ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭೂತಾನ್ ನಲ್ಲಿ ನಡೆಯುತ್ತಿರುವ 1020 ಎಂ.ಡ್ಬ್ಲು. ಪುನತ್ಸುಂಗ್ಚು – II ಜಲ ವಿದ್ಯುತ್ ಯೋಜನೆ (ಎಚ್.ಇ.ಪಿ.)ಯ ಅಂದಾಜು ವೆಚ್ಚ (ಆರ್.ಸಿ.ಇ.) ರೂ. 7290.20 ಕೋಟಿಯ ಪರಿಷ್ಕರಣೆಗೆ ತನ್ನ ಅನುಮೋದನೆ ನೀಡಿದೆ. ಈ ಹಂತದಲ್ಲಿ ಯೋಜನೆಯ ಒಟ್ಟು ವೆಚ್ಚ ರೂ. 3512.82 ಕೋಟಿ ರೂಪಾಯಿ ಏರಿಕೆಯಾಗಿದೆ.
ಈ ಯೋಜನೆಯು ಹೆಚ್ಚುವರಿ ವಿದ್ಯುತ್ ಅನ್ನು ಭಾರತಕ್ಕೆ ಒದಗಿಸಲಿದೆ ಮತ್ತು ದೇಶದಲ್ಲಿ ವಿದ್ಯುತ್ ಲಭ್ಯತೆಯನ್ನು ವೃದ್ಧಿಸಲಿದೆ ಮತ್ತು ಯಾವುದೇ ತಡೆ ಇಲ್ಲದೆ ಯೋಜನೆ ಕಾರ್ಯ ಸುಗಮವಾಗಿ ಸಾಗಲು ಅನುಕೂಲ ಮಾಡಿಕೊಡಲಿದೆ.
ಹಿನ್ನೆಲೆ:
ಪುನತ್ಸುಂಗ್ಚು – II ಜಲ ವಿದ್ಯುತ್ ಯೋಜನೆ (ಎಚ್.ಇ.ಪಿ.)ಯ ಕಾರ್ಯಗತಕ್ಕೆ ಭಾರತ ಸರ್ಕಾರದ ಶೇ.30ರಷ್ಟು ಅನುದಾನ ಮತ್ತು ಶೇ.70ರಷ್ಟು ವಾರ್ಷಿಕ ಶೇ.10ರ ಬಡ್ಡಿ ದರದ ಮತ್ತು 30 ಸಮಾನ ಅರೆ ವಾರ್ಷಿಕ ಕಂತುಗಳಲ್ಲಿ ಹಿಂತಿರುಗಿಸಬೇಕಾದ ಸಾಲ ಸೇರಿದ 3777.8 ಕೋಟಿ ರೂಪಾಯಿಗಳ ಅನುಮೋದಿತ ವೆಚ್ಚ (ಮಾರ್ಚ್ 2009ರ ಮಟ್ಟದಲ್ಲಿ)ಕ್ಕೆ ಭೂತಾನ್ ಮತ್ತು ಭಾರತದ ನಡುವೆ 2010ರ ಏಪ್ರಿಲ್ ನಲ್ಲಿ ದ್ವಿಪಕ್ಷೀಯ ಒಪ್ಪಂದಕ್ಕೆ ಅಂಕಿತ ಹಾಕಲಾಗಿತ್ತು.
ಭೂತಾನ್ ರಾಷ್ಟ್ರೀಯ ಸರಬರಾಜು ಗ್ರಿಡ್ ನ ಮಾಸ್ಟರ್ ಪ್ಲಾನ್ ನ ಹೆಚ್ಚುವರಿ ಅಗತ್ಯಗಳು ಮತ್ತು ಯೋಜನೆಯ ವೇಳೆ ಎದುರಾದ ಭೌಗೋಳಿಕ ಸ್ಥಿತಿ, ಮಾರ್ಚ್ 2009ರಿಂದ ಮಾರ್ಚ್ 2015ರವರೆಗಿನ ಹಣದುಬ್ಬರ, ಮೇಲ್ಮಟ್ಟದ ವಿದ್ಯುತ್ ಕೇಂದ್ರವನ್ನು ಭೂಮಿಯ ಕೆಳಗಿನ ವಿದ್ಯುತ್ ಕೇಂದ್ರವಾಗಿ ಬದಲಾವಣೆ ಮಾಡಿದ್ದು, ಸಾಮರ್ಥ್ಯವನ್ನು 990 ಎಂ.ಡಬ್ಲ್ಯು.ನಿಂದ 1020 ಎಂ.ಡಬ್ಲ್ಯುಗೆ ಹೆಚ್ಚಳ ಮಾಡಿದ್ದು ವೆಚ್ಚದ ಹೆಚ್ಚಳಕ್ಕೆ ಕಾರಣವಾಗಿದೆ,