Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭಾರತ – ಮಧ್ಯ ಏಷ್ಯಾ ಶೃಂಗ ಸಭೆಯ ಮೊದಲ ಸಭೆಯಲ್ಲಿ ಪ್ರಧಾನಮಂತ್ರಿಯವರ ಆರಂಭಿಕ ಭಾಷಣದ ಕನ್ನಡ ಅನುವಾದ

ಭಾರತ – ಮಧ್ಯ ಏಷ್ಯಾ ಶೃಂಗ ಸಭೆಯ ಮೊದಲ ಸಭೆಯಲ್ಲಿ ಪ್ರಧಾನಮಂತ್ರಿಯವರ ಆರಂಭಿಕ ಭಾಷಣದ ಕನ್ನಡ ಅನುವಾದ


ಘನತೆವೆತ್ತವರೇ

ಮೊದಲ ಭಾರತ – ಮಧ್ಯ ಏಷ್ಯಾ ಶೃಂಗ ಸಭೆಗೆ ನಿಮ್ಮೆಲ್ಲನ್ನು ಸ್ವಾಗತಿಸುತ್ತೇನೆ.

ಭಾರತ – ಮಧ್ಯ ಏಷ್ಯಾ ರಾಷ್ಟ್ರಗಳ ನಡುವಿನ ರಾಜತಾಂತ್ರಿಕ ಬಾಂಧವ್ಯಕ್ಕೆ ಅರ್ಥಪೂರ್ಣ 30 ವರ್ಷಗಳು ಪೂರ್ಣಗೊಂಡಿವೆ. ಕಳೆದ ಮೂರು ದಶಕಗಳಲ್ಲಿ ನಮ್ಮ ಸಹಕಾರ ಹಲವಾರು ಯಶಸ್ವಿ ಸಾಧನೆಗಳನ್ನು ಮಾಡಿದೆ. ಮತ್ತು ಈಗ, ಈ ನಿರ್ಣಾಯಕ ಹಂತದಲ್ಲಿ ಮುಂಬರುವ ವರ್ಷಗಳಲ್ಲಿ ನಾವು ಮಹತ್ವಾಕಾಂಕ್ಷೆಯ ದೃಷ್ಟಿಯನ್ನು ವ್ಯಾಖ್ಯಾನಿಸಬೇಕಿದೆ. ಬದಲಾಗುತ್ತಿರುವ ಈ ಜಗತ್ತಿನಲ್ಲಿ ನಮ್ಮ ಜನರ, ವಿಶೇಷವಾಗಿ ಯುವ ಪೀಳಿಗೆಯ ಆಕಾಂಕ್ಷೆಗಳನ್ನು ಪೂರೈಸುವ ದೃಷ್ಟಿಕೋನ ಹೊಂದಿದೆ.

ಗೌರವಾನ್ವಿತರೇ

ದ್ವಿಪಕ್ಷೀಯ ಹಂತದಲ್ಲಿ ಭಾರತ ಎಲ್ಲಾ ಮಧ್ಯ ಏಷ್ಯಾದ ದೇಶಗಳೊಂದಿಗೆ ನಿಕಟ ಬಾಂಧವ್ಯ ಹೊಂದಿದೆ.

ಘನತೆವೆತ್ತವರೇ
ಭಾರತದ ಇಂಧನ ಭದ್ರತೆ ವಿಷಯದಲ್ಲಿ ಕಝಕಿಸ್ತಾನ ಪ್ರಮುಖ ಪಾಲುದಾರ ರಾಷ್ಟ್ರವಾಗಿದೆ. ಇತ್ತೀಚೆಗೆ ಕಝಕಿಸ್ತಾನ್ ನಲ್ಲಿ ಆದ ಜೀವ ಮತ್ತು ಆಸ್ತಿ ನಷ್ಟಕ್ಕೆ ಸಂತಾಪ ವ್ಯಕ್ತಪಡಿಸುತ್ತೇನೆ.

ಉಜ್ಬೇಕಿಸ್ತಾನ್ ಜತೆಗೆ ಬೆಳೆಯುತ್ತಿರುವ ಸಹಕಾರದಲ್ಲಿ ನಮ್ಮ ಸರ್ಕಾರಗಳು ಸಹ ಸಕ್ರಿಯ ಪಾಲುದಾರರಾಗಿವೆ. ಶಿಕ್ಷಣ – ಉನ್ನತ ಎತ್ತರದ ಸಂಶೋಧನಾ ಕ್ಷೇತ್ರದಲ್ಲಿ ನಾವು ಕಿರ್ಗಿಸ್ತಾನ್ ನೊಂದಿಗೆ ಸಕ್ರಿಯ ಪಾಲುದಾರಿಕೆ ಹೊಂದಿದ್ದೇವೆ. ಅಲ್ಲಿ ಸಹಸ್ರಾರು ಭಾರತೀಯ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ.

ಭದ್ರತಾ ವಲಯದಲ್ಲಿ ತಜಕಿಸ್ತಾನದೊಂದಿಗೆ ನಾವು ದೀರ್ಘಕಾಲೀನ ಸಂಬಂಧ ಹೊಂದಿದ್ದೇವೆ. ಮತ್ತು ನಾವು ನಿರಂತರವಾಗಿ ಈ ದೇಶದೊಂದಿಗೆ ನಿಂತಿದ್ದೇವೆ. ಪ್ರಾದೇಶಿಕ ಸಂಪರ್ಕ ವಲಯದಲ್ಲಿ ಭಾರತದ ದೃಷ್ಟಿಯಲ್ಲಿ ತುರ್ಕಮೇನಿಸ್ತಾನ್ ಪ್ರಮುಖ ಭಾಗವಾಗಿದೆ. ಇದು ಆಶ್ಗಾಬಾತ್ ಒಪ್ಪಂದದಲ್ಲಿ ನಮ್ಮ ಭಾಗವಹಿಸುವಿಕೆಯಿಂದ ಸ್ಪಷ್ಟವಾಗಿದೆ.     

ಘತನೆವೆತ್ತವರೇ,
ಪ್ರಾದೇಶಿಕ ಭದ್ರತೆಗಾಗಿ ನಾವೆಲ್ಲರೂ ಒಂದೇ ರೀತಿಯ ಕಾಳಜಿ ಮತ್ತು ಉದ್ದೇಶಗಳನ್ನು ಹೊಂದಿದ್ದೇವೆ. ಆಪ್ಘಾನಿಸ್ತಾನದಲ್ಲಿನ ಬೆಳವಣಿಗೆಗಳ ಬಗ್ಗೆ ನಾವೆಲ್ಲರೂ ಚಿಂತಿತರಾಗಿದ್ದೇವೆ.

ಈ ಸಂದರ್ಭದಲ್ಲಿಯೂ ಸಹ ಪ್ರಾದೇಶಿಕ ಭದ್ರತೆ ಮತ್ತು ಸ್ಥಿರತೆಗಾಗಿ ನಮ್ಮ ಸಹಕಾರ ಹೆಚ್ಚು ಮಹತ್ವದ ಪಾತ್ರ ವಹಿಸುತ್ತಿದೆ.  

ಘನತೆವೆತ್ತವರೇ
ಇಂದಿನ ಶೃಂಗ ಸಭೆ ಮೂರು ಪ್ರಮುಖ ಉದ್ದೇಶಗಳನ್ನು ಒಳಗೊಂಡಿದೆ.

ಮೊದಲನೆಯದಾಗಿ ಸಹಕಾರ, ಪ್ರಾದೇಶಿಕ ಮತ್ತು ಸಮೃದ್ಧತೆ ವಲಯದಲ್ಲಿ ಭಾರತ – ಮಧ್ಯ ಏಷ್ಯಾ ನಡುವಿನ ಬಾಂಧವ್ಯ ಅತ್ಯಂತ ಮಹತ್ವದ್ದಾಗಿದೆ.

ಭಾರತೀಯ ದೃಷ್ಟಿಕೋನದಿಂದ ಸಮಗ್ರ ಮತ್ತು ಸ್ಥಿರವಾದ ವಿಸ್ತೃತ ನೆರೆ ಹೊರೆಯ ಭಾರತದ ದೃಷ್ಟಿಕೋನಕ್ಕೆ ಮಧ್ಯ ಏಷ್ಯಾ ಕೇಂದ್ರವಾಗಿದೆ ಎಂದು ಒತ್ತಿ ಹೇಳಲು ಬಯಸುತ್ತೇನೆ.  

ಎರಡನೆಯದಾಗಿ ನಮ್ಮ ಸಹಕಾರಕ್ಕೆ ಪರಿಣಾಮಕಾರಿ ಚೌಕಟ್ಟು ನೀಡುವ ದ್ಯೇಯ ಹೊಂದಲಾಗಿದೆ. ಇದು ವಿವಿಧ ಹಂತಗಳಲ್ಲಿ ಮತ್ತು ವಿವಿಧ ಮಧ್ಯಸ್ಥಗಾರರ ನಡುವೆ ನಿಯಮಿತ ಸಂವಹನಗಳ ಚೌಕಟ್ಟನ್ನು ಸ್ಥಾಪಿಸುತ್ತದೆ.  

ಮತ್ತು ನಮ್ಮ ಸಹಕಾರಕ್ಕಾಗಿ ಮಹತ್ವಾಕಾಂಕ್ಷೆಯ ಮಾರ್ಗಸೂಚಿಯನ್ನು ರಚಿಸುವುದು ಮೂರನೇ ಉದ್ದೇಶವಾಗಿದೆ.

ಇದರ ಮೂಲಕ ಮುಂದಿನ 30 ವರ್ಷಗಳವರೆಗೆ ಪ್ರಾದೇಶಿಕ ಸಂಪರ್ಕ ಮತ್ತು ಸಹಕಾರಕ್ಕಾಗಿ ನಾವು ಸಮಗ್ರ ವಿಧಾನವನ್ನು ಅಳವಡಿಸಿಕೊಳ್ಳಲು ಸಾಧ್ಯವಾಗಲಿದೆ.

ಘನತೆವೆತ್ತವರೇ,

ಭಾರತ – ಮಧ್ಯ ಏಷ್ಯಾ ಶೃಂಗದ ಮೊದಲ ಸಭೆಗೆ ನಾನು ಮತ್ತೊಮ್ಮೆ ನಿಮ್ಮನ್ನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇವೆ.

ಇದು ಪ್ರಧಾನಮಂತ್ರಿಯರ ಭಾಷಣದ ಅಂದಾಜು ಅನುವಾದವಾಗಿದೆ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಿದ್ದಾರೆ.

 

***