Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭಾರತ ಸೆಮಿಕಂಡಕ್ಟರ್ ಮಿಷನ್ ಗೆ ಭಾರೀ ಬೆಂಬಲ: ಇನ್ನೂ ಮೂರು ಸೆಮಿಕಂಡಕ್ಟರ್ ಘಟಕಗಳಿಗೆ ಸಂಪುಟದ ಅನುಮೋದನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಭಾರತದಲ್ಲಿ ಸೆಮಿಕಂಡಕ್ಟರ್ ಮತ್ತು ಡಿಸ್ ಪ್ಲೇ ಅಭಿವೃದ್ಧಿ ಪೂರಕ ವ್ಯವಸ್ಥೆಗಳ ಅಡಿಯಲ್ಲಿ ಮೂರು ಸೆಮಿಕಂಡಕ್ಟರ್ ಘಟಕಗಳ ಸ್ಥಾಪನೆಗೆ ಅನುಮೋದನೆ ನೀಡಿದೆ. ಎಲ್ಲಾ ಮೂರು ಘಟಕಗಳು ಮುಂದಿನ 100 ದಿನಗಳಲ್ಲಿ ನಿರ್ಮಾಣವನ್ನು ಪ್ರಾರಂಭಿಸುತ್ತವೆ.

ಭಾರತದಲ್ಲಿ ಸೆಮಿಕಂಡಕ್ಟರ್ ಮತ್ತು ಡಿಸ್ ಪ್ಲೇ ತಯಾರಿಕೆ ಪೂರಕ ವ್ಯವಸ್ಥೆ ಅಭಿವೃದ್ಧಿ ಕಾರ್ಯಕ್ರಮವನ್ನು 21.12.2021 ರಂದು ಒಟ್ಟು 76,000 ಕೋಟಿ ರೂ. ವೆಚ್ಚದಲ್ಲಿ ಅಧಿಸೂಚಿಸಲಾಗಿದೆ. ಜೂನ್, 2023 ರಲ್ಲಿ, ಕೇಂದ್ರ ಸಚಿವ ಸಂಪುಟವು ಗುಜರಾತ್ ನ ಸಾನಂದ್ ನಲ್ಲಿ ಸೆಮಿಕಂಡಕ್ಟರ್ ಘಟಕವನ್ನು ಸ್ಥಾಪಿಸುವ ಮೈಕ್ರಾನ್ ಸಂಸ್ಥೆಯ ಪ್ರಸ್ತಾವನೆಯನ್ನು ಅನುಮೋದಿಸಿತ್ತು.

ಈ ಘಟಕದ ನಿರ್ಮಾಣವು ತ್ವರಿತ ಗತಿಯಲ್ಲಿ ಪ್ರಗತಿಯಲ್ಲಿದೆ ಮತ್ತು ಘಟಕದ ಬಳಿ ದೃಢವಾದ ಸೆಮಿಕಂಡಕ್ಟರ್ ಪೂರಕ ವ್ಯವಸ್ಥೆಯು ಹೊರಹೊಮ್ಮುತ್ತಿದೆ.

ಅನುಮೋದಿತ ಮೂರು ಸೆಮಿಕಂಡಕ್ಟರ್ ಘಟಕಗಳು:

1.    50,000 wfsm ಸಾಮರ್ಥ್ಯದೊಂದಿಗೆ ಸೆಮಿಕಂಡಕ್ಟರ್ ಫ್ಯಾಬ್:

ಟಾಟಾ ಎಲೆಕ್ಟ್ರಾನಿಕ್ಸ್ ಪ್ರೈವೇಟ್ ಲಿಮಿಟೆಡ್ (TEPL) ತೈವಾನ್ನ ಪವರ್ ಚಿಪ್ ಸೆಮಿಕಂಡಕ್ಟರ್ ಮ್ಯಾನುಫ್ಯಾಕ್ಚರಿಂಗ್ ಕಾರ್ಪೊರೇಷನ್ (ಪಿಸಿಎಂಸಿ) ಸಹಭಾಗಿತ್ವದಲ್ಲಿ ಸೆಮಿಕಂಡಕ್ಟರ್ ಫ್ಯಾಬ್ ಅನ್ನು ಸ್ಥಾಪಿಸುತ್ತದೆ.

ಹೂಡಿಕೆ: ಗುಜರಾತ್ ನ ಧೋಲೇರಾದಲ್ಲಿ ಈ ಫ್ಯಾಬ್ ನಿರ್ಮಾಣವಾಗಲಿದೆ. ಈ ಫ್ಯಾಬ್ ನಲ್ಲಿ ಹೂಡಿಕೆಯು 91,000 ಕೋಟಿ ರೂ. ಆಗಿರುತ್ತದೆ.

ತಂತ್ರಜ್ಞಾನ ಪಾಲುದಾರ: ಪಿಸಿಎಂಸಿ ಕಂಪನಿಯು ಲಾಜಿಕ್ ಮತ್ತು ಮೆಮೊರಿ ಫೌಂಡ್ರಿ ವಿಭಾಗಗಳಲ್ಲಿ ಪರಿಣತಿಗೆ ಹೆಸರುವಾಸಿಯಾಗಿದೆ. ಪಿಸಿಎಂಸಿ ತೈವಾನ್ ನಲ್ಲಿ 6 ಸೆಮಿಕಂಡಕ್ಟರ್ ಫೌಂಡ್ರಿಗಳನ್ನು ಹೊಂದಿದೆ.

ಸಾಮರ್ಥ್ಯ: ತಿಂಗಳಿಗೆ 50,000 ವೇಫರ್ (WSPM)

ಒಳಗೊಂಡಿರುವ ವಿಭಾಗಗಳು:

•    28 nm ತಂತ್ರಜ್ಞಾನದೊಂದಿಗೆ ಹೆಚ್ಚಿನ ಕಾರ್ಯಕ್ಷಮತೆಯ ಕಂಪ್ಯೂಟ್ ಚಿಪ್ಸ್

•    ಎಲೆಕ್ಟ್ರಿಕ್ ವಾಹನಗಳು (ಇವಿ), ಟೆಲಿಕಾಂ, ರಕ್ಷಣೆ, ಆಟೋಮೋಟಿವ್, ಗ್ರಾಹಕ ಎಲೆಕ್ಟ್ರಾನಿಕ್ಸ್, ಡಿಸ್ಪ್ಲೇ, ಪವರ್ ಎಲೆಕ್ಟ್ರಾನಿಕ್ಸ್ ಇತ್ಯಾದಿಗಳಿಗೆ ಪವರ್ ಮ್ಯಾನೇಜ್ಮೆಂಟ್ ಚಿಪ್ ಗಳು. ಈ ಪವರ್ ಮ್ಯಾನೇಜ್ಮೆಂಟ್ ಚಿಪ್ ಗಳು ಹೆಚ್ಚಿನ ವೋಲ್ಟೇಜ್, ಹೈ ಕರೆಂಟ್ 

ಅಪ್ಲಿಕೇಶನ್ ಗಳಾಗಿವೆ.

2. ಅಸ್ಸಾಂನಲ್ಲಿ ಸೆಮಿಕಂಡಕ್ಟರ್ ಎಟಿಎಂಪಿ ಘಟಕ:

ಟಾಟಾ ಸೆಮಿಕಂಡಕ್ಟರ್ ಅಸೆಂಬ್ಲಿ ಮತ್ತು ಟೆಸ್ಟ್ ಪ್ರೈವೇಟ್ ಲಿಮಿಟೆಡ್ (ಟಿ ಎಸ್ ಎ ಟಿ) ಅಸ್ಸಾಂನ ಮೊರಿಗಾಂವ್ ನಲ್ಲಿ ಸೆಮಿಕಂಡಕ್ಟರ್ ಘಟಕವನ್ನು ಸ್ಥಾಪಿಸುತ್ತದೆ.

ಹೂಡಿಕೆ: ಈ ಘಟಕವನ್ನು 27,000 ಕೋಟಿ ರೂ. ಹೂಡಿಕೆಯೊಂದಿಗೆ ಸ್ಥಾಪಿಸಲಾಗುವುದು.

ತಂತ್ರಜ್ಞಾನ: ಟಿ ಎಸ್ ಎ ಟಿ ಸೆಮಿಕಂಡಕ್ಟರ್ ಫ್ಲಿಪ್ ಚಿಪ್ ಮತ್ತು ಐ ಎಸ್ ಐ ಪಿ (ಇಂಟಿಗ್ರೇಟೆಡ್ ಸಿಸ್ಟಂ ಇನ್ ಪ್ಯಾಕೇಜ್) ತಂತ್ರಜ್ಞಾನಗಳನ್ನು ಒಳಗೊಂಡಂತೆ ಸ್ಥಳೀಯ ಸುಧಾರಿತ ಸೆಮಿಕಂಡಕ್ಟರ್ ಕೇಜಿಂಗ್ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುತ್ತಿದೆ.

ಸಾಮರ್ಥ್ಯ: ದಿನಕ್ಕೆ 48 ಮಿಲಿಯನ್

ಒಳಗೊಂಡಿರುವ ವಿಭಾಗಗಳು: ಆಟೋಮೋಟಿವ್, ಎಲೆಕ್ಟ್ರಿಕ್ ವಾಹನಗಳು, ಗ್ರಾಹಕ ಎಲೆಕ್ಟ್ರಾನಿಕ್ಸ್, ಟೆಲಿಕಾಂ, ಮೊಬೈಲ್ ಫೋನ್ ಗಳು, ಇತ್ಯಾದಿ.

3. ವಿಶೇಷ ಚಿಪ್ ಗಳಿಗಾಗಿ ಸೆಮಿಕಂಡಕ್ಟರ್ ಎಟಿಎಂಪಿ ಘಟಕ:

ಜಪಾನ್ ನ ರೆನೆಸಾಸ್ ಎಲೆಕ್ಟ್ರಾನಿಕ್ಸ್ ಕಾರ್ಪೋರೇಷನ್ ಮತ್ತು ಥಾಯ್ಲೆಂಡ್ ನ ಸ್ಟಾರ್ಸ್ ಮೈಕ್ರೋ ಎಲೆಕ್ಟ್ರಾನಿಕ್ಸ್ ಸಹಭಾಗಿತ್ವದಲ್ಲಿ CG ಪವರ್, ಗುಜರಾತ್‌ನ ಸಾನಂದ್ ನಲ್ಲಿ ಸೆಮಿಕಂಡಕ್ಟರ್ ಘಟಕವನ್ನು ಸ್ಥಾಪಿಸುತ್ತದೆ.

ಹೂಡಿಕೆ: ಈ ಘಟಕವನ್ನು 7,600 ಕೋಟಿ ರೂ. ಹೂಡಿಕೆಯೊಂದಿಗೆ ಸ್ಥಾಪಿಸಲಾಗುವುದು.

ತಂತ್ರಜ್ಞಾನ ಪಾಲುದಾರ: ರೆನೆಸಾಸ್ ವಿಶೇಷ ಚಿಪ್‌ಗಳ ತಯಾರಿಕೆಯಲ್ಲಿ ಪ್ರಮುಖ ಸೆಮಿಕಂಡಕ್ಟರ್ ಕಂಪನಿಯಾಗಿದೆ. ಇದು 12 ಸೆಮಿಕಂಡಕ್ಟರ್ ಸೌಲಭ್ಯಗಳನ್ನು ನಿರ್ವಹಿಸುತ್ತದೆ ಮತ್ತು ಮೈಕ್ರೋಕಂಟ್ರೋಲರ್ ಗಳು, ಅನಲಾಗ್, ಪವರ್ ಮತ್ತು ಸಿಸ್ಟಮ್ ಆನ್ ಚಿಪ್ (‘SoC)’ ಉತ್ಪನ್ನಗಳಲ್ಲಿ ಪ್ರಮುಖ ಕಂಪನಿಯಾಗಿದೆ.

ಒಳಗೊಂಡಿರುವ ವಿಭಾಗಗಳು: CG ಪವರ್ ಸೆಮಿಕಂಡಕ್ಟರ್ ಘಟಕವು ಗ್ರಾಹಕ, ಕೈಗಾರಿಕೆ, ವಾಹನ ಮತ್ತು ವಿದ್ಯುತ್ ಅಪ್ಲಿಕೇಶನ್ ಗಳಿಗಾಗಿ ಚಿಪ್ ಗಳನ್ನು ತಯಾರಿಸುತ್ತದೆ.
ಸಾಮರ್ಥ್ಯ: ದಿನಕ್ಕೆ 15 ಮಿಲಿಯನ್

ಈ ಘಟಕಗಳ ಕಾರ್ಯತಂತ್ರದ ಪ್ರಾಮುಖ್ಯತೆ:

•    ಅತಿ ಕಡಿಮೆ ಸಮಯದಲ್ಲಿ, ಭಾರತ ಸೆಮಿಕಂಡಕ್ಟರ್ ಮಿಷನ್ ನಾಲ್ಕು ದೊಡ್ಡ ಯಶಸ್ಸನ್ನು ಸಾಧಿಸಿದೆ. ಈ ಘಟಕಗಳೊಂದಿಗೆ, ಸೆಮಿಕಂಡಕ್ಟರ್ ಪೂರಕ ವ್ಯವಸ್ಥೆಯು ಭಾರತದಲ್ಲಿ ಸ್ಥಾಪನೆಯಾಗುತ್ತದೆ.

•    ಚಿಪ್ ವಿನ್ಯಾಸದಲ್ಲಿ ಭಾರತವು ಈಗಾಗಲೇ ಆಳವಾದ ಸಾಮರ್ಥ್ಯಗಳನ್ನು ಹೊಂದಿದೆ. ಈ ಘಟಕಗಳೊಂದಿಗೆ, ನಮ್ಮ ದೇಶವು ಚಿಪ್ ತಯಾರಿಕೆಯಲ್ಲಿ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸುತ್ತದೆ.

•    ಇಂದಿನ ಘೋಷಣೆಯೊಂದಿಗೆ ಭಾರತದಲ್ಲಿ ಸುಧಾರಿತ ಪ್ಯಾಕೇಜಿಂಗ್ ತಂತ್ರಜ್ಞಾನಗಳನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾಗುವುದು.

ಉದ್ಯೋಗ ಸಾಧ್ಯತೆ:

•    ಈ ಘಟಕಗಳು ಸುಧಾರಿತ ತಂತ್ರಜ್ಞಾನ ಕೆಲಸಗಳ 20 ಸಾವಿರ ನೇರ ಉದ್ಯೋಗಗಳನ್ನು ಮತ್ತು ಸುಮಾರು 60 ಸಾವಿರ ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸುತ್ತವೆ.

•    ಈ ಘಟಕಗಳು ಡೌನ್ ಸ್ಟ್ರೀಮ್ ಆಟೋಮೋಟಿವ್, ಎಲೆಕ್ಟ್ರಾನಿಕ್ಸ್ ತಯಾರಿಕೆ, ಟೆಲಿಕಾಂ ತಯಾರಿಕೆ, ಕೈಗಾರಿಕಾ ಉತ್ಪಾದನೆ ಮತ್ತು ಇತರ ಸೆಮಿಕಂಡಕ್ಟರ್ ಬಳಕೆಯ ಉದ್ಯಮಗಳಲ್ಲಿ ಉದ್ಯೋಗ ಸೃಷ್ಟಿಯನ್ನು ವೇಗಗೊಳಿಸುತ್ತದೆ.

*****