Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭೂತಾನ್ ದೇಶದ ಪ್ರಧಾನಿಯವರೊಂದಿಗೆ ಭಾರತದ ಪ್ರಧಾನಮಂತ್ರಿಯವರ ದ್ವಿಪಕ್ಷೀಯ ಸಭೆ ಮತ್ತು ತಿಳುವಳಿಕಾ ಒಪ್ಪಂದಗಳ ವಿನಿಮಯ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು  ತಮ್ಮ  ಗೌರವಾರ್ಥವಾಗಿ ಆಯೋಜಿಸಲಾದ ಭೋಜನಕೂಟದಲ್ಲಿ ಇಂದು ಥಿಂಪುವಿನಲ್ಲಿ ಭೂತಾನ್ ದೇಶದ ಪ್ರಧಾನಿಗಳಾದ ಶೆರಿಂಗ್ ಟೊಬ್ಗೇ ಅವರನ್ನು ಭೇಟಿಯಾದರು. ಪಾರೊದಿಂದ ಥಿಂಪುವಿನವರೆಗಿನ ಪ್ರಯಾಣದ ಉದ್ದಕ್ಕೂ ಜನರು ಅವರನ್ನು ಸ್ವಾಗತಿಸುವುದರೊಂದಿಗೆ, ತಮಗೆ ನೀಡಿದ ಅಸಾಧಾರಣ ಸ್ವಾಗತಕ್ಕಾಗಿ ಪ್ರಧಾನಿ ಟೋಬ್ಗೇ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದರು.

ಉಭಯ ನಾಯಕರು ಬಹುಮುಖಿ ದ್ವಿಪಕ್ಷೀಯ ಸಂಬಂಧಗಳ ವಿವಿಧ ಅಂಶಗಳ ಕುರಿತು ಚರ್ಚೆ ನಡೆಸಿದರು ಮತ್ತು ನವೀಕರಿಸಬಹುದಾದ ಇಂಧನ, ಕೃಷಿ, ಯುವಜನ ವಿನಿಮಯ, ಪರಿಸರ ಮತ್ತು ಅರಣ್ಯ ಹಾಗು ಪ್ರವಾಸೋದ್ಯಮದಂತಹ ವಲಯಗಳಲ್ಲಿ ಸಹಕಾರವನ್ನು  ಮತ್ತಷ್ಟು ಹೆಚ್ಚಿಸಲು ಸಂಬಂಧವನ್ನು ಗಟ್ಟಿಗೊಳಿಸಿದರು.   ಭಾರತ ಮತ್ತು ಭೂತಾನ್ ಎಲ್ಲಾ ಹಂತಗಳಲ್ಲಿ ಅತ್ಯಂತ ನಂಬಿಕೆ, ಸದ್ಭಾವನೆ ಮತ್ತು ಪರಸ್ಪರ ತಿಳುವಳಿಕೆಯಿಂದ ನಿರೂಪಿಸಲ್ಪಟ್ಟ ದೀರ್ಘಕಾಲದ ಮತ್ತು ಅಸಾಧಾರಣ ಸಂಬಂಧಗಳ ಲಾಭವನ್ನು ಪಡೆಯುತ್ತಿವೆ.

ಸಭೆಯ ಮೊದಲು, ಪ್ರಧಾನಮಂತ್ರಿ ಮೋದಿಯವರು ಮತ್ತು ಭೂತಾನ್ ದೇಶದ ಪ್ರಧಾನಿಯವರು ಇಂಧನ, ವ್ಯಾಪಾರ, ಡಿಜಿಟಲ್ ಸಂಪರ್ಕ, ಬಾಹ್ಯಾಕಾಶ, ಕೃಷಿ, ಯುವಜನ ವಿನಿಮಯ ಸಂಪರ್ಕದ ಕುರಿತು ಹಲವಾರು ತಿಳುವಳಿಕಾ ಒಪ್ಪಂದಗಳು  ಮತ್ತು ಒಪ್ಪಂದಗಳ ವಿನಿಮಯಕ್ಕೆ ಸಾಕ್ಷಿಯಾದರು.

​​​​​​​https://bit.ly/3xa8U7y