Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭಾರತ ಸರ್ಕಾರದ ಮುದ್ರಣಾಲಯ (ಜಿಐಪಿಗಳು)ಗಳ ವಿಲೀನ/ತರ್ಕಬದ್ಧೀಕರಣ ಮತ್ತು ಅದರ ಆಧುನೀಕರಣಕ್ಕೆ ಸಂಪುಟದ ಅನುಮೋದನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, 17 ಭಾರತ ಸರ್ಕಾರದ ಮುದ್ರಣಾಲಯ (ಜಿ.ಐ.ಪಿ.ಗಳ)ಗಳು/ಘಟಕಗಳನ್ನು ರಾಷ್ಟ್ರಪತಿಭವನ, ಮಿಂಟೋ ರಸ್ತೆ ಮತ್ತು ಮಾಯಾಪುರಿ, ನವದೆಹಲಿ; ನಾಸಿಕ್ ಮಹಾರಾಷ್ಟ್ರ ಮತ್ತು ದೇವಸ್ಥಾನ ರಸ್ತೆ, ಕೋಲ್ಕತ್ತ, ಪಶ್ಚಿಮ ಬಂಗಾಳದಲ್ಲಿನ 5 ಭಾರತ ಸರ್ಕಾರದ ಮುದ್ರಣಾಲಯಗಳಾಗಿ  ವಿಲೀನ/ತರ್ಕಬದ್ಧೀಕರಣ ಮತ್ತು ಆಧುನೀಕರಣಗೊಳಿಸಲು ತನ್ನ ಅನುಮೋದನೆ ನೀಡಿದೆ. 

 

ಈ ಐದು ಮುದ್ರಣಾಲಯಗಳನ್ನು ಅವುಗಳ ಹೆಚ್ಚುವರಿ ಜಮೀನಿನ ಮೂಲಕ ಮಾನ್ಯೀಕರಣ ಮಾಡುವ ಮೂಲಕ ಮರು ಅಭಿವೃದ್ಧಿಪಡಿಸಿ ಮತ್ತು ಆಧುನೀಕರಿಸಲಾಗುತ್ತದೆ. ವಿಲೀನಗೊಳ್ಳುವ ಇತರೆ ಮುದ್ರಣಾಲಯಗಳ 468.08 ಎಕರೆ ಅಳತೆಯ ಜಮೀನನ್ನು ನಗರಾಭಿವೃದ್ಧಿ ಸಚಿವಾಲಯದ ಭೂ ಮತ್ತು ಅಭಿವೃದ್ಧಿ ಕಚೇರಿಗೆ ನೀಡಲಾಗುತ್ತದೆ. ಚಂಡೀಗಢ, ಭುವನೇಶ್ವರ್ ಮತ್ತು ಮೈಸೂರಿನಲ್ಲಿರುವ ಭಾರತ ಸರ್ಕಾರದ ಪಠ್ಯಪುಸ್ತಕ ಮುದ್ರಣಾಲಯ (ಜಿಐಟಿಬಿಪಿ)ದ 56.67 ಎಕರೆ ವಿಸ್ತೀರ್ಣದ ಜಮೀನನ್ನು ಸಂಬಂಧಿತ ಸರ್ಕಾರಗಳಿಗೆ ಹಿಂತಿರುಗಿಸಲಾಗುತ್ತದೆ.

ಮುದ್ರಣಾಲಯಗಳ ಆಧುನೀಕರಣದಿಂದ, ದೇಶಾದ್ಯಂತದ ಎಲ್ಲ ಕೇಂದ್ರ ಸರ್ಕಾರಿ ಕಚೇರಿಗಳ ತುರ್ತು, ಗೌಪ್ಯ ಮತ್ತು ಮಹತ್ವದ ಬಹು ವರ್ಣ ಮುದ್ರಣ ಕಾರ್ಯಗಳನ್ನು ಕೈಗೊಳ್ಳಲು ಅವಕಾಶವಾಗುತ್ತದೆ. 
ಬೊಕ್ಕಸಕ್ಕೆ ಯಾವುದೇ ಹೊರೆಯಾಗದ ರೀತಿ ಮತ್ತು ಯಾವುದೇ ಖೋತಾ ಇಲ್ಲದೆ (ಯಾರನ್ನೂ ಕೆಲಸದಿಂದ ತೆಗೆಯದೆ) ಇದನ್ನು ಮಾಡಲಾಗುತ್ತದೆ.

******