ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತ ಮತ್ತು ಬಾಂಗ್ಲಾದೇಶದ ನಡುವೆ ದೃಶ್ಯ ಶ್ರವಣ ಸಹ-ನಿರ್ಮಾಣ ಒಪ್ಪಂದಕ್ಕೆ ತನ್ನ ಅನುಮೋದನೆ ನೀಡಿದೆ.
ಒಪ್ಪಂದದ ಮುಖ್ಯಾಂಶಗಳು
· ಈ ಒಪ್ಪಂದವು ಚಲನಚಿತ್ರಗಳು, ಸಾಕ್ಷ್ಯಚಿತ್ರಗಳು ಮತ್ತು ಅನಿಮೇಷನ್ ಚಿತ್ರಗಳ ಸಹ ನಿರ್ಮಾಣವನ್ನು ಒಳಗೊಂಡಿದೆ.
· ದೃಶ್ಯ ಶ್ರವಣ ಸಹ ನಿರ್ಮಾಣವನ್ನು ಎರಡೂ ರಾಷ್ಟ್ರಗಳ ಕಾನೂನು ಮತ್ತು ನಿಯಂತ್ರಣಗಳಿಗೆ ಒಳಪಟ್ಟು, ಯಾವುದೇ ರಾಷ್ಟ್ರೀಯ ದೃಶ್ಯ ಶ್ರವಣ ಕಾರ್ಯಕ್ಕೆ ನೀಡಲಾಗುವ ಸವಲತ್ತುಗಳ ಅರ್ಹತೆಯಂತೆ ಪ್ರಸ್ತಾಪಿತ ಒಪ್ಪಂದದ ರೀತ್ಯ ನಿರ್ಮಿಸಲಾಗುವುದು.
· ಇದು ಎರಡೂ ದೇಶಗಳ ನಡುವೆ ಕಲೆ ಮತ್ತು ಸಂಸ್ಕೃತಿಯ ವಿನಿಮಯಕ್ಕೆ ಇಂಬು ನೀಡುತ್ತದೆ ಮತ್ತು ಎರಡೂ ದೇಶಗಳ ಜನರ ನಡುವೆ ಉತ್ತಮ ತಿಳಿವಳಿಕೆ ಮತ್ತು ಸೌಹಾರ್ದಕ್ಕೆ ಅವಕಾಶ ನೀಡುತ್ತದೆ.
· ನಮ್ಮ ಮೃದುಶಕ್ತಿಯನ್ನು ಪ್ರದರ್ಶಿಸಲು ಮತ್ತು ಸೃಷ್ಟಿಸಲು ಸಹ ನಿರ್ಮಾಣ ಅವಕಾಶ ಕಲ್ಪಿಸುತ್ತದೆ.
· ಇದು ನಿರ್ಮಾಣಾನಂತರ ಮತ್ತು ಮಾರುಕಟ್ಟೆ ಸೇರಿದಂತೆ ದೃಶ್ಯ ಶ್ರವಣ ಸಹ – ನಿರ್ಮಾಣದಲ್ಲಿ ತೊಡಗಿಕೊಂಡಿರುವ ಕಲಾತ್ಮಕ, ತಾಂತ್ರಿಕ ಮತ್ತು ತಾಂತ್ರಿಕೇತರ ಸಿಬ್ಬಂದಿಗೆ ಉದ್ಯೋಗವನ್ನೂ ಸೃಷ್ಟಿಸುತ್ತದೆ, ಜೊತೆಗೆ ಎರಡೂ ದೇಶಗಳ ಜಿಡಿಪಿಗೆ ಕೊಡುಗೆ ನೀಡುತ್ತದೆ.
· ಚಿತ್ರೀಕರಣಕ್ಕೆ ಭಾರತೀಯ ಪ್ರದೇಶಗಳ ಬಳಕೆಯು ಭಾರತವು ಜಾಗತಿಕವಾಗಿ ಚಿತ್ರೀಕರಣಕ್ಕೆ ಸೂಕ್ತ ತಾಣ ಎಂಬುದನ್ನು ಗೋಚರ / ಸಂಭಾವ್ಯತೆಯನ್ನು ಹೆಚ್ಚಿಸುತ್ತದೆ.
ಭಾರತವು ಈವರೆಗೆ ದೃಶ್ಯ ಶ್ರವಣ ಸಹ ನಿರ್ಮಾಣಕ್ಕಾಗಿ ಇಟಲಿ, ಯು.ಕೆ., ಜರ್ಮನಿ, ಬ್ರೆಜಿಲ್, ಪ್ರಾನ್ಸ್, ನ್ಯೂಜಿಲೆಂಡ್, ಪೊಲೆಂಡ್, ಸ್ಪೇನ್, ಕೆನಡಾ, ಚೀಣಾ ಮತ್ತು ಕೊರಿಯಾ ಗಣರಾಜ್ಯದೊಂದಿಗೆ ಒಪ್ಪಂದ ಮಾಡಿಕೊಂಡಿದೆ.
AKT/VBA/SH