ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ ಭಾರತ ಮತ್ತು ನೆದರ್ಲ್ಯಾಂಡ್ಸ್ ನಡುವಿನ ದ್ವಿಪಕ್ಷೀಯ ಸಾಮಾಜಿಕ ಭದ್ರತಾ ಒಪ್ಪಂದದಲ್ಲಿ (ಎಸ್ಎಸ್ಎ) “ನಿವಾಸಿ ದೇಶ” ಎಂಬ ತಾತ್ವಿಕ ಸೇರ್ಪಡೆ ಕುರಿತ ಎಸ್ಎಸ್ಎ ತಿದ್ದುಪಡಿಗೆ ತನ್ನ ಅನುಮೋದನೆ ನೀಡಿದೆ.
ಭಾರತ ಮತ್ತು ನೆದರ್ಲ್ಯಾಂಡ್ಸ್ ನಡುವಿನ ಪರಿಷ್ಕೃತ ಎಸ್.ಎಸ್.ಎ. ಮೇಲಿನ ನೆದರ್ಲ್ಯಾಂಡ್ಸ್ ತಿದ್ದುಪಡಿಗೆ ಭಾರತವು ಅಧಿಸೂಚಿಸುವ ದಿನದಿಂದ ಮೂರನೇ ತಿಂಗಳಿನಿಂದ ಕಾರ್ಯರೂಪಕ್ಕೆ ಬಂದ ತರುವಾಯ ಎರಡೂ ದೇಶಗಳ ನಡುವಿನ ಬಾಂಧವ್ಯವನ್ನು ಬಲಪಡಿಸಲಿದೆ, ಮತ್ತು ಎರಡೂ ದೇಶಗಳಲ್ಲಿ ವಿದೇಶೀ ಕಾರ್ಯಾಚರಣೆಯೊಂದಿಗೆ ಅವುಗಳ ವಿದೇಶದ ವಹಿವಾಟಿನ ವೆಚ್ಚವನ್ನು ತಗ್ಗಿಸುವ ಮೂಲಕ ಭಾರತೀಯ ಮತ್ತು ಡಚ್ ಕಂಪನಿಗಳ ಲಾಭದಾಯಕತೆ ಮತ್ತು ಸ್ಪರ್ಧಾತ್ಮಕ ಸ್ಥಿತಿಯನ್ನು ಪರಿಣಾಮಕಾರಿಯನ್ನಾಗಿಸುತ್ತದೆ,
ಎಸ್.ಎಸ್.ಎ. 2010ರ ಜುಲೈನಿಂದ ಯಶಸ್ವಿಯಾಗಿ ಕಾರ್ಯಾಚರಣೆಯಲ್ಲಿದೆ ಮತ್ತು ನೆದರ್ಲ್ಯಾಂಡ್ಸ್ ನಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ವಲಸಿಗರಿಗೆ ಉಪಯುಕ್ತವಾಗಿದೆ.
• 2013ರ ಜನವರಿಯಿಂದ ಆರಂಭಗೊಂಡು, ನೆದರ್ಲ್ಯಾಂಡ್ಸ್ ಐರೋಪ್ಯ ಒಕ್ಕೂಟದಿಂದ ಹೊರತಾದ ರಾಷ್ಟ್ರಗಳಿಗೆ ಸಾಮಾಜಿಕ ಭದ್ರತೆಗಳ ರಫಿನ ಮೇಲೆ ಹೊಸ ನಿಯಮಗಳನ್ನು ಮಾಡಿತು.
• ಹೊಸ ಸಾಮಾಜಿಕ ಸುರಕ್ಷತೆ (ನಿವಾಸದ ರಾಷ್ಟ್ರ) ಕಾಯಿದೆ ಅಡಿ, ಒಬ್ಬ ಅರ್ಹ ಫಲಾನುಭವಿಗೆ ನೀಡಲಾಗುವ ಸೌಲಭ್ಯ ಅಥವಾ ಭತ್ಯೆಯ ಮೊತ್ತ (ಡಚ್ ರಾಷ್ಟ್ರೀಯ ಎಂದು ಓದಬೇಕು)ವನ್ನು ಪ್ರಸ್ತುತ ಫಲಾನುಭವಿಯು ಯಾವ ದೇಶದಲ್ಲಿ ವಾಸಿಸುತ್ತಿದ್ದಾನೋ ಅಲ್ಲಿನ ಜೀವನ ವೆಚ್ಚಕ್ಕೆ ಹೊಂದಿಸಲಾಗುತ್ತದೆ.
• ಹೊಸ ಡಚ್ ಶಾಸನದ ಪ್ರಕಾರ, ಸಾಮಾಜಿಕ ಭದ್ರತೆಯ ಲಾಭವನ್ನು, ಎಲ್ಲಿ ಡಚ್ ಪ್ರಜೆ ವಾಸಿಸುತ್ತಾನೋ ಅಲ್ಲಿಗೆ ರಫ್ತು ಮಾಡಿದಾಗ ಅಥವಾ ರವಾನಿಸಿದಾಗ ಆತಿಥೇಯ ರಾಷ್ಟ್ರದ ಜೀವನವೆಚ್ಚಕ್ಕೆ ಅದು ಸೂಚ್ಯಂಕಗೊಳ್ಳುತ್ತದೆ (ವಿಶ್ವಬ್ಯಾಂಕ್ ನಲ್ಲಿ ಪ್ರತಿಬಿಂಬಿತವಾದ ಅಂಕಿಗಳಂತೆ).
• ಹೊಸ ಡಚ್ ಶಾಸನವು, ಸಾಮಾನ್ಯ ಸನ್ನಿವೇಶಗಳಲ್ಲಿ, ನೆದರ್ಲ್ಯಾಂಡ್ಸ್ ನಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ಕಾರ್ಮಿಕರ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ ಕಾರಣ, ಇದು ಕೆಲವೇ ಕೆಲವು ವಿಶೇಷ ಪ್ರಕರಣ ಹೊರತು ಪಡಿಸಿ, ಐರೋಪ್ಯ ಒಕ್ಕೂಟದ ಹೊರಗೆ ವಾಸಿಸುವ ಡಚ್ ಪ್ರಜೆಗಳಿಗೆ ಮಾತ್ರವೇ ಅನ್ವಯಿಸುತ್ತದೆ. ಭಾರತದಿಂದ ನಿಯೋಜಿತರಾಗಿ ಕೆಲಸ ಮಾಡುತ್ತಿರುವವರು ಹಾಲಿ ಜಾರಿಯಲ್ಲಿರುವ ಭಾರತ-ನೆದರ್ಲ್ಯಾಂಡ್ಸ್ ಸಾಮಾಜಿಕ ಸುರಕ್ಷತೆ ಒಪ್ಪಂದದ ಪ್ರಕಾರವೇ ಸೌಲಭ್ಯ ಪಡೆಯುತ್ತಿರುತ್ತಾರೆ.
• ಆದಾಗ್ಯೂ, ನಿವಾಸಿ ರಾಷ್ಟ್ರದ ಸನ್ನಿವೇಶದಲ್ಲಿ, ನೀತಿಯು ಕೆಲವು ಭಾರತೀಯ ಪ್ರಜೆಗಳ ವಿಚಾರದಲ್ಲೂ ಅನ್ವಯವಾಗುತ್ತದೆ. ಇದು ಈ ಕೆಳಗಿನವುಗಳನ್ನು ಒಳಗೊಂಡಿದೆ:
§ ನೆದರ್ಲ್ಯಾಂಡ್ಸ್ ನಲ್ಲಿ ಸಾವನ್ನಪ್ಪುವ ಭಾರತೀಯ ಕಾರ್ಮಿಕ ಮತ್ತು ಭಾರತದಲ್ಲಿ ವಾಸಿಸುವ ಆತನ/ಆಕೆಯ ಪತ್ನಿ ಮತ್ತು ಮಕ್ಕಳು.
§ ನೆದರ್ಲ್ಯಾಂಡ್ಸ್ ನಲ್ಲಿ ಕೆಲಸ ಮಾಡುವ ಭಾರತೀಯ ಕಾರ್ಮಿಕ ವಿಕಲಾಂಗನಾಗಿ ಭಾರತಕ್ಕೆ ಮರಳಿದರೆ.
ಹೊಸ ಸಾಮಾಜಿಕ ಸುರಕ್ಷತೆ ಶಾಸನವನ್ನು ಅಳವಡಿಸಿಕೊಂಡ ಬಳಿಕ, ನೆದರ್ಲ್ಯಾಂಡ್ ಬಂದ ಮನವಿಯಂತೆ ಭಾರತವು ದ್ವಿಪಕ್ಷೀಯ ಎಸ್.ಎಸ್.ಎ.ಯನ್ನು ಪರಿಷ್ಕರಿಸಲು ಸಮ್ಮತಿಸಿತು. ಅಂಥ ಪರಿಷ್ಕರಣೆಯು ನೆದರ್ಲ್ಯಾಂಡ್ಸ್ ರಾಷ್ಟ್ರೀಯ ಶಾಸನದ ರೀತ್ಯ ಅವಶ್ಯವಾಗಿದೆ.
ಹಾಲಿ ಇರುವ ಎಸ್.ಎಸ್.ಎ. ಈಗ ತಿದ್ದುಪಡಿಯಾಗಿದ್ದು, ಮೇಲಿನ ಬದಲಾವಣೆಗಳಿಗೆ ಒಳಪಟ್ಟಿದೆ.
ಹಿನ್ನೆಲೆ
• ದ್ವಿಪಕ್ಷೀಯಸಾಮಾಡಿಕಸುರಕ್ಷತೆಒಪ್ಪಂದ (ಎಸ್.ಎಸ್.)ಗೆಭಾರತಮತ್ತುನೆದರ್ಲ್ಯಾಂಡ್ಸ್ನಡುವೆ 2009ರಅಕ್ಟೋಬರ್ 22ರಂದುಅಂಕಿತಹಾಕಲಾಗಿತ್ತುಮತ್ತುಇದು 2010ರಜೂನ್ 15ರಿಂದಜಾರಿಗೆಬಂದಿತ್ತು.
• ಎಸ್.ಎಸ್.ಎ. ಸಾಮಾಜಿಕ ಸುರಕ್ಷತೆ ವ್ಯವಸ್ಥೆಗೆ, ಪ್ರದೇಶವ್ಯಾಪ್ತಿಯಾದ್ಯಂತ ಸಂಘಟಿತ ಸಾಮಾಜಿಕ ಸುರಕ್ಷತೆಯ ರಫ್ತು ಮತ್ತು ಸೇವಾ ಅವಧಿಯ ಒಟ್ಟು (ಸ್ವಯಂ ಉದ್ಯೋಗಿಗಳಿಗೆ ಸಹ ಅನ್ವಯಿಸುತ್ತದೆ) ಎರಡೂ ಪ್ರದೇಶಗಳವ್ಯಾಪ್ತಿಯಲ್ಲಿ ದ್ವಿ ಕೊಡುಗೆಯಿಂದ ವಿನಾಯಿತಿ ನೀಡುತ್ತದೆ.
• 2013ರ ಜನವರಿ 1ರಿಂದ ಆರಂಭಗೊಂಡ ಹೊಸ ಸಾಮಾಜಿಕ ಸುರಕ್ಷತೆ ಶಾಸನವು ನೆದರ್ಲ್ಯಾಂಡ್ಸ್ ನಲ್ಲಿ ಜಾರಿಗೆ ಬಂದಿದ್ದು, ಅದರಂತೆ ನೆದರ್ಲ್ಯಾಂಡ್ಸ್ ನಿವಾಸಿ ದೇಶ ಎಂಬ ನೀತಿಯನ್ನು ಇತರ ರಾಷ್ಟ್ರಗಳಿಗೆ ರಫ್ತು ಮಾಡುವ ನಿರ್ದಿಷ್ಟ ಸಾಮಾಜಿಕ ಸುರಕ್ಷತೆ ಸೌಲಭ್ಯಗಳಿಗೆ ಅನ್ವಯಿಸುತ್ತಿದೆ.
• ಈ ತತ್ವವು ನೆದರ್ಲ್ಯಾಂಡ್ಸ್ ಹೊರಗೆ ವಾಸಿಸುವ ಡಚ್ ನಾಗರಿಕರ ವರ್ಗಕ್ಕೆ ಸಾಮಾಜಿಕ ಪ್ರಯೋಜನಗಳನ್ನು ರಫ್ತು ಮಾಡುವಲ್ಲಿ ಸಮಾನತೆಯನ್ನು ತರ ಬಯಸುತ್ತದೆ.
• ಈ ದಿನದವರೆಗೆ ಭಾರತವು 18 ರಾಷ್ಟ್ರಗಳೊಂದಿಗೆ ಎಸ್.ಎಸ್.ಎ.ಗೆ ಸಹಿ ಹಾಕಿ ಕಾರ್ಯಗತಗೊಳಿಸಿದೆ. ಆ ರಾಷ್ಟ್ರಗಳು ಆಸ್ಟ್ರೇಲಿಯಾ, ಆಸ್ಟ್ರಿಯಾ, ಬೆಲ್ಜಿಯಂ,ಕೆನಡಾ, ಝೆಕ್ ಗಣರಾಜ್ಯ, ಡೆನ್ಮಾರ್ಕ್, ಫಿನ್ಲ್ಯಾಂಡ್, ಫ್ರಾನ್ಸ್, ಜರ್ಮನಿ, ಹಂಗೇರಿ,ಜಪಾನ್, ಲಕ್ಸೆಂಬರ್ಗ್, ನೆದರ್ಲ್ಯಾಂಡ್ಸ್, ನಾರ್ವೆ, ಪೋರ್ಚುಗಲ್, ಸ್ವೀಡನ್,ಸ್ವಿಟ್ಜರ್ಲ್ಯಾಂಡ್ ಮತ್ತು ದಕ್ಷಿಣ ಕೊರಿಯಾ.
*****
KSD/VBA/SH