Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ಗೌರವಾರ್ಥ ಸ್ಮರಣಿಕೆ ನಾಣ್ಯವನ್ನು ಪ್ರಧಾನಮಂತ್ರಿ ಬಿಡುಗಡೆ ಮಾಡಿದರು

ಡಿಸೆಂಬರ್ 24, 2018ರಂದು ನವದೆಹಲಿಯಲ್ಲಿ ಮಾಜಿ ಪ್ರಧಾನಮಂತ್ರಿ , ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ಗೌರವಾರ್ಥ ಸ್ಮರಣಿಕೆ ನಾಣ್ಯವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿ ಅವರು, ಶ್ರೀ ವಾಜಪೇಯಿವರಿಂದು ನಮ್ಮೊಂದಿಗಿಲ್ಲ ಎಂಬ ನಂಬಿಕೆಯನ್ನು ಒಪ್ಪಿಕೊಳ್ಳಲು ನಮ್ಮ ಮನಸ್ಸಿನ್ನೂ ಸಿದ್ದವಾಗಿಲ್ಲ. ಅವರೊಬ್ಬ ಸಮಾಜದ ಎಲ್ಲಾ ವರ್ಗದವರಿಂದ ಪ್ರೀತಿ ಮತ್ತು ಗೌರವ ಪಡೆದಿದ್ದ ಅಗ್ರಮಾನ್ಯ ವ್ಯಕ್ತಿಯಾಗಿದ್ದರು ಎಂದು ಹೇಳಿದರು.

ಹಲವು ದಶಕಗಳಕಾಲ ಶ್ರೀ ವಾಜಪೇಯಿ ಅವರ ಧ್ವನಿಯು ದೇಶದ ಜನತೆಯ ಧ್ವನಿಯಾಗಿತ್ತು. ಅವರೊಬ್ಬ ಸಮಾನಾಂತರವಿಲ್ಲದ ಭಾಷಣಕಾರರಾಗಿದ್ದರು. ಅವರು ಈ ದೇಶಕಂಡ ಅಪ್ರತಿಮ ಹಾಗೂ ಅತ್ಯುತ್ತಮ ಭಾಷಣಕಾರರಾಗಿದ್ದರು ಎಂದು ಪ್ರಧಾನಮಂತ್ರಿ ಅವರು ಹೇಳಿದರು.

ಶ್ರೀ ವಾಜಪೇಯಿ ಅವರ ಜೀವನದ ಬಹುಕಾಲ ವಿರೋಧಪಕ್ಷದ ಸ್ಥಾನದಲ್ಲಿಯೇ ಕಳೆಯಿತು, ಆದರೂ ಅವರು ಸದಾ ದೇಶದ ಹಿತದೃಷ್ಠಿಯಿಂದಲೇ ಮಾತನಾಡುತ್ತಿದ್ದರು ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದರು. ಶ್ರೀ ವಾಜಪೇಯಿ ಅವರು ಪ್ರಜಾಪ್ರಭುತ್ವವೇ ಸರ್ವೋಚ್ಛವೆಂದು ಭಾವಿಸಿದ್ದರು. ನಮ್ಮೆಲ್ಲರಿಗೂ ಅವರು ಸದಾ ಪ್ರೇರಣೆಯಾಗಿರುತ್ತಾರೆಂಬ ಭರವಸೆ ನಾನು ಹೊಂದಿದ್ದೇನೆ ಎಂದು ಪ್ರಧಾನಮಂತ್ರಿ ಮೋದಿ ಅವರು ಹೇಳಿದರು.