Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಕಾಡು ಚಿರತೆಗಳನ್ನು ಬಿಡುಗಡೆ ಮಾಡಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ

ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಕಾಡು ಚಿರತೆಗಳನ್ನು ಬಿಡುಗಡೆ ಮಾಡಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ


ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಭಾರತದಲ್ಲಿ ಅಳಿವಿನ ಅಂಚಿನಲ್ಲಿರುವ ಕಾಡು ಚಿರತೆಗಳನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬಿಡುಗಡೆ ಮಾಡಿದರು. ಪ್ರಾಜೆಕ್ಟ್ ಚೀತಾ ಯೋಜನೆಯಡಿ ಈ ಚಿರತೆಗಳನ್ನು ನಮೀಬಿಯಾದಿಂದ ತರಲಾಗಿದ್ದು, ಪ್ರಪಂಚದ ಮೊದಲ ಅಂತರ್ ಖಂಡಾಂತರ ದೊಡ್ಡ ಕಾಡು ಮಾಂಸಹಾರಿ ಪ್ರಾಣಿಗಳ ಸ್ಥಳಾಂತರ ಯೋಜನೆ ಇದಾಗಿದೆ.   

ಕುನೋ ರಾಷ್ಟ್ರೀಯ ಉದ್ಯಾನವನದ ಎರಡು ಕೇಂದ್ರಗಳಲ್ಲಿ ಪ್ರಧಾನಮಂತ್ರಿ ಅವರು ಚಿರತೆಗಳನ್ನು ಬಿಡುಗಡೆ ಮಾಡಿದರು. ಸ್ಥಳದಲ್ಲಿ ಪ್ರಧಾನಮಂತ್ರಿ ಅವರು ಚಿರತೆ ಮಿತ್ರರು, ಚಿರತೆ ಪುನರ್ವಸತಿ ನಿರ್ವಹಣಾ ತಂಡ ಹಾಗೂ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದರು. ಈ ಐತಿಹಾಸಿಕ ಸಮಾರಂಭದಲ್ಲಿ ಪ್ರಧಾನಮಂತ್ರಿ ಅವರು ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದರು.

ತಮ್ಮ ಭಾಷಣದಲ್ಲಿ ಪ್ರಧಾನಮಂತ್ರಿ ಅವರು, ಬೂತಕಾಲವನ್ನು ಸರಿಪಡಿಸಲು ಮತ್ತು ಹೊಸ ಭವಿಷ್ಯವನ್ನು ನಿರ್ಮಿಸಲು ಮಾನವೀಯತೆಗೆ ಅವಕಾಶ ನೀಡುವ  ಬೆರಳೆಣಿಕೆಯ ಅವಕಾಶಗಳ ಕುರಿತು ಬೆಳಕು ಚೆಲ್ಲುವ ಮೂಲಕ ಪ್ರಧಾನಮಂತ್ರಿ ಅವರು ಕೃತಜ್ಞತೆ ವ್ಯಕ್ತಪಡಿಸಿದರು. ಇಂದು ನಮ್ಮ ಮುಂದೆ ಅಂತಹ ಕ್ಷಣವಿದೆ ಎಂದು ಹೇಳಿದ ಶ್ರೀ ನರೇಂದ್ರ ಮೋದಿ ಅವರು, “ದಶಕಗಳ ಹಿಂದೆ ಜೀವ ವೈವಿದ್ಯತೆಯ ಹಳೆಯ ಕೊಂಡಿ ಮುರಿದು ಅಳಿದುಹೋಗಿದೆ. ಇಂದು ಅದನ್ನು ಪುನರ್ ಸ್ಥಾಪಿಸಲು ನಮಗೆ ಅವಕಾಶ ದೊರೆತಿದೆ. ಇಂದು ಚಿರತೆ ಭಾರತದ ಮಣ್ಣಿಗೆ ಮರಳಿದೆ” ಎಂದು ಹೇಳಿದರು. ಪೂರ್ಣ ಶಕ್ತಿಯೊಂದಿಗೆ ಭಾರತದ ನೈಸರ್ಗಿಕ ಪ್ರೀತಿಯ ಪ್ರಜ್ಞೆ ಜಾಗೃತವಾಗಿರುವ ಸ್ಮರಣೀಯ ಸಂದರ್ಭವಾಗಿದೆ ಎಂದು ಹೇಳಿದರು. ದಶಕಗಳ ನಂತರ ನಮೀಬಿಯಾ ಮತ್ತು ಅಲ್ಲಿನ ಸರ್ಕಾರದ ನೆರವಿನಿಂದ ಭಾರತದ ನೆಲಕ್ಕೆ ಚಿರತೆಗಳು ಮರಳಿವೆ ಎಂದು ಪ್ರಧಾನಮಂತ್ರಿ ಅವರು ವಿಶೇಷವಾಗಿ ಉಲ್ಲೇಖಿಸಿ ದೇಶವಾಸಿಗಳನ್ನು ಅಭಿನಂದಿಸಿದರು. “ಈ ಚಿರತೆಗಳು, ನಿಸರ್ಗದ ಬಗ್ಗೆ ನಮಗಿರುವ ಜವಾಬ್ದಾರಿಗಳಷ್ಟೇ ಅಲ್ಲದೇ ಮಾನವೀಯ ಮೌಲ್ಯ ಹಾಗೂ ಸಂಪ್ರದಾಯಗಳನ್ನು ಜಾಗೃತಗೊಳಿಸಿವೆ ಎಂಬುದು ತಮಗೆ ಖಚಿತವಾಗಿದೆ” ಎಂದು ಹೇಳಿದರು.

ಆಜಾದಿ ಕಾ ಅಮೃತ ಮಹೋತ್ಸವದ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿ ಅವರು, ‘ಪಂಚಪ್ರಾಣ್’ ಕುರಿತು ಸ್ಮರಿಸಿಕೊಂಡರು ಮತ್ತು ನಮ್ಮ ಪರಂಪರೆಯ ಬಗ್ಗೆ ಹೆಮ್ಮೆಪಡುವ ಹಾಗೂ ಗುಲಾಮಗಿರಿ ಮನಸ್ಥಿತಿಯಿಂದ ವಿಮೋಚನೆ ಹೊಂದುವ ಮಹತ್ವವನ್ನು ಎತ್ತಿತೋರಿಸಿದೆ. “ನಾವು ನಮ್ಮ ಬೇರುಗಳಿಂದ ದೂರ ಇದ್ದಾಗ ನಾವು ಬಹಳಷ್ಟು ಕಳೆದುಕೊಳ್ಳುತ್ತೇವೆ”. ಎಂದು ಹೇಳಿದರು. ಕಳೆದ ಶತಮಾನದಲ್ಲಿ ಪ್ರಕೃತಿಯ ಶೋಷಣೆಯನ್ನು ಶಕ್ತಿ ಮತ್ತು ಆಧುನಿಕತೆಯ ಸಂಕೇತವೆಂದು ಪರಿಗಣಿಸಲಾಗಿತ್ತು ಎಂದು ಸ್ಮರಿಸಿಕೊಂಡರು. “1947 ರಲ್ಲಿ ದೇಶದಲ್ಲಿ ಮೂರು ಚಿರತೆಗಳು ಉಳಿದುಕೊಂಡಿದ್ದವು, ಸಾಲ್ ಅರಣ್ಯದಲ್ಲಿ ಇವುಗಳನ್ನು ಸಹ ನಿರ್ದಯವಾಗಿ ಮತ್ತು ಬೇಜವಾಬ್ದಾರಿಯಿಂದ ಬೇಟೆಯಾಡಲಾಯಿತು” ಎಂದು ವಿಷಾದ ವ್ಯಕ್ತಪಡಿಸಿದರು.

1952 ರಿಂದ ಚಿರತೆಗಳು ಅಳಿದುಹೋಗಿದ್ದು, ಕಳೆದ ಏಳು ದಶಕಗಳಲ್ಲಿ ಇವುಗಳ ಪುನರ್ವಸತಿಗೆ ಅರ್ಥಪೂರ್ಣ ಪ್ರಯತ್ನಗಳು ನಡೆದಿಲ್ಲ. ದೇಶದಲ್ಲಿ ಆಜಾದಿ ಕಾ ಅಮೃತ ಮಹೋತ್ಸವ ಸಂದರ್ಭದಲ್ಲಿ ಹೊಸ ಶಕ್ತಿಯೊಂದಿಗೆ ಚಿರತೆಗಳ ಪುನರ್ವಸತಿಯನ್ನು ಉಲ್ಲಾಸದಿಂದ ಪುನಃ ಆರಂಭಿಸಲಾಗುತ್ತಿದೆ.
“ಮರಣಹೊಂದಿದವರನ್ನೂ ಸಹ ಬದುಕಿಸುವ ಶಕ್ತಿ ಅಮೃತಕ್ಕಿದೆ” ಎಂದು ಶ್ರೀ ನರೇಂದ್ರ ಮೋದಿ ಅವರು ಹೇಳಿದರು. ಆಜಾದಿ ಕಾ ಅಮೃತ ಮಹೋತ್ಸವದ ಸಂದರ್ಭದಲ್ಲಿ ಕರ್ತವ್ಯ ಮತ್ತು ನಂಬಿಕೆಯ ಈ ಅಮೃತ ನಮ್ಮ ಪರಂಪರೆಯನ್ನಷ್ಟೇ ಪುನರುಜ್ಜೀವನಗೊಳಿಸುತ್ತಿಲ್ಲ, ಆದರೆ ಇಂತಹ ಪರಿಸ್ಥಿತಿಯಲ್ಲಿ ಇದೀಗ ಚಿರತೆಗಳು ಭಾರತಕ್ಕೂ ಕಾಲಿಟ್ಟಿವೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು.

ಹಲವು ವರ್ಷಗಳ ಪರಿಶ್ರಮದಿಂದ ಈ ಪುನರ್ವಸತಿ ಯಶಸ್ವಿಯಾಗಲು ಸಾಧ್ಯವಾಗಿದೆ ಎಂದು ಎಲ್ಲರ ಗಮನ ಸೆಳೆದ ಪ್ರಧಾನಮಂತ್ರಿ ಅವರು, ರಾಜಕೀಯ ಪ್ರಾಮುಖ್ಯತೆ ನೀಡದ ಕ್ಷೇತ್ರಕ್ಕೆ ಹೆಚ್ಚಿನ ಶಕ್ತಿಯನ್ನು ನಿಯೋಜಿಸಲಾಗುತ್ತಿದೆ. ಚಿರತೆ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸುವಾಗ ದಕ್ಷಿಣಾ ಆಫ್ರಿಕಾ ಮತ್ತು ನಮೀಬಿಯಾ ತಜ್ಞರೊಂದಿಗೆ ನಿಕಟವಾಗಿ ನಮ್ಮ ಬುದ್ದಿವಂತ ವಿಜ್ಞಾನಿಗಳು ತೀವ್ರ ಸಂಶೋಧನೆ ಕೈಗೊಂಡಿದ್ದಾರೆ. ಚಿರತೆಗಳಿಗಾಗಿ ಸುಸ್ಥಿರ ಪ್ರದೇಶವನ್ನು ಗುರುತಿಸಲು ವೈಜ್ಞಾನಿಕ ಸಮೀಕ್ಷೆ ನಡೆಸಲಾಗಿದೆ ಮತ್ತು ಕುನೋ ರಾಷ್ಟ್ರೀಯ ಉದ್ಯಾನವನವನ್ನು ಈ ಮಂಗಳಕರ ಕಾರ್ಯಕ್ಕೆ ಆಯ್ಕೆಮಾಡಲಾಗಿದೆ ಎಂದರು.   

ನಿಸರ್ಗ ಮತ್ತು ಪರಿಸರ ರಕ್ಷಣೆಯಾದರೆ ನಮ್ಮ ಭವಿಷ್ಯ ಸುರಕ್ಷಿತವಾಗುತ್ತದೆ ಮತ್ತು ಸಮೃದ್ಧಿ ಮತ್ತು ಬೆಳವಣಿಗೆಯ ಮಾರ್ಗ ಮುಕ್ತವಾಗುತ್ತದೆ.  ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಚಿರತೆಗಳ ಹೆಜ್ಜೆಗುರುತುಗಳಿಂದ ಹುಲ್ಲುಗಾವಲು ಪರಿಸರ ವ್ಯವಸ್ಥೆ ಪುನರ್ ಸ್ಥಾಪನೆಯಾಗಲಿದೆ ಮತ್ತು ಇದರಿಂದ ಜೀವ ವೈವಿದ್ಯತೆಯೂ ಹೆಚ್ಚಾಗುತ್ತದೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು. ಪರಿಸರ ಸ್ನೇಹಿ ಪ್ರವಾಸೋದ್ಯಮ ಬೆಳವಣಿಗೆಯಿಂದ ಉದ್ಯೋಗವಕಾಶಗಳು ಹೆಚ್ಚಾಗುತ್ತವೆ, ಅಭಿವೃದ್ಧಿಯ ಹೊಸ ಸಾಧ್ಯತೆಗಳು ತೆರೆದುಕೊಳ್ಳುತ್ತವೆ ಎಂದು ಹೇಳಿದರು.  

ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಚಿರತೆಗಳನ್ನು ಬಿಡುಗಡೆ ಮಾಡಿರುವ ಹಿನ್ನೆಲೆಯಲ್ಲಿ ದೇಶದ ಜನತೆ ಕೆಲವು ತಿಂಗಳ ಕಾಲ ಸಮಾಧಾನದಿಂದ ಕಾಯಬೇಕು ಎಂದು ಶ್ರೀ ಮೋದಿ ಅವರು ಮನವಿ ಮಾಡಿದರು. “ಇವತ್ತು ಈ ಚಿರತೆಗಳು ನಮ್ಮ ಅತಿಥಿಗಳು ಮತ್ತು ಈ ಪ್ರದೇಶದ ಬಗ್ಗೆ ಚಿರತೆಗಳಿಗೆ ತಿಳಿದಿಲ್ಲ. “ಈ ಚಿರತೆಗಳು ಕುನೋ ರಾಷ್ಟ್ರೀಯ ಉದ್ಯಾನವನ್ನು ತಮ್ಮ ಮನೆ ಮಾಡಿಕೊಳ್ಳಬೇಕು. ಇದಕ್ಕಾಗಿ ನಾವು ಕೆಲವು ತಿಂಗಳುಗಳ ಸಮಯ ನೀಡಬೇಕು” ಎಂದರು.

ಅಂತರರಾಷ್ಟ್ರೀಯ ಮಾರ್ಗಸೂಚಿಯನ್ನು ಅನುಸರಿಸಬೇಕು ಎಂದು ಒತ್ತಿ ಹೇಳಿದರು.  ಈ ಚಿರತೆಗಳು ನೆಲೆಗೊಳ್ಳಲು ಭಾರತ ಅತ್ಯುತ್ತಮ ಪ್ರಯತ್ನ ಮಾಡಲಿದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು. “ನಮ್ಮ ಪ್ರಯತ್ನಗಳು ವಿಫಲವಾಗಲು ನಾವು ಅವಕಾಶ ನೀಡುವುದಿಲ್ಲ” ಎಂದು ಶ್ರೀ ನರೇಂದ್ರ ಮೋದಿ ಅವರು ಹೇಳಿದರು.    

ಇಂದು ಜಗತ್ತು ನಿಸರ್ಗ ಮತ್ತು ಪರಿಸರದತ್ತ ನೋಡುತ್ತಿದ್ದು, ಇಂದು ಮಾತುಕತೆಗಳು ಸುಸ್ಥಿರ ಅಭಿವೃದ್ಧಿ ಬಗ್ಗೆ ನಡೆಯುತ್ತಿವೆ ಎಂದು ಪ್ರಧಾನಮಂತ್ರಿ ಅವರು ವಿಷಯವನ್ನು ಕೇಂದ್ರೀಕರಿಸಿದರು. “ಭಾರತಕ್ಕೆ ನಿಸರ್ಗ ಮತ್ತು ಪರಿಸರ, ಮತ್ತದರ ಪ್ರಾಣಿಗಳು ಹಾಗೂ ಪಕ್ಷಿಗಳು ಕೇವಲ ಸುಸ್ಥಿರತೆ ಮತ್ತು ಸುರಕ್ಷಿತವಷ್ಟೇ ಅಲ್ಲ, ಆದರೆ ಇದು ಭಾರತದ ಸೂಕ್ಷ್ಮತೆ ಹಾಗೂ ಧಾರ್ಮಿಕತೆಯೂ ಆಗಿದೆ” ಎಂದರು. “ನಮ್ಮ ಸುತ್ತಲೂ ಇರುವ ಚಿಕ್ಕ ಜೀವಿಗಳ ಬಗ್ಗೆಯೂ ಕಾಳಜಿ ವಹಿಸಲು ಕಲಿಸಲಾಗುತ್ತದೆ. ವಿನಾಕಾರಣ ಜೀವಿಗಳ ಜೀವಹಾನಿಯಾದರೆ ನಮ್ಮ ಸಂಪ್ರದಾಯದಂತೆ ಪಾಪಪ್ರಜ್ಞೆ ಕಾಡುತ್ತದೆ. ಹೀಗಿರುವಾಗ ನಮ್ಮಿಂದಾಗಿ ಇಡೀ ಅಮೂಲ್ಯ ವರ್ಗಗಳ ಅಸ್ಥಿತ್ವವೇ ಕಳೆದುಹೋಗಿದೆ ಎಂಬುದನ್ನು ಹೇಗೆ ಒಪ್ಪಿಕೊಳ್ಳಲು ಸಾಧ್ಯ?” ಎಂದರು.

ಚಿರತೆಗಳು ಆಫ್ರಿಕಾ ಮತ್ತು ಇರಾನ್ ನಂತಹ ಕೆಲವು ದೇಶಗಳಲ್ಲಿ ಪತ್ತೆಯಾಗಿದ್ದು, ಭಾರತವನ್ನು ಈ ಪಟ್ಟಿಯಿಂದ ಬಹು ಹಿಂದೆಯೇ ತೆಗೆದುಹಾಕಲಾಗಿದೆ. “ಮುಂಬರುವ ವರ್ಷಗಳಲ್ಲಿ ನಮ್ಮ ಮಕ್ಕಳು ಈ ವ್ಯಂಗ್ಯವನ್ನು ಅನುಭವಿಸಬೇಕಾಗಿಲ್ಲ. ಚಿರತೆಗಳು ತಮ್ಮದೇ ರಾಷ್ಟ್ರದಲ್ಲಿ, ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಓಡಲಿವೆ. ಇಂದು ನಮ್ಮ ನಾಡಿನಲ್ಲಿ ಒಂದು ದೊಡ್ಡ ಶೂನ್ಯವನ್ನು ಚಿರತೆ ಮೂಲಕ ತುಂಬಲಾಗುತ್ತಿದೆ” ಎಂದು ಹೇಳಿದರು.   

21 ನೇ ಶತಮಾನದಲ್ಲಿ ಆರ್ಥಿಕತೆ ಮತ್ತು ಪರಿಸರ ವಿಜ್ಞಾನ ಸಂಘರ್ಷದ ವಲಯಗಳಲ್ಲ ಎಂಬ ಸಂದೇಶವನ್ನು ಭಾರತ ಜಗತ್ತಿಗೆ ನೀಡುತ್ತಿದೆ ಎಂದು ಹೇಳಿದರು. ಪರಿಸರವನ್ನು ಸಂರಕ್ಷಿಸುವುದರೊಂದಿಗೆ ದೇಶದ ಆರ್ಥಿಕ ಪ್ರಗತಿಯನ್ನು ಸಾಧಿಸಬಹುದು ಎಂಬುದಕ್ಕೆ ಭಾರತದ ಉಸಿರು ಮತ್ತು ಜೀವಂತ ಉದಾಹರಣೆಯಾಗಿದೆ. “ಮತ್ತೊಂದು ಕೈಯಲ್ಲಿ ನಾವು ಜಗತ್ತಿನ ಅತಿದೊಡ್ಡ ಆರ್ಥಿಕ ಬೆಳವಣಿಗೆಯಾಗುತ್ತಿರುವ ಸಾಲಿಗೆ ಸೇರಿದ್ದೇವೆ, ಇದೇ ಕಾಲಕ್ಕೆ ದೇಶದ ಅರಣ್ಯ ಪ್ರದೇಶ ತ್ವರಿತವಾಗಿ ವಿಸ್ತರಣೆಯಾಗುತ್ತಿದೆ” ಎಂದು ಪ್ರಧಾನಮಂತ್ರಿ ಅವರು ಒತ್ತಿ ಹೇಳಿದರು.    

ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಬೆಳಕು ಚೆಲ್ಲಿದ ಪ್ರಧಾನಮಂತ್ರಿ ಅವರು, 2014 ರಲ್ಲಿ ನಮ್ಮ ಸರ್ಕಾರ ಬಂದ ನಂತರ ದೇಶದಲ್ಲಿ ಸುಮಾರು 250 ಹೊಸ ಸಂರಕ್ಷಿತ ಪ್ರದೇಶಗಳನ್ನು ಸೇರಿಸಲಾಗಿದೆ.  ಏಷ್ಯಾದ ಸಿಂಹಗಳ ಸಂಖ್ಯೆಯಲ್ಲಿ ದೊಡ್ಡದಾಗಿ ಏರಿಕೆಯಾಗಿದೆ ಮತ್ತು ದೇಶದಲ್ಲಿ ಗುಜರಾತ್ ಏಷ್ಯಾದ ಸಿಂಹಗಳ ವಲಯಲ್ಲಿ ಪ್ರಬಲವಾಗಿ ಹೊರ ಹೊಮ್ಮಿದೆ. “ಇದರ ಹಿಂದೆ ದಶಕಗಳ ಸಂಶೋಧನೆ ಆಧಾರಿತ ನೀತಿಗಳು ಮತ್ತು ಸಾರ್ವಜನಿಕರ ಪಾಲ್ಗೊಳ್ಳುವಿಕೆಯ ದೊಡ್ಡ ಪಾತ್ರವಿದೆ” ಎಂದು ಶ್ರೀ ನರೇಂದ್ರ ಮೋದಿ ಅವರು ಹೇಳಿದರು. “ಗುಜರಾತ್ ನಲ್ಲಿ – ವನ್ಯ ಜೀವಿಗಳಿಗೆ ನಾವು ಗೌರವ ಹೆಚ್ಚಿಸುತ್ತೇವೆ ಮತ್ತು ಸಂಘರ್ಷ ತಪ್ಪಿಸುತ್ತೇವೆ ಎಂದು ಪ್ರತಿಜ್ಞೆ ಮಾಡಿದ್ದು ನೆನಪಿದೆ. ಇಂದು ಈ ಚಿಂತನೆ ಮುಂದಾಗಿಯೇ ಫಲಿತಾಂಶ ನೀಡಿದೆ” ಎಂದು ಹೇಳಿದರು. ನಾವು ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಹುಲಿಗಳ ಸಂಖ್ಯೆಯನ್ನು ದ್ವಿಗುಣಗೊಳಿಸುವ ಗುರಿ ಸಾಧಿಸಿದ್ದೇವೆ ಎಂದು ಹೇಳಿದರು. ಅಸ್ಸಾಂನಲ್ಲಿ ಒಂದು ಕೊಂಬಿನ ಘೇಂಡಾಮೃಗಗಳ ಸಂಸತಿ ಅಪಾಯದಲ್ಲಿತ್ತು ಎಂದು ಸ್ಮರಿಸಿಕೊಂಡ ಅವರು, ಇಂದು ಅವುಗಳ ಸಂಖ್ಯೆ ಹೆಚ್ಚಾಗಿದೆ. ಕಳೆದ ಕೆಲವೇ ವರ್ಷಗಳಲ್ಲಿ ಆನೆಗಳ ಸಂಖ್ಯೆ 30 ಸಾವಿರಕ್ಕಿಂತ ಹೆಚ್ಚಾಗಿದೆ. ಚೌಗು ಪ್ರದೇಶಗಳು, ಭಾರತದಲ್ಲಿ ಸಸ್ಯ ಮತ್ತು ಪ್ರಾಣಿಗಳನ್ನು ರಕ್ಷಿಸಲು ಮಾಡಿದ ಕೆಲಸವನ್ನು ಅವರು ಪ್ರಸ್ತಾಪಿಸಿದರು. ಜಗತ್ತಿನ ಕೋಟ್ಯಂತರ ಜನರ ಜೀವನ ಮತ್ತು ಅಗತ್ಯಗಳು ಚೌಗು ಪ್ರದೇಶದ ಪರಿಸರ ವ್ಯವಸ್ಥೆಯ ಮೇಲೆ ಅವಲಂಬಿತವಾಗಿದೆ. “ಇಂದು ದೇಶದಲ್ಲಿ 75 ಚೌಗು ಪ್ರದೇಶಗಳನ್ನು ರಾಮ್ಸರ್ ಪ್ರದೇಶಗಳು ಎಂದು ಘೋಷಿಸಿದ್ದು, ಕಳೆದ ನಾಲ್ಕು ವರ್ಷಗಳಲ್ಲಿ 26 ಪ್ರದೇಶಗಳನ್ನು ಸೇರ್ಪಡೆ ಮಾಡಲಾಗಿದೆ”. ದೇಶದ ಈ ಪ್ರಯತ್ನಗಳ ಪರಿಣಾಮ ಮುಂಬರುವ ಶತಮಾನಗಳವರೆಗೆ ಗೋಚರಿಸುತ್ತದೆ ಮತ್ತು ಪ್ರಗತಿಗೆ ಹೊಸ ಮಾರ್ಗಗಳನ್ನು ಸುಗಮಗೊಳಿಸುತ್ತದೆ” ಎಂದು ಹೇಳಿದರು.

ಭಾರತ ಇಂದು ಎದುರಿಸುತ್ತಿರುವ ಜಾಗತಿಕ ವಿಷಯಗಳ ಕುರಿತು ಪ್ರಧಾನಮಂತ್ರಿ ಅವರು ಪ್ರತಿಯೊಬ್ಬರ ಗಮನ ಸೆಳೆದರು. ಜಾಗತಿಕ ಸಮಸ್ಯೆಗಳು, ಅವುಗಳ ಪರಿಹಾರಗಳು ಮತ್ತು ನಮ್ಮ ಜೀವನವನ್ನು ಸಮಗ್ರವಾಗಿ ವಿಶ್ಲೇಷಿಸುವ ಅಗತ್ಯವನ್ನು  ಪುನರುಚ್ಚರಿಸಿದರು.  ಜೀವನದ ‘ಲೈಫ್” ಮಂತ್ರವನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ ಅವರು, ಇದು ಜಗತ್ತಿನ ಪರಿಸರದ ಜೀವನ ಶೈಲಿ ರೂಢಿಸಿಕೊಳ್ಳುತ್ತಿದೆ ಮತ್ತು ಅಂತರರಾಷ್ಟ್ರೀಯ ಸೌರ ಮೈತ್ರಿ ಪ್ರಯತ್ನಗಳ ಮೂಲಕ ಭಾರತ ಜಗತ್ತಿಗೆ ವೇದಿಕೆಯನ್ನು ಒದಗಿಸಿಕೊಟ್ಟಿದೆ. ಈ ಪ್ರಯತ್ನಗಳ ಯಶಸ್ಸು ಜಗತ್ತಿನ ಭವಿಷ್ಯ ಮತ್ತು ಸಾಗುವ ಹಾದಿಯನ್ನು ನಿರ್ಧರಿಸಲಿದೆ ಎಂದು ಹೇಳಿದರು.  

ಇದೀಗ ಸಮಯ ಬಂದಿದ್ದು, ಜಾಗತಿಕ ಸವಾಲುಗಳನ್ನು ವೈಯಕ್ತಿಕ ಸವಾಲುಗಳೆಂದು  ಪರಿಗಣಿಸುವ ಮತ್ತು ನಮ್ಮ ಬದುಕಿನಲ್ಲಿ ಸಣ್ಣ ಬದಲಾವಣೆ ಆಧಾರದ ಮೇಲೆ ಭೂಮಿಯ ಭವಿಷ್ಯ ಅಡಗಿದೆ. “ಭಾರತದ ಪ್ರಯತ್ನಗಳು ಮತ್ತು ಸಂಪ್ರದಾಯಗಳು ಒಟ್ಟಾರೆ ಮನುಕುಲವನ್ನು ಸೂಕ್ತ ದಿಕ್ಕಿನತ್ತ ಕೊಂಡೊಯ್ಯುವ ಹಾಗೂ ಉತ್ತಮ ಜಗತ್ತಿನ ಕನಸು ಕಾಣಲು ನಮಗೆ ಬಲ ನೀಡುವ ಬಗ್ಗೆ ತಮಗೆ ಖಚಿತವಾಗಿದೆ” ಎಂದು ಪ್ರಧಾನಮಂತ್ರಿ ಅವರು ತಮ್ಮ ಭಾಷಣ ಮುಕ್ತಾಯ ಮಾಡಿದರು.

ಹಿನ್ನೆಲೆ

ಭಾರತದ ವನ್ಯಜೀವಿಗಳ ವೈವಿದ್ಯತೆ ಮತ್ತು ಅದರ ವಾಸಸ್ಥಾನ ಹಾಗೂ ಪುನಶ್ಚೇತನದ ಭಾಗವಾಗಿ ಪ್ರಧಾನಮಂತ್ರಿ ಅವರು ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಕಾಡು ಚಿರತೆಗಳನ್ನು ಬಿಡುಗಡೆ ಮಾಡಿದರು. 1952 ರಲ್ಲಿ ಭಾರತದಲ್ಲಿ ಚಿರತೆಗಳ ಸಂತತಿ ನಾಶವಾಗಿದೆ ಎಂದು ಘೋಷಿಸಲಾಗಿತ್ತು. ಬಿಡುಗಡೆ ಮಾಡಿದ ಚಿರತೆಗಳನ್ನು ನಮೀಬಿಯಾದಿಂದ ತರಲಾಗಿದೆ ಮತ್ತು ಈ ವರ್ಷದ ಆರಂಭದಲ್ಲಿ ಈ ಸಂಬಂಧ ತಿಳಿವಳಿಕೆ ಪತ್ರಕ್ಕೆ ಸಹಿ ಹಾಕಲಾಗಿತ್ತು. ಪ್ರಾಜೆಕ್ಟ್ ಚೀತಾ ಅಡಿಯಲ್ಲಿ ಜಗತ್ತಿನ ಮೊದಲ ಖಂಡಾಂತರ ಕಾಡು ಮಾಂಸಾಹಾರಿ ಪ್ರಾಣಿಗಳ ಸ್ಥಳಾಂತರ ಯೋಜನೆ ಇದಾಗಿದೆ.      

ಭಾರತದಲ್ಲಿ ಚಿರತೆಗಳಿಂದ ಮುಕ್ತ ಅರಣ್ಯ ಮತ್ತು ಹುಲ್ಲುಗಾವಲು ಪರಿಸರ ವ್ಯವಸ್ಥೆಯನ್ನು ಪುನಃ ಸ್ಥಾಪಿಸಲು ಸಹಕಾರಿಯಾಗಲಿದೆ. ಇದು ಜೀವ ವೈವಿಧ್ಯತೆಯನ್ನು ರಕ್ಷಿಸಲು ಸಹಾಯ ಮಾಡುತ್ತದೆ ಮತ್ತು ಜಲ ಭದ್ರತೆ, ಇಂಗಾಲ ಪ್ರತ್ಯೇಕಗೊಳಿಸುವ, ಮಣ್ಣಿನ ತೇವಾಂಶ ಸಂರಕ್ಷಣೆಯಂತಹ ಪರಿಸರ ವ್ಯವಸ್ಥೆಯ ಸೇವೆಗಳನ್ನು ಹೆಚ್ಚಿಸುವ, ಸಮಾಜಕ್ಕೆ ಬಹುದೊಡ್ಡ ಪ್ರಯೋಜವನ್ನು ತರಲಿದೆ. ಪರಿಸರ ಸಂರಕ್ಷಣೆ ಮತ್ತು ವನ್ಯಜೀವಿ ಸಂರಕ್ಷಣೆಗೆ ಪ್ರಧಾನಮಂತ್ರಿ ಅವರ ಬದ್ಧತೆಗೆ ಅನುಗುಣವಾಗಿ ಈ ಪ್ರಯತ್ನ  ಪರಿಸರ ಅಭಿವೃದ್ಧಿ ಮತ್ತು ಪರಿಸರ ಪ್ರವಾಸೋದ್ಯಮ ಚಟುವಟಿಕೆಗಳ ಮೂಲಕ ಸ್ಥಳೀಯರಿಗೆ ಸಮುದಾಯ ಆಧಾರಿತ ಜೀವನೋಪಾಯ ಅವಕಾಶಗಳಿಗೆ ಕಾರಣವಾಗುತ್ತದೆ.

 

*****