Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭಾರತ ಮತ್ತು ಥೈವಾನ್ ನಡುವೆ ವಾಯು ಸೇವೆ ಒಪ್ಪಂದಕ್ಕೆ ಅಂಕಿತ ಹಾಕಲು ಸಂಪುಟ ಸಮ್ಮತಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತ ಮತ್ತು ಥೈಪೆಯಲ್ಲಿನ ಥೈಪೆ ಅಸೋಸಿಯೇಷನ್ ( ಥೈವಾನ್ ನಲ್ಲಿರುವ ಭಾರತದ ಪ್ರತಿನಿಧಿ ಕಚೇರಿ) ಮತ್ತು ಥೈಪೆ ಆರ್ಥಿಕ ಮತ್ತು ಭಾರತದಲ್ಲಿನ ಸಾಂಸ್ಕೃತಿಕ ಕೇಂದ್ರ (ಭಾರತದಲ್ಲಿರುವ ಥೈವಾನ್ ನ ಪ್ರತಿನಿಧಿ ಕಚೇರಿ) ನಡುವೆ ನಡುವೆ ವಾಯು ಸೇವೆಯ ಒಪ್ಪಂದಕ್ಕೆ ಅಂಕಿತ ಹಾಕಲು ತನ್ನ ಅನುಮೋದನೆ ನೀಡಿದೆ.

ಪ್ರಸ್ತುತ ಭಾರತ ಮತ್ತು ಥೈವಾನ್ ನಡುವೆ ಯಾವುದೇ ಔಪಚಾರಿಕ ವಾಯು ಸೇವೆ ಒಪ್ಪಂದ ಇರುವುದಿಲ್ಲ ಮತ್ತು ವಾಯು ಸೇವೆಗಳನ್ನು ಏರ್ ಇಂಡಿಯಾ ಚಾರ್ಟರ್ಸ್ ಲಿಮಿಟೆಡ್ (ಎ.ಐ.ಆರ್.ಎಲ್.) ಮತ್ತು ಥೈಪೆ ಏರ್ಲೈನ್ಸ್ ಅಸೋಸಿಯೇಷನ್ (ಟಿ.ಎ.ಎ.) ನಡುವಿನ ಎಂ.ಓ.ಯು.ಗೆ ಒಳಪಟ್ಟಿವೆ.
ಭಾರತ ಮತ್ತು ಥೈವಾನ್ ನಡುವೆ ನಾಗರಿಕ ವಿಮಾನ ಯಾನ ಬಾಂಧವ್ಯದಲ್ಲಿ ಈ ವಾಯು ಸೇವೆಗಳ ಒಪ್ಪಂದ ಮಹತ್ವದ ಮೈಲಿಗಲ್ಲಾಗಲಿದೆ, ಮತ್ತು ಎರಡೂ ಪಕ್ಷಗಳ ನಡುವೆ ಬೃಹತ್ ವಾಣಿಜ್ಯ, ಹೂಡಿಕೆ, ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ವಿನಿಮಯಕ್ಕೆ ಅವಕಾಶ ನೀಡಲಿದೆ.

***