನೆಗಳಿಗೆಯಲ್ಲಿ ಹತ್ತಾರು ಪುಸ್ತಕಗಳನ್ನು ತಿರುವಿ ಹಾಕುತ್ತಿದ್ದೀರಿ, ಅಂತಹ  ಸ್ಥಿತಿಯಲ್ಲಿ ಶಾಂತ ಮನಸ್ಸು ಸಾಧ್ಯವಿಲ್ಲ.  ನಗುತ್ತಿರಿ, ನಗುತ್ತಾ ಹೋಗಿ, ಗೆಳೆಯರೊಡನೆ ನಗೆ ಚಟಾಕಿ ಹಾರಿಸಿ ಆಗ ನೋಡಿ ತಂತಾನೆ ಶಾಂತಿಯ ವಾತಾವರಣ ಮೂಡಿಬಿಡುತ್ತದೆ. ನಿಮಗೆ ಪುಟ್ಟ ಸಂಗತಿಯನ್ನು ಮನವರಿಕೆ ಮಾಡಿಕೊಡಬಯಸುವೆ. ನೀವೊಂದು ಕೆರೆಯ ಒಂದು ಬದಿಯಲ್ಲಿ ನಿಂತಿರುವಿರಿ ಎಂದು ಊಹಿಸಿಕೊಳ್ಳಿ. ಆಗ ನೀರಿನೊಳಗೆ ಬಹಳ ಸುಂದರ ವಸ್ತುಗಳು ಕಾಣಿಸುತ್ತವೆ. ಆದರೆ ಹಠಾತ್ತಾಗಿ ಯಾರಾದರೂ ನೀರಿಗೆ ಕಲ್ಲು ಎಸೆದರೆ ನೀರು ಅಲುಗಾಡಿ ಆ ಮುಂಚೆ ಸುಂದರವಾಗಿ ಕಾಣಿಸುತ್ತಿದ್ದುದು, ಆಗ ಕಾಣಿಸುತ್ತದೆಯೇ  ನೋಡಿ.
ನೀರು ಶಾಂತವಾಗಿದ್ದರೆ ವಸ್ತುಗಳು ಎಷ್ಟೇ ಆಳಕ್ಕಿದ್ದರೂ ಕಾಣಸಿಗುತ್ತದೆ ಆದರೆ ನೀರು ಅಶಾಂತವಾಗಿದ್ದರೆ, ಅದರೊಳಗಿರುವುದು ಏನೂ ಕಾಣಿಸುವುದಿಲ್ಲ. ನಿಮ್ಮೊಳಗೆ ಸಾಕಷ್ಟು ಸಂಗ್ರಹವಾಗಿ ಇರುತ್ತದೆ. ವರ್ಷವಿಡಿ ಪಟ್ಟ ಪರಿಶ್ರಮದ ಭಂಡಾರ ತುಂಬಿರುತ್ತದೆ. ಆದರೆ ಮನಸ್ಸು ಅಶಾಂತವಾಗಿದ್ದರೆ, ಆ ಖಜಾನೆ ನೀವೂ ಕೂಡಾ ನೋಡಲು ಸಾಧ್ಯವಾಗುವುದಿಲ್ಲ. ನಿಮ್ಮ ಮನಸ್ಸು ಶಾಂತವಾಗಿದ್ದರೆ, ಆಗ ನಿಮ್ಮ ಭಂಡಾರ ನೇರ ಮೇಲೆದ್ದು ಬಂದು ನಿಮ್ಮ ಮುಂದೆ ಹಾಜರಾಗಿ ಬಿಡುತ್ತದೆ. ಹಾಗೂ ನಿಮ್ಮ ಪರೀಕ್ಷೆ ಒಮ್ಮೆಗೆ ಸರಳವಾಗಿ ಬಿಡುತ್ತದೆ. ನಾನು ನನ್ನ ಸ್ವಂತದ ಒಂದು ಮಾತನ್ನು ಹೇಳಲು ಇಚ್ಛಿಸುವೆ. ನಾನು ಯಾವಾಗಲಾದರೂ ಉಪನ್ಯಾಸ ಕೇಳಲು ಹೋದಾಗ ಅಥವಾ ಸರ್ಕಾರದಲ್ಲಿ ಕೆಲವೊಂದಷ್ಟು ವಿಷಯಗಳು ನನಗೆ ಗೊತ್ತಿಲ್ಲದೇ ಇರುವಂತಹದ್ದಿದ್ದಾಗ,  ನನಗೆ ಸಾಕಷ್ಟು ಗಮನ ಕೇಂದ್ರೀಕರಿಸಬೇಕಾಗುತ್ತದೆ. ಯಾವಾಗಲಾದರೂ ಹೆಚ್ಚು ಗಮನ ಹರಿಸಿ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದಾಗ ನನ್ನೊಳಗೊಂದು ತಲ್ಲಣದ ಅನುಭವ ಉಂಟಾಗುತ್ತದೆ . ಆಗ ನನಗನ್ನಿಸುತ್ತದೆ ಬೇಡ ಸ್ವಲ್ಪ ವಿರಾಮ ಮಾಡಿದರೆ ನನಗೆ ಸರಿಹೋಗುತ್ತದೆ ಎಂದು ಅನ್ನಿಸುತ್ತದೆ.
ಹೀಗೆ ನಾನು ನನ್ನದೆ ಆದ ಟೆಚ್ನಿಕ್  ಬೆಳೆಸಿಕೊಂಡಿರುವೆ.  ಬಹಳ ಆಳ ಉಸಿರಾಟ ಮಾಡುವೆ, ದೀರ್ಘ  ಉಸಿರು ಎಳೆದುಕೊಳ್ಳುವೆ.  ಮೂರು ಸಲ ನಾಲ್ಕು ಸಲ ಈ ರೀತಿ ಮಾಡುವೆ. ಇದಕ್ಕೆ 30 ಸೆಕೆಂಡ್ , 40 ಸೆಕೆಂಡ್, 50 ಸೆಕೆಂಡ್ ಆದೀತು. ಆದರೆ ಮತ್ತೆ ನನ್ನ ಮನಸ್ಸು ಒಮ್ಮೆಗೆ ಶಾಂತವಾಗಿ ಬಿಟ್ಟು ವಿಷಯಗಳನ್ನು ಅರಿತುಕೊಳ್ಳಲು ತಯಾರಾಗಿ ಬಿಡುತ್ತದೆ. ಇದು ನನ್ನ ಅನುಭವವಾಗಿರಬಹುದು ಪ್ರಾಯಶ:ನಿಮ್ಮ ಉಪಯೋಗಕ್ಕೂ ಬೀಳಬಹುದು.
ರಜತ್ ಅಗರ್ವಾಲ್ ಅವರು ಒಂದು ಒಳ್ಳೆಯ ಮಾತನ್ನು ತಿಳಿಸಿದ್ದಾರೆ. ಅವರು ನನ್ನ ಆಪ್ ನಲ್ಲಿ ಬರೆದಿದ್ದಾರೆ – ನಾವು ಪ್ರತಿನಿತ್ಯ ಕನಿಷ್ಟ ಅರ್ಧಗಂಟೆ ಗೆಳೆಯರೊಡನೆ ಮನೆಯವರೊಡನೆ ಆರಾಮವಾಗಿ ಸಮಯ ಕಳೆಯೋಣ, ಹರಟೆ ಹೊಡೆಯೋಣ, ರಜತ್ ಜೀ ಯವರು ಈ ಅಮೂಲ್ಯವಾದ ಮಹತ್ವಪೂರ್ಣ ಸಂಗತಿಯನ್ನು ತಿಳಿಸಿದ್ದಾರೆ. ಏಕೆಂದರೆ ಬಹಳಷ್ಟು ನಾವು ನೋಡುತ್ತೇವೆ. ಪರೀಕ್ಷೆ ಬರೆದುಬಂದ ಮೇಲೆ ನಮ್ಮ ಉತ್ತರ ಎಷ್ಟು ಸರಿ, ಎಷ್ಟು ತಪ್ಪು ಎಂದು ಲೆಕ್ಕ ಹಾಕಲು ಕುಳಿತುಕೊಂಡು ಬಿಡುತ್ತೇವೆ.
ಮನೆಯಲ್ಲಿ ತಂದೆ – ತಾಯಿಗಳು ವಿದ್ಯಾವಂತರಾಗಿದ್ದರೆ, ಅದರಲ್ಲೂ ಅವರು ಶಿಕ್ಷಕರಾಗಿಬಿಟ್ಟಿದ್ದರಂತೂ ಇಡೀ ಪ್ರಶ್ನೆಪತ್ರಿಕೆಗೆ ಉತ್ತರವನ್ನು ಮತ್ತೆ ಬರೆಸಿ, ಹೇಳು ನೀನು ಏನು ಬರೆದೆ, ಏನಾಯಿತು ಎಂದು ಶುರುಹಚ್ಚಿಕೊಳ್ಳುವರು.  ನೋಡು, ನಿನಗೆ 40 ಅಂಕ ಬರುತ್ತದೆ, 80 ಅಂಕ ಬರುತ್ತದೆ, 90 ಅಂಕ ಬರುತ್ತದೆ ಎಂದು ಲೆಕ್ಕ ಒಟ್ಟು ಮಾಡಿಬಿಡುವರು.  ನಿಮ್ಮ ತಲೆ ಪರೀಕ್ಷೆ ಮುಗಿದ ಮೇಲೆ ತಲ್ಲಣಗೊಂಡಿರುತ್ತದೆ.  ನೀವಾದರೂ ಏನು ಮಾಡುವಿರಿ, ಫೋನಿನಲ್ಲಿ ಗೆಳೆಯರೊಡನೆ ಹಂಚಿಕೊಳ್ಳುತ್ತೀರಿ.  ನೀನು ಏನು ಬರೆದೆ ಎಂದು ಅವರನ್ನು ಕೇಳುವಿರಿ, ನಿನ್ನದು ಹೇಗಾಯಿತು ಎಂದು ಕೇಳುವಿರಿ, ನನ್ನದರಲ್ಲಿ ಗಡಿಬಿಡಿಯಾಯಿತು, ನಾನು ತಪ್ಪು ಮಾಡಿದೆ, ನನಗೆ ಗೊತ್ತಿತ್ತು, ಆದರೆ ನೆನಪಿಗೆ ಬರಲಿಲ್ಲ, ಹೀಗೆ ಇದರಲ್ಲಿಯೇ ಸಿಲುಕಿಕೊಂಡುಬಿಡುತ್ತೇವೆ.  
ಮಿತ್ರರೇ, ಹೀಗೆ ಮಾಡಬೇಡಿ.  ಪರೀಕ್ಷೆ ಮುಗಿಯಿತು ಆಯಿತು.  ಮನೆಯವರೊಡನೆ ಬೇರೆ ವಿಷಯಗಳ ಹರಟೆ ಹೊಡೆಯಿರಿ, ಹಳೆಯ ಸಂತಸದ ನೆನಪುಗಳನ್ನು ತಾಜಾ ಮಾಡಿಕೊಳ್ಳಿ.  ಯಾವಾಗಲಾದರೂ ತಂದೆ – ತಾಯಿಯೊಡನೆ ಎಲ್ಲಾದರೂ ಹೋಗಿದ್ದರೆ, ಅಲ್ಲಿಯ ದೃಶ್ಯಗಳನ್ನು ನೆನಪು ಮಾಡಿಕೊಳ್ಳಿ.  ಅದರಿಂದ ಹೊರ ಬಂದು ಅರ್ಧ ಗಂಟೆ ಕಳೆಯಿರಿ.  ರಜತ್ ಜೀ ಅವರ ಮಾತಂತೂ ಅರ್ಥ ಮಾಡಿಕೊಳ್ಳುವಂತಹದ್ದು.
ಮಿತ್ರರೇ, ನಾನು ನಿಮಗೆ ಶಾಂತಿಯ ಮಾತನ್ನು ಹೇಳಲೇ.  ಇಂದು ನಿಮಗೆ ಪರೀಕ್ಷೆಗೆ ಹೋಗುವ ಮೊದಲು ನಿಮಗೊಬ್ಬರು ನಿಮಗಾಗಿ ಒಂದು ಸಂದೇಶ ಕಳುಹಿಸಿದ್ದಾರೆ.  ಅವರು ಮೂಲತಃ ಶಿಕ್ಷಕರು ಹಾಗೂ ಈಗ ಒಂದು ರೀತಿಯಲ್ಲಿ ಸಂಸ್ಕಾರ ಶಿಕ್ಷಕರಾಗಿಬಿಟ್ಟಿದ್ದಾರೆ.  ” ರಾಮಚರಿತ ಮಾನಸ ” ವನ್ನು ಈಗಿನ ಸಂದರ್ಭದಲ್ಲಿ ಅದರ ವ್ಯಾಖ್ಯಾನ ಮಾಡುತ್ತಾ ಅವರು ದೇಶದಲ್ಲೆಡೆ ಹಾಗೂ ವಿಶ್ವದಲ್ಲಿ ಈ ಸಂಸ್ಕಾರ ಜಲವನ್ನು ತಲುಪಿಸುವ ಪ್ರಯತ್ನ ನಡೆಸಿದ್ದಾರೆ.  ಇಂತಹ ಪೂಜ್ಯ ” ಮುರಾರಿ ಬಾಪೂ ” ಕೂಡಾ ವಿದ್ಯಾರ್ಥಿಗಳಿಗೆ ಬಹಳ ಮಹತ್ವಪೂರ್ಣ ಕಿವಿಮಾತು ತಿಳಿಸಿದ್ದಾರೆ.  ಅವರಂತೂ ಶಿಕ್ಷಕರೂ ಹೌದು, ಚಿಂತಕರೂ ಆಗಿದ್ದು, ಅವರ ಮಾತಿನಲ್ಲಿ ಎರಡರ ಮಿಶ್ರಣವಿದೆ.
” ನಾನು ಮುರಾರಿ ಬಾಪೂ ಮಾತನಾಡುತ್ತಿರುವೆ, ಪರೀಕ್ಷೆ ಸಮಯದಲ್ಲಿ ಮನಸ್ಸಿನ ಮೇಲೆ ಯಾವುದೇ ಭಾರ ಹೊತ್ತುಕೊಳ್ಳದೇ, ಬುದ್ದಿಗೆ ಒಂದು ಸ್ಪಷ್ಟ ನಿರ್ಣಯಕ್ಕೆ ಬರುವಂತೆ ಮತ್ತು ಚಿತ್ತವನ್ನು ಏಕಾಗ್ರಗೊಳಿಸಿ ನೀವು ಪರೀಕ್ಷೆಗೆ ಕುಳಿತುಕೊಳ್ಳಿ ಹಾಗೂ ಯಾವ ಸನ್ನಿವೇಶ ಎದುರಾಗುತ್ತದೆಯೋ, ಅದನ್ನು ಸ್ವೀಕಾರ ಮಾಡಿ ಪರಿಸ್ಥಿತಿ ಸ್ವೀಕರಿಸುವುದರಿಂದ ಬಹಳವೇ ನಾವು ಪ್ರಸನ್ನರಾಗಿರಲು ಸಾಧ್ಯ ಹಾಗೂ ಆನಂದವಾಗಿರಲು ಬರುತ್ತದೆ ಎಂಬುದು ನನ್ನ ಅನುಭವ.  ನೀವು ಪರೀಕ್ಷೆಯಲ್ಲಿ ಭಾರ ರಹಿತವಾಗಿ ಪ್ರಸನ್ನಚಿತ್ತರಾಗಿ ಮುನ್ನುಗ್ಗಿ, ಆಗ ನಿಶ್ಚಿತವಾಗಿಯೂ ನಿಮಗೆ ಯಶಸ್ಸು ಸಿಗುತ್ತದೆ ಹಾಗೂ ಒಂದೊಮ್ಮೆ ಯಶಸ್ಸು ಸಿಗದಿದ್ದರೂ ಅನುತ್ತೀರ್ಣತೆಯ ಖಿನ್ನತೆ ಉಂಟಾಗುವುದಿಲ್ಲ ಮತ್ತು ಯಶಸ್ಸು ಪಡೆದ ಹೆಮ್ಮೆ ಮೂಡುತ್ತದೆ.  ಒಂದು ಹನಿ ಕವಿತೆ ಹೇಳಿ ನನ್ನ ಸಂದೇಶ ಹಾಗೂ ಶುಭಾಶಯ ತಿಳಿಸುವೆ.
ಪ್ರತಿಯೊಬ್ಬರೂ ಯಶಸ್ಸು ಗಳಿಸಲೇಬೇಕೆಂದು ಕಡ್ಡಾಯವೇನಿಲ್ಲ, ಯಶಸ್ಸು ಗಳಿಸದೇ ಇರುವವರ ಜೊತೆಯೂ ಬದುಕುವುದನ್ನು ಕಲಿಯಿರಿ.  ನಮ್ಮ ಆದರಣೀಯ ಪ್ರಧಾನಮಂತ್ರಿಯವರ ಈ ಮನದ ಮಾತು ಕಾರ್ಯಕ್ರಮಕ್ಕೆ ನಾನು ಬಹಳವೇ ಯಶಸ್ಸನ್ನು ಕೋರುವೆ.  ಎಲ್ಲರಿಗೂ ನನ್ನ ಶುಭ ಕಾಮನೆಗಳು, ಧನ್ಯವಾದ.
 
ನಮಗೆಲ್ಲರಿಗೂ ಪೂಜ್ಯ ಮುರಾರಿ ಬಾಪೂರವರು ಬಹಳ ಉತ್ತಮ ಸಂದೇಶವನ್ನು ನೀಡಿದ್ದಾರೆ.  ಅದಕ್ಕಾಗಿ ನಾನೂ ಕೂಡಾ ಆಭಾರಿ.  ಮಿತ್ರರೇ ಇಂದು ನಾನು ಇನ್ನೊಂದು ಸಂಗತಿ ಹೇಳಬಯಸುವೆ.  ಈ ಸಲ ನನಗೆ ತಮ್ಮ ಅನುಭವ ಹೇಳಿಕೊಂಡವರಲ್ಲಿ ಯೋಗ ಕುರಿತು ಅಗತ್ಯ ಚರ್ಚೆ ಮಾಡಿರುವುದನ್ನು ನಾನು ನೋಡಿರುವೆ.  ಇತ್ತೀಚಿನ ದಿನಗಳಲ್ಲಿ ವಿಶ್ವದಲ್ಲಿ ಯಾರನ್ನಾದರೂ ನಾನು ಭೇಟಿಯಾದಾಗ ಆ ಭೇಟಿ ಸ್ವಲ್ಪ ಸಮಯದ್ದಾದರೂ ಸರಿ, ಯಾರಾದರೊಬ್ಬರು ಯೋಗ ಕುರಿತು ಸ್ವಲ್ಪವಾದರೂ ಮಾತನಾಡುವುದು ನನ್ನ ಪಾಲಿಗೆ ಸಂತಸದ ಸಂಗತಿ.  ವಿಶ್ವದ ಯಾವುದೇ ದೇಶದ ವ್ಯಕ್ತಿಯಾಗಿರಲಿ, ಯಾವುದೇ ಭಾರತೀಯನಾಗಿರಲಿ ಯೋಗ ಕುರಿತು ಅವರಲ್ಲಿ ಇಷ್ಟು ಆಕರ್ಷಣೆ ಹುಟ್ಟಿಕೊಂಡಿರುವುದು ನನಗೆ ಒಳ್ಳೆಯದೆನಿಸುತ್ತದೆ.  ನೋಡಿ, ಅದೆಷ್ಟು ಜನ ನನ್ನ ಮೊಬೈಲ್  ಆಪ್ ನಲ್ಲಿ  ಈ ಕುರಿತು ತಿಳಿಸಿದ್ದಾರೆ.  ಶ್ರೀ ಅಥನೂ ಮಂಡಲ್, ಶ್ರೀ ಕೃಣಾಲ್ ಗುಪ್ತ, ಶ್ರೀ ಸುಶಾಂತ್ ಕುಮಾರ್, ಶ್ರೀ ಕೆ.ಜಿ. ಆನಂದ್, ಶ್ರೀ ಅಭಿಜಿತ್ ಕುಲಕರ್ಣಿ ಇನ್ನೂ ಅಸಂಖ್ಯ ಜನರು ಧ್ಯಾನ ಕುರಿತು, ಯೋಗ ಕುರಿತು ತಿಳಿಸಿದ್ದಾರೆ. 
ಮಿತ್ರರೇ, ನಾಳೆಯ ಬೆಳಗಿನಿಂದಲೇ ಯೋಗಾಭ್ಯಾಸ ಶುರು ಹಚ್ಚಿಕೊಳ್ಳಿ ಎಂದು ಇಂದೇ ನಾನು ಹೇಳಿದರೆ, ಅದು ನಿಮ್ಮೊಡನೆ ಮಾಡಿದ ಅನ್ಯಾಯವಾದೀತು.  ಆದರೆ, ಯಾರು ಯೋಗಾಭ್ಯಾಸ ಮಾಡುತ್ತಿದ್ದಾರೆ, ಈಗ ಪರೀಕ್ಷಾ ಸಮಯವಾದುದರಿಂದ ಇಂದು ಯೋಗಾಭ್ಯಾಸ ಮಾಡುವುದಿಲ್ಲ ಎಂದು ಹೇಳುವುದು ಬೇಡ.  ಮಾಡುವುದಾದರೆ ಮಾಡಿ.  ಆದರೆ, ಇಷ್ಟಂತೂ ಸರಿ; ವಿದ್ಯಾರ್ಥಿ ಜೀವನವಾಗಲೀ, ಜೀವನದ ಉತ್ತರಾರ್ಧ ಭಾಗವಾಗಲೀ, ನಮ್ಮ ಅಂತರ್ ಮನಸ್ಸಿನ ವಿಕಾಸ ಯಾತ್ರೆಯಲ್ಲಿ ಯೋಗ ಒಂದು ದೊಡ್ಡ ಕೀಲಿಕೈ.  ಸರಳದಿಂದ ಅತಿ ಸರಳ ಕೀಲಿಕೈ ಇದಾಗಿದೆ.  ನೀವು ಖಂಡಿತ ಅದರ ಕಡೆ ಗಮನ ಹರಿಸಿ.  ಒಂದು ವೇಳೆ ನಿಮ್ಮ ಸಮೀಪದಲ್ಲಿ ಯಾರಿಗಾದರೂ ಯೋಗ ಕುರಿತು ಪರಿಣತಿ ಇದ್ದರೆ, ನೀವು ಒಂದು ವೇಳೆ ಯೋಗಾಭ್ಯಾಸ ಮಾಡಿಲ್ಲದಿದ್ದರೆ, ಪರೀಕ್ಷೆ ದಿನಗಳಲ್ಲಿ ಒಂದು ನಾಲ್ಕಾರು ನಿಮಿಷ ಮಾಡಬಹುದಾದ ಮೂರು, ನಾಲ್ಕು ಯೋಗ ಸಂಗತಿಗಳನ್ನು ನಿಮಗೆ ತಿಳಿಸಿಕೊಟ್ಟಾರು.  ನೋಡಿ, ನೀವು ಮಾಡುವುದಾದರೆ ಸರಿ.  ನನಗಂತೂ ಅದರಲ್ಲಿ ಬಹಳ ವಿಶ್ವಾಸ ಉಂಟು.
ನನ್ನ ಯುವ ಮಿತ್ರರೇ, ನಿಮಗೆ ಪರೀಕ್ಷಾ ಕೊಠಡಿಗೆ ಹೋಗಲು ಬಹಳವೇ ಆತುರವಿರುತ್ತದೆ.  ಆದಷ್ಟು ಬೇಗ ಹೋಗಿ ನಿಮ್ಮ ಬೆಂಚಲ್ಲಿ ಕುಳಿತುಕೊಳ್ಳುವ ಮನಸ್ಸಾಗುತ್ತದೆ.  ಇವನ್ನೆಲ್ಲಾ ಗಡಿಬಿಡಿಯಲ್ಲಿ ಮಾಡಬೇಕೆ?  ಒಂದು ವೇಳೆ ನೀವು ಸಂಚಾರ ದಟ್ಟಣೆಯಿಂದ ತಡವಾಗಿಬಿಟ್ಟರೂ ಸಹ ಸಮಯಕ್ಕೆ ಸರಿಯಾಗಿ ಹೋಗಿ ಸೇರುವಂತೆ ನಮ್ಮ ಇಡೀ ದಿನದ ಸಮಯವನ್ನು ಏಕೆ ವ್ಯವಸ್ಥೆಗೊಳಿಸಬಾರದು.  ಇಲ್ಲದಿದ್ದರೆ ಇವೂ ಹೊಸ ತಲ್ಲಣ ಉಂಟು ಮಾಡುತ್ತವೆ.  ನಮಗೆ ಎಷ್ಟು ಸಮಯ ಉತ್ತರ ಬರೆಯಲು ಸಿಕ್ಕಿರುತ್ತದೆಯೋ, ಅದರಲ್ಲಿ ಇರುವ ಸೂಚನೆಗಳು ನಮ್ಮ ಸಮಯವನ್ನು ತಿಂದು ಹಾಕಿಬಿಡುತ್ತವೆ ಎಂದು ನಮಗೆ ಆಗಾಗ ಅನಿಸುವುದು ಉಂಟು.  ಸ್ನೇಹಿತರೇ, ಅದು ಹಾಗಲ್ಲ, ನೀವು ಆ ಸೂಚನೆಗಳನ್ನು ಸರಿಯಾಗಿ ಓದಿ.  ನಾಲ್ಕೈದು ನಿಮಿಷ ಅದಕ್ಕೆ ಹಿಡಿಸೀತು.  ನಷ್ಟವೇನಿಲ್ಲ.  ಆದರೆ, ಅದರಿಂದ ಪರೀಕ್ಷೆಯಲ್ಲಿ ಏನು ಮಾಡಬೇಕು ಎಂದೆಲ್ಲಾ ಇದ್ದು, ಗಲಿಬಿಲಿಗೆ ಒಳಗಾಗುವುದಿಲ್ಲ ಹಾಗೂ ನಂತರ ಪಶ್ಚಾತ್ತಾಪಪಡುವ ಪ್ರಸಂಗ ಬರುವುದಿಲ್ಲ.  ಒಮ್ಮೊಮ್ಮೆ ಪ್ರಶ್ನೆಪತ್ರಿಕೆ ಮಾದರಿ ಹೊಸದಾಗಿಬಿಟ್ಟಿದೆ ಎಂದು ಅನ್ನಿಸುತ್ತದೆ.  ಆದರೆ, ಸೂಚನೆಗಳನ್ನು ಓದಿಕೊಂಡ ಮೇಲೆ, ನಾವು ಮುಂದುವರಿಯಬೇಕಾದ ದಾರಿ ಸ್ಪಷ್ಟವಾಗುತ್ತದೆ.  ಆದುದರಿಂದ ನಿಮಗೆ 5 ನಿಮಿಷ ಅದಕ್ಕಾಗಿ ಹೋದರೂ ಸರಿ, ಸೂಚನೆಗಳನ್ನು ಓದಿ ಎಂದು ನಿಮ್ಮಲ್ಲಿ ನನ್ನ ಆಗ್ರಹ.
ಶ್ರೀಮಾನ್ ಯಶ್ ಸಾಗರ್ ಅವರು ನಮ್ಮ ಮೊಬೈಲ್  ಆಪ್  ನಲ್ಲಿ   ಬರೆದಿದ್ದಾರೆ.  ಮೊದಲ ಸಲ ಪ್ರಶ್ನೆಪತ್ರಿಕೆ ಓದಿದಾಗ ಅದು ಅವರಿಗೆ ಬಹಳ ಕಠಿಣವಾಗಿ ಕಂಡಿತು.  ಆದರೆ, ಎರಡನೇ ಸಲ ಆತ್ಮವಿಶ್ವಾಸದಿಂದ ಓದಿದಾಗ ಪ್ರಶ್ನೆಯನ್ನು ಬೇರೆ ರೀತಿಯಲ್ಲಿ ಇಡಲಾಗಿದೆ, ಅದಕ್ಕೆ ಉತ್ತರ ಗೊತ್ತು ಎಂದು ಮನವರಿಕೆಯಾಯಿತು.  ಪ್ರಶ್ನೆಗಳನ್ನು ಅರ್ಥ ಮಾಡಿಕೊಳ್ಳುವುದು ಬಹಳ ಅಗತ್ಯ.  ಪ್ರಶ್ನೆಗಳನ್ನು ಅರ್ಥಮಾಡಿಕೊಳ್ಳದೇ ಹೋದಾಗ ಕೆಲವೊಮ್ಮೆ ಪ್ರಶ್ನೆ ಕಠಿಣವಾಗಿ ಕಾಣುತ್ತದೆ.  ಆದುದರಿಂದ ಪ್ರಶ್ನೆಗಳನ್ನು ಎರಡು ಸಲ, ಮೂರು ಸಲ, ನಾಲ್ಕು ಸಲ ಓದಿ ಹಾಗೂ ನಿಮಗೆ ತಿಳಿದಿರುವ ಮಾಹಿತಿಯನ್ನು ಅದರೊಡನೆ ಜೋಡಿಸುವ ಪ್ರಯತ್ನ ಮಾಡಿ ಎಂಬ ಯಶ್ ಸಾಗರ್ ಅವರ ಸಲಹೆಯನ್ನು ನಾನು ಅನುಮೋದಿಸುವೆ.  ಆಗ ನೋಡಿ ಆ ಪ್ರಶ್ನೆಗೆ ಉತ್ತರ ಬರೆಯುವ ಮುನ್ನವೇ ಅದು ಸರಳವಾಗಿಬಿಡುತ್ತದೆ.
ಭಾರತರತ್ನ ಹಾಗೂ ನಮ್ಮೆಲ್ಲರ ಗೌರವಾನ್ವಿತ ವಿಜ್ಞಾನಿ ಪ್ರೊ. ಸಿ.ಎನ್.ಆರ್. ರಾವ್ ಧೈರ್ಯವಾಗಿರುವುದರ ಬಗ್ಗೆ ಒತ್ತು ನೀಡಿರುವುದು ನನ್ನ ಪಾಲಿಗಂತು ಇಂದು ಸಂತೋಷದ ಸಂಗತಿ.  ಬಹಳ ಕಡಿಮೆ ಮಾತುಗಳಲ್ಲಿ, ಆದರೆ ಬಹಳವೇ ಉತ್ತಮವಾದ ಸಂದೇಶವನ್ನು ನಮ್ಮ ವಿದ್ಯಾರ್ಥಿಗಳಿಗೆ ಕೊಟ್ಟಿದ್ದಾರೆ.  ರಾವ್ ಸಾಹೇಬರ ಸಂದೇಶ ಕೇಳೋಣ ಬನ್ನಿ.
” ಇದು ಬೆಂಗಳೂರಿನಿಂದ ಸಿ.ಎನ್.ಆರ್. ರಾವ್ ಮಾತನಾಡುತ್ತಿರುವುದು, ಪರೀಕ್ಷೆಗಳು ಆತಂಕವನ್ನು ಉಂಟು ಮಾಡುತ್ತವೆ ಎನ್ನುವುದನ್ನು ನಾನು ಸಂಪೂರ್ಣ ಅರಿತಿರುವೆ.  ಅದರಲ್ಲೂ ಸ್ಪರ್ಧಾತ್ಮಕ ಪರೀಕ್ಷೆಗಳು.  ಚಿಂತಿಸಬೇಡಿ, ನಿಮ್ಮ ಪಾಲಿನ ಅತ್ಯುತ್ತಮ ಕಾರ್ಯ ಪ್ರದರ್ಶಿಸಿ.  ಇದನ್ನೇ ನನ್ನ ಯುವ ಮಿತ್ರರಿಗೆ ಹೇಳುವುದು.  ಅದೇ ಸಮಯಕ್ಕೆ ನಿಮಗೆ ನೆನಪಿರಲಿ, ಈ ದೇಶದಲ್ಲಿ ಹಲವಾರು ಅವಕಾಶಗಳು ಉಂಟು ಎಂಬುದು, ಜೀವನದಲ್ಲಿ ನೀವು ಏನಾಗಬೇಕು ಎಂಬುದನ್ನು ನಿರ್ಧರಿಸಿ ಹಾಗೂ ಅದನ್ನು ಕೈಬಿಡಬೇಡಿ.  ನೀವು ಯಶಸ್ಸು ಗಳಿಸುವಿರಿ.  ಈ ಬ್ರಹ್ಮಾಂಡದ ಕೂಸು ನೀವು ಎಂಬುದನ್ನು ಮರೆಯದಿರಿ.  ಗಿರಿ ಕಾನನಗಳಂತೆ ನಿಮಗೂ ಇಲ್ಲಿ ವಾಸಿಸುವ ಹಕ್ಕುಂಟು.  ನಿಮಗೆ ಬೇಕಿರುವುದು ಸಂಕಲ್ಪ, ಶ್ರದ್ಧೆ ಹಾಗೂ ಪರಿಶ್ರಮ.  ಈ ಗುಣಗಳೊಡನೆ ನೀವು ಎಲ್ಲಾ ಪರೀಕ್ಷೆಗಳಲ್ಲಿ ಹಾಗೂ ಇತರೆ ಎಲ್ಲಾ ಪ್ರಯತ್ನಗಳಲ್ಲಿ ಯಶಸ್ಸನ್ನು ಗಳಿಸುವಿರಿ.  ನೀವು ಮಾಡಬೇಕೆಂದಿರುವ ಎಲ್ಲ ಕೆಲಸಕ್ಕೂ ನೀವು ಅದೃಷ್ಟಶಾಲಿಗಳಾಗಿ ಎಂದು ಹಾರೈಸುವೆ.  ಭಗವಂತನ ಕೃಪೆ ನಿಮಗಿರಲಿ.”
 
ನೋಡಿದಿರಾ, ವಿಜ್ಞಾನಿಯೊಬ್ಬರು ಮಾತನಾಡುವ ವೈಖರಿ ಹೇಗಿರುತ್ತದೆ ಎಂಬುದನ್ನು; ನಾನು ಹೇಳಬೇಕೆಂಬ ಸಂಗತಿಯನ್ನು ತಿಳಿಸಲು ಅರ್ಧ ಗಂಟೆ ತೆಗೆದುಕೊಳ್ಳುವೆ.  ಅವರಂತೂ ಅದೇ ಮಾತನ್ನು 3 ನಿಮಿಷದಲ್ಲಿ ಹೇಳಿ ಮುಗಿಸುವರು.  ಇದೇ ವಿಜ್ಞಾನದ ಬಲ ಮತ್ತು ವಿಜ್ಞಾನಿಯ ಮನಸ್ಸಿನ ಸಾಮರ್ಥ್ಯ .  ದೇಶದ ಮಕ್ಕಳಿಗೆ ಸ್ಫೂರ್ತಿ ನೀಡಿದ್ದಕ್ಕಾಗಿ ನಾನು ರಾವ್ ಸಾಹೇಬರಿಗೆ ಬಹಳವೇ ಆಭಾರಿ.  ಹಠ ತೊಡಿ, ಮಿತ್ರರೇ, ಅಚಲರಾಗಿರಿ.  ನೀವು ದೃಢವಾಗಿದ್ದರೆ, ಭಯವೂ ನಿಮ್ಮಿಂದ ಹೆದರೀತು.  ಒಳ್ಳೆಯದನ್ನು ಮಾಡುವುದಕ್ಕಾಗಿ ಸುಂದರ ಭವಿಷ್ಯ ನಿಮಗಾಗಿ ಕಾಯುತ್ತಿದೆ. 
ಈಗ ನನ್ನ ಮೊಬೈಲ್   ಆಪ್  ನಲ್ಲಿ  ರುಚಿತಾ ಡಾಬಸ್ ಅವರು ತಮ್ಮ ಪರೀಕ್ಷೆಯ ಅನುಭವ ಹಂಚಿಕೊಂಡಿದ್ದಾರೆ.  ತಮ್ಮ ಕುಟುಂಬದಲ್ಲಿ ಪರೀಕ್ಷೆ ಸಮಯದಲ್ಲಿ ಸಕಾರಾತ್ಮಕ ವಾತಾವರಣ ನಿರ್ಮಿಸಲು ಸತತ ಪ್ರಯತ್ನ ನಡೆಯುತ್ತದೆ ಹಾಗೂ ಈ ವಿಷಯದ ಕುರಿತು ತಮ್ಮ ಸಹೋದ್ಯೋಗಿ ಕುಟುಂಬದಲ್ಲೂ ಚರ್ಚೆಯಾಗುತ್ತದೆ ಎಂದು ಅವರು ಹೇಳುತ್ತಾರೆ.  ಎಲ್ಲರೂ ಕೂಡಿಕೊಂಡು ಸಕಾರಾತ್ಮಕ ವಾತಾವರಣ.  ಇದು ಸರಿ.  ಸಚಿನ್ ಜೀ ಅವರು ಹೇಳಿದಂತೆ ಸಕಾರಾತ್ಮಕ ದೃಷ್ಟಿ, ಸಕಾರಾತ್ಮಕ ಮನೋಭಾವ, ಸಕಾರಾತ್ಮಕ ಚೈತನ್ಯ ಹೊರಹೊಮ್ಮಿಸುತ್ತದೆ.  ಕೆಲವೊಮ್ಮೆ ಬಹಳಷ್ಟು ಸಂಗತಿ ನಮಗೂ ಪ್ರೇರಣೆ ನೀಡುತ್ತದೆ.  ಆದರೆ, ಎಲ್ಲಾ ವಿದ್ಯಾರ್ಥಿಗಳಿಗೂ ಅವು ಪ್ರೇರಣೆ ಒದಗಿಸುತ್ತವೆ ಎಂದು ಯೋಚಿಸಬೇಡಿ.  ಜೀವನದ ಯಾವುದೇ ಹಂತದಲ್ಲಿ ನೀವಿದ್ದರೂ ಉತ್ತಮ ಉದಾಹರಣೆ, ಸತ್ಯ ಸಂಗತಿಗಳು ಬಲು ದೊಡ್ಡ ಪ್ರೇರಣೆ ನೀಡುತ್ತವೆ.  ಬಹಳ ಬಲ ಕೊಡುತ್ತವೆ ಹಾಗೂ ಸಂಕಟ ಸಮಯದಲ್ಲಿ ಹೊಸ ಹಾದಿಯನ್ನು ನಿರ್ಮಿಸಿ ಕೊಡುತ್ತವೆ.  ನಾವೆಲ್ಲರೂ ನಮ್ಮ ಪಠ್ಯಕ್ರಮದಲ್ಲಿ ವಿದ್ಯುತ್ ಬಲ್ಬನ್ನು ಕಂಡುಹಿಡಿದ ‘ ಥಾಮಸ್ ಆಲ್ವಾ ಎಡಿಸನ್ ‘ ಕುರಿತು ಓದಿದ್ದೇವೆ.  ಆದರೆ, ಮಿತ್ರರೇ, ಈ ಸಾಧನೆಗಾಗಿ ಅವರೂ ಅದೆಷ್ಟು ಸಮಯ ವ್ಯಯ ಮಾಡಬೇಕಾಯಿತು ಎಂದು ನೀವು ಯಾವಾಗಲಾದರೂ ಯೋಚಿಸಿದ್ದೀರಾ?  ಅದೆಷ್ಟು ಸಲ ವೈಫಲ್ಯಗಳುಂಟಾದವು, ಅದೆಷ್ಟು ಸಮಯ ಹೋಯಿತು, ಅದೆಷ್ಟು ಹಣ ಪೋಲಾಯಿತು.  ವೈಫಲ್ಯ ಉಂಟಾದಾಗ ಅದೆಷ್ಟು ನಿರಾಶೆ ಉಂಟಾಗಿರಲಿಕ್ಕೆ ಸಾಕು.  ಆದರೆ, ಇಂದು ಅದೇ ವಿದ್ಯುತ್ ಬಲ್ಬ್ ನಮ್ಮ ಜೀವನಕ್ಕೇ ಬೆಳಕಾಗಿದೆ.  ಆದುದರಿಂದಲೇ ಹೇಳುವುದು ವೈಫಲ್ಯದಲ್ಲೇ ಸಫಲತೆಯ ಸಂದರ್ಭಗಳು ಅಡಗಿರುತ್ತವೆ.
ಶ್ರೀನಿವಾಸ ರಾಮಾನುಜಂ ಅವರನ್ನು ತಿಳಿಯದವರು ಯಾರಿದ್ದಾರೆ?  ಆಧುನಿಕ ಕಾಲದ ಮಹಾನತಮ ಗಣಿತ ವಿದ್ಯಾಂಸರಲ್ಲಿ ಅವರೊಬ್ಬರು.  ಭಾರತೀಯ ಗಣಿತ ಶಾಸ್ತ್ರಜ್ಞ.  ಅವರಿಗೆ ಗಣಿತ ಶಾಸ್ತ್ರದಲ್ಲಿ ಯಾವುದೇ ವಿದ್ಯುಕ್ತ ಶಿಕ್ಷಣ ಆಗಿರಲಿಲ್ಲ ಎಂಬುದು ನಿಮಗೆ ಗೊತ್ತಿರಲಿಕ್ಕೆ ಸಾಕು.  ಅವರಿಗೆ ವಿಶೇಷ ಶಿಕ್ಷಣವೂ ದೊರಕಿರಲಿಲ್ಲ.  ಆದರೆ, ಅವರು ಗಣಿತ ವಿಶ್ಲೇಷಣೆ, ಸಂಖ್ಯಾ ಸಿದ್ಧಾಂತಗಳಂತಹ ವಿಭಿನ್ನ ಕ್ಷೇತ್ರಗಳಲ್ಲಿ ಮಹತ್ವದ ಕೊಡುಗೆ ನೀಡಿದರು.  ಅವರದು ಬಲು ಕಷ್ಟದ ಬದುಕು.  ದುಃಖಮಯ ಜೀವನ.  ಇಷ್ಟಾದರೂ ಜಗತ್ತಿಗೆ ಬಹಳಷ್ಟು ಕೊಟ್ಟು ಹೋದರು.  ಯಶಸ್ಸು ಎಂತವರಿಗಾದರೂ ಸಿಗಬಲ್ಲದು ಎಂಬುದಕ್ಕೆ ಎ.ಏ. ರೋಲಿಂಗ್ ಒಂದು ಅತ್ಯುತ್ತಮ ಉದಾಹರಣೆ.  ಹ್ಯಾರಿ ಪಾಟರ್  ಸರಣಿ ಈಗ ವಿಶ್ವದೆಲ್ಲೆಡೆ ಜನಪ್ರಿಯ.  ಆದರೆ, ಇದರ ಆರಂಭ ಹೀಗಿರಲಿಲ್ಲ.  ಅವರು ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾದೀತು.  ಹಲವಾರು ವೈಫಲ್ಯಗಳು ಎದುರಾದವು.  ರೋಲಿಂಗ್ ಸ್ವತಃ ಹೇಳಿಕೊಂಡಂತೆ ಕಷ್ಟಗಳ ನಡುವೆಯೂ ತಮ್ಮ ಸಂಪೂರ್ಣ ಶಕ್ತಿ ವಿನಿಯೋಗಿಸಬೇಕಾಗುತ್ತಿತ್ತು.
 
ಈ ದಿನಗಳಲ್ಲಿ – ಪರೀಕ್ಷೆ – ಕೇವಲ ವಿದ್ಯಾರ್ಥಿಗಳಿಗೆ ಮಾತ್ರ ಅಲ್ಲ.  ಅದು ಇಡೀ ಕುಟುಂಬಕ್ಕೆ, ಇಡೀ ಶಾಲೆಗೆ ಹಾಗೂ ಶಿಕ್ಷಕರಿಗೆ ಎಲ್ಲರಿಗೂ ಆಗಿ ಬಿಡುತ್ತದೆ.  ಆದರೆ, ತಂದೆ – ತಾಯಿಗಳು ಹಾಗೂ ಶಿಕ್ಷಕರ ಬೆಂಬಲವಿಲ್ಲದೆ, ವಿದ್ಯಾರ್ಥಿ  ಸ್ಥಿತಿ ಉತ್ತಮವಲ್ಲ.  ಶಿಕ್ಷಕರಾಗಲಿ, ಪೋಷಕರಾಗಲಿ ಅಥವಾ ಹಿರಿಯ ವಿದ್ಯಾರ್ಥಿಗಳಾಗಲಿ, ಎಲ್ಲರೂ ಕೂಡಿಕೊಂಡು ಒಂದು ತಂಡವಾಗಿ, ಘಟಕವಾಗಿ, ಸಮಾನ ಚಿಂತನೆಯೊಂದಿಗೆ ಯೋಜನಾಬದ್ಧವಾಗಿ ಮುನ್ನಡೆದಾಗ ಮಾತ್ರ ಪರೀಕ್ಷೆ ಸರಳವಾಗಿಬಿಡುತ್ತದೆ.
ಶ್ರೀಮಾನ್ ಕೇಶವ ವೈಷ್ಣವ ಅವರು ನನಗೆ ಆಪ್  ನಲ್ಲಿ ಬರೆದಿದ್ದಾರೆ.  ಮಕ್ಕಳು ಹೆಚ್ಚಿನ ಅಂಕ ಪಡೆಯಲು ಪೋಷಕರು ಅವರ ಮೇಲೆ ಒತ್ತಡ ಹೇರಬಾರದೆಂದು ಅವರು ದೂರಿದ್ದಾರೆ.  ಪರೀಕ್ಷೆ ತಯಾರಿ ಮಾಡಿಕೊಳ್ಳಲಷ್ಟೇ ಅವರಿಗೆ ಪೋಷಕರೇ ಪ್ರೋತ್ಸಾಹ  ಕೊಡಬೇಕು.  ಮಕ್ಕಳು ಉಲ್ಲಾಸವಾಗಿರುವಂತೆ ಅವರು ಯೋಚಿಸಬೇಕು.
ಮಕ್ಕಳ ಮೇಲೆ ತಮ್ಮ ಆಸೆ – ನಿರೀಕ್ಷೆಗಳನ್ನು ಹೇರಬಾರದೆಂದು ವಿಜಯ್ ಜಿಂದಲ್ ಬರೆಯುತ್ತಾರೆ.  ಸಾಧ್ಯವಾದಷ್ಟು ಅವರ ಧೈರ್ಯ ಹೆಚ್ಚಿಸಲಿ.  ಆತ್ಮವಿಶ್ವಾಸ ಕಾಯ್ದುಕೊಳ್ಳಲು ನೆರವಾಗಲಿ, ಈ ಮಾತು ಸರಿಯಾಗಿದೆ.  ನಾನು ಇಂದು ತಂದೆ – ತಾಯಿಗಳಿಗೆ ಹೆಚ್ಚು ಹೇಳಲು ಬಯಸುವುದಿಲ್ಲ.  ದಯಮಾಡಿ ಅವರ ಮೇಲೆ ಒತ್ತಡ ಹೇರಬೇಡಿ.  ತನ್ನ ಗೆಳೆಯನೊಡನೆ ಅವನು ಮಾತನಾಡುತ್ತಿದ್ದರೆ, ನೀವು ತಡೆಯಬೇಡಿ.  ಸರಳ ಸಕಾರಾತ್ಮಕ ವಾತಾವರಣ ನಿರ್ಮಿಸಿ.  ಅಗ ನೋಡಿ ನಿಮ್ಮ ಮಗನಾಗಲಿ, ಮಗಳಾಗಲಿ ಅವರಿಗೆ ಅದೆಷ್ಟು ಆತ್ಮವಿಶ್ವಾಸ ಬರುತ್ತದೆ ಎಂದು.  ನಿಮಗೂ ಆ ವಿಶ್ವಾಸ ಕಾಣಿಸುತ್ತದೆ.
 
ಮಿತ್ರರೇ, ಒಂದು ಮಾತಂತೂ ನಿಶ್ಚಿತ.  ವಿಶೇಷವಾಗಿ ಯುವ ಮಿತ್ರರಿಗೆ ಹೇಳಬಯಸುವೆ.  ನಮ್ಮಗಳ ಜೀವನಶೈಲಿ ನಮ್ಮ ಹಿಂದಿನ ಪೀಳಿಗೆಯವರಿಗಿಂತ ಬಹಳ ಬದಲಾಗಿದೆ.  ಪ್ರತಿಕ್ಷಣ ಹೊಸ ಅನ್ವೇಷಣೆ, ಹೊಸ ತಂತ್ರಜ್ಞಾನ, ವಿಜ್ಞಾನಗಳ ಹೊಸ ರೂಪ ನೋಡಲು ಸಿಗುತ್ತದೆ ಹಾಗೂ ನಾವು ಕೇವಲ ಅದರ ವಶಕ್ಕೊಳಗಾಗುತ್ತಿದ್ದೇವೆ ಎಂದರ್ಥವಲ್ಲ.  ನಾವೂ ಅವರೊಟ್ಟಿಗೆ ಕೂಡಿಕೊಳ್ಳಲು ಬಯಸುತ್ತೇವೆ.  ನಾವೂ ಕೂಡಾ ವಿಜ್ಞಾನದ ವೇಗಕ್ಕಿಂತ ಮುಂದೆ ಹೋಗಬಯಸುತ್ತೇವೆ.  ಇಂದು ರಾಷ್ಟ್ರೀಯ ವಿಜ್ಞಾನ ದಿನವಾಗಿರುವುದರಿಂದ ಗೆಳೆಯರೇ, ನಾನು ಈ ಮಾತನ್ನು ಆಡುತ್ತಿರುವೆ.  ಪ್ರತೀ ವರ್ಷ ಫೆಬ್ರವರಿ 28ರ ಈ ದಿನವನ್ನು ವಿಜ್ಞಾನ ಮಹೋತ್ಸವ ರೂಪದಲ್ಲಿ ನಾವು ಆಚರಿಸುತ್ತೇವೆ.  1928ರ ಇದೇ ದಿನದಂದು ಸರ್ ಸಿ.ವಿ. ರಾಮನ್ ತಮ್ಮ ವಿಜ್ಞಾನ ಶೋಧ ರಾಮನ್ ಎಫೆಕ್ಟ್ ನ್ನು ಘೋಷಿಸಿದ್ದರು.  ಈ ಅನ್ವೇಷಣೆಗಾಗಿ ಅವರಿಗೆ ನೊಬೆಲ್ ಪುರಸ್ಕಾರ ದೊರಕಿತು.  ಆದುದರಿಂದ ದೇಶ ಫೆಬ್ರವರಿ 28ನ್ನು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಿಸುತ್ತಿದೆ.
” ಜಿಜ್ಞಾಸೆ ” – ವಿಜ್ಞಾನದ ಮೂಲ.  ಪ್ರತಿಯೊಬ್ಬರ ಮನಸ್ಸಿನಲ್ಲಿ ವೈಜ್ಞಾನಿಕ ಚಿಂತನೆ ಬರಲಿ, ವಿಜ್ಞಾನ ಕುರಿತು ಆಕರ್ಷಣೆ ಉಂಟಾಗಲಿ.  ಪ್ರತಿಯೊಂದು ಪೀಳಿಗೆಗೂ ಅನ್ವೇಷಣೆಗೆ ಬಲ ಕೊಡಬೇಕಾಗುತ್ತದೆ.  ವಿಜ್ಞಾನ ತಂತ್ರಜ್ಞಾನಗಳಿಲ್ಲದೆ, ಅನ್ವೇಷಣೆ ಅಸಾಧ್ಯ.  ಇಂದು ದೇಶದಲ್ಲಿ ಅನ್ವೇಷಣೆಗೆ ಒತ್ತು ಸಿಗಲಿ.  ಜ್ಞಾನ ವಿಜ್ಞಾನ, ತಂತ್ರಜ್ಞಾನ ಇವೆಲ್ಲವೂ ನಮ್ಮ ವಿಕಾಸ ಯಾತ್ರೆಯಲ್ಲಿ ಸಹಜ ಭಾಗವಾಗಬೇಕು.  ಈ ಸಾರಿಯ ರಾಷ್ಟ್ರೀಯ ವಿಜ್ಞಾನ ದಿನದ ವಿಷಯ –  ”  ವಿಜ್ಞಾನ ತಂತ್ರಜ್ಞಾನ ಚಾಲಿತ ಅನ್ವೇಷಣೆಗಳಾಗಲಿ ” ಎಂದು ನಾನು ಸರ್ ಸಿ.ವಿ. ರಾಮನ್ ಅವರಿಗೆ ನಮಿಸುವೆ ಹಾಗೂ ವಿಜ್ಞಾನದ ಕಡೆ ಅಭಿರುಚಿ ಹೆಚ್ಚಿಸುವಂತೆ ನಿಮ್ಮನ್ನು ಆಗ್ರಪಡಿಸುವೆ.
ಮಿತ್ರರೇ, ಒಮ್ಮೊಮ್ಮೆ ಯಶಸ್ಸು ಬಹಳ ತಡವಾಗಿ ಸಿಗುತ್ತದೆ ಹಾಗೂ ಯಶಸ್ಸು ದೊರೆತಾಗ ಜಗತ್ತು ನೋಡುವ ದೃಷ್ಟಿಯೂ ಬದಲಾಗುತ್ತದೆ.  ನೀವು ಪ್ರಾಯಶಃ ಪರೀಕ್ಷೆ ತಯಾರಿಯಲ್ಲಿ ನಿರತರಾಗಿದ್ದೀರಿ.  ಆದುದರಿಂದ ಹಲವಾರು ಸಂಗತಿಗಳು ನಿಮ್ಮ ಮನಸ್ಸಿಗೆ ನಾಟಿಲ್ಲದಿರಬಹುದು.  ದೇಶವಾಸಿಗಳಿಗೂ ಈ ಸಂಗತಿಯನ್ನು ತಿಳಿಸಬಯಸುವೆ.  ವಿಜ್ಞಾನ ಜಗತ್ತಿನಲ್ಲಿ ಒಂದು ಅತಿ ದೊಡ್ಡ ಹಾಗೂ ಮಹತ್ವಪೂರ್ಣ ಶೋಧವಾಗಿದೆ ಎಂದು ನೀವು ಕೆಲವು ದಿನಗಳ ಹಿಂದೆ ಕೇಳಿರಬಹುದು.  ವಿಶ್ವದ ವಿಜ್ಞಾನಿಗಳು ಪರಿಶ್ರಮಪಟ್ಟವು.  ಪೀಳಿಗೆಗಳು ಬಂದವು, ಪ್ರಯತ್ನಗಳು ನಡೆಸಿದವು ಹಾಗೂ ಸರಿಸುಮಾರು 100 ವರ್ಷಗಳ ನಂತರ ಒಂದು ಯಶಸ್ಸು ಕೈಗೆ ಬಂತು. ನಮ್ಮ ವಿಜ್ಞಾನಿಗಳ ಪರಿಶ್ರಮದಿಂದ ಅದನ್ನು ಜಾಗೃತಗೊಳಿಸಿ ಪತ್ತೆ ಮಾಡಲಾಗಿದೆ.  ಇದು ವಿಜ್ಞಾನದ ಬಹು ದೂರದರ್ಶೀ ಯಶಸ್ಸು.  ಇದು ಹಿಂದಿನ ಶತಮಾನದ ನಮ್ಮ ಮಹಾನ್ ವಿಜ್ಞಾನಿ ಐನ್ ಸ್ಟನ್ ಅವರ ಸಿದ್ಧಾಂತವನ್ನು ಪ್ರಮಾಣೀಕರಿಸುವುದಲ್ಲದೇ, ಭೌತಶಾಸ್ತ್ರ ಕ್ಷೇತ್ರದಲ್ಲಿ ಮಹತ್ತರ ಶೋಧವೆಂದು ಪರಿಗಣಿಸಲಾಗಿದೆ – ಇದು ಇಡೀ ಮನುಕುಲಕ್ಕೆ – ಇಡೀ ವಿಶ್ವಕ್ಕೆ ಪ್ರಯೋಜನಕರವಾದ ಸಂಗತಿ.  ಆದರೆ, ಭಾರತೀಯರಾಗಿ ನಮಗೆಲ್ಲರಿಗೂ ಸಂತಸ ಕೊಡುವ ಸಂಗತಿಯೆಂದರೆ, ಇಡೀ ಶೋಧ ಕ್ರಿಯೆಯಲ್ಲಿ ನಮ್ಮ ಸುಪತ್ರರೂ ಪ್ರತಿಭಾವಂತ ವಿಜ್ಞಾನಿಗಳು ಕೂಡಿಕೊಂಡಿದ್ದರು.  ಅವರದೂ ಕೊಡುಗೆ ಇದೆ.  ಆ ಎಲ್ಲಾ ವಿಜ್ಞಾನಿಗಳಿಗೆ ಇಂದು ನಾನು ಹೃತ್ಪೂರ್ವಕ ಅಭಿನಂದನೆ ತಿಳಿಸಬಯಸುವೆ.  ಭವಿಷ್ಯದಲ್ಲಿ ಈ ಶೋಧ ಕಾರ್ಯ ಮುಂದುವರಿಸುವಲ್ಲಿ ನಮ್ಮ ವಿಜ್ಞಾನಿಗಳು ಪ್ರಯತ್ನ ಮುಂದುವರಿಸುವರು.  ಅಂತಾರಾಷ್ಟ್ರೀಯ ಪ್ರಯತ್ನಗಳಲ್ಲಿ ಭಾರತವೂ ಪಾಲುದಾರನಾಗಿರುತ್ತದೆ.  ಕೆಲವು ದಿನಗಳ ಹಿಂದೆ ಒಂದು ಮಹತ್ವದ ನಿರ್ಣಯ ಕೈಗೊಳ್ಳಲಾಯಿತು.  ಈಗಿನ ಶೋಧ ಕಾರ್ಯದಲ್ಲಿ ಇನ್ನಷ್ಟು ಯಶಸ್ಸು ಗಳಿಸಲು ಲೇಸರ್ ಇಂಟರ್ ಫೆರೋ ಮೀಟರ್ ಗ್ರಾವಿಟೇಷನಲ್ ವೇವ್ ವೀಕ್ಷಣಾಲಯವನ್ನು ಭಾರತದಲ್ಲಿ ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ.  ಈಗ ವಿಶ್ವದಲ್ಲಿ ಎರಡು ಕಡೆ ಈ ವ್ಯವಸ್ಥೆ ಇದ್ದು, ಭಾರತದ್ದು ಮೂರನೆಯದಾಗಲಿದೆ.  ಭಾರತ ಇದರಲ್ಲಿ ಕೈಜೋಡಿಸುವುದರಿಂದ ಈ ವಿಜ್ಞಾನ ಶೋಧ ಪ್ರಕ್ರಿಯೆಗೆ ಹೊಸ ಬಲ ಬರುತ್ತದೆ ಹಾಗೂ ಹೊಸ ವೇಗ ದೊರಕುತ್ತದೆ.  ಭಾರತ ನಿಶ್ಚಿತವಾಗಿಯೂ ತನ್ನ ಇತಿಮಿತಿಯ ಸಂಪನ್ಮೂಲಗಳ ನಡುವೆಯೂ ಮಾನವ ಕಲ್ಯಾಣದ ಈ ಮಹತ್ತರ ವೈಜ್ಞಾನಿಕ ಶೋಧ ಪ್ರಕ್ರಿಯೆಯಲ್ಲಿ ಸಕ್ರಿಯ ಪಾಲುದಾರನಾಗಲಿದೆ.  ನಾನು ಮತ್ತೊಮ್ಮೆ ವಿಜ್ಞಾನಿಗಳೆಲ್ಲರಿಗೂ ಶುಭಾಶಯ, ಅಭಿನಂದನೆ ತಿಳಿಸುವೆ.
ನನ್ನೊಲವಿನ ದೇಶವಾಸಿಗಳೇ, ನಾನು ನಿಮಗೊಂದು ದೂರವಾಣಿ ಸಂಖ್ಯೆ ತಿಳಿಸುವೆ, ನೀವು ನಾಳೆಯಿಂದ ಅದಕ್ಕೆ ಮಿಸ್ ಕಾಲ್ ಮಾಡಿ, ಈ ಸಂಖ್ಯೆಯಿಂದ ನೀವು ನನ್ನ ಮನದ ಮಾತು ಕೇಳಬಹುದಾಗಿದೆ.  ನೀವು ನಿಮ್ಮ ಮಾತೃಭಾಷೆಯಲ್ಲೂ ಕೇಳಬಹುದಾಗಿದೆ.  ಮಿಸ್ ಕಾಲ್ ಮಾಡಲು ನೀವು ಬಳಸಬೇಕಾದ ಸಂಖ್ಯೆ 81908 81908 ಮತ್ತೊಮ್ಮೆ ಹೇಳುವೆ 81908 81908.  ಸ್ನೇಹಿತರೇ  ನಿಮ್ಮ ಪರೀಕ್ಷೆ ಆರಂಭವಾಗುತ್ತಿದೆ.  ನನಗೂ ನಾಳೆ ಪರೀಕ್ಷೆಯ ಸಮಯ.  ದೇಶದ 125 ಕೋಟಿ ಜನತೆ ನನ್ನನ್ನು ಪರೀಕ್ಷೆ ಮಾಡಲಿದ್ದಾರೆ.  ತಿಳಿದಿದೆ ತಾನೇ.  ನಾಳೆ ಮುಂಗಡ ಪತ್ರ.  ಫೆಬ್ರವರಿ 29 ಲೀಪ್  ಇಯರ್  ಆಗುತ್ತದೆ.  ಆದರೆ, ನೀವು ನೋಡಿರಲಿಕ್ಕೆ ಸಾಕು, ನನ್ನ ಮಾತನ್ನು ಕೇಳುತ್ತಲೇ ಅನ್ನಿಸಿರಬೇಕು, ಅದೆಷ್ಟು ಆತ್ಮವಿಶ್ವಾಸದಿಂದ ತುಂಬಿರುವೆ ಎಂದು.  ಸರಿ ನಾಳೆ ನನ್ನ ಪರೀಕ್ಷೆ ಮುಗಿಯಲಿ.  ನಾಡಿದ್ದು ನಿಮ್ಮದು ಆರಂಭ ಹಾಗೂ ನಾವೆಲ್ಲಾ ಯಶ ಗಳಿಸಿದರೆ, ದೇಶಕ್ಕೂ ಯಶಸ್ಸು.  ಆದುದರಿಂದ ಮಿತ್ರರೇ ನಿಮಗೂ ಅನಂತ ಶುಭಾಶಯಗಳು.  ಸಾಫಲ್ಯ – ವೈಫಲ್ಯಗಳ ತಲ್ಲಣದಿಂದ ಮುಕ್ತರಾಗಿ, ಮುಕ್ತ ಮನಸ್ಸಿನಿಂದ ಮುನ್ನಡೆಯಿರಿ, ಅಚಲರಾಗಿರಿ, ಧನ್ಯವಾದಗಳು.
 
*******************