Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭಾರತ ಮತ್ತು ಅಪಘಾನಿಸ್ತಾನ ನಡುವೆ ಆಹಾರ ಸುರಕ್ಷೆ ಮತ್ತು ಆ ಸಂಬಂಧಿ ಕ್ಷೇತ್ರಗಳಲ್ಲಿ ಸಹಕಾರಕ್ಕಾಗಿನ ಸಹಕಾರ ವ್ಯವಸ್ಥೆಗೆ ಸಂಪುಟದ ಅನುಮೋದನೆ.


ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯದ( ಎಂ.ಒ.ಎಚ್. ಮತ್ತು ಎಫ್.ಡಬ್ಲ್ಯು ) ಭಾರತೀಯ ಆಹಾರ ಸುರಕ್ಷೆ ಮತ್ತು ಗುಣಮಟ್ಟ ಪ್ರಾಧಿಕಾರದ (ಎಫ್.ಎಸ್.ಎಸ್.ಎ.ಐ.) ಜತೆ ಮತ್ತು ಅಪಘಾನಿಸ್ತಾನದ ಕೃಷಿ, ನೀರಾವರಿ ಮತ್ತು ಪಶು ಮಂತ್ರಾಲಯ (ಎಂ.ಎ.ಐ.ಎಲ್.)ದ ನಡುವೆ ಆಹಾರ ಸುರಕ್ಷೆ ಮತ್ತು ಆ ಸಂಬಂಧಿ ಕ್ಷೇತ್ರಗಳಲ್ಲಿ ಸಹಕಾರಕ್ಕೆ ಸಂಬಂಧಿಸಿ ಅಂಕಿತ ಹಾಕಲಾದ ಸಹಕಾರ ವ್ಯವಸ್ಥೆಗೆ ತನ್ನ ಅನುಮೋದನೆ ನೀಡಿತು.

ಸಹಕಾರದ ಕ್ಷೇತ್ರಗಳಲ್ಲಿ ಈ ಕೆಳಗಿನ ಅಂಶಗಳು ಸೇರಿವೆ:

1.) ಮಾಹಿತಿ ವಿನಿಮಯ ಮತ್ತು ಸಂಪರ್ಕಕ್ಕಾಗಿ ವ್ಯವಸ್ಥೆಯೊಂದನ್ನು ರೂಪಿಸುವುದು.

2.) ವಿಶೇಷವಾಗಿ ಆಮದು ಪ್ರಕ್ರಿಯೆಗಳು, ಗುಣಮಟ್ಟ ನಿಯಂತ್ರಣ ಕಾರ್ಯಾಚರಣೆಗಳು, ಮಾದರಿಗಳು, ಪರೀಕ್ಷೆ, ಪ್ಯಾಕೇಜಿಂಗ್ ಮತ್ತು ಲೇಬಲಿಂಗ್ ಸೇರಿದಂತೆ ಪರಸ್ಪರ ಗುರುತಿಸಲ್ಪಟ್ಟ ಹಿತಾಸಕ್ತಿಯ ವಿಷಯಗಳಲ್ಲಿ ತಾಂತ್ರಿಕ ವಿನಿಮಯಕ್ಕೆ ಅನುವು ಮಾಡಿಕೊಡುವುದು

3.) ಜಂಟಿ ವಿಚಾರ ಸಂಕಿರಣಗಳು, ಕಾರ್ಯಾಗಾರಗಳು, ಭೇಟಿಗಳು, ಉಪನ್ಯಾಸಗಳು, ತರಬೇತಿ ಕಾರ್ಯಕ್ರಮಗಳ ಸಂಯೋಜನೆ ಇತ್ಯಾದಿಗಳಿಗೆ ಅನುವು ಮಾಡಿಕೊಡುವುದು.

4.) ಸಹಭಾಗಿಗಳ ಆಸಕ್ತಿಗೆ ಅನ್ವಯಿಸಿ ಅವರ ಜವಾಬ್ದಾರಿಯೊಳಗೆ ಪರಸ್ಪರ ನಿರ್ಧರಿಸಲ್ಪಟ್ಟ ಇತರ ಆಸಕ್ತಿಯ ಕ್ಷೇತ್ರಗಳು
ಈ ಸಹಕಾರ ವ್ಯವಸ್ಥೆ ಮಾಹಿತಿ ಹಂಚಿಕೊಳ್ಳುವ ತರಬೇತಿ ಮತ್ತು ಸಾಮರ್ಥ್ಯ ವರ್ಧನೆ ಕ್ರಮಗಳು ಹಾಗು ಆಹಾರ ಸುರಕ್ಷಾ ಪರಿಸರ ವ್ಯವಸ್ಥೆಯ ಸುಧಾರಣೆಗೆ ಉತ್ತಮ ಪದ್ದತಿಗಳನ್ನು ಪರಸ್ಪರ ಕಲಿತುಕೊಳ್ಳುವುದಕ್ಕೆ ಅನುಕೂಲ ಒದಗಿಸಲಿದೆ.