Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭಾರತ – ಮಲೇಷ್ಯಾ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆ ಕುರಿತು ಜಂಟಿ ಹೇಳಿಕೆ

ಭಾರತ – ಮಲೇಷ್ಯಾ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆ ಕುರಿತು ಜಂಟಿ ಹೇಳಿಕೆ


2023ರ ಆಗಸ್ಟ್ 20ರಂದು, ಮಲೇಷಿಯಾದ ಪ್ರಧಾನಮಂತ್ರಿ ಡಾಟೊ ಸೆರಿ ಅನ್ವರ್ ಇಬ್ರಾಹಿಂ ಅವರು ಭಾರತಕ್ಕೆ ಭೇಟಿ ನೀಡಿದರು. ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಆಹ್ವಾನವನ್ನು ಸ್ವೀಕರಿಸಿ ಅವರು ಈ ಭೇಟಿ ನೀಡಿದರು. ಇದು ದಕ್ಷಿಣ ಏಷ್ಯಾ ಪ್ರದೇಶಕ್ಕೆ ಮಲೇಷಿಯಾದ ಪ್ರಧಾನಮಂತ್ರಿಯವರ ಮೊದಲ ಭೇಟಿಯಾಗಿದ್ದು, ಇಬ್ಬರು ಪ್ರಧಾನಮಂತ್ರಿಗಳ ನಡುವಿನ ಮೊದಲ ಸಭೆಯಾಗಿತ್ತು. ಇದರಿಂದ ಬಲಿಷ್ಠವಾದ ತಂತ್ರಜ್ಞಾನದ ಸಂಬಂಧಗಳನ್ನು ಪರಿಷ್ಕರಿಸಲು ಅವಕಾಶ ದೊರಕಿತು. ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ  ನಡೆದ ವ್ಯಾಪಕ ಚರ್ಚೆಗಳು ಭಾರತ ಮತ್ತು ಮಲೇಷಿಯಾ ನಡುವಿನ ಸಂಬಂಧಗಳು ಬಹುಮುಖಿ ಮತ್ತು ಬಹುಆಯಾಮಗಳನ್ನು ಹೊಂದಿವೆ ಎಂಬುದನ್ನು ತೋರಿಸಿಕೊಟ್ಟವು.

ಪ್ರಧಾನಮಂತ್ರಿ ಅನ್ವರ್ ಇಬ್ರಾಹಿಂ ಅವರೊಂದಿಗೆ ಉನ್ನತ ಮಟ್ಟದ ಪ್ರತಿನಿಧಿ ನಿಯೋಗವೂ ಕೂಡ ಬಂದಿತ್ತು. ಇದರಲ್ಲಿ ವಿದೇಶಾಂಗ ಸಚಿವರಾದ ಡಾಟೊ ಸೆರಿ ಉತಮಾ ಹಾಜಿ ಮೊಹಮದ್ ಬಿನ್ ಹಾಜಿ ಹಸನ್, ಹೂಡಿಕೆ, ವ್ಯಾಪಾರ ಮತ್ತು ಕೈಗಾರಿಕಾ ಸಚಿವರಾದ ತೆಂಗ್ಕು ದಾತುಕ್ ಸರಿ ಜಫ್ರುಲ್ ಅಬ್ದುಲ್ ಅಜೀಜ್, ಪ್ರವಾಸೋದ್ಯಮ, ಕಲೆ ಮತ್ತು ಸಂಸ್ಕೃತಿ ಸಚಿವರಾದ ದಾತುಕ್ ಸರಿ ಟಿಯಾಂಗ್ ಕಿಂಗ್ ಸಿಂಗ್, ಡಿಜಿಟಲ್ ಸಚಿವರಾದ ಗೋಬಿಂದ್ ಸಿಂಗ್ ದಿಯೋ, ಮತ್ತು ಮಾನವ ಸಂಪನ್ಮೂಲ ಸಚಿವರಾದ ಮಿಸ್ಟರ್ ಸ್ಟೀವನ್ ಸಿಮ್ ಇದ್ದರು.

ಪ್ರಧಾನಮಂತ್ರಿ ಅನ್ವರ್ ಇಬ್ರಾಹಿಂ ಅವರಿಗೆ ರಾಷ್ಟ್ರಪತಿ ಭವನದಲ್ಲಿ ವಿಧ್ಯುಕ್ತ ಸ್ವಾಗತ ನೀಡಲಾಯಿತು. ನಂತರ ಮಹಾತ್ಮ ಗಾಂಧಿಜಿಗೆ ಗೌರವ ಸಲ್ಲಿಸಲು ಅವರು ರಾಜಘಾಟ್ಗೆ ಭೇಟಿ ನೀಡಿದರು. ಇದಾದ ನಂತರ, ಇಬ್ಬರು ಪ್ರಧಾನಮಂತ್ರಿಗಳ ನಡುವೆ ದ್ವಿಪಕ್ಷೀಯ ಮಾತುಕತೆಗಳು ನಡೆದವು. ನಂತರ ಪ್ರಧಾನ ಮಂತ್ರಿಗಳು ದ್ವಿಪಕ್ಷೀಯ ದಾಖಲೆಗಳ ವಿನಿಮಯಕ್ಕೆ ಸಾಕ್ಷಿಯಾದರು. ಪ್ರಧಾನಮಂತ್ರಿ ಅನ್ವರ್ ಇಬ್ರಾಹಿಂ, ಪ್ರಧಾನಮಂತ್ರಿ ಮೋದಿ ಅವರು ಆಯೋಜಿಸಿದ ಭೋಜನ ಸಮಾರಂಭದಲ್ಲಿ ಭಾಗವಹಿಸಿದರು. ಪ್ರಧಾನಮಂತ್ರಿ ಅನ್ವರ್ ಇಬ್ರಾಹಿಂ ಅವರು ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿದರು. ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರು ಪ್ರಧಾನಮಂತ್ರಿ ಅನ್ವರ್ ಇಬ್ರಾಹಿಂ ಅವರನ್ನು ಭೇಟಿಯಾದರು.  ಪ್ರಧಾನಿ ಅನ್ವರ್ ಇಬ್ರಾಹಿಂ ಅವರು ವಿಶ್ವ ವ್ಯವಹಾರಗಳ ಭಾರತೀಯ ಮಂಡಳಿಯನ್ನು ಉದ್ದೇಶಿಸಿ ಮಾತನಾಡಿದರು.

2015ರಲ್ಲಿ ಸ್ಥಾಪಿಸಲಾದ ಭಾರತ ಮತ್ತು ಮಲೇಷ್ಯಾ ನಡುವಿನ ವರ್ಧಿತ ಕಾರ್ಯತಂತ್ರದ ಪಾಲುದಾರಿಕೆಯು ದ್ವಿಪಕ್ಷೀಯ ಸಂಬಂಧವನ್ನು ಬಹು ಆಯಾಮಗಳಲ್ಲಿ ಮುಂದಕ್ಕೆ ಸಾಗಿಸಲು ಸಹಾಯ ಮಾಡಿದೆ ಎಂದು ಇಬ್ಬರೂ ಪ್ರಧಾನ ಮಂತ್ರಿಗಳು ಒಪ್ಪಿಕೊಂಡರು. ಭಾರತ ಮತ್ತು ಮಲೇಶಿಯ ನಡುವಿನ ಸಂಬಂಧಗಳು ವಿವಿಧ ಕ್ಷೇತ್ರಗಳಲ್ಲಿ ವಿಸ್ತಾರಗೊಂಡಿವೆ ಮತ್ತು ಈ ಸಂಬಂಧಗಳ ಆಳವು ಹೆಚ್ಚಾಗಿದೆ ಎಂಬುದನ್ನು ಗುರುತಿಸುವ ಮೂಲಕ, ಪ್ರಧಾನ ಮಂತ್ರಿಗಳು ಸಂಬಂಧಗಳನ್ನು ಇನ್ನಷ್ಟು ದೃಢಗೊಳಿಸಲು ಸಂಪೂರ್ಣ ತಂತ್ರಜ್ಞಾನ ಪಾಲುದಾರಿಕೆಯಾಗಿ ಮತ್ತಷ್ಟು ಬಲಪಡಿಸಲು ಸಮಯವು ಅನುಕೂಲಕರವಾಗಿದೆ ಎಂದು ನಿರ್ಧರಿಸಿದರು.

ಭಾರತ ಮತ್ತು ಮಲೇಷ್ಯಾ ಮತ್ತು ಅದರ ಜನರ ನಡುವಿನ ಸ್ನೇಹ ಮತ್ತು ಸಾಮಾಜಿಕ-ಸಾಂಸ್ಕೃತಿಕ ಸಂಬಂಧಗಳ ಆಳವಾದ ಬೇರುಗಳ ಬಗ್ಗೆ ಉಭಯ ನಾಯಕರು ತೃಪ್ತಿ ವ್ಯಕ್ತಪಡಿಸಿದರು. ಭಾರತ ಮತ್ತು ಮಲೇಷ್ಯಾ ಗಳ ಹಂಚಿದ ಐತಿಹಾಸಿಕ ಹಿನ್ನೆಲೆ ಮತ್ತು ಮಲೇಷ್ಯಾದಲ್ಲಿರುವ ಪ್ರಬಲ ಭಾರತೀಯ ಸಮುದಾಯದ ಅಸ್ತಿತ್ವವು, ಆರ್ಥಿಕ ಬೆಳವಣಿಗೆ ಮತ್ತು ಅಭಿವೃದ್ಧಿಯ ಕ್ಷೇತ್ರದಲ್ಲಿ ಈ ಎರಡು ದೇಶಗಳು ವಿಶ್ವಾಸಾರ್ಹ ಭಾಗೀದಾರರಾಗಿ ಮುಂದುವರಿಯುವಂತೆ ಮಾಡುತ್ತದೆ.

ಉಭಯ ದೇಶಗಳ ಪ್ರಧಾನಮಂತ್ರಿಗಳು ರಾಜಕೀಯ, ರಕ್ಷಣೆ ಮತ್ತು ಭದ್ರತಾ ಸಹಕಾರ, ಆರ್ಥಿಕ ಮತ್ತು ವಾಣಿಜ್ಯ, ಡಿಜಿಟಲ್ ತಂತ್ರಜ್ಞಾನಗಳು, ಸ್ಟಾರ್ಟ್ಅಪ್ಗಳು, ಫಿನ್ಟೆಕ್, ನವೀಕರಿಸಬಹುದಾದ ಇಂಧನ ಸೇರಿದಂತೆ ಶಕ್ತಿ, ಆರೋಗ್ಯ, ಉನ್ನತ ಶಿಕ್ಷಣ, ಸಂಸ್ಕೃತಿ, ಪ್ರವಾಸೋದ್ಯಮ ಮತ್ತು ಜನರ ನಡುವಿನ ಸಂಬಂಧಗಳನ್ನು ಒಳಗೊಂಡಂತೆ ದ್ವಿಪಕ್ಷೀಯ ಸಹಕಾರದ ಎಲ್ಲಾ ಕ್ಷೇತ್ರಗಳ ಕುರಿತು ಚರ್ಚೆ ನಡೆಸಿದರು.

ಇಬ್ಬರು ನಾಯಕರು ಲಾಬುವಾನ್ ಹಣಕಾಸು ಸೇವೆಗಳ ಪ್ರಾಧಿಕಾರ (LFSA) ಮತ್ತು ಇಂಟರ್ನ್ಯಾಷನಲ್ ಫೈನಾನ್ಷಿಯಲ್ ಸರ್ವೀಸಸ್ ಸೆಂಟರ್ಸ್ ಅಥಾರಿಟಿ, ಇಂಡಿಯಾ (IFSCA) ನಡುವೆ ಕಾರ್ಮಿಕರ ನೇಮಕಾತಿ, ಉದ್ಯೋಗ ಮತ್ತು ವಾಪಸಾತಿ ಕುರಿತು ಚರ್ಚಿಸಿದರು; ಆಯುರ್ವೇದ ಮತ್ತು ಇತರ ಸಾಂಪ್ರದಾಯಿಕ ಔಷಧ ಪದ್ಧತಿಗಳು; ಡಿಜಿಟಲ್ ತಂತ್ರಜ್ಞಾನಗಳು; ಸಂಸ್ಕೃತಿ, ಕಲೆ ಮತ್ತು ಪರಂಪರೆ; ಪ್ರವಾಸೋದ್ಯಮ; ಸಾರ್ವಜನಿಕ ಆಡಳಿತ ಮತ್ತು ಆಡಳಿತ ಸುಧಾರಣೆಗಳು; ಯುವ ಮತ್ತು ಕ್ರೀಡೆ; ಮತ್ತು ಹಣಕಾಸು ಸೇವೆಗಳಂತಹ ಕ್ಷೇತ್ರಗಳಲ್ಲಿ ಸಹಕಾರಕ್ಕಾಗಿ ತಿಳುವಳಿಕಾ ಒಪ್ಪಂದಗಳ ವಿನಿಮಯಕ್ಕೆ ಇಬ್ಬರೂ ನಾಯಕರು ಸಾಕ್ಷಿಯಾದರು. 

ಮಲೇಷಿಯಾವು ವಿಶ್ವದ ದಕ್ಷಿಣದ ದೇಶಗಳು ತಮ್ಮ ಕಳಕಳಿಗಳು, ಆಸಕ್ತಿಗಳು ಮತ್ತು ಆದ್ಯತೆಗಳನ್ನು ಚರ್ಚಿಸಲು ಮತ್ತು ನಿವಾರಿಸಲು ಹಾಗೂ ಆಲೋಚನೆಗಳು ಮತ್ತು ಪರಿಹಾರಗಳನ್ನು ವಿನಿಮಯ ಮಾಡಿಕೊಳ್ಳಲು ವೇದಿಕೆಯನ್ನು ಒದಗಿಸುವ ವಾಯ್ಸ್ ಆಫ್ ದಿ ಗ್ಲೋಬಲ್ ಸೌತ್ ಸಮ್ಮಿಟ್ (VOGSS) ಅನ್ನು ಆಯೋಜಿಸುವ ಭಾರತದ ಕ್ರಮವನ್ನು ಮಲೇಷ್ಯಾ ಶ್ಲಾಘಿಸಿದೆ, ವಿಒಜಿಎಸ್ಎಸ್‌ನ ಎಲ್ಲಾ ಮೂರು ಆವೃತ್ತಿಗಳಲ್ಲಿ ಮಲೇಷಿಯಾದ ಭಾಗವಹಿಸುವಿಕೆಯನ್ನು ಭಾರತ ಪ್ರಶಂಸಿಸಿತು.

ದೇಶಗಳ ನಡುವಿನ ಉನ್ನತ ಮಟ್ಟದ ಭೇಟಿಗಳ ನಿರಂತರ ವಿನಿಮಯದ ಬಗ್ಗೆ ಇಬ್ಬರೂ ಪ್ರಧಾನ ಮಂತ್ರಿಗಳು ತೃಪ್ತಿ ವ್ಯಕ್ತಪಡಿಸಿದರು. ನಿಕಟ ಸಂವಾದದ ಪ್ರಾಮುಖ್ಯತೆಯನ್ನು ಒಪ್ಪಿಕೊಂಡು, ಅವರು ದ್ವಿಪಕ್ಷೀಯ, ಬಹುಪಕ್ಷೀಯ ಮತ್ತು ಪರಸ್ಪರ ಆಸಕ್ತಿಯ ಬಹುಪಕ್ಷೀಯ ವಿಷಯಗಳ ಕುರಿತು ನಿಯಮಿತ ವಿನಿಮಯ ಮತ್ತು ಸಂವಾದ ನಡೆಸಲು ಒಪ್ಪಿಕೊಂಡರು, ಇದರಲ್ಲಿ ಜಂಟಿ ಆಯೋಗ ಸಭೆಗಳು (ಜೆಸಿಎಂಗಳು) ಮತ್ತು ವಿದೇಶ ಕಚೇರಿ ಸಮಾಲೋಚನೆಗಳನ್ನು ನಿಯಮಿತವಾಗಿ ಕರೆಯುವುದು ಸೇರಿದೆ.

ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲು ಉಭಯ ದೇಶಗಳ ಸಂಸತ್ತಿನ ನಡುವೆ ಉತ್ತಮ ಸಂವಹನ ಮತ್ತು ವಿನಿಮಯವನ್ನು ಉಭಯ ದೇಶಗಳ ಪ್ರಧಾನ ಮಂತ್ರಿಗಳು ಪ್ರೋತ್ಸಾಹಿಸಿದರು. 

ಇಬ್ಬರು ಪ್ರಧಾನಮಂತ್ರಿಗಳು ದೇಶಗಳ ಅಭಿವೃದ್ಧಿಯಲ್ಲಿ ಯುವಕರ ಪ್ರಮುಖ ಪಾತ್ರವನ್ನು ಗುರುತಿಸಿದರು ಮತ್ತು ಈ ನಿಟ್ಟಿನಲ್ಲಿ ಎರಡೂ ದೇಶಗಳ ಯುವಕರ ನಡುವೆ ಹೆಚ್ಚಿನ ವಿನಿಮಯವನ್ನು ಪ್ರೋತ್ಸಾಹಿಸಲು ಒಪ್ಪಿಕೊಂಡರು.

ಇಬ್ಬರು ಪ್ರಧಾನಮಂತ್ರಿಗಳು ದ್ವಿಪಕ್ಷೀಯ ವ್ಯಾಪಾರದ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು ಮತ್ತು ವ್ಯಾಪಾರವು ಎರಡು ದೇಶಗಳ ಸುಧಾರಿತ ಕಾರ್ಯತಂತ್ರ ಪಾಲುದಾರಿಕೆಯ ಪ್ರಮುಖ ಆಧಾರವಾಗಿದೆ ಎಂದು ಒಪ್ಪಿಕೊಂಡರು ಮತ್ತು ದ್ವಿಪಕ್ಷೀಯ ವ್ಯಾಪಾರವು 19.5 ಬಿಲಿಯನ್ ಅಮೆರಿಕನ್ ಡಾಲರ್ಗಳ ದಾಖಲೆಯನ್ನು ತಲುಪಿರುವುದನ್ನು ಸ್ವಾಗತಿಸಿದರು. ಉಭಯ ದೇಶಗಳ ಪರಸ್ಪರ ಪ್ರಯೋಜನಕ್ಕಾಗಿ ಸುಸ್ಥಿರ ರೀತಿಯಲ್ಲಿ ದ್ವಿಪಕ್ಷೀಯ ವ್ಯಾಪಾರವನ್ನು ಮತ್ತಷ್ಟು ಹೆಚ್ಚಿಸಲು ಅವರು ಎರಡೂ ಕಡೆಗಳಲ್ಲಿ ಉದ್ಯಮವನ್ನು ಪ್ರೋತ್ಸಾಹಿಸಿದರು. ಈ ನಿಟ್ಟಿನಲ್ಲಿ, ಅವರು ಹಿರಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ವೇದಿಕೆಗೆ ಪ್ರಶಂಸೆ ವ್ಯಕ್ತಪಡಿಸಿದರು ಮತ್ತು 2024 ಆಗಸ್ಟ್ 19 ರಂದು ನವದೆಹಲಿಯಲ್ಲಿ ನಡೆದ ಒಂಬತ್ತನೇ (9 ನೇ) ಸಭೆಯನ್ನು ಶ್ಲಾಘಿಸಿದರು.

ಉಭಯ ದೇಶಗಳ ಪ್ರಧಾನ ಮಂತ್ರಿಗಳು ಹೆಚ್ಚಿದ ದ್ವಿಪಕ್ಷೀಯ ಹೂಡಿಕೆಯನ್ನು ಸ್ವಾಗತಿಸಿದರು ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಹಕಾರ ಮತ್ತು ಹೂಡಿಕೆಯನ್ನು ಪ್ರೋತ್ಸಾಹಿಸಿದರು.

ವ್ಯವಹಾರಗಳಿಗೆ ಹೆಚ್ಚು ಪರಿಣಾಮಕಾರಿ, ಬಳಕೆದಾರ ಸ್ನೇಹಿ, ಸರಳ ಮತ್ತು ವ್ಯಾಪಾರ ಸುಗಮಗೊಳಿಸುವಂತೆ ಮಾಡಲು ಆಸಿಯಾನ್-ಭಾರತ ಸರಕು ವ್ಯಾಪಾರ ಒಪ್ಪಂದ (ಎಐಟಿಜಿಎ) ಪರಿಶೀಲನಾ ಪ್ರಕ್ರಿಯೆಯನ್ನು ಬೆಂಬಲಿಸಲು ಮತ್ತು ವೇಗಗೊಳಿಸಲು ಎರಡೂ ಕಡೆಯವರು ಒಪ್ಪಿಕೊಂಡರು. ಇದು 2025 ರ ವೇಳೆಗೆ ಗಣನೀಯ ಫಲಿತಾಂಶಗಳನ್ನು ಸಾಧಿಸುವ ಮತ್ತು ಭಾರತ ಮತ್ತು ಆಸಿಯಾನ್ ದೇಶಗಳ ನಡುವಿನ ಪೂರೈಕೆ ಸರಪಳಿಗಳನ್ನು ಬಲಪಡಿಸುವ ಗುರಿಯನ್ನು ಹೊಂದಿದೆ.

ಉಭಯ ದೇಶಗಳ ಸಮಕಾಲೀನ ಆರ್ಥಿಕ ಆದ್ಯತೆಗಳನ್ನು ಪರಿಗಣಿಸುವ ಅಗತ್ಯವನ್ನು ಗುರುತಿಸಿದ ಇಬ್ಬರು ಪ್ರಧಾನ ಮಂತ್ರಿಗಳು ಮಲೇಷ್ಯಾ-ಭಾರತ ಸಮಗ್ರ ಆರ್ಥಿಕ ಸಹಕಾರ ಒಪ್ಪಂದದ (MICECA) ಎರಡನೇ ಜಂಟಿ ಸಮಿತಿ ಸಭೆಯನ್ನು ಕರೆಯುವ ಚರ್ಚೆಗಳನ್ನು ಸ್ವಾಗತಿಸಿದರು.

ದ್ವಿಪಕ್ಷೀಯ ವ್ಯಾಪಾರ ಮತ್ತು ಹೂಡಿಕೆಗಳಲ್ಲಿ ಸ್ಥಳೀಯ ಕರೆನ್ಸಿ ಬಳಕೆಯನ್ನು ಉತ್ತೇಜಿಸಲು ಸ್ಥಳೀಯ ಕರೆನ್ಸಿಗಳಾದ ಭಾರತದ ರೂಪಾಯಿ ಮತ್ತು ಮಲೇಷಿಯಾದ ರಿಂಗಿಟ್ ನಲ್ಲಿ ಎರಡೂ ಕಡೆಯ ಕೈಗಾರಿಕೆಗಳನ್ನು ಉತ್ತೇಜಿಸಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಬ್ಯಾಂಕ್ ನೆಗರಾ ಮಲೇಷ್ಯಾ ನಡುವಿನ ಸಹಕಾರವನ್ನು ಉಭಯ ದೇಶಗಳ ಪ್ರಧಾನ ಮಂತ್ರಿಗಳು ಶ್ಲಾಘಿಸಿದರು. ಟ್ರೇಡ್ ಇನ್ವಾಯ್ಸ್ ಮತ್ತು ಸೆಟಲ್ಮೆಂಟ್ ಅನ್ನು ಇನ್ನಷ್ಟು ಸುಲಭಗೊಳಿಸಲು ಪ್ರೋತ್ಸಾಹಿಸಲಾಗಿದೆ. 

ಡಿಜಿಟಲ್ ಸಹಕಾರದ ಕ್ಷೇತ್ರದಲ್ಲಿ,  ಇಬ್ಬರು ಪ್ರಧಾನಮಂತ್ರಿಗಳು, ಡಿಜಿಟಲ್ ತಂತ್ರಜ್ಞಾನಗಳ ಕುರಿತು ಒಪ್ಪಂದಕ್ಕೆ ಸಹಿ ಹಾಕಿದ್ದನ್ನು ಸ್ವಾಗತಿಸಿದರು ಮತ್ತು ಡಿಜಿಟಲ್ ಕ್ಷೇತ್ರದಲ್ಲಿ ಸಂಪರ್ಕಕ್ಕೆ ಮಾರ್ಗದರ್ಶನ ನೀಡಲು ಹಾಗೂ ಡಿಜಿಟಲ್ ಪಬ್ಲಿಕ್ ಇನ್ಫ್ರಾಸ್ಟ್ರಕ್ಚರ್, ಡಿಜಿಟಲ್ B2B ಸಹಭಾಗಿತ್ವ, ಡಿಜಿಟಲ್ ಸಾಮರ್ಥ್ಯ ವೃದ್ಧಿ, ಸೈಬರ್ ಸುರಕ್ಷತೆ, 5G, ಕ್ವಾಂಟಮ್ ಕಂಪ್ಯೂಟಿಂಗ್, ಕ್ಲೌಡ್ ಕಂಪ್ಯೂಟಿಂಗ್, ಇಂಟರ್ನೆಟ್ ಆಫ್ ಥಿಂಗ್ಸ್ ಮುಂತಾದ ಉತ್ಥಾನಶೀಲ ತಂತ್ರಜ್ಞಾನಗಳಲ್ಲಿ ಸಹಕಾರವನ್ನು ವೇಗಗೊಳಿಸಲು, ಮಲೇಶಿಯಾ-ಇಂಡಿಯಾ ಡಿಜಿಟಲ್ ಕೌನ್ಸಿಲ್ ಸಭೆಯನ್ನು ಪ್ರೋತ್ಸಾಹಿಸಿದರು.

ಇಬ್ಬರು ನಾಯಕರು ದೇಶಗಳ ಡಿಜಿಟಲ್ ಆರ್ಥಿಕತೆಯ ಆದ್ಯತೆಗಳನ್ನು ಗುರುತಿಸಿದರು ಮತ್ತು ಭಾರತದ ಏಕೀಕೃತ ಪಾವತಿ ಇಂಟರ್ಫೇಸ್ (ಯುಪಿಐ) ಯ ಯಶಸ್ಸನ್ನು ಗುರುತಿಸಿದರು. ಅಲ್ಲದೆ ಪಾವತಿ ವ್ಯವಸ್ಥೆಗಳ ಕ್ಷೇತ್ರದಲ್ಲಿ ಭಾರತ ಮತ್ತು ಮಲೇಷಿಯಾ ನಡುವಿನ ನಡೆಯುತ್ತಿರುವ ಒಪ್ಪಂದಗಳನ್ನು ಶ್ಲಾಘಿಸಿದರು.

ಭಾರತ-ಮಲೇಷ್ಯಾ ಸ್ಟಾರ್ಟ್ಅಪ್ ಅಲೈಯನ್ಸ್ ಮೂಲಕ ಇತರ ಮಧ್ಯಸ್ಥಗಾರರ ನಡುವೆ ಸ್ಟಾರ್ಟ್ಅಪ್ ಇಂಡಿಯಾ ಮತ್ತು ಮಲೇಷ್ಯಾದ ಕ್ರೇಡಲ್ ಫಂಡ್ ನಡುವೆ ನಡೆಯುತ್ತಿರುವ ಸಂವಾದವನ್ನು ಎರಡೂ ಕಡೆಯವರು ಸ್ವಾಗತಿಸಿದರು.

ಬಾಹ್ಯಾಕಾಶ, ಪರಮಾಣು ಶಕ್ತಿ, ಸೆಮಿಕಂಡಕ್ಟರ್ ಗಳು, ಲಸಿಕೆಗಳು ಮತ್ತು ಇತರ ಗುರುತಿಸಲಾದ ಕ್ಷೇತ್ರಗಳು ಸೇರಿದಂತೆ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಹಕಾರವನ್ನು ಮುಂದುವರಿಸಲು ಇಬ್ಬರೂ ಪ್ರಧಾನ ಮಂತ್ರಿಗಳು ಒಪ್ಪಿಕೊಂಡರು.

ಇಬ್ಬರೂ ಪ್ರಧಾನ ಮಂತ್ರಿಗಳು ದ್ವಿಪಕ್ಷೀಯ ರಕ್ಷಣೆ ಮತ್ತು ಭದ್ರತಾ ಪಾಲುದಾರಿಕೆಯಲ್ಲಿ ಸ್ಥಿರ ಮತ್ತು ಬಲವಾದ ಸಹಕಾರವನ್ನು ಉತ್ತಮ ಕಾರ್ಯತಂತ್ರದ ಪಾಲುದಾರಿಕೆಯ ಮುಖ್ಯ ಸ್ತಂಭಗಳಲ್ಲಿ ಒಂದಾಗಿ ಗುರುತಿಸಿದ್ದಾರೆ. ಎರಡೂ ಕಡೆಗಳು ನಿಯಮಿತ ವಿನಿಮಯಗಳು ಮತ್ತು ಸಂವಾದಗಳು, ಕಸರತ್ತುಗಳು ಮತ್ತು ಸಾಮರ್ಥ್ಯ ನಿರ್ಮಾಣ ಸಹಕಾರದ ಮೂಲಕ ರಕ್ಷಣಾ ಸಹಕಾರವನ್ನು ಮತ್ತಷ್ಟು ತೀವ್ರಗೊಳಿಸಲು ಒಪ್ಪಿಕೊಂಡವು.

ರಕ್ಷಣಾ ಉದ್ಯಮದ ಸಹಕಾರ ಮತ್ತು ರಕ್ಷಣಾ ಆರ್ & ಡಿ ಸಹಕಾರವನ್ನು ಮತ್ತಷ್ಟು ವಿಸ್ತರಿಸಲು ಎರಡೂ ಕಡೆಯವರು ಒಪ್ಪಿಕೊಂಡರು.

ಇಬ್ಬರು ಪ್ರಧಾನ ಮಂತ್ರಿಗಳು ಭಯೋತ್ಪಾದನೆಯನ್ನು ತೀವ್ರವಾಗಿ ಖಂಡಿಸಿದರು.  ಎಲ್ಲಾ ರೂಪಗಳಲ್ಲಿ ಹಾಗೂ ಅಭಿವ್ಯಕ್ತಿಗಳಲ್ಲಿ ಭಯೋತ್ಪಾದನೆಯನ್ನು ತಿರಸ್ಕರಿಸುವಂತೆ ರಾಷ್ಟ್ರಗಳಿಗೆ ಕರೆ ನೀಡಲು ಒಪ್ಪಿಕೊಂಡರು. ಯಾವುದೇ ದೇಶವೂ ಭಯೋತ್ಪಾದಕರಿಗೆ ಆಶ್ರಯ ನೀಡಬಾರದು ಎಂಬುದನ್ನು ಉಲ್ಲೇಖಿಸಿದ ಅವರು,  ದೇಶೀಯ ಕಾನೂನುಗಳು ಮತ್ತು ಅಂತರರಾಷ್ಟ್ರೀಯ ಸಂಪ್ರದಾಯಗಳಿಗೆ ಅನುಗುಣವಾಗಿ ಭಯೋತ್ಪಾದನೆಯ ಅಪರಾಧಿಗಳನ್ನು ತ್ವರಿತವಾಗಿ ನ್ಯಾಯಾಂಗಕ್ಕೆ ತರಲು ಒಟ್ಟಾಗಿ ಕೆಲಸ ಮಾಡಲು ಒಪ್ಪಿಕೊಂಡರು.

ಭಯೋತ್ಪಾದನೆ ಮತ್ತು ಅಂತರಾಷ್ಟ್ರೀಯ ಸಂಘಟಿತ ಅಪರಾಧಗಳ ನಡುವಿನ ಸಂಬಂಧವನ್ನು ಗುರುತಿಸಲು ಮತ್ತು ತಡೆಗಟ್ಟಲು ಒಪ್ಪಿಕೊಂಡರು. ಎರಡೂ ದೇಶಗಳು ಭಯೋತ್ಪಾದನೆ ಮತ್ತು ಇತರ ಸಾಂಪ್ರದಾಯಿಕ ಮತ್ತು ಅಸಾಂಪ್ರದಾಯಿಕ ಬೆದರಿಕೆಗಳನ್ನು ಎದುರಿಸಲು ಮಾಹಿತಿ ಮತ್ತು ಉತ್ತಮ ಅಭ್ಯಾಸಗಳನ್ನು ಹಂಚಿಕೊಳ್ಳುವುದು ಸೇರಿದಂತೆ ಈ ನಿಟ್ಟಿನಲ್ಲಿ ಸಹಕಾರವನ್ನು ಪ್ರೋತ್ಸಾಹಿಸಲು ಒಪ್ಪಿಕೊಂಡವು.

ಉಭಯ ಪ್ರಧಾನ ಮಂತ್ರಿಗಳು ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಸಹಕಾರವನ್ನು ತೀವ್ರಗೊಳಿಸಲು ಸಹ ಒಪ್ಪಿಕೊಂಡರು. ಸಾಮರ್ಥ್ಯ ವೃದ್ಧಿಯಲ್ಲಿ ಬಲವಾದ ಪರಸ್ಪರ ಸಹಕಾರ ಮತ್ತು ನಿಕಟ ವಿನಿಮಯವನ್ನು ಉದಾಹರಿಸಿ, ಮಲೇಷ್ಯಾ ಪ್ರಜೆಗಳಿಗೆ ಸೈಬರ್ ಭದ್ರತೆ, ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆಯ ಕ್ಷೇತ್ರಗಳಲ್ಲಿ ಭಾರತದ ತಾಂತ್ರಿಕ ಮತ್ತು ಆರ್ಥಿಕ ಸಹಕಾರ (ITEC) ಕಾರ್ಯಕ್ರಮದ ಅಡಿಯಲ್ಲಿ 100 ಸ್ಥಾನಗಳ ವಿಶೇಷ ಮೀಸಲಾತಿಯನ್ನು ಮಲೇಶಿಯಾ ಸ್ವಾಗತಿಸಿದೆ.

ಇಬ್ಬರು ಪ್ರಧಾನಮಂತ್ರಿಗಳು ಭಾರತದ ಆಯುಷ್ ಸಚಿವಾಲಯದ ಅಡಿಯಲ್ಲಿರುವ ಭಾರತೀಯ ತರಬೇತಿ ಮತ್ತು ಸಂಶೋಧನಾ ಆಯುರ್ವೇದ ಸಂಸ್ಥೆ (ITRA) ಮಲೇಷಿಯಾದ ತುಂಕು ಅಬ್ದುಲ್ ರಹ್ಮಾನ್ ವಿಶ್ವವಿದ್ಯಾಲಯದಲ್ಲಿ ಆಯುರ್ವೇದ ಪೀಠ ಸ್ಥಾಪಿಸುವುದು ಸೇರಿದಂತೆ ಪಾಲುದಾರಿಕೆಯನ್ನು ಮುಂದುವರಿಸುವ ಬದ್ಧತೆಯನ್ನು ಒತ್ತಿಹೇಳಿದರು. ಎರಡೂ ಕಡೆಯವರೂ ಔಷಧಶಾಸ್ತ್ರ ಸಹಭಾಗಿತ್ವದ ಎಮ್ಒಯು (MoU) ಅನ್ನು ಶೀಘ್ರದಲ್ಲಿ ಪೂರ್ಣಗೊಳಿಸಲು ಒಪ್ಪಿಕೊಂಡವು.

ಮಲಯ ವಿಶ್ವವಿದ್ಯಾನಿಲಯದಲ್ಲಿ (UM) ಭಾರತೀಯ ಅಧ್ಯಯನಗಳ ತಿರುವಳ್ಳುವರ್ ಪೀಠದ ಸ್ಥಾಪನೆಯ ಚರ್ಚೆಗಳನ್ನು ಎರಡೂ ಕಡೆಯವರು ಸ್ವಾಗತಿಸಿದರು.
ಜಂಟಿ ಸಂಶೋಧನೆ ಮತ್ತು ಅಭಿವೃದ್ಧಿ, ಸಾಮರ್ಥ್ಯ ವೃದ್ಧಿ ಮತ್ತು ಕೃಷಿಯಲ್ಲಿ ಡಿಜಿಟಲ್ ತಂತ್ರಜ್ಞಾನಗಳ ಅಳವಡಿಕೆ ಸೇರಿದಂತೆ ಕೃಷಿ ಕ್ಷೇತ್ರದಲ್ಲಿ ಸಹಕಾರವನ್ನು ತೀವ್ರಗೊಳಿಸಲು ಎರಡೂ ಕಡೆಯವರು ಉತ್ಸುಕರಾಗಿದ್ದಾರೆ.

ಉಭಯ ದೇಶಗಳ ನಡುವಿನ ದೀರ್ಘಕಾಲದ ಸಾಂಸ್ಕೃತಿಕ-ಸಂಪರ್ಕವನ್ನು ಗಮನದಲ್ಲಿಟ್ಟುಕೊಂಡು ಧ್ವನಿ-ದೃಶ್ಯ ಸಹ-ನಿರ್ಮಾಣದಲ್ಲಿ ಸಹಕಾರವನ್ನು ವಿಸ್ತರಿಸಲು ಇಬ್ಬರೂ ಪ್ರಧಾನ ಮಂತ್ರಿಗಳು ಒಪ್ಪಿಕೊಂಡರು.

ಉಭಯ ಪ್ರಧಾನ ಮಂತ್ರಿಗಳು ಸುಸ್ಥಿರ ಇಂಧನವನ್ನು ಉತ್ತೇಜಿಸಲು ಮತ್ತು ಹವಾಮಾನ ಬದಲಾವಣೆಗೆ ಹೊಂದಿಕೊಳ್ಳುವಲ್ಲಿ ಸಹಕಾರವನ್ನು ಬಲಪಡಿಸಲು ಒಪ್ಪಿಕೊಂಡರು. ಅಂತರರಾಷ್ಟ್ರೀಯ ಸೌರ ಒಕ್ಕೂಟ (ISA) ಮತ್ತು ವಿಪತ್ತು ಸ್ಥಿತಿಸ್ಥಾಪಕ ಮೂಲಸೌಕರ್ಯ (CDRI) ಒಕ್ಕೂಟವನ್ನು ಸ್ಥಾಪಿಸುವಲ್ಲಿ ಭಾರತದ ಕ್ರಮವನ್ನು ಮಲೇಷ್ಯಾ ಶ್ಲಾಘಿಸುತ್ತದೆ. ಹವಾಮಾನ ಬದಲಾವಣೆಯ ಕಾಳಜಿಯನ್ನು ಪರಿಹರಿಸಲು ಜಾಗತಿಕ ಪ್ರಯತ್ನದ ಅಗತ್ಯವಿದೆ ಎಂದು ಇಬ್ಬರೂ ಪ್ರಧಾನ ಮಂತ್ರಿಗಳು ಒಪ್ಪಿಕೊಂಡರು ಮತ್ತು ಈ ನಿಟ್ಟಿನಲ್ಲಿ ಪ್ರಯತ್ನಗಳನ್ನು ಕ್ರೋಢೀಕರಿಸಲು ಎರಡೂ ದೇಶಗಳು ಒಪ್ಪಿಕೊಂಡವು. 

ಇಂಟರ್ನ್ಯಾಷನಲ್ ಬಿಗ್ ಕ್ಯಾಟ್ ಅಲೈಯನ್ಸ್ (ಐಬಿಸಿಎ) ಸ್ಥಾಪಕ ಸದಸ್ಯರಾಗಿ ಸೇರುವ ಮಲೇಷ್ಯಾ ನಿರ್ಧಾರವನ್ನು ಭಾರತವೂ ಸ್ವಾಗತಿಸಿದೆ. ಇಬ್ಬರು ಪ್ರಧಾನ ಮಂತ್ರಿಗಳು ಐಬಿಸಿಎಯ ಚೌಕಟ್ಟಿನ ಒಪ್ಪಂದದ ಮೇಲಿನ ಮಾತುಕತೆಗಳ ತ್ವರಿತ ತೀರ್ಮಾನವನ್ನು ಪ್ರೋತ್ಸಾಹಿಸಿದರು.

ಮಲೇಷಿಯಾದ ಆರ್ಥಿಕತೆಗೆ ಮಲೇಷ್ಯಾದಲ್ಲಿರುವ ಭಾರತೀಯ ಪ್ರಜೆಗಳ ನಿರಂತರ ಮತ್ತು ಅಮೂಲ್ಯ ಕೊಡುಗೆಗಳನ್ನು ಇಬ್ಬರೂ ಪ್ರಧಾನ ಮಂತ್ರಿಗಳು ಸ್ವಾಗತಿಸಿದರು. ಉಭಯ ದೇಶಗಳ ನಡುವೆ ನುರಿತ ಪ್ರತಿಭೆಗಳ ಹರಿವನ್ನು ಮತ್ತಷ್ಟು ಸುಗಮಗೊಳಿಸಲು ಮತ್ತು ಬಲಪಡಿಸಲು ಅವರು ಒಪ್ಪಿಕೊಂಡರು.

ಇಬ್ಬರು ಪ್ರಧಾನಮಂತ್ರಿಗಳು, ವಿಶೇಷವಾಗಿ ಎರಡೂ ದೇಶಗಳಿಂದ ವೀಸಾ ವ್ಯವಸ್ಥೆಗಳನ್ನು ಸಡಿಲಗೊಳಿಸುವುದನ್ನು ಸೇರಿದಂತೆ ಎರಡೂ ದೇಶಗಳ ನಡುವಿನ ಹೆಚ್ಚಿನ ಪ್ರವಾಸೋದ್ಯಮ ಮತ್ತು ಜನ ಸಂಪರ್ಕ ವಿನಿಮಯವನ್ನು ಪ್ರೋತ್ಸಾಹಿಸುವ ಇತ್ತೀಚಿನ ಉಪಕ್ರಮಗಳನ್ನು ಸ್ವಾಗತಿಸಿದರು. ಇಬ್ಬರು ಪ್ರಧಾನಮಂತ್ರಿಗಳು ಪ್ರವಾಸೋದ್ಯಮ ಸಹಕಾರವನ್ನು ಹೆಚ್ಚಿಸುವಲ್ಲಿ, ಸುಸ್ಥಿರ ಪ್ರವಾಸೋದ್ಯಮದಲ್ಲಿ ಉತ್ತಮ ಅಭ್ಯಾಸಗಳನ್ನು ಹಂಚಿಕೊಳ್ಳುವಲ್ಲಿ ಮತ್ತು ಎರಡೂ ದೇಶಗಳ ನಡುವಿನ ಪ್ರವಾಸೋದ್ಯಮ ಹರಿವನ್ನು ಹೆಚ್ಚಿಸುವ ಸಾಧ್ಯತೆಯನ್ನು ಅನ್ವೇಷಿಸುವಲ್ಲಿ ತಮ್ಮ ಬದ್ಧತೆಯನ್ನು ವ್ಯಕ್ತಪಡಿಸಿದರು. 2026 ರನ್ನು ಮಲೇಷಿಯಾ ಭೇಟಿ ವರ್ಷವೆಂದು ಗೊತ್ತುಪಡಿಸಿದ್ದು ಮತ್ತು ವರ್ಷದ ಆಚರಣೆಯಲ್ಲಿ ಹೆಚ್ಚುವರಿ ಭಾರತೀಯ ಪ್ರವಾಸಿಗರನ್ನು ಮಲೇಷ್ಯಾ ಸ್ವಾಗತಿಸಿದೆ.

ಉಭಯ ದೇಶಗಳ ನಡುವಿನ ಸಂಪರ್ಕವು ಗರಿಷ್ಠ ಒಳಹರಿವು ಮತ್ತು ಜನರ ಹೊರಹರಿವನ್ನು ಖಚಿತಪಡಿಸಿಕೊಳ್ಳಲು ಪ್ರಮುಖವಾಗಿದೆ ಎಂದು ಉಭಯ ನಾಯಕರು ಒಪ್ಪಿಕೊಂಡರು ಮತ್ತು ಎರಡೂ ದೇಶಗಳ ನಡುವಿನ ವಾಯು ಸಂಪರ್ಕವನ್ನು ಹೆಚ್ಚಿಸಲು ಎರಡೂ ದೇಶಗಳ ನಾಗರಿಕ ವಿಮಾನಯಾನ ಪ್ರಾಧಿಕಾರಗಳು ಚರ್ಚೆಗಳನ್ನು ಮುಂದುವರಿಸಲು ಪ್ರೋತ್ಸಾಹಿಸಿದರು.

ಇಬ್ಬರು ನಾಯಕರು 1982 ರ ಸಂಯುಕ್ತ ರಾಷ್ಟ್ರ ಸಮುದ್ರ ಕಾನೂನು ಕನ್ವೆನ್ಷನ್ (UNCLOS) ನಲ್ಲಿ ವಿಶೇಷವಾಗಿ ಪ್ರತಿಬಿಂಬಿಸಲ್ಪಟ್ಟಂತೆ ಅಂತರ ರಾಷ್ಟ್ರೀಯ ಕಾನೂನಿನ ತತ್ವಗಳ ಆಧಾರದ ಮೇಲೆ ನೌಕಾ ಮತ್ತು ಹಾರಾಟದ ಸ್ವಾತಂತ್ರ್ಯ ಮತ್ತು ಅಡೆತಡೆಯಿಲ್ಲದ ಕಾನೂನುಬದ್ಧ ವಾಣಿಜ್ಯವನ್ನು ಗೌರವಿಸುವ ಬದ್ಧತೆಯನ್ನು ಪುನರುಚ್ಚರಿಸಿದರು. ಎಲ್ಲಾ ಪಕ್ಷಗಳು ಯುಎನ್ ಸಿಎಲ್ಒಎಸ್ 1982 ಸೇರಿದಂತೆ ಅಂತರರಾಷ್ಟ್ರೀಯ ಕಾನೂನಿನ ಸಾರ್ವತ್ರಿಕವಾಗಿ ಗುರುತಿಸಲ್ಪಟ್ಟ ತತ್ವಗಳಿಗೆ ಅನುಗುಣವಾಗಿ ಶಾಂತಿಯುತ ಮಾರ್ಗಗಳ ಮೂಲಕ ವಿವಾದಗಳನ್ನು ಪರಿಹರಿಸುವಂತೆ ಇಬ್ಬರು ನಾಯಕರು ಒತ್ತಾಯಿಸಿದರು.

ಭಾರತ ಮತ್ತು ಆಸಿಯಾನ್ ನಡುವಿನ ವ್ಯಾಪಕ ಕಾರ್ಯತಂತ್ರ ಪಾಲುದಾರಿಕೆಯ ಪ್ರಾಮುಖ್ಯತೆಯನ್ನು ಪುನರುಚ್ಚರಿಸಿದ ಮಲೇಷಿಯಾ, ಆಸಿಯಾನ್ ಕೇಂದ್ರೀಯತೆ ಮತ್ತು 2025 ರಲ್ಲಿ ಮಲೇಷಿಯಾದ ಆಗಮಿಸುತ್ತಿರುವ ಆಸಿಯಾನ್ ಅಧ್ಯಕ್ಷತೆಗೆ ಭಾರತದ ಸಂಪೂರ್ಣ ಬೆಂಬಲವನ್ನು ಪ್ರಶಂಸಿಸಿತು. ಈಗಿರುವ ವ್ಯಾಪಕ ಕಾರ್ಯತಂತ್ರ ಪಾಲುದಾರಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಆಸಿಯಾನ್ ನೇತೃತ್ವದ ಕಾರ್ಯವಿಧಾನಗಳ ಮೂಲಕ ಆಸಿಯಾನ್ ಮತ್ತು ಭಾರತ ನಡುವಿನ ಹೆಚ್ಚಿನ ಒಪ್ಪಂದಗಳನ್ನು ಮಲೇಷಿಯಾ ಸ್ವಾಗತಿಸಿತು.

UNSC, UNHCR ಮತ್ತು ಇತರ ಬಹುಪಕ್ಷೀಯ ವೇದಿಕೆಗಳು ಸೇರಿದಂತೆ ವಿಶ್ವಸಂಸ್ಥೆಯಲ್ಲಿ ಸಹಕಾರ ಮತ್ತು ಸಮನ್ವಯವನ್ನು ಬಲಪಡಿಸಲು ಇಬ್ಬರೂ ಪ್ರಧಾನ ಮಂತ್ರಿಗಳು ಒಪ್ಪಿಕೊಂಡರು. ಶಾಂತಿ ಮತ್ತು ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು ನಿಯಮಾಧಾರಿತ ಅಂತರರಾಷ್ಟ್ರೀಯ ವ್ಯವಸ್ಥೆಯನ್ನು ಅನುಸರಿಸುವುದು ಅತ್ಯಗತ್ಯ ಎಂದು ಇಬ್ಬರೂ ನಾಯಕರು ಸಮರ್ಥಿಸಿಕೊಂಡರು. ಸಮಕಾಲೀನ ವಾಸ್ತವಗಳನ್ನು ಪ್ರತಿಬಿಂಬಿಸುವ ಬಹುಪಕ್ಷೀಯತೆಯನ್ನು ವರ್ಧಿಸಲು, ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸೇರಿದಂತೆ ಅಂತರಾಷ್ಟ್ರೀಯ ಸಂಸ್ಥೆಗಳನ್ನು ಹೆಚ್ಚು ಪ್ರತಿನಿಧಿಸಲು ಒಟ್ಟಾಗಿ ಕೆಲಸ ಮಾಡುವುದಾಗಿ ಅವರು ಭರವಸೆ ನೀಡಿದರು. ಯುಎನ್ಎಸ್ ಸಿಯನ್ನು ಶಾಶ್ವತ ಮತ್ತು ಶಾಶ್ವತವಲ್ಲದ ವಿಭಾಗಗಳಲ್ಲಿ ವಿಸ್ತರಿಸುವುದು ಸೇರಿದಂತೆ ಅಭಿವೃದ್ಧಿಶೀಲ ರಾಷ್ಟ್ರಗಳ ಪ್ರಾತಿನಿಧ್ಯವನ್ನು ಹೆಚ್ಚಿಸುವುದರ ಮೇಲೆ ಕೇಂದ್ರೀಕರಿಸುವ ಮೂಲಕ ಕೌನ್ಸಿಲ್‌ನ ಸದಸ್ಯತ್ವವನ್ನು ಬಲಪಡಿಸುವುದು ಪ್ರಸ್ತುತ ಜಾಗತಿಕ ಸವಾಲುಗಳನ್ನು ಎದುರಿಸಲು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಸುಧಾರಿತ ಯುನೈಟೆಡ್ ನೇಷನ್ಸ್ ಸೆಕ್ಯುರಿಟಿ ಕೌನ್ಸಿಲ್‌ನಲ್ಲಿ ಭಾರತದ ಶಾಶ್ವತ ಸದಸ್ಯತ್ವಕ್ಕೆ ಮಲೇಷಿಯಾ ನೀಡಿದ ಬೆಂಬಲಕ್ಕಾಗಿ ಭಾರತವು ಹೃತ್ಪೂರ್ವಕವಾಗಿ ಪ್ರಶಂಸಿಸಿತು.

ಈ ಭೇಟಿಗಾಗಿ ತನಗೆ ಮತ್ತು ಅವರ ನಿಯೋಗಕ್ಕೆ ನೀಡಿದ ಆತ್ಮೀಯ ಸ್ವಾಗತ ಮತ್ತು ಆತಿಥ್ಯಕ್ಕಾಗಿ ಪ್ರಧಾನ ಮಂತ್ರಿ ಅನ್ವರ್ ಇಬ್ರಾಹಿಂ ಅವರು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದರು. ಅಲ್ಲದೆ ಮುಂದಿನ ದಿನಗಳಲ್ಲಿ ಪರಸ್ಪರ ಅನುಕೂಲವಾಗುವಂತೆ ಮಲೇಷ್ಯಾಕ್ಕೆ ಭೇಟಿ ನೀಡುವಂತೆ ಭಾರತದ ಪ್ರಧಾನಿಯನ್ನು ಆಹ್ವಾನಿಸಿದರು.

 

*****