ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿಯೆಟ್ನಾಂ ಗಣರಾಜ್ಯದ ಪ್ರಧಾನಿ ಗೌರವಾನ್ವಿತ ನುಯೇನ್ ಕ್ಸುವಾನ್ ಫುಕ್ ಅವರೊಂದಿಗೆ ವರ್ಚುವಲ್ ಶೃಂಗಸಭೆಯನ್ನು ನಡೆಸಿದರು.
ಇಬ್ಬರು ಪ್ರಧಾನಮಂತ್ರಿಗಳು ದ್ವಿಪಕ್ಷೀಯ ಸಹಕಾರ ಸಂಬಂಧಗಳ ಪರಾಮರ್ಶೆ ನಡೆಸಿದರಲ್ಲದೆ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಕುರಿತು ಚರ್ಚೆ ನಡೆಸಿದರು. ಶೃಂಗಸಭೆಯ ವೇಳೆ ಭಾರತ – ವಿಯೆಟ್ನಾಂ ಸಮಗ್ರ ಕಾರ್ಯತಂತ್ರ ಪಾಲುದಾರಿಕೆ ಅಭಿವೃದ್ಧಿಗೆ ಮುಂದಿನ ದಿನಗಳಿಗಾಗಿ ‘ಶಾಂತಿ, ಸಮೃದ್ಧಿ ಮತ್ತು ಜನರ ಜಂಟಿ ದೂರದೃಷ್ಟಿ’ಯನ್ನೊಳಗೊಂಡ ಒಪ್ಪಂದವನ್ನು ಅಳವಡಿಸಿಕೊಳ್ಳಲಾಯಿತು. ಉಭಯ ನಾಯಕರು 2021-2023ರ ಅವಧಿಗೆ ಜಂಟಿ ಮುನ್ನೋಟ ಜಾರಿಗೆ ಕ್ರಿಯಾ ಯೋಜನೆಗೆ ಸಹಿ ಹಾಕುವುದನ್ನು ಸ್ವಾಗತಿಸಿದರು.
ಉಭಯ ನಾಯಕರು ಪಾಲುದಾರಿಕೆಯ ಎಲ್ಲ ವಲಯಗಳಲ್ಲಿ ದ್ವಿಪಕ್ಷೀಯ ಸಹಕಾರ ಸಂಬಂಧ ವೃದ್ಧಿಗೆ ಪ್ರಾಮುಖ್ಯತೆ ನೀಡಬೇಕು ಎಂಬುದನ್ನು ಒಪ್ಪಿಕೊಂಡರು. ಅಲ್ಲದೆ ಇಬ್ಬರೂ ನಾಯಕರು ಪರಸ್ಪರರ ರಾಷ್ಟ್ರೀಯ ಅಭಿವೃದ್ಧಿಯ ಆದ್ಯತೆಗಳನ್ನು ಬೆಂಬಲಿಸಲು ಹಾಗೂ ಶಾಂತಿಯುತ ಸ್ಥಿರ, ಸುರಕ್ಷತಾ, ಮುಕ್ತ, ಸ್ವಾತಂತ್ರ್ಯ, ಸಮಗ್ರ ಮತ್ತು ನಿಯಮಾಧಾರಿತ ಭಾರತ–ಫೆಸಿಫಿಕ್ ಪ್ರಾಂತ್ಯದಲ್ಲಿ ಹಂಚಿಕೆಯ ಮನೋಭಾವದೊಂದಿಗೆ ಕೈಗೊಳ್ಳುವ ಎಲ್ಲ ಕೆಲಸ ಕಾರ್ಯಗಳನ್ನು ಒಟ್ಟಾಗಿ ಮುಂದುವರಿಸಲು ಪರಸ್ಪರ ಒಪ್ಪಿಗೆ ಸೂಚಿಸಿದವು.
ಕೋವಿಡ್-19 ಸಾಂಕ್ರಾಮಿಕ ಸೇರಿದಂತೆ ಸಾಮಾನ್ಯ ಜಾಗತಿಕ ಸವಾಲುಗಳನ್ನು ಎದುರಿಸುವ ಸಹಕಾರ ಸಾಮರ್ಥ್ಯ ಬಲವರ್ಧನೆಗೆ ಉಭಯ ನಾಯಕರು ತಮ್ಮ ಬದ್ಧತೆಯನ್ನು ಪುನರುಚ್ಛರಿಸಿದರು. ಅಲ್ಲದೆ ಸಾಂಕ್ರಾಮಿಕದ ವಿರುದ್ಧದ ಲಸಿಕೆ ಲಭ್ಯತೆಯನ್ನು ಖಾತ್ರಿಪಡಿಸಲು ಸಕ್ರಿಯ ಸಹಕಾರವನ್ನು ಪಡೆದುಕೊಳ್ಳಲು ಒಪ್ಪಿದರು. ಹಲವು ಜಾಗತಿಕ ಮತ್ತು ಪ್ರಾದೇಶಿಕ ವಿಷಯಗಳ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡು ಭಾರತ ಮತ್ತು ವಿಯೆಟ್ನಾಂ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿ ಸೇರಿದಂತೆ ಬಹು ಹಂತದ ವೇದಿಕೆಗಳಲ್ಲಿ ನಿಕಟವಾಗಿ ಕಾರ್ಯನಿರ್ವಹಿಸಲು ನಿರ್ಧರಿಸಿದರು. 2021ರಲ್ಲಿ ಎರಡೂ ದೇಶಗಳು ಭದ್ರತಾ ಮಂಡಳಿಯಲ್ಲಿ ಜೊತೆಗೂಡಿ ಸೇವೆ ಸಲ್ಲಿಸಲಿವೆ.
ಪ್ರಧಾನಮಂತ್ರಿಗಳು ಭಾರತ – ಫೆಸಿಫಿಕ್ ಸಾಗರ ಉಪಕ್ರಮಗಳಲ್ಲಿ ಸಮನ್ವಯದ ಆಧಾರದಲ್ಲಿ ಸಾಗರ ವಾಸ್ತವಿಕ ಪಾಲುದಾರಿಕೆಗಳನ್ನು ಹಾಗೂ ಹೊಸ ಅವಕಾಶಗಳನ್ನು ಅನ್ವೇಷಿಸಲು ಇಬ್ಬರು ಪ್ರಧಾನಮಂತ್ರಿಗಳು ಒಪ್ಪಿದರು ಮತ್ತು ಭಾರತ – ಫೆಸಿಫಿಕ್ ಪ್ರಾಂತ್ಯದಲ್ಲಿ ಆಸಿಯಾನ್ ಹೊರ ನೋಟದೊಂದಿಗೆ ಹಂಚಿಕೆಯ ಭದ್ರತೆ, ಏಳಿಗೆ ಮತ್ತು ಇಡೀ ಪ್ರಾಂತ್ಯದ ಪ್ರಗತಿಯನ್ನು ಸಾಧಿಸಲು ನಿರ್ಧರಿಸಿದರು.
ಪ್ರಧಾನಮಂತ್ರಿಗಳು ವಿಯೆಟ್ನಾಂ ಸಹಭಾಗಿತ್ವದೊಂದಿಗೆ ಸಾಮರ್ಥ್ಯವೃದ್ಧಿ ಮತ್ತು ಅಭಿವೃದ್ಧಿಗೆ ಭಾರತದ ಬದ್ಧತೆಯನ್ನು ಪುನರುಚ್ಛರಿಸಿದರು. ಅದರ ಮೂಲಕ ಕ್ಷಿಪ್ರ ಪರಿಣಾಮಕಾರಿ ಯೋಜನೆಗಳು, ಐಟಿಇಸಿ ಮತ್ತು ಇ–ಐಟಿಇಸಿ ಉಪಕ್ರಮಗಳು, ಪಿಎಚ್ ಡಿ ಫೆಲೋಶಿಪ್ ಗಳು ಅಲ್ಲದೆ ವಿಯೆಟ್ನಾಂನ ಸುಸ್ಥಿರ ಗುರಿ ಸಾಧನೆಗೆ, ಡಿಜಿಟಲ್ ಸಂಪರ್ಕಕ್ಕೆ ಹಾಗೂ ಪಾರಂಪರಿಕ ಸಂರಕ್ಷಣಾ ಪ್ರಯತ್ನಗಳನ್ನು ಬೆಂಬಲಿಸುವ ಯೋಜನೆಗಳಿಗೆ ನೆರವು ನೀಡಲು ತೀರ್ಮಾನಿಸಲಾಯಿತು.
ಇಬ್ಬರೂ ಪ್ರಧಾನಮಂತ್ರಿಗಳು ಭಾರತ ಸರ್ಕಾರ ವಿಯೆಟ್ನಾಂಗೆ ನೀಡಿರುವ 100 ಮಿಲಿಯನ್ ಡಾಲರ್ ರಕ್ಷಣಾ ಮಾರ್ಗದ ಸಾಲ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ವಿಯೆಟ್ನಾಂನ ನಿಹ್ ಥುವಾನ್ ಪ್ರಾಂತ್ಯದಲ್ಲಿ ಸ್ಥಳೀಯ ಸಮುದಾಯಕ್ಕೆ ಅನುಕೂಲವಾಗುವಂತೆ ಭಾರತದ ಅನುದಾನದ ನೆರವಿನಡಿ ಏಳು ಅಭಿವೃದ್ಧಿ ಯೋಜನೆಗಳನ್ನು ಪೂರ್ಣಗೊಳಿಸಲಾಗಿದೆ.
ಇತ್ತೀಚೆಗೆ ಭಾರತೀಯ ಪುರಾತತ್ವ ಇಲಾಖೆ(ಎಎಸ್ಐ) ಶೋಧಿಸಿದ ವಿಯೆಟ್ನಾಂನ ಮೈ ಸನ್ ದೇವಾಲಯ ಪ್ರಾಂಗಣದಲ್ಲಿ ಸಂರಕ್ಷಣಾ ಮತ್ತು ಪುನರ್ ಸ್ಥಾಪನಾ ಕಾರ್ಯ ಕೈಗೊಂಡಿರುವುದಕ್ಕೆ ಪ್ರಧಾನಮಂತ್ರಿಗಳು ವಿಶೇಷ ತೃಪ್ತಿಯನ್ನು ವ್ಯಕ್ತಪಡಿಸಿದರು. ಮತ್ತು ಅದೇ ಬಗೆಯ ಇತರೆ ಯೋಜನೆಗಳಲ್ಲಿ ವಿಯೆಟ್ನಾಂ ಜೊತೆ ಕಾರ್ಯ ನಿರ್ವಹಿಸುವುದಾಗಿ ಭರವಸೆಯನ್ನು ನೀಡಿದರು.
***
Addressing the India-Vietnam Virtual Summit. https://t.co/EJoqxllN6Q
— Narendra Modi (@narendramodi) December 21, 2020
Held a Virtual Summit H.E. Nguyen Xuan Phuc, PM of Vietnam. We reviewed our cooperation on bilateral, regional and multilateral issues, and adopted a ‘Joint Vision for Peace, Prosperity and People’ to give direction to our Comprehensive Strategic Partnership.
— Narendra Modi (@narendramodi) December 21, 2020