ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಜಲ ಸಂಪನ್ಮೂಲಗಳ ನಿರ್ವಹಣೆ ಮತ್ತು ಅಭಿವೃದ್ಧಿಯಲ್ಲಿ ದ್ವಿಪಕ್ಷೀಯ ಸಹಕಾರಕ್ಕಾಗಿ ಭಾರತ ಮತ್ತು ತಾಂಜೇನಿಯಾ ನಡುವಿನ ತಿಳಿವಳಿಕೆ ಒಪ್ಪಂದ (ಎಂ.ಓ.ಯು.)ಗೆ ಅಂಕಿತ ಹಾಕಲು ತನ್ನ ಅನುಮೋದನೆ ನೀಡಿದೆ.
ಹೆಚ್ಚಿನ ಸಹಕಾರದ ಕ್ಷೇತ್ರಗಳು ಮಳೆ ಕೊಯ್ಲು ತಂತ್ರಗಾರಿಕೆ, ಮೇಲ್ಮೈ ಮತ್ತು ಅಂತರ್ಜಲ ನಿರ್ವಹಣೆ ಮತ್ತು ಅಭಿವೃದ್ಧಿ ಮತ್ತು ನೀರು ಪೊಟರೆಗಳ ಮರು ಪೂರಣವನ್ನು ಒಳಗೊಂಡಿವೆ. ಪರಸ್ಪರರು ಸಮ್ಮತಿಸುವ ಪ್ರದೇಶಗಳಲ್ಲಿನ ಸಹಯೋಗ ಮತ್ತು ಪರಿಣತಿಯ ವಿನಿಮಯವು ಮಳೆ ಕೊಯ್ಲು, ಜಲ ಸಂರಕ್ಷಣೆ, ಮೇಲ್ಮೈ ಮತ್ತು ಅಂತರ್ಜಲ ನಿರ್ವಹಣೆ ಮತ್ತು ಅಭಿವೃದ್ಧಿ, ಹಾಗೂ ಜಲ ಪೊಟರೆ ಮರುಪೂರಣದಲ್ಲಿನ ತಂತ್ರಗಾರಿಕೆಯ ಲಾಭವನ್ನು ರಾಷ್ಟ್ರಕ್ಕೆ ನೀಡಲಿದೆ.
ಮೇಲೆ ಹೇಳಲಾದ ಕ್ಷೇತ್ರಗಳಲ್ಲಿ ಸಾಮರ್ಥ್ಯ ವರ್ಧನೆಗಾಗಿ ಸರ್ಕಾರವು ತಜ್ಞರ ವಿನಿಮಯ, ಕಾರ್ಯಕ್ರಮ ತರಬೇತಿ ಸಂಸ್ಥೆಗಳು, ಅಧ್ಯಯನ ಪ್ರವಾಸ ಮತ್ತು ಪ್ರದರ್ಶಕ ಪ್ರಾಯೋಗಿಕ ಅಧ್ಯಯನ ಸೇರಿದಂತೆ ಇತರ ಕೆಲವು ಚಟುವಟಿಕೆಗಳನ್ನು ಉತ್ತೇಜಿಸುತ್ತದೆ. ಎಂ.ಓ.ಯು. ಅಡಿಯಲ್ಲಿ ಚಟುವಟಿಕೆಗಳ ಉಸ್ತುವಾರಿ ನೋಡಿಕೊಳ್ಳಲು ಜಂಟಿ ಕಾರ್ಯ ಪಡೆಯನ್ನು ರಚಿಸಲಾಗುತ್ತದೆ.
ಹಿನ್ನೆಲೆ:
ಜಲ ಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನಶ್ಚೇತನ ಸಚಿವಾಲಯವು (ಡಬ್ಲ್ಯುಆರ್, ಆರ್.ಡಿ ಮತ್ತು ಜಿಆರ್) ಜಲ ಸಂಪನ್ಮೂಲ ಅಭಿವೃದ್ಧಿ ಮತ್ತು ನಿರ್ವಹಣೆ ಕುರಿತಂತೆ ಇತರ ದೇಶಗಳೊಂದಿಗೆ ದ್ವಿಪಕ್ಷೀಯ ಸಹಕಾರಕ್ಕಾಗಿ ಎದಿರು ನೋಡುತ್ತಿದೆ. ಇವುಗಳನ್ನು ಮುಖ್ಯವಾಗಿ ನೀತಿ ಮತ್ತು ತಾಂತ್ರಿಕ ಪರಿಣತಿಯ ವಿನಿಮಯ, ತರಬೇತಿ ಕೋರ್ಸ್ ಗಳ ಆಯೋಜನೆ, ಕಾರ್ಯಾಗಾರ, ವೈಜ್ಞಾನಿಕ ಮತ್ತು ತಾಂತ್ರಿಕ ವಿಚಾರಗೋಷ್ಠಿ, ಪರಿಣತರ ವಿನಿಮಯ ಮತ್ತು ಅಧ್ಯಯನ ಪ್ರವಾಸದ ಮೂಲಕ ಸಾಧಿಸಲಾಗುತ್ತದೆ.
2014ರ ಜುಲೈ 16ರಂದು ತಾಂಜೇನಿಯಾ ಸರ್ಕಾರದ ಜಲ ಸಂಪನ್ಮೂಲ, ಸಚಿವರ ಭೇಟಿಯ ಹಿನ್ನೆಲೆಯಲ್ಲಿ ಈ ಉನ್ನತ ಸಹಕಾರ ಸಾಧ್ಯವಾಗಿದೆ. ಎರಡೂ ಕಡೆಯವರು ಮಳೆ ಕೊಯ್ಲು ಮತ್ತು ನಿರ್ವಹಣೆ ಪದ್ಥತಿಗಳ ಬಗ್ಗೆ ಚರ್ಚಿಸಿದರು ಮತ್ತು ಪರಸ್ಪರ ಚರ್ಚೆಯ ಬಳಿಕ ಎಂ.ಓ.ಯು. ಹೊಂದಲು ನಿರ್ಧರಿಸಿದ್ದರು.
***
AKT/VBA/SH/SK