ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತ ಮತ್ತು ಜಾರ್ಜಿಯಾ ನಡುವೆ ವಾಯು ಯಾನ ಸೇವೆಗಳ ಒಪ್ಪಂದ (ಎ.ಎಸ್.ಎ.)ಕ್ಕೆ ಅಂಕಿತ ಹಾಕಲು ತನ್ನ ಅನುಮೋದನೆ ನೀಡಿದೆ.
ಎರಡೂ ದೇಶಗಳ ನಡುವಿನ ಈ ಒಪ್ಪಂದವು ಎರಡೂ ದೇಶಗಳ ನಡುವೆ ವಾಯು ಯಾನ ಸಂಪರ್ಕ ಸುಧಾರಿಸಲು ಮತ್ತು ನಾಗರಿಕ ವಿಮಾನಯಾನ ವಲಯದಲ್ಲಿ ಆಗಿರುವ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡ ಇತ್ತೀಚಿನ ಅಂತಾರಾಷ್ಟ್ರೀಯ ನಾಗರಿಕ ವಾಯುಯಾನ ಸಂಘಟನೆ (ಐ.ಸಿ.ಎ.ಓ) ಮಾದರಿಗೆ ಅನುಗುಣವಾಗಿದೆ. ಪ್ರಸ್ತುತ ಈ ಎರಡೂ ರಾಷ್ಟ್ರಗಳ ನಡುವೆ ಯಾವುದೇ ವಾಯು ಸೇವೆ ಒಪ್ಪಂದ ಇರುವುದಿಲ್ಲ. ಎ.ಎಸ್.ಎ. ಎರಡೂ ದೇಶಗಳ ಯಾವುದೇ ವಾಯು ಸೇವಾ ಕಾರ್ಯಾಚರಣೆದಾರರಿಗೆ ಮೂಲ ಕಾನೂನು ಚೌಕಟ್ಟಾಗಿದೆ.
ಈ ಎರಡು ರಾಷ್ಟ್ರಗಳ ನಡುವೆ ವಾಯು ಸಂಪರ್ಕ ಸ್ಥಾಪಿಸಲು ಈ ಒಪ್ಪಂದವು ನೆರವಾಗಲಿದೆ.
ವಾಯು ಸೇವೆಗಳ ಒಪ್ಪಂದದ ಮುಖ್ಯಾಂಶಗಳು ಈ ಕೆಳಗಿನಂತಿವೆ:
i. ಎರಡೂ ದೇಶಗಳು ಒಂದು ಅಥವಾ ಅದಕ್ಕಿಂತ ಹೆಚ್ಚು ಏರ್ ಲೈನ್ಸ್ ಗಳನ್ನು ನಿಯುಕ್ತಿಗೊಳಿಸಲು ಅರ್ಹವಾಗಿರುತ್ತವೆ.
iii. ಎರಡೂ ದೇಶಗಳ ನಿಯೋಜಿತ ವಿಮಾನಯಾನ ಸಂಸ್ಥೆಗಳು ಮತ್ತೊಂದು ರಾಷ್ಟ್ರದ ಎಲ್ಲೆಯಲ್ಲಿ ತಮ್ಮ ಕಚೇರಿ ಸ್ಥಾಪಿಸಿ ತಮ್ಮ ವಾಯುಯಾನ ಸೇವೆಯ ಮಾರಾಟ ಮತ್ತು ಪ್ರಚಾರ ಮಾಡಬಹುದಾಗಿದೆ.
ಭಾರತ ಮತ್ತು ಜಾರ್ಜಿಯಾ ನಡುವಿನ ವಾಯು ಯಾನ ಒಪ್ಪಂದವು ನಾಗರಿಕ ವಿಮಾನಯಾನ ವಲಯದ ಅಭಿವೃದ್ಧಿಯೊಂದಿಗೆ ಎರಡೂ ರಾಷ್ಟ್ರಗಳ ನಡುವೆ ಹೆಚ್ಚಿನ ವಾಣಿಜ್ಯ, ಹೂಡಿಕೆ, ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ವಿನಿಮಯದ ಸಾಮರ್ಥ್ಯ ಬಳಕೆಗೆ ಅವಕಾಶ ನೀಡುತ್ತದೆ. ಇದು ಹೆಚ್ಚಿನ ಮತ್ತು ತಡೆಹರಿತ ಸಂಪರ್ಕಕ್ಕೆ ಅವಕಾಶ ನೀಡುವುದರ ಜೊತೆಗೆ, ಎರಡೂ ರಾಷ್ಟ್ರಗಳ ವಾಯುಯಾನ ಸಂಸ್ಥೆಗಳಿಗೆ ಸುರಕ್ಷತೆ ಮತ್ತು ಭದ್ರತೆಯ ಖಾತ್ರಿಯೊಂದಿಗೆ ವಾಣಿಜ್ಯ ಅವಕಾಶಗಳನ್ನೂ ಒದಗಿಸುತ್ತದೆ.
******
AKT/VBA/SH