Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಮನಿಲಾದಲ್ಲಿ (ನವೆಂಬರ್ 14, 2017) 15ನೇ ಆಸಿಯಾನ್ –ಭಾರತ ಶೃಂಗಸಭೆಯಲ್ಲಿ ಪ್ರಧಾನಮಂತ್ರಿಯವರ ಆರಂಭಿಕ ಹೇಳಿಕೆ

ಮನಿಲಾದಲ್ಲಿ (ನವೆಂಬರ್ 14, 2017) 15ನೇ ಆಸಿಯಾನ್ –ಭಾರತ ಶೃಂಗಸಭೆಯಲ್ಲಿ ಪ್ರಧಾನಮಂತ್ರಿಯವರ ಆರಂಭಿಕ ಹೇಳಿಕೆ

ಮನಿಲಾದಲ್ಲಿ (ನವೆಂಬರ್ 14, 2017) 15ನೇ ಆಸಿಯಾನ್ –ಭಾರತ ಶೃಂಗಸಭೆಯಲ್ಲಿ ಪ್ರಧಾನಮಂತ್ರಿಯವರ ಆರಂಭಿಕ ಹೇಳಿಕೆ

ಮನಿಲಾದಲ್ಲಿ (ನವೆಂಬರ್ 14, 2017) 15ನೇ ಆಸಿಯಾನ್ –ಭಾರತ ಶೃಂಗಸಭೆಯಲ್ಲಿ ಪ್ರಧಾನಮಂತ್ರಿಯವರ ಆರಂಭಿಕ ಹೇಳಿಕೆ


ಘನತೆವೆತ್ತ ಅಧ್ಯಕ್ಷ ದುತರ್ಟೆ ಅವರೇ,

ಘನತೆವೆತ್ತರೇ,

ಮಾನ್ಯ ಅಧ್ಯಕ್ಷರೇ,

ಆಸಿಯಾನ್ ಸ್ಥಾಪನೆಯಾಗಿ 50 ವರ್ಷ ತುಂಬಿದ ಸಂದರ್ಭದಲ್ಲಿ ಮನಿಲಾಕ್ಕೆ ನಾನು ಪ್ರಥಮ ಭೇಟಿ ನೀಡುತ್ತಿರುವುದಕ್ಕೆ ಹರ್ಷಿತನಾಗಿದ್ದೇನೆ.
ನಾವು ಕೂಡ ಆಸಿಯಾನ್ – ಭಾರತದ ಪಾಲುದಾರಿಕೆ ಮಾತುಕತೆಯ 25ನೇ ವರ್ಷವನ್ನು ಆಚರಿಸುತ್ತಿದ್ದೇವೆ.

ಈ ಮಹತ್ವದ ವರ್ಷದಲ್ಲಿ ಆಸಿಯಾನ್ ನ ಸಮರ್ಥ ಕಾರ್ಯಕಾರಿತ್ವಕ್ಕಾಗಿ ಪಿಲಿಪ್ಪೀನ್ಸ್ ಗೆ ಅಭಿನಂದನೆ ಸಲ್ಲಿಸುತ್ತೇನೆ ಮತ್ತು ಈ ಶೃಂಗಸಭೆಯ ಅತ್ಯುತ್ತಮ ವ್ಯವಸ್ಥೆಗಳಿಗಾಗಿ ಮಾನ್ಯ ಅಧ್ಯಕ್ಷರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ.

ಆಸಿಯಾನ್-ಭಾರತ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲು ಸಂಯೋಜಕ ರಾಷ್ಟ್ರವಾಗಿ ವಿಯೆಟ್ನಾಂ ನೀಡಿರುವ ಕೊಡುಗೆಗೆ ನಾನು ವಿಯಟ್ನಾಂನ ಗೌರವಾನ್ವಿತ ಪ್ರಧಾನಮಂತ್ರಿಯವರಿಗೂ ಧನ್ಯವಾದ ಅರ್ಪಿಸುತ್ತೇನೆ.

ಘನತೆವೆತ್ತರೇ,

ಆಸಿಯಾನ್ ನ ಗಮನಾರ್ಹ ಪಯಣವು ಅದರ ಆಚರಣೆಯಷ್ಟೇ ಪ್ರತಿಬಿಂಬಿಸಲು ಅರ್ಹವಾಗಿದೆ.

ಈ ಐತಿಹಾಸಿಕ ಸಂದರ್ಭದಲ್ಲಿ, ಆಸಿಯಾನ್ ಒಂದೇ ನೋಟ, ಒಂದು ಗುರುತು ಮತ್ತು ಒಂದು ಸ್ವತಂತ್ರ ಸಮುದಾಯವಾಗಿ ಒಗ್ಗೂಡಿ ಶ್ರಮಿಸಲು ಸಂಕಲ್ಪಿಸುತ್ತದೆ ಎಂಬ ವಿಶ್ವಾಸ ನನಗಿದೆ.

ಭಾರತದ ಪೂರ್ವದತ್ತ ಕ್ರಮದ ನೀತಿ, ಆಸಿಯಾನ್ ಸುತ್ತಲೂ ರೂಪುಗೊಂಡಿದೆ, ಮತ್ತು ಭಾರತ-ಪೆಸಿಫಿಕ್ ಪ್ರದೇಶದ ಪ್ರಾದೇಶಿಕ ಭದ್ರತಾ ವಾಸ್ತುಶೈಲಿಯಲ್ಲಿ ಅದರ ಕೇಂದ್ರತ್ವವು ಸ್ಪಷ್ಟವಾಗಿದೆ.

3ನೇ ಆಸಿಯಾನ್ – ಭಾರತದ ಕ್ರಿಯಾ ಯೋಜನೆಗಳ ಅಡಿಯಲ್ಲಿ ನಮ್ಮ ಸಹಕಾರದ ವಿಸ್ತೃತ ಶ್ರೇಣಿಯ ಕಾರ್ಯಕ್ರಮಗಳು ಉತ್ತಮ ಪ್ರಗತಿ ಕಾಣುತ್ತಿದ್ದು, ರಾಜಕೀಯ – ಭದ್ರತೆ, ಆರ್ಥಿಕ ಮತ್ತು ಸಾಂಸ್ಕೃತಿಕ ಪಾಲುದಾರಿಕೆಯ ಮೂರು ಅಂಶಗಳನ್ನು ಒಳಗೊಂಡಿದೆ.

ಘನತೆವೆತ್ತರೇ

ಭಾರತ ಮತ್ತು ಆಸಿಯಾನ್ ನಡುವೆ ಸಾವಿರಾರು ವರ್ಷಗಳಿಂದಲೂ ಸಾಗರ ಸಂಬಂಧ ಏರ್ಪಟ್ಟಿದ್ದು, ಅವು ಪೂರ್ವದಿಂದಲೇ ನಮ್ಮ ವಾಣಿಜ್ಯ ಬಾಂಧವ್ಯಕ್ಕೆ ಅವಕಾಶ ಮಾಡಿವೆ, ನಾವು ಅದನ್ನು ಮತ್ತಷ್ಟು ಬಲಪಡಿಸಲು ಆಪ್ತವಾಗಿ ಶ್ರಮಿಸಬೇಕಾಗಿದೆ.

ವಲಯದ ಹಿತ ಮತ್ತು ಅದರ ಶಾಂತಿಯುತ ಅಭಿವೃದ್ಧಿಗೆ ಉತ್ತಮ ರೀತಿಯಲ್ಲಿ ದೃಢೀಕರಿಸುವ ನಿಯಮಗಳನ್ನು ಆಧರಿಸಿದ ಪ್ರಾದೇಶಿಕ ಭದ್ರತೆ ವಿನ್ಯಾಸ ಸಾಧಿಸುವ ಉದ್ದೇಶಕ್ಕೆ ಆಸಿಯಾನ್ ಗೆ ತನ್ನ ಸ್ಥಿರ ಬೆಂಬಲವನ್ನು ಭಾರತವು ಖಾತ್ರಿಪಡಿಸುತ್ತದೆ.

ಭಯೋತ್ಪಾದನೆ ಮತ್ತು ಹಿಂಸಾತ್ಮಕ ವಿಧ್ವಂಸಕತೆಯ ವಿರುದ್ಧ ನಾವು ವೈಯಕ್ತಿಕವಾಗಿ ಹೋರಾಡಲು ಶ್ರಮಿಸುತ್ತಿದ್ದೇವೆ. ಈ ನಿರ್ಣಾಯಕ ಕ್ಷೇತ್ರದಲ್ಲಿ ಸಹಕಾರವನ್ನು ತೀವ್ರಗೊಳಿಸುವ ಮೂಲಕ ಈ ಸವಾಲನ್ನು ನಾವು ಜಂಟಿಯಾಗಿ ಎದುರಿಸುವ ಸಮಯ ಬಂದಿದೆ.

ಘನತೆವೆತ್ತರೇ,

ಈ ಸ್ಮರಣಾರ್ಥ ವರ್ಷದ ಯೋಗ್ಯವಾದ ಪರಾಕಾಷ್ಠೆಯ ಆಚರಣೆ ಮತ್ತು 2018ರ ಜನವರಿ 25ರಂದು ದೆಹಲಿಯಲ್ಲಿ ಭಾರತ – ಆಸಿಯಾನ್ ವಿಶೇಷ ಸ್ಮರಣಾರ್ಥ ಶೃಂಗ ಸಭೆಯಲ್ಲಿ ನಿಮ್ಮನ್ನು ಸ್ವಾಗತಿಸಲು ನಾನು ಎದಿರು ನೋಡುತ್ತಿದ್ದೇನೆ.

ಭಾರತದ 125 ಕೋಟಿ ಜನರು, ಆಸಿಯಾನ್ ನಾಯಕರನ್ನು ಭಾರತದ 69ನೇ ಗಣರಾಜ್ಯೋತ್ಸವ ಸಮಾರಂಭದ ಮುಖ್ಯ ಅತಿಥಿಯಾಗಿ ಸ್ವಾಗತಿಸಲು ಉತ್ಸುಕರಾಗಿದ್ದಾರೆ.

ನಮ್ಮ ಸಮಾನ ಗುರಿಯನ್ನು ಸಾಕಾರಗೊಳಿಸಲು ನಿಮ್ಮೊಂದಿಗೆ ಕೆಲಸ ಮಾಡಲು ನಾನು ಬದ್ಧನಾಗಿದ್ದೇನೆ.

ಧನ್ಯವಾದಗಳು

****