ನವದೆಹಲಿಯ ಪ್ರಗತಿ ಮೈದಾನದ ಭಾರತ್ ಮಂಟಪದಲ್ಲಿ ನಡೆದ ಭಾರತ ಅಧ್ಯಕ್ಷತೆಯ ಜಿ-20 ಸಮನ್ವಯ ಸಮಿತಿಯ 7ನೇ ಸಭೆಯ ಅಧ್ಯಕ್ಷತೆಯನ್ನು ಪ್ರಧಾನಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಡಾ. ಪಿ.ಕೆ. ಮಿಶ್ರಾ ಅವರು ವಹಿಸಿದ್ದರು. ಶೃಂಗ ಸಭೆಯ ಸನ್ನದ್ಧತೆ ಮತ್ತು ಸಾರಿಗೆ ವ್ಯವಸ್ಥೆ ಕಲ್ಪಿಸುವ ಕುರಿತು ಪರಿಶೀಲನೆ ನಡೆಸಲಾಗಿದೆ. ಶೆರ್ಪಾ ಮತ್ತು ಹಣಕಾಸು ಒದಗಿಸುವ ಹಾಗೂ ಫಲಿತಾಂಶಗಳನ್ನು ಸಹ ಪರಿಶೀಲಿಸಲಾಗಿದೆ.
ಶೆರ್ಪಾ [ಜಿ20] ಕುರಿತು ಕಾರ್ಯದರ್ಶಿ [ಆರ್ಥಿಕ ವ್ಯವಹಾರಗಳು] ಮತ್ತು ಕಾರ್ಯದರ್ಶಿ [ಮಾಹಿತಿ ಮತ್ತು ಪ್ರಸಾರ] ಗಳು ಪ್ರಾತ್ಯಕ್ಷಿಕೆ ನೀಡಿದರು. ಭಾರತದ ಅಧ್ಯಕ್ಷತೆಯಲ್ಲಿ ಆದ್ಯತಾ ವಲಯಗಳಾದ ಹಸಿರು ಅಭಿವೃದ್ಧಿ, ಸುಸ್ಥಿರ ಅಭಿವೃದ್ಧಿ ಗುರಿಯನ್ನು [ಎಸ್.ಡಿ.ಜಿಗಳು] ತ್ವರಿತಗೊಳಿಸುವ, ಬಲಿಷ್ಠ ಸುಸ್ಥಿರ ಸಮತೋಲನ ಹಾಗೂ ಎಲ್ಲವನ್ನೊಳಗೊಂಡ ಅಭಿವೃದ್ಧಿ, ಸಾರ್ವಜನಿಕ ಡಿಜಿಟಲ್ ಮೂಲ ಸೌಕರ್ಯ, ಲಿಂಗ ಸಮಾನತೆ ಹಾಗೂ ಬಹು ಸಂಸ್ಥೆಗಳ ಸುಧಾರಣೆಗಳ ಕುರಿತು ಚರ್ಚಿಸಲಾಯಿತು.
ಶೆರ್ಪಾ[ಜಿ20] ಅವರು ಮಾಹಿತಿ ನೀಡಿ ಈ ವರೆಗೆ ಒಟ್ಟು 185 ಸಭೆಗಳನ್ನು ನಡೆಸಿದ್ದು, ಈ ಪೈಕಿ 13 ಸಚಿವ ಮಟ್ಟದ ಸಭೆಗಳು ನಡೆದಿವೆ. ಬಹುತೇಕ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಭೆಗಳನ್ನು ಆಯೋಜಿಸಲಾಗಿದೆ. 12 ಫಲಿತಾಂಶ ಆಧಾರಿತ ದಾಖಲೆಗಳಲ್ಲದೇ ಒಮ್ಮತದೊಂದಿಗೆ 12 ಇತರೆ ವಿಷಯಗಳನ್ನು ಅಳವಡಿಸಿಕೊಳ್ಳಲಾಗಿದೆ ಎಂದು ಹೇಳಿದರು.
ಕಾರ್ಯದರ್ಶಿ [ಡಿಇಎ] ಅವರು ಮಾಹಿತಿ ನೀಡಿ, ಕ್ರಿಪ್ಟೋ ಆಸ್ತಿ ಕಾರ್ಯಸೂಚಿ, ಹಣಕಾಸು ಒಳಗೊಳ್ಳುವ, ಹವಾಮಾನ ಬದಲಾವಣೆಗಾಗಿ ಹಣ ಕ್ರೋಢೀಕರಣ ಹಾಗೂ ಎಸ್.ಡಿ.ಜಿಗಳಿಗೆ ಹಣ ಒದಗಿಸುವ ನಿಟ್ಟಿನಲ್ಲಿ ಹಣಕಾಸು ಜಾಡು ಪತ್ತೆ ಹಚ್ಚುವ ವಲಯದಲ್ಲಿ ಗಣನೀಯವಾಗಿ ಸುಧಾರಣೆಯಾಗಿದೆ ಎಂದರು.
ಮಾಧ್ಯಮಗಳಿಗೆ ಕಾರ್ಯದರ್ಶಿ [ಮಾಹಿತಿ ಮತ್ತು ಪ್ರಚಾರ] ಅವರು ಮಾಧ್ಯಮ ಕೇಂದ್ರ ಮತ್ತು ಮಾಧ್ಯಮ ಮಾನ್ಯತೆ ಕುರಿತಾದ ಸಿದ್ಧತೆಗಳ ಬಗ್ಗೆ ಮಾಹಿತಿ ನೀಡಿದರು. ಶೃಂಗ ಸಭೆಗೆ ಈ ವರೆಗೆ 3200 ಮಾಧ್ಯಮ ಪ್ರತಿನಿಧಿಗಳು ನೋಂದಣಿಯಾಗಿದ್ದು, 1800 ಮಂದಿ ವಿದೇಶಿ ಮತ್ತು 1200 ದೇಶೀಯ ಮಾಧ್ಯಮ ಪ್ರತಿನಿಧಿಗಳು ಸೇರಿದ್ದಾರೆ. ವಿದೇಶಿ ಅಷ್ಟೇ ಅಲ್ಲದೇ ದೇಶೀಯ ಪತ್ರಕರ್ತರಿಗೂ ಸಹ ಸೂಕ್ತ ಸಿದ್ಧತೆಗಳನ್ನು ಮಾಡಲಾಗಿದೆ ಎಂದರು.
ಪ್ರಧಾನ ಕಾರ್ಯದರ್ಶಿ ಅವರು ಭದ್ರತೆ ಮತ್ತು ಸಾರಿಗೆ ವ್ಯವಸ್ಥೆಗಳ ಕುರಿತು ಪ್ರಗತಿ ಪರಿಶೀಲನೆ ಮಾಡಿದರು. ಶೃಂಗ ಸಭೆಯಲ್ಲಿ ಪಾಲ್ಗೊಳ್ಳುತ್ತಿರುವ ವಿದೇಶಿ ಪ್ರತಿನಿಧಿಗಳಿಗೆ ಆತಿಥ್ಯ, ಸಂಚಾರಿ ವ್ಯವಸ್ಥೆಯ ನಿರ್ವಹಣೆ, ವಿಮಾನ ನಿಲ್ದಾಣ ಮತ್ತು ಭದ್ರತಾ ವ್ಯವಸ್ಥೆಯಲ್ಲಿನ ಸಿದ್ಧತೆ, ನಾಯಕತ್ವ ಶೃಂಗ ಸಭೆಗಾಗಿ ದೆಹಲಿ ಎನ್.ಸಿ.ಆರ್ ನಲ್ಲಿ ಸೌಂದರ್ಯೀಕರಣಗೊಳಿಸುವ ಕುರಿತು ದೆಹಲಿ ಸರ್ಕಾರ, ಭದ್ರತಾ ಅಧಿಕಾರಿಗಳು, ಆಯುಕ್ತರು [ದೆಹಲಿ ಪೊಲೀಸ್] ಸಭೆಗೆ ಮಾಹಿತಿ ನೀಡಿದರು. ಮುಂದಿನ ತಿಂಗಳು ಜಿ-20 ನಾಯಕತ್ವ ಸಭೆಯನ್ನು ಆಯೋಜಿಸುತ್ತಿರುವ ಹಿನ್ನೆಲೆಯಲ್ಲಿ ಸಕಾರಾತ್ಮಕ ಪ್ರಗತಿ ಸಾಧನೆ ಬಗ್ಗೆ ಪರಿಶೀಲನೆ ಮಾಡಿದರು. ಈ ಸಭೆಗೆ ಮುಂದಿನ ಕೆಲ ದಿನಗಳಲ್ಲಿ ಎಲ್ಲಾ ಸಿದ್ಧತೆಗಳು ಪೂರ್ಣಗೊಳ್ಳಬೇಕು ಮತ್ತು ತಾಲೀಮು ಚಟುವಟಿಕೆ ಆರಂಭವಾಗಬೇಕು ಎಂದು ಹೇಳಿದರು.
ಈ ಸಭೆಗೆ ಸಕಾಲಿಕ ಮತ್ತು ಸಾಕಷ್ಟು ಸಿದ್ಧತೆಗಳನ್ನು ಖಾತ್ರಿಪಡಿಸಿಕೊಳ್ಳುವಲ್ಲಿ ಸರ್ಕಾರದ ಸಂಪೂರ್ಣ ವಿಧಾನ ಮತ್ತು ಕ್ರಮದ ನಿರಂತರ ಪ್ರಾಮುಖ್ಯತೆಯನ್ನು ಶ್ರೀ ಮಿಶ್ರಾ ಅವರು ಒತ್ತಿ ಹೇಳಿದರು. ಶೃಂಗ ಸಭೆಗೆ ಒಂದು ತಿಂಗಳು ಬಾಕಿ ಉಳಿದಿದ್ದು, ಇದು ನಿಖರವಾಗಿ ಕೊನೆಯ ಹಂತದ ವಿತರಣೆಗೆ ಸಮಯವಾಗಿದೆ ಎಂದು ಹೇಳಿದರು. ಶೃಂಗಸಭೆಯನ್ನು ಸುಗಮವಾಗಿ ನಡೆಸುವ ಕುರಿತು ವಿಸ್ತೃತ ಎಸ್.ಒ.ಪಿಯನ್ನು ಅಭಿವೃದ್ಧಿಪಡಿಸಲಾಗುವುದು ಮತ್ತು ಅಧಿಕಾರಿಗಳಿಗೆ ನಿರ್ದಿಷ್ಟವಾಗಿ ಕರ್ತವ್ಯವನ್ನು ನಿಯೋಜಿಸಲಾಗುವುದು. ಪ್ರಧಾನಮಂತ್ರಿಯವರ ಮಾರ್ಗದರ್ಶನದಲ್ಲಿ ದೇಶದ ಎಲ್ಲಾ ಯುವ ಅಧಿಕಾರಿಗಳು ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ ಮತ್ತು ಶೃಂಗ ಸಭೆ ಆಯೋಜನೆ ಕುರಿತು ಇವರೆಲ್ಲರೂ ಕಲಿಯಬೇಕಾಗಿದೆ ಎಂದು ಹೇಳಿದರು.
ದೆಹಲಿಯ ಉಪ ರಾಜ್ಯಪಾಲರು, ಸಂಪುಟ ಕಾರ್ಯದರ್ಶಿ ಮತ್ತು ಸಂಬಂಧಪಟ್ಟ ಸಚಿವಾಲಯಗಳು/ಇಲಾಖೆಗಳ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
****