ಘನತೆವೆತ್ತ ಅಧ್ಯಕ್ಷ ಟಸ್ಕ್ ಮತ್ತು ಅಧ್ಯಕ್ಷ ಜುಂಕರ್ ಅವರೇ,
ಘನತೆವೆತ್ತ ಪ್ರತಿನಿಧಿಗಳೇ,
ಮಾಧ್ಯಮದ ಸದಸ್ಯರೇ,
ಅಧ್ಯಕ್ಷ ಟಸ್ಕ್ ಮತ್ತು ಅಧ್ಯಕ್ಷ ಜುಂಕರ್ ಅವರನ್ನು 14ನೇ ಭಾರತ-ಇಯು ಶೃಂಗಸಭೆಗೆ ಆಹ್ವಾನಿಸುವ ಅವಕಾಶ ದೊರೆತಿದ್ದಕ್ಕೆ ನಾನು ಹರ್ಷಿಸುತ್ತೇನೆ.
ಭಾರತವು ಐರೋಪ್ಯ ಒಕ್ಕೂಟದೊಂದಿಗೆ ತನ್ನ ಬಹುಮುಖಿ ಪಾಲುದಾರಿಕೆಯನ್ನು ಗೌರವಿಸುತ್ತದೆ, ಮತ್ತು ನಾವು ನಮ್ಮ ವ್ಯೂಹಾತ್ಮಕ ಪಾಲುದಾರಿಕೆಯೊಂದಿಗೆ ಉನ್ನತ ನಂಟು ಹೊಂದಿದ್ದೇವೆ. ಐರೋಪ್ಯ ಆರ್ಥಿಕ ಸಮುದಾಯದೊಂದಿಗೆ 1962ರಲ್ಲಿ ರಾಜತಾಂತ್ರಿಕ ಬಾಂಧವ್ಯ ಸ್ಥಾಪಿಸಿದ ಪ್ರಥಮ ರಾಷ್ಟ್ರಗಳಲ್ಲಿ ಭಾರತವೂ ಒಂದಾಗಿದೆ.
ಐರೋಪ್ಯ ಒಕ್ಕೂಟವು ದೀರ್ಘಕಾಲದಿಂದ ನಮ್ಮ ಅತಿ ದೊಡ್ಡ ವಾಣಿಜ್ಯ ಪಾಲುದಾರನಾಗಿದೆ. ಇದು ನಮ್ಮ ವಿದೇಶೀ ನೇರ ಬಂಡವಾಳ ಹೂಡಿಕೆಯ ಅತಿ ದೊಡ್ಡ ಮೂಲವೂ ಆಗಿದೆ.
ವಿಶ್ವದ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಗಳಾಗಿ, ನಾವು ಸ್ವಾಭಾವಿಕ ಪಾಲುದಾರರಾಗಿದ್ದೇವೆ. ನಮ್ಮ ಆಪ್ತ ಬಾಂಧವ್ಯ ಹಂಚಿಕೆಯ ಪ್ರಜಾಪ್ರಭುತ್ವ, ಕಾನೂನು ಆಡಳಿತ, ಮೂಲಭೂತ ಸ್ವಾತಂತ್ರ್ಯ ಮತ್ತು ಬಹು ಸಂಸ್ಕೃತಿಗೆ ಗೌರವ ನೀಡುವ ಮೌಲ್ಯಗಳ ಮೇಲೆ ಸ್ಥಾಪಿತವಾಗಿವೆ.
ಬಹು-ಧ್ರುವೀಯ, ನಿಯಮ-ಆಧಾರಿತ ಅಂತಾರಾಷ್ಟ್ರೀಯ ಕ್ರಮದ ದೃಷ್ಟಿಯನ್ನು ಸಹ ನಾವು ಹಂಚಿಕೊಳ್ಳುತ್ತೇವೆ. ಕಳೆದ ವರ್ಷ ಬ್ರುಸೆಲ್ಸ್ ನಲ್ಲಿ ನಡೆದ 13ನೇ ಶೃಂಗಸಭೆಯಿಂದ, ನಮ್ಮ ಬಾಂಧವ್ಯ ಸ್ಥಿರವಾಗಿ ಆವೇಗವನ್ನು ಗಳಿಸಿದೆ. ಅಧ್ಯಕ್ಷ ಜುಂಕೆರ್ ಕೆಲವು ದಿನಗಳ ಹಿಂದೆ ಹೇಳಿದ ಮಾತು ಬಳಸುವುದಾದರೆ, ಭಾರತ- ಐರೋಪ್ಯ ಒಕ್ಕೂಟದ ಬಾಂಧವ್ಯ ಇಂದು ಉತ್ತಮ ವಾತಾವರಣದಿಂದ ಕೂಡಿದೆ!
ಸ್ನೇಹಿತರೇ,
ಅಧ್ಯಕ್ಷ ಟಸ್ಕ್ ಮತ್ತು ಅಧ್ಯಕ್ಷ ಜುಂಕೆರ್ ಅವರೊಂದಿಗೆ ಇಂದು ನಡೆದ ವಿಸ್ತೃತ ಶ್ರೇಣಿಯ ಫಲಪ್ರದ ಮಾತುಕತೆಗಾಗಿ ನಾನು ಹೃತ್ಫೂರ್ವಕವಾಗಿ ಕೃತಜ್ಞತೆ ಅರ್ಪಿಸುತ್ತೇನೆ.
ನಾವು ಭಾರತ-ಇಯು ಕಾರ್ಯಕ್ರಮಗಳನ್ನು ಹಲವು ಹೊಸ ವಲಯಗಳಿಗೆ ವಿಸ್ತರಿಸಿದ್ದೇವೆ ಮತ್ತು ಪರಸ್ಪರ ನಂಬಿಕೆ ಮತ್ತು ತಿಳಿವಳಿಕೆಯ ಆಧಾರದ ಮೇಲೆ ನಾವು ಅದನ್ನು ಹೆಚ್ಚು ಸಮಗ್ರವಾಗಿ ಮತ್ತು ಲಾಭದಾಯಕವಾಗಿಸಲು ನಮ್ಮ ಪ್ರಯತ್ನಗಳನ್ನು ಮುಂದುವರೆಸಲು ಸಮ್ಮತ್ತಿಸಿದ್ದೇವೆ
ಇಂದು, ನಾವು ಕಳೆದ ವರ್ಷ ಶೃಂಗಸಭೆಯಲ್ಲಿ ಕೈಗೊಂಡ ನಿರ್ಣಯಗಳು ಮತ್ತು ಕಳೆದ ವರ್ಷ ಘೋಷಿಸಲಾದ 2020 ಕಾರ್ಯಕ್ರಮದ ಅನುಷ್ಠಾನದಲ್ಲಿನ ಪ್ರಗತಿಯನ್ನು ಪರಾಮರ್ಶಿಸಿದ್ದೇವೆ.
ನಾವು ನಮ್ಮ ಭದ್ರತೆ ಸಹಕಾರವನ್ನು ಬಲಪಡಿಸಲು ಮತ್ತು ಭಯೋತ್ಪಾದನೆಯ ವಿರುದ್ಧ ಒಗ್ಗೂಡಿ ಶ್ರಮಿಸಲು ನಾವು ಸಮ್ಮತಿಸಿದ್ದೇವೆ. ಈ ವಿಷಯಕ್ಕೆ ಸಂಬಂಧಿಸಿದಂತೆ ನಾವು ನಮ್ಮ ದ್ವಿಪಕ್ಷೀಯ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುವುದರ ಜೊತೆಗೆ ಬಹುಪಕ್ಷೀಯ ವೇದಿಕೆಗಳಲ್ಲಿ ಸಹಕಾರ ಮತ್ತು ಸಹಯೋಗವನ್ನು ಹೆಚ್ಚಿಸುತ್ತೇವೆ.
ಶುದ್ಧ ಇಂಧನ ಮತ್ತು ಹವಾಮಾನ ಬದಲಾವಣೆಗೆ ಸಂಬಂಧಿಸಿದಂತೆ, ನಾವಿಬ್ಬರೂ 2015ರ ಪ್ಯಾರಿಸ್ ಒಪ್ಪಂದಕ್ಕೆ ಬದ್ಧರಾಗಿದ್ದೇವೆ. ಹವಾಮಾನ ಬದಲಾವಣೆ ಸವಾಲು ಎದುರಿಸಲು ಮತ್ತು ಸುರಕ್ಷಿತ, ಕೈಗೆಟಕುವದರದ ಮತ್ತು ಸುಸ್ಥಿರ ಇಂಧನ ಪೂರೈಕೆ ಉತ್ತೇಜಿಸುವುದು ನಮ್ಮ ಹಂಚಿಕೆಯ ಆದ್ಯತೆಯಾಗಿದೆ. ಪುನರ್ ನವೀಕರಿಸಬಹುದಾದ ಇಂಧನದ ದರ ತಗ್ಗಿಸುವ ನಿಟ್ಟಿನಲ್ಲಿ ಪರಸ್ಪರ ಸಹಕಾರ ಕೈಗೊಳ್ಳುವ ಬದ್ಧತೆಯನ್ನು ನಾವು ಪುನರುಚ್ಚರಿಸಿದ್ದೇವೆ.
ನಾವು ಐರೋಪ್ಯ ಒಕ್ಕೂಟದೊಂದಿಗೆ ಸ್ಮಾರ್ಟ್ ಸಿಟಿಗಳ ಅಭಿವೃದ್ಧಿ ಮತ್ತು ನಗರ ಮೂಲಸೌಕರ್ಯ ಮೇಲ್ದರ್ಜೆಗೇರಿಸುವ ಸಹಕಾರ ವರ್ಧನೆ ಮಾಡಲಿದ್ದೇವೆ.
ಭಾರತ – ಇಯು ಹಾರಿಜಾಂಟಲ್ ನಾಗರಿಕ ವಿಮಾನಯಾನ ಒಪ್ಪಂದ ಈಗ ಕಾರ್ಯಗತವಾಗಿದೆ ಎಂದು ತಿಳಿಸಲು ನಾನು ಹರ್ಷಿಸುತ್ತೇನೆ. ಇದು ನಮ್ಮ ನಡುವಿನ ವಾಯು ಸಂಪರ್ಕವನ್ನು ಹೆಚ್ಚಿಸುತ್ತದೆ ಮತ್ತು ಜನರೊಂದಿಗಿನ ಸಂಪರ್ಕವನ್ನು ತ್ವರಿತಗೊಳಿಸುತ್ತದೆ.
ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಸಂಶೋಧನೆ ಮತ್ತು ನಾವಿನ್ಯತೆಯಲ್ಲಿನ ಸಹಕಾರ ನಮ್ಮ ಬಾಂಧವ್ಯದ ಮಹತ್ವದ ಅಂಶವಾಗಿದೆ. ಈ ನಿಟ್ಟಿನಲ್ಲಿ, ಇಂದು ಆಖೈರಾದ ಯುವ ವಿಜ್ಞಾನಿಗಳು ಮತ್ತು ಸಂಶೋಧಕರ ಚಲನಶೀಲತೆಯ ಒಪ್ಪಂದವನ್ನು ಸ್ವಾಗತಿಸುತ್ತೇವೆ.
ಐರೋಪ್ಯ ಹೂಡಿಕೆ ಬ್ಯಾಂಕ್ ನೊಂದಿಗೆ ಭಾರತದಲ್ಲಿ ಅಭಿವೃದ್ಧಿ ಯೋಜನೆಗಳ ಕುರಿತಂತೆ ಸಾಲದ ಒಪ್ಪಂದಕ್ಕೆ ಸಹಿ ಹಾಕಿರುವುದೂ ಮತ್ತೊಂದು ಸ್ವಾಗತಾರ್ಹ ಕ್ರಮವಾಗಿದೆ.
ಅಂತಾರಾಷ್ಟ್ರೀಯ ಸೌರ ಸಹಯೋಗ ಸದಸ್ಯ ರಾಷ್ಟ್ರಗಳಲ್ಲಿ ಸೌರ ಸಂಬಂಧಿ ಯೋಜನೆಗಳಿಗೆ ಹಣ ಒದಗಿಸುವ ಐರೋಪ್ಯ ಹೂಡಿಕೆ ಬ್ಯಾಂಕ್ ನ ನಿರ್ಧಾರವನ್ನು ನಾನು ಪ್ರಶಂಸಿಸುತ್ತೇನೆ.
ನಾವು ಇಯುನೊಂದಿಗೆ ನಮ್ಮ ವಾಣಿಜ್ಯ ಹಾಗೂ ಹೂಡಿಕೆ ಹರಿವು ಬಲಪಡಿಸುವ ಸಹಕಾರವನ್ನು ಮತ್ತಷ್ಟು ಆಳಗೊಳಿಸಲು ಶ್ರಮಿಸುವುದಕ್ಕೆ ಬದ್ಧರಾಗಿದ್ದೇವೆ.
ಘನತೆವೆತ್ತರೇ,
ನಾನು ನಿಮ್ಮ ನಾಯಕತ್ವ ಮತ್ತು ಭಾರತ ಇಯು ವ್ಯೂಹಾತ್ಮಕ ಪಾಲುದಾರಿಕೆಯನ್ನು ಬಲಪಡಿಸುವಲ್ಲಿ ನಿಮ್ಮ ಕೊಡುಗೆಗೆ ಧನ್ಯವಾದ ಅರ್ಪಿಸುತ್ತೇನೆ. ನಿಮ್ಮ ಮುಂದಿನ ಭಾರತ ಭೇಟಿ ಇಷ್ಟು ಅಲ್ಪಾವಧಿಯದಾಗಿರುವುದಿಲ್ಲ ಎಂದು ನಾನು ಭಾವಿಸುತ್ತೇನೆ ಮತ್ತು ನಿರೀಕ್ಷಿಸುತ್ತೇನೆ.!
ಧನ್ಯವಾದಳು
ತುಂಬಾ ತುಂಬಾ ಧನ್ಯವಾದಗಳು
***
Earlier today, held talks with @eucopresident Mr. Donald Tusk and Mr. @JunckerEU, President of the @EU_Commission. pic.twitter.com/tOunHkWR4U
— Narendra Modi (@narendramodi) October 6, 2017
India takes pride in ties with EU, guided by values of democracy, rule of law, respect for basic freedoms & multiculturalism.
— Narendra Modi (@narendramodi) October 6, 2017
In talks with @eucopresident & @JunckerEU we agreed to deepen cooperation in trade, investment, clean energy, climate change & other areas. pic.twitter.com/QOaBIrGsCx
— Narendra Modi (@narendramodi) October 6, 2017
There were also deliberations to deepen ties in science, technology, research & innovation. https://t.co/UucIpdDsbH pic.twitter.com/hCjV8SwpPA
— Narendra Modi (@narendramodi) October 6, 2017