Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭಾರತ ಮತ್ತು ಇಟಲಿ ಗಣರಾಜ್ಯದ ನಡುವೆ ವಿಪತ್ತಿನ ಅಪಾಯ ತಗ್ಗಿಸುವ ಮತ್ತು ನಿರ್ವಹಣೆ ಮಾಡುವ ಕ್ಷೇತ್ರದಲ್ಲಿನ ಸಹಕಾರದ ಕುರಿತ ತಿಳಿವಳಿಕೆ ಒಪ್ಪಂದಕ್ಕೆ (ಎಂಒಯು) ಸಂಪುಟದ ಅನುಮೋದನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಗೆ ಭಾರತ ಗಣರಾಜ್ಯದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್.ಡಿ.ಎಂ.) ಮತ್ತು ಇಟಲಿ ಗಣರಾಜ್ಯದ  ಸಚಿವರುಗಳ ಮಂಡಳಿಯ ಅಧ್ಯಕ್ಷತೆಯ ನಾಗರಿಕ ರಕ್ಷಣೆಯ ಇಲಾಖೆ ನಡುವೆ ವಿಪತ್ತಿನ ಅಪಾಯ ತಗ್ಗಿಸುವ ಮತ್ತು ನಿರ್ವಹಣೆ ಮಾಡುವ ಕ್ಷೇತ್ರದಲ್ಲಿನ ಸಹಕಾರದ ಕುರಿತ ತಿಳಿವಳಿಕೆ ಒಪ್ಪಂದ (ಎಂಒಯು) ಕುರಿತು ವಿವರಿಸಲಾಯಿತು.

ಪ್ರಯೋಜನಗಳು:

ಭಾರತ ಗಣರಾಜ್ಯದ ಎನ್.ಡಿ.ಎಂ. ಮತ್ತು ಇಟಲಿ ಗಣರಾಜ್ಯದ ಸಚಿವರುಗಳ ಮಂಡಳಿಯ ಅಧ್ಯಕ್ಷತೆಯ ನಾಗರಿಕ ರಕ್ಷಣೆಯ ಇಲಾಖೆ ನಡುವೆ ವಿಪತ್ತಿನ ಅಪಾಯ ತಗ್ಗಿಸುವ ಮತ್ತು ನಿರ್ವಹಣೆಯ ಕ್ಷೇತ್ರದಲ್ಲಿನ ಸಹಕಾರ ಕುರಿತ ತಿಳಿವಳಿಕೆ ಒಪ್ಪಂದಕ್ಕೆ ಅಂಕಿತ ಹಾಕಲಾಗಿದೆ.

ತಿಳಿವಳಿಕೆ ಒಪ್ಪಂದವು ವ್ಯವಸ್ಥೆಯನ್ನು ಜಾರಿಗೆ ತರಲು ಪ್ರಯತ್ನಿಸುತ್ತದೆ, ಮೂಲಕ ಭಾರತ ಮತ್ತು ಇಟಲಿ ಎರಡೂ ವಿಪತ್ತು ನಿರ್ವಹಣಾ ಕಾರ್ಯವಿಧಾನಗಳಿಂದ ಪ್ರಯೋಜನ ಪಡೆಯುತ್ತವೆ ಮತ್ತು ಇದು ವಿಪತ್ತು ನಿರ್ವಹಣಾ ಕ್ಷೇತ್ರದಲ್ಲಿನ ಸನ್ನದ್ಧತೆ, ಸ್ಪಂದನೆ ಮತ್ತು ಸಾಮರ್ಥ್ಯ ವರ್ಧನೆ ಕ್ಷೇತ್ರ ಬಲಪಡಿಸಲು ವ್ಯವಸ್ಥೆಯನ್ನು ಸ್ಥಾಪಿಸುವುದಕ್ಕೆ ಸಹಾಯ ಮಾಡುತ್ತದೆ.

ಭಾರತ ಗಣರಾಜ್ಯದ ಎನ್.ಡಿ.ಎಂ. ಮತ್ತು ಇಟಲಿ ಗಣರಾಜ್ಯದ ಸಚಿವರುಗಳ ಮಂಡಳಿಯ ಅಧ್ಯಕ್ಷತೆಯ ನಾಗರಿಕ ರಕ್ಷಣೆಯ ಇಲಾಖೆ ನಡುವೆ ವಿಪತ್ತಿನ ಅಪಾಯ ತಗ್ಗಿಸುವ ಮತ್ತು ನಿರ್ವಹಣೆಯ ಕ್ಷೇತ್ರದಲ್ಲಿನ ಸಹಕಾರ ಕುರಿತ ತಿಳಿವಳಿಕೆ ಒಪ್ಪಂದಕ್ಕೆ 2021 ಜೂನ್ ನಲ್ಲಿ ಅಂಕಿತ ಹಾಕಲಾಗಿತ್ತು.

***