ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತ ಮತ್ತು ಅಂತಾರಾಷ್ಟ್ರೀಯ ಸೌರ ಸಹಯೋಗ (ಐ.ಎಸ್.ಎ.) ಕೇಂದ್ರ ಕಚೇರಿ (ಆತಿಥೇಯ ರಾಷ್ಟ್ರ) ಒಪ್ಪಂದ ಮಾಡಿಕೊಳ್ಳಲು ಮತ್ತು ಕೇಂದ್ರ ಕಚೇರಿ ಒಪ್ಪಂದಕ್ಕೆ ಅಂಕಿತ ಹಾಕಲು ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಅಧಿಕಾರ ನೀಡುವುದಕ್ಕೆ ತನ್ನ ಪೂರ್ವಾನ್ವಯ ಅನುಮೋದನೆ ನೀಡಿದೆ. ಈ ಒಪ್ಪಂದಕ್ಕೆ 2018ರ ಮಾರ್ಚ್ 26ರಂದು ಅಂಕಿತ ಹಾಕಲಾಗಿತ್ತು.
ಕೇಂದ್ರ ಕಚೇರಿ ಒಪ್ಪಂದವು ಭಾರತ ಮತ್ತು ಐ.ಎಸ್.ಎ. ನಡುವಿನ ಕ್ರಿಯಾತ್ಮಕ ಒಪ್ಪಂದಗಳನ್ನು ಸಾಂಸ್ಥೀಕರಿಸುತ್ತದೆ. ಇದು ಐ.ಎಸ್.ಎ. ಅಂತಾರಾಷ್ಟ್ರೀಯ ಅಂತರ ಸರ್ಕಾರೀಯ ಸಂಸ್ಥೆಯಾಗಿ ಸುಗಮವಾಗಿ ಕಾರ್ಯನಿರ್ವಹಿಸಲು ನೆರವಾಗುತ್ತದೆ. ಐ.ಎಸ್.ಎ. ರಚನೆಯು ಭಾರತ ಸೇರಿದಂತೆ ಐ.ಎಸ್.ಎ. ಸದಸ್ಯ ರಾಷ್ಟ್ರಗಳಲ್ಲಿನ ಸೌರ ತಂತ್ರಜ್ಞಾನ ಅಭಿವೃದ್ಧಿ ಮತ್ತು ನಿಯೋಜನೆಯನ್ನು ತ್ವರಿತಗೊಳಿಸುತ್ತದೆ.
*****
AKT/VBA/SH