Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭೋಪಾಲ್ ನಲ್ಲಿ ಮಾನಸಿಕ ಆರೋಗ್ಯ ಪುನರ್ವಸತಿಯ ರಾಷ್ಟ್ರೀಯ ಸಂಸ್ಥೆ ಸ್ಥಾಪನೆಗೆ ಸಂಪುಟದ ಅನುಮೋದನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಸೊಸೈಟಿಗಳ ನೋಂದಣಿ ಕಾಯ್ದೆ 1860ರ ಅಡಿಯಲ್ಲಿ ವಿಕಲಚೇತನ ವ್ಯಕ್ತಿಗಳ ಸಬಲೀಕರಣ ಇಲಾಖೆಯ ಅಧೀನದಲ್ಲಿ ಮಾನಸಿಕ ಆರೋಗ್ಯ ಪುನಶ್ಚೇತನ ಕುರಿತ ರಾಷ್ಟ್ರೀಯ ಆರೋಗ್ಯ ಸಂಸ್ಥೆ (ಎನ್.ಐ.ಎಂ.ಎಚ್.ಆರ್)ಯನ್ನು ಭೋಪಾಲ್ ನಲ್ಲಿ ಒಂದು ಸೊಸೈಟಿಯಾಗಿ ಸ್ಥಾಪಿಸಲು ತನ್ನ ಅನುಮೋದನೆ ನೀಡಿದೆ. ಯೋಜನೆಯ ವೆಚ್ಚ ಮೊದಲ ಮೂರು ವರ್ಷಗಳಲ್ಲಿ ಅಂದಾಜು ಒಟ್ಟು 179.54 ಕೋಟಿ ರೂಪಾಯಿಗಳಾಗಿರುತ್ತದೆ. ಇದರಲ್ಲಿ ಮರುಕಳಿಸುವ ವೆಚ್ಚ 128.54 ಕೋಟಿ ರೂ. ಮತ್ತು ಮರುಕಳಿಸುವ ವೆಚ್ಚ ರೂ. 51 ಕೋಟಿಯೂ ಸೇರಿರುತ್ತದೆ.

ಕೇಂದ್ರ ಸರ್ಕಾರವು ಮೂರು ಜಂಟಿ ಕಾರ್ಯದರ್ಶಿ ಮಟ್ಟದ ಹುದ್ದೆಗಳನ್ನು ರಚಿಸಲೂ ತನ್ನ ಅನುಮೋದನೆ ನೀಡಿದೆ. ಇದರಲ್ಲಿ ಸಂಸ್ಥೆಯ ಒಂದು ನಿರ್ದೇಶಕ ಹುದ್ದೆ ಮತ್ತು ಎರಡು ಪ್ರಾಧ್ಯಾಪಕರ ಹುದ್ದೆಯೂ ಸೇರಿದೆ.

ಮಾನಸಿಕ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಪುನರ್ವಸತಿ ಸೇವೆ ಒದಗಿಸುವುದು, ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ಸಾಮರ್ಥ್ಯ ವೃದ್ಧಿ, ನೀತಿ ರೂಪಿಸುವುದು ಮತ್ತು ಮಾನಸಿಕ ಆರೋಗ್ಯ ಪುನರ್ವಸತಿ ರಂಗದಲ್ಲಿ ಮುಂದುವರಿದ ಸಂಶೋಧನೆಗೆ ಅವಕಾಶ ನೀಡುವುದು ಎನ್.ಐ.ಎಂ.ಎಚ್.ಆರ್. ನ ಪ್ರಮುಖ ಉದ್ದೇಶವಾಗಿದೆ.

ಈ ಸಂಸ್ಥೆ ಒಂಬತ್ತು ಇಲಾಖೆ/ಕೇಂದ್ರಗಳನ್ನು ಒಳಗೊಂಡಿದೆ ಮತ್ತು ಮಾನಸಿಕ ಆರೋಗ್ಯ ಪುನರ್ವಸತಿ ಕ್ಷೇತ್ರದಲ್ಲಿ ಡಿಪ್ಲೋಮಾ, ಸರ್ಟಿಫಿಕೇಟ್, ಪದವಿ, ಸ್ನಾತಕೋತ್ತರ, ಎಂ.ಪಿಲ್ ಪದವಿ ಪ್ರದಾನ ಮಾಡಲು 12 ಕೋರ್ಸ್ ನಡೆಸಲಿದೆ. 5 ವರ್ಷಗಳ ವಧಿಯಲ್ಲಿ ಸಂಸ್ಥೆಯ ವಿವಿಧ ಕೋರ್ಸ್ ಗಳಲ್ಲಿ ವಿದ್ಯಾರ್ಥಿಗಳ ಪ್ರವೇಶ 400ಕ್ಕಿಂತ ಹೆಚ್ಚಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಮಧ್ಯಪ್ರದೇಶ ಸರ್ಕಾರ ಸಂಸ್ಥೆ ಸ್ಥಾಪನೆಗಾಗಿ ಭೋಪಾಲ್ ನಲ್ಲಿ 5 ಎಕರೆ ಭೂಮಿಯನ್ನು ಮಂಜೂರು ಮಾಡಿದೆ. ಸಂಸ್ಥೆಯನ್ನು ಎರಡು ಹಂತಗಳಲ್ಲಿ ಮೂರು ವರ್ಷಗಳಲ್ಲಿ ಸ್ಥಾಪಿಸಲಾಗುವುದು. ಎರಡು ವರ್ಷಗಳಲ್ಲಿ ಸಂಸ್ಥೆಯ ಸಿವಿಲ್ ಮತ್ತು ಎಲೆಕ್ಟ್ರಿಕಲ್ ಕಾಮಗಾರಿ ಪೂರ್ಣಗೊಳ್ಳಲಿದೆ. ಕಟ್ಟಡ ನಿರ್ಮಾಣದ ಜೊತೆಜೊತೆಗೇ ಭೋಪಾಲ್ ನಲ್ಲಿ ಸಂಸ್ಥೆ ಸೂಕ್ತ ಬಾಡಿಗೆ ಕಟ್ಟಡದಲ್ಲಿ ಪ್ರಮಾಣಪತ್ರ/ಡಿಪ್ಲೊಮಾ ಕೋರ್ಸ್ ಮತ್ತು ಓಪಿಡಿ ಸೇವೆಗಳ ಕಾರ್ಯಾರಂಭ ಮಾಡಲಿದೆ. ತರುವಾಯ ಸಂಸ್ಥೆ ಮಾನಸಿಕ ಕಾಯಿಲೆ ಇರುವ ವ್ಯಕ್ತಗಳಿಗೆ ಪೂರ್ಣ ಪ್ರಮಾಣದ ಪುನರ್ವಸತಿ ಸೇವೆಗಳನ್ನು ಒದಗಿಸಲಿದೆ ಮತ್ತು ಸ್ನಾತಕೋತ್ತರ ಪದವಿ ಮತ್ತು ಎಂ.ಫಿಲ್ ವರೆಗೆ ಕೋರ್ಸ್ ನಡೆಸಲಿದೆ.

ಎನ್.ಐ.ಎಂ.ಎಚ್.ಆರ್. ಮಾನಸಿಕ ಆರೋಗ್ಯ ಪುನರ್ವಸತಿ ಕ್ಷೇತ್ರದಲ್ಲಿ ದೇಶದಲ್ಲಿಯೇ ಪ್ರಥಮವಾಗಿದೆ. ಇದು ಮಾನಸಿಕ ಆರೋಗ್ಯ ಪುನರ್ವಸತಿ ಕ್ಷೇತ್ರದಲ್ಲಿ ಸಾಮರ್ಥ್ಯ ವರ್ಧನೆಯಲ್ಲಿ ಉತ್ಕೃಷ್ಟತಾ ಸಂಸ್ಥೆಯಾಗಿ ಸೇವೆ ಸಲ್ಲಿಸಲಿದೆ ಮತ್ತು ಮಾನಸಿಕ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಸಮರ್ಥವಾಗಿ ಪುನರ್ವಸತಿ ಕಲ್ಪಿಸಲು ಮಾದರಿ ಅಭಿವೃದ್ಧಿಪಡಿಸಲು ಸರ್ಕಾರಕ್ಕೆ ನೆರವಾಗಲಿದೆ.

****