ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಮನೆಗೆಲಸದ ಕಾರ್ಮಿಕರ ನೇಮಕಾತಿ ಕುರಿತ ಸಹಕಾರಕ್ಕಾಗಿ ಕುವೇತ್ ಮತ್ತು ಭಾರತದ ನಡುವೆ ತಿಳಿವಳಿಕೆ ಒಪ್ಪಂದಕ್ಕೆ ಅಂಕಿತ ಹಾಕಲು ತನ್ನ ಅನುಮೋದನೆ ನೀಡಿದೆ.
ವಿವರಗಳು:
ಈ ತಿಳಿವಳಿಕೆ ಒಪ್ಪಂದವು ಮನೆಗೆಲಸದರಿಗೆ ಸಂಬಂಧಿಸಿದ ವಿಚಾರಗಳಲ್ಲಿ ವಿನ್ಯಾಸಿತ ಚೌಕಟ್ಟು ಒದಗಿಸುತ್ತದೆ ಮತ್ತು ಕುವೇತ್ ನಲ್ಲಿ ನಿಯುಕ್ತರಾಗಿರುವ ಮಹಿಳಾ ಕಾರ್ಮಿಕರು ಸೇರಿದಂತೆ ಭಾರತೀಯ ಮನೆ ಕೆಲಸದ ಕಾರ್ಮಿಕರ ಬಲವರ್ಧಿತ ಸುರಕ್ಷತೆಯನ್ನು ಒದಗಿಸುತ್ತದೆ. ಆರಂಭದಲ್ಲಿ ಈ ತಿಳಿವಳಿಕೆ ಒಪ್ಪಂದ ಐದು ವರ್ಷಗಳ ಅವಧಿಗೆ ಸಿಂಧುವಾಗಿದ್ದು, ಸ್ವಯಂ ನವೀಕರಣದ ನಿಬಂಧನೆಗಳನ್ನೂ ಒಳಗೊಂಡಿರುತ್ತದೆ.
ಅನುಷ್ಠಾನದ ಕಾರ್ಯತಂತ್ರ:
ಈ ತಿಳಿವಳಿಕೆ ಒಪ್ಪಂದದ ಅಡಿಯಲ್ಲಿ, ಈ ಎಂ.ಓ.ಯು.ನ ಅನುಷ್ಠಾನದ ಕುರಿತ ಕಾರ್ಯಾನುಷ್ಠಾನಕ್ಕಾಗಿ ಒಂದು ಜಂಟಿ ಸಮಿತಿಯನ್ನು ರಚಿಸಲಾಗುವುದು.
ಪ್ರಮುಖ ಪರಿಣಾಮಗಳು:
ಈ ತಿಳಿವಳಿಕೆ ಒಪ್ಪಂದವು ಎರಡೂ ದೇಶಗಳ ನಡುವೆ ಮನೆ ಕೆಲಸದ ಕಾರ್ಮಿಕರಿಗೆ ಸಂಬಂಧಪಟ್ಟ ವಿಚಾರಗಳಲ್ಲಿ ದ್ವಿಪಕ್ಷೀಯ ಸಹಕಾರವನ್ನು ಉತ್ತೇಜಿಸಲಿದೆ.
ಫಲಾನುಭವಿಗಳು:
ಕುವೇತ್ ನಲ್ಲಿ ನಿಯೋಜಿತರಾಗಿರುವ ಸುಮಾರು 3,00,000 ಭಾರತೀಯ ಮನೆ ಕೆಲಸದ ಕಾರ್ಮಿಕರು. ಇವರಲ್ಲಿ 90,000 ಮಹಿಳಾ ಮನೆ ಕೆಲಸದ ಕಾರ್ಮಿಕರೂ ಸೇರಿದ್ದಾರೆ.