ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯು ಭಾರತ ಮತ್ತು ಗಾಂಬಿಯಾ ನಡುವೆ ಸಾಂಪ್ರದಾಯಿಕ ವೈದ್ಯ ಪದ್ಧತಿಗಳಲ್ಲಿ ಸಹಕಾರಕ್ಕಾಗಿ ಏರ್ಪಟ್ಟ ತಿಳುವಳಿಕಾ ಒಡಂಬಡಿಕೆಗೆ (ಎಂ.ಒ.ಯು.) ಪೂರ್ವಾನ್ವಯಗೊಂಡಂತೆ ತನ್ನ ಅಂಗೀಕಾರ ನೀಡಿತು. ಈ ತಿಳುವಳಿಕಾ ಒಡಂಬಡಿಕೆಗೆ 2019 ರ ಜುಲೈ 31 ರಂದು ಗಾಂಬಿಯಾದಲ್ಲಿ ರಾಷ್ಟ್ರಪತಿ ಶ್ರೀ ರಾಮ್ ನಾಥ ಕೋವಿಂದ್ ಅವರ ಭೇಟಿಯ ಸಂದರ್ಭದಲ್ಲಿ ಅಂಕಿತ ಹಾಕಲಾಗಿತ್ತು.
ಈ ತಿಳುವಳಿಕಾ ಒಡಂಬಡಿಕೆಯು ಭಾರತ ಮತ್ತು ಗಾಂಬಿಯಾ ನಡುವೆ ಸಾಂಪ್ರದಾಯಿಕ ವೈದ್ಯ ಪದ್ಧತಿಗಳ ಉತ್ತೇಜನಕ್ಕಾಗಿ ಸಹಕಾರದ ಚೌಕಟ್ಟು ಒದಗಿಸಲಿದೆ ಮತ್ತು ಈ ಕ್ಷೇತ್ರದಲ್ಲಿ ಎರಡೂ ದೇಶಗಳಿಗೆ ಪರಸ್ಪರ ಲಾಭದಾಯಕವಾಗಲಿದೆ. ಎಂ.ಒ.ಯು.ದಲ್ಲಿ ಉಲ್ಲೇಖಿಸಲಾದ ಕಾರ್ಯ ಚಟುವಟಿಕೆಗಳು ಗಾಂಬಿಯಾದಲ್ಲಿ ಆಯುಷ್ ವ್ಯವಸ್ಥೆಗಳ ಮಹತ್ವಕ್ಕೆ ಹೆಚ್ಚಿನ ಮಹತ್ವ ದೊರಕಿಸಿಕೊಡಲಿವೆ.
ಎಂ.ಒ.ಯು. ಪರಿಣಾಮವಾಗಿ ವೃತ್ತಿನಿರತರಿಗೆ ತರಬೇತಿ ನೀಡಲು ತಜ್ಞರ ವಿನಿಮಯ ಮತ್ತು ಸಾಂಪ್ರದಾಯಿಕ ವೈದ್ಯ ಪದ್ಧತಿಗಳಲ್ಲಿ ಸಹಯೋಗದಲ್ಲಿ ಸಂಶೋಧನೆ ಕೈಗೊಳ್ಳಲು ವಿಜ್ಞಾನಿಗಳಿಗೆ ಅವಕಾಶ ಒದಗಲಿದೆ. ಇದರಿಂದ ಔಷಧಿ ಅಭಿವೃದ್ಧಿ ಮತ್ತು ಸಾಂಪ್ರದಾಯಿಕ ವೈದ್ಯ ಪದ್ಧತಿಯಲ್ಲಿ ಹೊಸ ಅನ್ವೇಷಣೆಗಳು ಸಾಧ್ಯವಾಗಲಿವೆ.