ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತ ಗಣರಾಜ್ಯದ ಗಣಿ ಸಚಿವಾಲಯದ ಭಾರತೀಯ ಭೂವಿಜ್ಞಾನ ಸರ್ವೇಕ್ಷಣಾಲಯ (ಜಿ.ಎಸ್.ಐ.) ಮತ್ತು ಬ್ರೆಜಿಲ್ ಒಕ್ಕೂಟ ಗಣರಾಜ್ಯದ ಗಣಿ ಮತ್ತು ಇಂಧನ ಸಚಿವಾಲಯದ ಬ್ರೆಜಿಲ್ ಭೂವಿಜ್ಞಾನ ಸರ್ವೇಕ್ಷಣಾಲಯ ಸಿಪಿಆರ್.ಎಂ.ನಡುವೆ ಭೂವಿಜ್ಞಾನ ಮತ್ತು ಖನಿಜ ಸಂಪನ್ಮೂಲ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ಅಂಕಿತ ಹಾಕಲಾಗಿರುವ ತಿಳಿವಳಿಕೆ ಒಪ್ಪಂದಕ್ಕೆ ಅನುಮೋದನೆ ನೀಡಿದೆ.
ಈ ತಿಳಿವಳಿಕೆ ಒಪ್ಪಂದವು ಭಾರತ ಗಣರಾಜ್ಯದ ಗಣಿ ಸಚಿವಾಲಯದ ಭಾರತೀಯ ಭೂ ಸರ್ವೇಕ್ಷಣಾಲಯ ಮತ್ತು ಬ್ರೆಜಿಲ್ ಒಕ್ಕೂಟ ಗಣರಾಜ್ಯದ ಗಣಿ ಮತ್ತು ಇಂಧನ ಸಚಿವಾಲಯದ ಬ್ರೆಜಿಲ್ ಭೂ ಸರ್ವೇಕ್ಷಣಾಲಯದ ನಡುವೆ ಭೂ ವಿಜ್ಞಾನ ಮತ್ತು ಖನಿಜ ಸಂಪನ್ಮೂಲ ಕ್ಷೇತ್ರದಲ್ಲಿನ ಸಹಕಾರಕ್ಕೆ ಸಾಂಸ್ಥಿಕ ವ್ಯವಸ್ಥೆಯನ್ನು ಒದಗಿಸುತ್ತದೆ.
*******