Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭಾರತ ಮತ್ತು ಜರ್ಮನಿ ನಡುವಿನ ಎಂ.ಓ.ಯು.ಗೆ. ಸಂಪುಟ ಸಮ್ಮತಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಗೆ ಜರ್ಮನಿಯ ತಂತ್ರಜ್ಞಾನ ವರ್ಗಾವಣೆಯ ಸ್ಟೈನ್ಬಿಯಸ್ ಜಿಎಂಬಿಎಚ್ ಕೋ. ಕೆಜಿಯೊಂದಿಗೆ ಬಂಡವಾಳ ಸರಕುಗಳ ಉಪ ವಲಯವೂ ಸೇರಿದಂತೆ ಉತ್ಪಾದನೆಯಲ್ಲಿ ತಂತ್ರಜ್ಞಾನ ಸಂಪನ್ಮೂಲ ಕುರಿತಂತೆ ತಿಳಿವಳಿಕೆ ಒಪ್ಪಂದಕ್ಕೆ ಅಂಕಿತ ಹಾಕಿರುವ ಬಗ್ಗೆ ವಿವರಿಸಲಾಯಿತು.

ಜರ್ಮನಿಯ ಹನ್ನೋವರ್ ನಲ್ಲಿ ನಡೆದ ಕೈಗಾರಿಕಾ ವಸ್ತುಪ್ರದರ್ಶನ ಹನ್ನೋವರ್ ಮೆಸ್ಸೇ 2016ರ ವೇಳೆ ಈ ಎಂ.ಓ.ಯು.ಗೆ. 2016ರ ಏಪ್ರಿಲ್ 25ರಂದು ಅಂಕಿತ ಹಾಕಲಾಗಿತ್ತು. ಸ್ಟೈನ್ಬಿಯಸ್ ಜಿಎಂಬಿಎಚ್ ಯುರೋಪ್ ನಲ್ಲಿ ಒಂದು ಪ್ರಮುಖ ಆನ್ವಯಿಕ ಕೈಗಾರಿಕಾ ಸಂಶೋಧನೆ ಸಂಸ್ಥೆಯಾಗಿದೆ. ಉತ್ಪಾದನೆಯಲ್ಲಿ ಗುರುತಿಸಲಾದ ಯೋಜನೆಗಳ ಅನುಷ್ಠಾನಕ್ಕಾಗಿ ಇದು ತಂತ್ರಜ್ಞಾನ ಸಂಪನ್ಮೂಲ ಪಾಲುದಾರನಂತೆ ವರ್ತಿಸುತ್ತದೆ. ತಿಳಿವಳಿಕೆ ಒಪ್ಪಂದದಲ್ಲಿ ಅಡಕವಾಗಿರುವ ಸಹಕಾರ ಕ್ಷೇತ್ರಗಳು ಇಂತಿವೆ:

a) ನಿರ್ದಿಷ್ಟ ತಂತ್ರಜ್ಞಾನದ ವಿವರಣೆ;

b) ನಿರ್ದಿಷ್ಟ ಬಂಡವಾಳ ಸರಕುಗಳ ಉಪ ವಲಯಕ್ಕಾಗಿ ತಂತ್ರಜ್ಞಾನದ ಮಾರ್ಗಸೂಚಿ,

c) ಬಂಡವಾಳ ಸರಕುಗಳ ಕ್ಲಸ್ಟರ್ ಗೆ ತಂತ್ರಜ್ಞಾನದ ನಿರ್ಧರಣೆ;

d) ತಂತ್ರಜ್ಞಾನದ ಕಾರ್ಯಕ್ರಮಗಳ ಸಹಕಾರ ಮತ್ತು

e) ಭಾರತದಲ್ಲಿ ಹಾಲಿ ಇರುವ ತಂತ್ರಜ್ಞಾನ ಸಂಸ್ಥೆಗಳನ್ನು ಮೇಲ್ದರ್ಜೆಗೇರಿಸುವುದು/ ಹಸಿರು ವಲಯ ಸಂಸ್ಥೆ ಸ್ಥಾಪಿಸುವುದು ಮತ್ತು ಇತರ ತಂತ್ರಜ್ಞಾನ ಸಂಬಂಧಿತ ಸಹಕಾರ ಮತ್ತು ಸಹಯೋಗ.

ಈ ತಿಳಿವಳಿಕೆ ಒಪ್ಪಂದವು ಭಾರತದ ಬಂಡವಾಳ ಸರಕು ವಲಯದ ಕೈಗಾರಿಕಾ ತಂತ್ರಜ್ಞಾನ ಯೋಜನೆಗಳಿಗೆ ಚೌಕಟ್ಟು ಒದಗಿಸುವ ಸಾಧನವಾಗಿದೆ. ಈ ಎಂಓಯು ವಿವಿಧ ಸಾರ್ವಜನಿಕ ವಲಯದ ಉದ್ದಿಮೆಗಳಿಗೆ ವೇದಿಕೆ ಒದಗಿಸುತ್ತದೆ ಮತ್ತು ಬಂಡವಾಳ ಸರಕು ವಲಯದ ಘಟಕಗಳಿಗೆ ಗುರುತಿಸಲು ಮತ್ತು ತಂತ್ರಜ್ಞಾನದ ಕಂದಕ ಮುಚ್ಚಲು ಸ್ಟೈನ್ಬಿಯಾಸ್ ಜಿಎಂಬಿಎಚ್ ನ ಸಾಮರ್ಥ್ಯ ಮತ್ತು ತಜ್ಞತೆ ದೊರಕುವಂತೆ ಮಾಡುತ್ತದೆ.

***

AKT/VBA/SH/SK