ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಭಾರತ ಭೂತಾನ್ ಉಪಗ್ರಹವು ಭೂತಾನ್ ಜನರೊಂದಿಗಿನ ನಮ್ಮ ವಿಶೇಷ ಸಂಬಂಧಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ. ಜಂಟಿಯಾಗಿ ಅಭಿವೃದ್ಧಿಪಡಿಸಿದ ಈ ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ ಬಗ್ಗೆ ಭೂತಾನಿನ ಮಾಹಿತಿ ತಂತ್ರಜ್ಞಾನ ಮತ್ತು ದೂರಸಂಪರ್ಕ ಇಲಾಖೆ (ಡಿಐಟಿಟಿ) ಮತ್ತು ಭಾರತದ ಇಸ್ರೋವನ್ನು ಶ್ರೀ ಮೋದಿಯವರು ಶ್ಲಾಘಿಸಿದ್ದಾರೆ.
ಭಾರತ-ಭೂತಾನ್ ಎಸ್ ಎ ಟಿ ಯಶಸ್ವಿ ಉಡಾವಣೆ ಕುರಿತು ಭೂತಾನಿನ ರಾಜರ ಸಂದೇಶವನ್ನು ಭೂತಾನ್‌ನ ಪ್ರಧಾನಿ ಪ್ರಸ್ತುತ ಪಡಿಸಿ ಮಾಡಿದ ಟ್ವೀಟ್‌ಗೆ ಪ್ರತಿಕ್ರಿಯೆಯಾಗಿ, ಪ್ರಧಾನಮಂತ್ರಿಯವರು ಹೀಗೆ ಹೇಳಿದರು;
“ಭಾರತ ಭೂತಾನ್ ಉಪಗ್ರಹವು ಭೂತಾನ್ ಜನರೊಂದಿಗಿನ ನಮ್ಮ ವಿಶೇಷ ಸಂಬಂಧಕ್ಕೆ ಸಾಕ್ಷಿಯಾಗಿದೆ. ಜಂಟಿಯಾಗಿ ಅಭಿವೃದ್ಧಿಪಡಿಸಿದ ಈ ಉಪಗ್ರಹದ ಯಶಸ್ವಿ ಉಡಾವಣೆಗಾಗಿ ನಾನು @dittbhutan ಮತ್ತು @isro ವನ್ನು ಶ್ಲಾಘಿಸುತ್ತೇನೆ.”
***
The launch of 3 satellites from Indian companies @PixxelSpace and @DhruvaSpace heralds the beginning of a new era, where Indian talent in space technology can be fully realized. Congratulations to all the companies and everyone involved in this launch.
— Narendra Modi (@narendramodi) November 26, 2022
India Bhutan Satellite is a testament to our special relationship with the people of Bhutan. I commend @dittbhutan and @isro on the successful launch of this jointly developed satellite. @PMBhutan https://t.co/bWbFgRVLkp
— Narendra Modi (@narendramodi) November 26, 2022