ಪ್ರಧಾನಮಂತ್ರಿಶ್ರೀನರೇಂದ್ರಮೋದಿಅವರಅಧ್ಯಕ್ಷತೆಯಲ್ಲಿನಡೆದಕೇಂದ್ರಸಚಿವಸಂಪುಟಸಭೆಗೆ, ಭಾರತ ಮತ್ತು ಬಾಂಗ್ಲಾದೇಶಗಳ ನಡುವೆ ಸೈಬರ್ ಭದ್ರತೆ ಕುರಿತಂತೆ ಭಾರತದ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿರುವ ಭಾರತೀಯ ಕಂಪ್ಯೂಟರ್ ತುರ್ತು ಸ್ಪಂದನಾ ತಂಡ (ಸಿಇಆರ್.ಟಿ.-ಇನ್) ಮತ್ತು ಬಾಂಗ್ಲಾದೇಶ ಸರ್ಕಾರದ ಕಂಪ್ಯೂಟರ್ ಘಟನೆ ಸ್ಪಂದನಾ ತಂಡ (ಬಿಜಿಡಿ ಇ-ಗೌ ಸಿಐಆರ್.ಟಿ) ಬಾಂಗ್ಲಾದೇಶದ ಅಂಚೆ, ದೂರ ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿನ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ವಿಭಾಗದ ಬಾಂಗ್ಲಾದೇಶ ಕಂಪ್ಯೂಟರ್ ಮಂಡಳಿಯೊಂದಿಗೆ ಆಗಿರುವ ತಿಳಿವಳಿಕೆ ಒಪ್ಪಂದ (ಎಂ.ಓಯು)ದ ಬಗ್ಗೆ ವಿವರಿಸಲಾಯಿತು. ಈ ತಿಳಿವಳಿಕೆ ಒಪ್ಪಂದಕ್ಕೆ 2017ರ ಏಪ್ರಿಲ್ 8ರಂದು ಸಹಿ ಹಾಕಲಾಗಿತ್ತು.
ಈ ತಿಳಿವಳಿಕೆ ಒಪ್ಪಂದವು ಸಿಇಆರ್.ಟಿ – ಮತ್ತು ಬಿಜಿಡಿ ಇ ಗೌ –ಸಿಐಆರ್ಟಿ ನಡುವೆ ಸಹಕಾರವನ್ನು ಉತ್ತೇಜಿಸುವ ಇರಾದೆಯನ್ನು ಹೊಂದಿದೆ ಮತ್ತು ಇದರಲ್ಲಿ ಸೈಬರ್ ದಾಳಿಗಳು ಮತ್ತು ಸೈಬರ್ ಭದ್ರತೆ ಘಟನೆಗಳ ಮಾಹಿತಿ ವಿನಿಮಯ; ಸೈಬರ್ ಸುರಕ್ಷತೆ ತಂತ್ರಜ್ಞಾನ ಸಹಕಾರ; ಸೈಬರ್ ಸುರಕ್ಷತೆ ನೀತಿ ಮತ್ತು ಉತ್ತಮ ಪದ್ಧತಿಗಳ ವಿನಿಮಯ ಮತ್ತು ಈ ಕ್ಷೇತ್ರದಲ್ಲಿ ಪ್ರತಿ ರಾಷ್ಟ್ರದ ಸೂಕ್ತ ಕಾನೂನುಗಳು ಮತ್ತು ನಿಯಂತ್ರಣಗಳ ಅನ್ವಯ ಹಾಗೂ ಸಮಾನತೆಯ ಆಧಾರದಲ್ಲಿ, ಪರಸ್ಪರರಿಗೆ ಲಾಭವಾಗುವ ರೀತಿಯ ಮಾನವ ಸಂಪನ್ಮೂಲ ಅಭಿವೃದ್ಧಿಯೂ ಸೇರಿದೆ.
ಸಿಇಆರ್ಟಿ-ಇನ್ ಮತ್ತು ಬಿಜಿಡಿ ಇ-ಗೌ ಸಿಐಆರ್ಟಿ ನಡುವಿನ ಈ ತಿಳಿವಳಿಕೆ ಒಪ್ಪಂದವು, ಸಮರ್ಪಕವಾಗಿ ಸ್ಥಾಪಿಸಲಾಗುವ ಸೈಬರ್ ಭದ್ರತೆ ಕುರಿತ ಜಂಟಿ ಸಮಿತಿಯ ಮೂಲಕ ಅನುಷ್ಠಾನವಾಗಲಿದೆ.
ಹಿನ್ನೆಲೆ:
ಸಿಇಆರ್ಟಿ- ಇನ್ ಭಾರತ ಸರ್ಕಾರದ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯಡಿಯಲ್ಲಿ ಭಾರತೀಯ ಸೈಬರ್ ಕ್ಷೇತ್ರಕ್ಕೆ ಸುರಕ್ಷತೆ ಒದಗಿಸುವ ಉದ್ದೇಶ ಹೊಂದಿರುವ ಒಂದು ರಾಷ್ಟ್ರೀಯ ನೋಡಲ್ ಸಂಸ್ಥೆಯಾಗಿದೆ. ಹೀಗಾಗಿ ಸಿಇಆರ್ಟಿ –ಇನ್ ಸಾಗರೋತ್ತರ ಕಂಪ್ಯೂಟರ್ ತುರ್ತು ಸ್ಪಂದನಾ ತಂಡ (ಸಿಇಆರ್ಟಿಗಳು)ಗಳೊಂದಿಗೆ ಪ್ರಕಟರಣಗಳ ಸ್ಪಂದನೆ ಮತ್ತು ಪರಿಹಾರಕ್ಕೆ ಸಹಯೋಗವನ್ನು ಹೊಂದಿದೆ.
ಸರ್ಕಾರಗಳು, ವಾಣಿಜ್ಯೋದ್ಯಗಳು ಮತ್ತು ಗ್ರಾಹಕರು ವಿವಿಧ ಬಗೆಯ ಸೈಬರ್ ಭೀತಿ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಈ ಒಪ್ಪಂದ ರೂಪುಗೊಂಡಿದೆ. ಇದರ ಜೊತೆಗೆ ಸೈಬರ್ ಸುರಕ್ಷತೆ ಸನ್ನದ್ಧತೆಯನ್ನು ಇನ್ನಷ್ಟು ಸುಧಾರಣೆ ಮಾಡುವ ಮತ್ತು ಸಿಸ್ಟಮ್ ಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳುವ ಮಹತ್ವದ ಅರಿವು ಮೂಡಿಸಲು ಮತ್ತು ಸುರಕ್ಷತಾ ರೂಢಿಗಳ ಮತ್ತು ಪ್ರಕ್ರಿಯೆಗಳ ಮತ್ತು ಸೈಬರ್ ಸುರಕ್ಷತೆಯ ಕ್ಷೇತ್ರದಲ್ಲಿ ಎರಡು ಸಂಘಟನೆಗಳ ಸಹಕಾರದ ಮಹತ್ವವನ್ನು ಮನಗಾಣಲಾಗಿದೆ.
*****
AKT/VBA/