Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭುವನೇಶ್ವರದ ಬಿಜು ಪಟ್ನಾಯಕ್ ವಿಮಾನ ನಿಲ್ದಾಣದಲ್ಲಿ ರಸ್ತೆಯ ಅಗಲೀಕರಣಕ್ಕಾಗಿ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಮತ್ತು ಒಡಿಶಾ ಸರ್ಕಾರದ ನಡುವೆ ಭೂಮಿ ವಿನಿಮಯಕ್ಕೆ ಸಂಪುಟದ ಅನುಮೋದನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎ.ಎ.ಐ)ದ 1.6 ಎಕರೆ ಅಳತೆಯ ಜಮೀನನ್ನು ಒಡಿಶಾ ಸರ್ಕಾರ ನೀಡಲು ಉದ್ದೇಶಿಸಿರುವ 1.6 ಎಕರೆ ಭೂಮಿಗೆ ಸಮನಾದ ಜಮೀನಿನ ನಡುವೆ ವಿನಿಮಯ ಮಾಡಿಕೊಳ್ಳಲು ತನ್ನ ಅನುಮೋದನೆ ನೀಡಿದೆ.

ರಾಜ್ಯ ಸರ್ಕಾರವು ಎ.ಎ.ಐ.ನ 1.6 ಎಕರೆ ಜಮೀನಿನ ಬದಲಾಗಿ 1.6 ಎಕರೆ ಜಮೀನನ್ನು ನೀಡಲು ಮತ್ತು ಎ.ಎ.ಐ.ನ ಆ ಜಮೀನಿನಲ್ಲಿ ಇರುವ ಎಲ್ಲ ಹಾಲಿ ಮೂಲಸೌಕರ್ಯಗಳನ್ನು ತನ್ನ ಸ್ವಂತ ಖರ್ಚಿನಲ್ಲಿ ಪುನರ್ ನಿರ್ಮಿಸಿಕೊಡಲು ಒಪ್ಪಿಕೊಂಡಿದೆ. ಅಲ್ಲದೆ, ರಾಜ್ಯ ಸರ್ಕಾರ ನೀಡಲು ಒಪ್ಪಿರುವ ಜಮೀನು ಹೊಂದಿಕೊಂಡಂತೆಯೇ ಇದ್ದು, ಇದನ್ನು ಎ.ಎ.ಐ. ಪರ್ಯಾಯ ಟ್ಯಾಕ್ಸಿ ಮಾರ್ಗ ನಿರ್ಮಾಣಕ್ಕೆ ಬಳಸಿಕೊಳ್ಳಲಿದೆ. ಈ ಜಮೀನು ವಿನಿಮಯವು ಕೇವಲ ರಾಜ್ಯ ಸರ್ಕಾರ ಮತ್ತು ಎ.ಎ.ಐ.ಗೆ ಮಾತ್ರವೇ ಅಲ್ಲದೆ ಜನತೆಗೂ ಲಾಭ ತರಲಿದೆ.

ಒಡಿಶಾ ಸರ್ಕಾರ ಭುವನೇಶ್ವರ್ ವಿಮಾನ ನಿಲ್ದಾಣದ ಬಳಿ ಇರುವ ರಸ್ತೆಯನ್ನು (ಏಕಮಾರ ಮಾರ್ಗ್/ಪಲಾಶ್ಪಲ್ಲಿ ರೋಡ್ ಎಂದು ಕರೆಯಲಾಗುವ) ವಿ.ಐ.ಪಿ.ಗಳ ಸಂಚಾರದ ಭದ್ರತಾ ಸಿದ್ಧತೆಯ ಮುಖ್ಯವಾಹಿನಿಗೆ ಸೇರಿಸಲು ಮತ್ತು ಸಾರ್ವಜನಿಕ ಬಳಕೆಗೆ ಬಫರ್ ವಲಯ ಮಾಡಲು ಬಯಸಿದೆ. ಈ ಉದ್ದೇಶಕ್ಕಾಗಿ 1.6 ಎಕರೆ ಎ.ಎ.ಐ. ಜಮೀನು ಸರ್ಕಾರಕ್ಕೆ ಅಗತ್ಯವಾಗಿತ್ತು.

****

AKT/VBA/SH