Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಮನರಂಜನೆ, ಸೃಜನಶೀಲತೆ ಮತ್ತು ಸಂಸ್ಕೃತಿಯ ಜಗತ್ತನ್ನು ಒಟ್ಟುಗೂಡಿಸುವ ಜಾಗತಿಕ ಶೃಂಗಸಭೆಯಾದ ವೇವ್ಸ್ ನ ಸಲಹಾ ಮಂಡಳಿಯ ವ್ಯಾಪಕ ಸಭೆಯ ಅಧ್ಯಕ್ಷತೆ ವಹಿಸಿದ ಪ್ರಧಾನಮಂತ್ರಿ

ಮನರಂಜನೆ, ಸೃಜನಶೀಲತೆ ಮತ್ತು ಸಂಸ್ಕೃತಿಯ ಜಗತ್ತನ್ನು ಒಟ್ಟುಗೂಡಿಸುವ ಜಾಗತಿಕ ಶೃಂಗಸಭೆಯಾದ ವೇವ್ಸ್ ನ ಸಲಹಾ ಮಂಡಳಿಯ ವ್ಯಾಪಕ ಸಭೆಯ ಅಧ್ಯಕ್ಷತೆ ವಹಿಸಿದ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೊ ಕಾನ್ಫರೆನ್ಸ್ ಮೂಲಕ ವೇವ್ಸ್ ಸಲಹಾ ಮಂಡಳಿಯ ವ್ಯಾಪಕ ಸಭೆಯ ಅಧ್ಯಕ್ಷತೆ ವಹಿಸಿದ್ದರು. ವೇವ್ಸ್ ಜಾಗತಿಕ ಶೃಂಗಸಭೆಯಾಗಿದ್ದು, ಇದು ಮನರಂಜನೆ, ಸೃಜನಶೀಲತೆ ಮತ್ತು ಸಂಸ್ಕೃತಿಯ ಜಗತ್ತನ್ನು ಒಟ್ಟುಗೂಡಿಸುತ್ತದೆ.

ಈ ಸಂಬಂಧ ಎಕ್ಸ್ ಖಾತೆಯ ಪೋಸ್ಟ್ ನಲ್ಲಿ, ಅವರು ಹೀಗೆ ಬರೆದಿದ್ದಾರೆ:

“ಮನರಂಜನೆ, ಸೃಜನಶೀಲತೆ ಮತ್ತು ಸಂಸ್ಕೃತಿಯ ಜಗತ್ತನ್ನು ಒಟ್ಟುಗೂಡಿಸುವ ಜಾಗತಿಕ ಶೃಂಗಸಭೆಯಾದ ವೇವ್ಸ್ ನ ಸಲಹಾ ಮಂಡಳಿಯ ವ್ಯಾಪಕ ಸಭೆಯನ್ನು ಈಗಷ್ಟೇ ಮುಕ್ತಾಯಗೊಳಿಸಲಾಗಿದೆ. ಸಲಹಾ ಮಂಡಳಿಯ ಸದಸ್ಯರು ವಿವಿಧ ಕ್ಷೇತ್ರಗಳ ಪ್ರಖ್ಯಾತ ವ್ಯಕ್ತಿಗಳಾಗಿದ್ದು, ಅವರು ತಮ್ಮ ಬೆಂಬಲವನ್ನು ಪುನರುಚ್ಚರಿಸಿದ್ದಲ್ಲದೆ, ಭಾರತವನ್ನು ಜಾಗತಿಕ ಮನರಂಜನಾ ಕೇಂದ್ರವನ್ನಾಗಿ ಮಾಡುವ ನಮ್ಮ ಪ್ರಯತ್ನಗಳನ್ನು ಹೇಗೆ ಮತ್ತಷ್ಟು ಹೆಚ್ಚಿಸಬಹುದು ಎಂಬುದರ ಕುರಿತು ಅಮೂಲ್ಯವಾದ ಒಳಹರಿವುಗಳನ್ನು ಹಂಚಿಕೊಂಡಿದ್ದಾರೆ,’’ ಎಂದು ತಿಳಿಸಿದರು.

 

 

*****