Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭೂತಾನ್ ಪ್ರಧಾನಿಯೊಂದಿಗೆ ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಸಭೆ


ಭೂತಾನ್ ಪ್ರಧಾನಮಂತ್ರಿ ಡಾ. ಲೋಟೆ ಶೇರಿಂಗ್ ಅವರು 2019ರ ಮೇ 30ರಂದು ನಡೆದ ಪ್ರಧಾನಮಂತ್ರಿ ಶ್ರೀ.ನರೇಂದ್ರ ಮೋದಿ ಅವರ ಪ್ರಮಾಣ ವಚನ ಸಮಾರಂಭದಲ್ಲಿ ಭಾಗಿಯಾಗಿದ್ದರು.

ಇಂದು ನಡೆದ ದ್ವಿಪಕ್ಷೀಯ ಸಭೆಯಲ್ಲಿ ಪ್ರಧಾನಮಂತ್ರಿ ಡಾ. ಲೋಟೆ ಶೇರಿಂಗ್ ಅವರು, ಭಾರತದಲ್ಲಿ ಇತ್ತೀಚೆಗಷ್ಟೇ ಪೂರ್ಣಗೊಂಡ ಸಾರ್ವತ್ರಿಕ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿ, ಮತ್ತೆ ಉನ್ನತ ಹುದ್ದೆ ಅಲಂಕರಿಸಿದ್ದಕ್ಕಾಗಿ ಪ್ರಧಾನಮಂತ್ರಿ ಶ್ರೀ ಮೋದಿ ಅವರನ್ನು ಅಭಿನಂದಿಸಿದರು. ಘನತೆವೆತ್ತ ಭೂತಾನ್ ದೊರೆಯ ಅಭಿನಂದನೆ ಹಾಗೂ ಭೂತಾನ್ ಜನರ ಶುಭ ಹಾರೈಕೆಗಳನ್ನು ಭಾರತದ ಜನತೆಗೆ ಅವರು ನಿವೇದಿಸಿದರು. ಪ್ರಧಾನಮಂತ್ರಿ ಶ್ರೀ ಮೋದಿ ಮತ್ತು ಭಾರತ ಸರ್ಕಾರದೊಂದಿಗೆ ಆಪ್ತವಾಗಿ ಕೆಲಸ ಮಾಡಲು ತಾವು ಎದುರು ನೋಡುತ್ತಿರುವುದಾಗಿ ಪ್ರಧಾನಮಂತ್ರಿ ಡಾ.ಶೇರಿಂಗ್ ತಿಳಿಸಿದರು. ಈ ನಿಟ್ಟಿನಲ್ಲಿ, ಆದಷ್ಟು ಬೇಗ ಭೂತಾನ್ ಗೆ ಭೇಟಿ ನೀಡುವಂತೆ ಪ್ರಧಾನಮಂತ್ರಿ ಶ್ರೀ ಮೋದಿ ಅವರಿಗೆ ಅವರು ಆಹ್ವಾನವನ್ನು ನೀಡಿದರು.

ಪ್ರಧಾನಮಂತ್ರಿ ಮೋದಿ ಅವರು ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗಿಯಾಗಿದ್ದಕ್ಕಾಗಿ ಮತ್ತು ಶುಭಾಶಯಗಳಿಗಾಗಿ ಭೂತಾನ್ ಪ್ರಧಾನಮಂತ್ರಿಯವರಿಗೆ ಧನ್ಯವಾದ ಅರ್ಪಿಸಿದರು. ಭೂತಾನ್ ನೊಂದಿಗೆ ಜಲ ವಿದ್ಯುತ್ ವಲಯದ ಸಹಕಾರವೂ ಸೇರಿದಂತೆ ಅಭಿವೃದ್ಧಿ ಪಾಲುದಾರಿಕೆಯನ್ನು ಗೌರವಿಸುವುದಾಗಿ ಪ್ರಧಾನಮಂತ್ರಿ ತಿಳಿಸಿದರು. ಹೆಚ್ಚಿನ ಸಮೃದ್ಧಿ ಮತ್ತು ಯೋಗಕ್ಷೇಮದ ಅನ್ವೇಷಣೆಯಲ್ಲಿ ಭೂತಾನ್ ಅನ್ನು ಪಾಲುದಾರವಾಗಿಸುವ ಭಾರತದ ಸರ್ಕಾರದ ದೃಢ ಬದ್ಧತೆಯನ್ನು ಅವರು ಪುನರುಚ್ಚರಿಸಿದರು. ಪರಸ್ಪರ ಅನುಕೂಲಕರ ದಿನಾಂಕಗಳಲ್ಲಿ ಭೂತಾನ್ ಗೆ ಭೇಟಿ ನೀಡಲು ಅವರ ಆಹ್ವಾನವನ್ನು ಪ್ರಧಾನಿ ಶ್ರೀ.ಮೋದಿ ಸ್ವೀಕರಿಸಿದರು.

ಆಪ್ತ ಮತ್ತು ಸ್ನೇಹಪರ ವಾತಾವರಣದಲ್ಲಿ ನಡೆದ ಸಭೆ, ವಿಶ್ವಾಸದ ಸ್ಪೂರ್ತಿ, ಸಹಕಾರ ಬಿಂಬಿಸಿತು ಮತ್ತು ಎರಡೂ ದೇಶಗಳ ನಡುವಿನ .ಆಪ್ತ ಮತ್ತು ಸ್ನೇಹ ಬಾಂಧವ್ಯವನ್ನು ಅರ್ಥೈಸಿಕೊಳ್ಳಲು ಸಹಕಾರಿಯಾಯಿತು.