Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭಾರತ ಮತ್ತು ಭೂತಾನ್ ನಡುವೆ ವಾಣಿಜ್ಯ, ವ್ಯಾಪಾರ ಮತ್ತು ಸಾಗಣೆಯ ಹೊಸ ಒಪ್ಪಂದಕ್ಕೆ ಸಂಪುಟದ ಅನುಮೋದನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತ ಮತ್ತು ಭೂತಾನ್ ನಡುವೆ ವಾಣಿಜ್ಯ, ವ್ಯಾಪಾರ ಮತ್ತು ಸಾಗಣೆಯ ಹೊಸ ಒಪ್ಪಂದಕ್ಕೆ ತನ್ನ ಅನುಮೋದನೆ ನೀಡಿದೆ.

ಭಾರತ ಮತ್ತು ಭೂತಾನ್ ನಡುವಿನ ದ್ವಿಪಕ್ಷೀಯ ವಾಣಿಜ್ಯ ಬಾಂಧವ್ಯವು ವಾಣಿಜ್ಯ, ವ್ಯಾಪಾರ ಮತ್ತು ಸಾಗಣೆಗೆ ಸಂಬಂಧಿಸಿದಂತೆ ಭಾರತ ಸರ್ಕಾರ ಮತ್ತು ಭೂತಾನ್ ನಡುವಿನ ಒಪ್ಪಂದದ ಆಡಳಿತಕ್ಕೆ ಒಳಪಟ್ಟಿರುತ್ತದೆ. ಈ ಒಪ್ಪಂದವು ಎರಡೂ ರಾಷ್ಟ್ರಗಳ ನಡುವೆ ಮುಕ್ತ ವಾಣಿಜ್ಯ ಆಡಳಿತ ಒದಗಿಸುತ್ತದೆ. ಈ ಒಪ್ಪಂದವು ಮೂರನೇ ದೇಶಗಳೊಂದಿಗೆ ವ್ಯಾಪಾರಕ್ಕೆ ಭೂತಾನ್ ವಾಣಿಜ್ಯ ಸರಕುಗಳ ಸುಂಕ ರಹಿತವಾದ ಸಾಗಣೆಗೂ ಅವಕಾಶ ಒದಗಿಸುತ್ತದೆ. 2006ರ ಜುಲೈ 29ರಂದು ಈ ಒಪ್ಪಂದವನ್ನು 10 ವರ್ಷದ ಅವಧಿಗೆ ನವೀಕರಿಸಲಾಗಿತ್ತು. ಈ ಒಪ್ಪಂದದ ಸಿಂಧುತ್ವವನ್ನು 2016ರ ಜುಲೈ 29ರಿಂದ ಅನ್ವಯವಾಗುವಂತೆ ಒಂದು ವರ್ಷ ಕಾಲ ಅಥವಾ ರಾಜತಾಂತ್ರಿಕ ಟಿಪ್ಪಣಿಗಳ ವಿನಿಮಯದೊಂದಿಗೆ ಹೊಸ ಒಪ್ಪಂದ ಜಾರಿಗೆ ಬರುವ ತನಕ ವಿಸ್ತರಿಸಲಾಗಿದೆ.

ಸಾಂಪ್ರದಾಯಿಕವಾದ ವಿಶಿಷ್ಠ ದ್ವಿಪಕ್ಷೀಯ ಬಾಂಧವ್ಯಗಳು ಭಾರತ ಮತ್ತು ಭೂತಾನ್ ನಡುವಿನ ನಂಬಿಕೆ ಮತ್ತು ತಿಳಿವಳಿಕೆಯ ಲಕ್ಷಣದಿಂದ ಕೂಡಿದ್ದು, ವರ್ಷಾಂತರಗಳಲ್ಲಿ ಪಕ್ವವಾಗಿವೆ ಮತ್ತು ಉದ್ದೇಶಿತ ವಾಣಿಜ್ಯ, ವ್ಯಾಪಾರ ಮತ್ತು ಸಾಗಣೆಯ ಒಪ್ಪಂದದ ಜಾರಿಯಿಂದ ಮತ್ತಷ್ಟೂ ಬಲಗೊಳ್ಳಲಿದೆ.

****

AKT/VBA/SH