Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭಾರತ – ಬಾಂಗ್ಲಾದೇಶ ವರ್ಚುವಲ್ ಶೃಂಗಸಭೆಯಲ್ಲಿ ಪ್ರಧಾನಮಂತ್ರಿ ಅವರ ಪ್ರಾಸ್ತಾವಿಕ ನುಡಿ

ಭಾರತ – ಬಾಂಗ್ಲಾದೇಶ ವರ್ಚುವಲ್ ಶೃಂಗಸಭೆಯಲ್ಲಿ ಪ್ರಧಾನಮಂತ್ರಿ ಅವರ ಪ್ರಾಸ್ತಾವಿಕ ನುಡಿ


ಘನತೆವೆತ್ತ ಪ್ರಧಾನಮಂತ್ರಿ ಶೇಖ್ ಹಸೀನಾ ಜೀ ನಮಸ್ಕಾರ!

ವಿಜಯ ದಿವಸದಂದು ಅಭಿನಂದನೆಗಳು ಮತ್ತು ಪೂಶ್ ಪೂರ್ಬನ್ ಗೆ ಶುಭಾಶಯಗಳು.!

ಇಂದು ಇಡೀ ವಿಶ್ವ ವರ್ಚುವಲ್ ಶೃಂಗಸಭೆಗಳನ್ನು ಆಯೋಜಿಸುತ್ತಿದೆ. ಮಾಧ್ಯಮ ನಮಗೆ ಹೊಸದೇನೂ ಅಲ್ಲ. ನಾವು ಹಲವು ವರ್ಷಗಳಿಂದ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಂವಾದ ನಡೆಸುತ್ತಲೇ ಇದ್ದೇವೆ.

ಹಲವು ಬಾರಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನಾವು ಯೋಜನೆಗಳಿಗೆ ಚಾಲನೆ ನೀಡಿದ್ದೇವೆ ಮತ್ತು ಉದ್ಘಾಟಿಸಿದ್ದೇವೆ.

ಘನತೆವೆತ್ತರೇ,

ವಿಜಯ ದಿನದ ನಂತರ, ಇಂದು ನಮ್ಮ ಸಭೆ ಇನ್ನಷ್ಟು ವಿಶೇಷ ಮಹತ್ವ ಪಡೆದುಕೊಂಡಿದೆ.

ವಿಮೋಚನಾ ವಿರೋಧಿ ಪಡೆಗಳ ವಿರುದ್ಧ ಬಾಂಗ್ಲಾದೇಶದ ಐತಿಹಾಸಿಕ ವಿಜಯವನ್ನು ನಿಮ್ಮೊಂದಿಗೆ ವಿಜಯ ದಿನವಾಗಿ ಆಚರಿಸುವುದು ನಮಗೆ ಹೆಮ್ಮೆಯ ವಿಷಯವಾಗಿದೆ.

ಇಂದು, ಬಾಂಗ್ಲಾದೇಶವು ನಲವತ್ತೊಂಬತ್ತು ವರ್ಷಗಳ ಸ್ವಾತಂತ್ರ್ಯವನ್ನು ಆಚರಿಸುತ್ತಿರುವಾಗ, ತಮ್ಮ ಪ್ರಾಣ ತ್ಯಾಗ ಮಾಡಿದ ಎರಡೂ ದೇಶಗಳ ಹುತಾತ್ಮರಿಗೆ ನಾನು ಗೌರವ ಸಲ್ಲಿಸುತ್ತೇನೆ.

ವಿಜಯ ದಿನದ ಸಂದರ್ಭದಲ್ಲಿ, ನಿನ್ನೆ, ನಾನು ಭಾರತದ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಗೌರವ ನಮನ ಸಲ್ಲಿಸಿ ಸುವರ್ಣ ವಿಜಯ ಜ್ಯೋತಿಬೆಳಗಿಸಿದೆ.

ನಾಲ್ಕು ವಿಜಯ ಜ್ಯೋತಿಗಳುಭಾರತದಾದ್ಯಂತ ಸಂಚರಿಸಲಿದ್ದು, ನಮ್ಮ ಹುತಾತ್ಮ ಯೋಧರ ಎಲ್ಲ ಗ್ರಾಮಗಳಿಗೆ ತೆರಳಲಿದೆ..

ಡಿಸೆಂಬರ್ 16ರಿಂದ ನಾವು ಸುವರ್ಣ ವಿಜಯ ವರ್ಷವನ್ನು ಆಚರಿಸುತ್ತಿದ್ದು, ಸಂದರ್ಭದಲ್ಲಿ ಭಾರತದಾದ್ಯಂತ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.

ಘನತೆವೆತ್ತರೆ,

ನಾನು ಮುಜಿಬ್ ಬೋರ್ಷೋ ಸಂದರ್ಭದಲ್ಲಿ ಎಲ್ಲ ಭಾರತೀಯರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ.

ಮುಂದಿನ ವರ್ಷ ಬಾಂಗ್ಲಾದೇಶಕ್ಕೆ ಭೇಟಿ ನೀಡುವಂತೆ ನೀವು ನೀಡಿದ ಆಹ್ವಾನಕ್ಕೆ ಧನ್ಯವಾದಗಳು. ಬಂಗಬಂಧು ಅವರಿಗೆ ನಿಮ್ಮೊಂದಿಗೆ ಗೌರವ ನಮನ ಸಲ್ಲಿಸುವುದು ನನಗೆ ಹೆಮ್ಮೆಯ ವಿಷಯವಾಗಿದೆ

ಘನತೆವೆತ್ತರೇ,

ನೆರೆಹೊರೆ ಮೊದಲುಎಂಬ ನೀತಿಯಲ್ಲಿ ಬಾಂಗ್ಲಾದೇಶ ಪ್ರಮುಖ ಆಧಾರಸ್ತಂಭವಾಗಿದೆ. ಮೊದಲ ದಿನದಿಂದಲೂ ಬಾಂಗ್ಲಾದೇಶದೊಂದಿಗೆ ಬಾಂಧವ್ಯ ಅಭಿವೃದ್ಧಿ ಮತ್ತು ಬಾಂಧವ್ಯ ವರ್ಧನೆ ನನ್ನ ವಿಶೇಷ ಆದ್ಯತೆಯಾಗಿದೆ.

ವರ್ಷ ಜಾಗತಿಕ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಸವಾಲಿನ ವರ್ಷವಾಗಿದೆ ಎಂಬುದು ವಾಸ್ತವ.

ಆದರೆ ಕಷ್ಟದ ಸಮಯದಲ್ಲಿ ಭಾರತ ಮತ್ತು ಬಾಂಗ್ಲಾದೇಶ ಉತ್ತಮ ಸಹಕಾರವನ್ನು ನೀಡಿರುವುದು ಸಂತಸದ ಸಂಗತಿಯಾಗಿದೆ.

ಅದು ಔಷಧಗಳೇ ಆಗಿರಲಿ ಅಥವಾ ವೈದ್ಯಕೀಯ ಉಪಕರಣಗಳೇ ಆಗಿರಲಿ, ಅಥವಾ ಆರೋಗ್ಯ ವೃತ್ತಿಪರರೊಂದಿಗೆ ಕೆಲಸ ಮಾಡುವುದೇ ಆಗಿರಲಿ. ಲಸಿಕೆ ಕ್ಷೇತ್ರದಲ್ಲಿಯೂ ನಾವು ಉತ್ತಮ ಸಹಕಾರವನ್ನು ಹೊಂದಿದ್ದೇವೆ. ನಿಟ್ಟಿನಲ್ಲಿ ನಿಮ್ಮ ಅಗತ್ಯತೆಗಳ ಬಗ್ಗೆ ನಾವು ವಿಶೇಷ ಕಾಳಜಿ ವಹಿಸುತ್ತೇವೆ.

ನಾನು ಸಾರ್ಕ್ ಚೌಕಟ್ಟಿನ ಅಡಿಯಲ್ಲಿ ಬಾಂಗ್ಲಾದೇಶದ ಕೊಡುಗೆಗೆ ಧನ್ಯವಾದ ಅರ್ಪಿಸುತ್ತೇನೆ.

ಆರೋಗ್ಯದ ಹೊರತಾಗಿ, ವರ್ಷ ನಮ್ಮ ವಿಶೇಷ ಪಾಲುದಾರಿಕೆ ಇತರ ಎಲ್ಲ ಕ್ಷೇತ್ರದಲ್ಲೂ ಸ್ಥಿರವಾಗಿ ಮುಂದುವರಿದಿದೆ.

ನಾವು ಭೂಗಡಿ ವ್ಯಾಪಾರದಲ್ಲಿನ ತೊಡಕುಗಳನ್ನು ತಗ್ಗಿಸಿದ್ದೇವೆ, ಎರಡೂ ದೇಶಗಳ ನಡುವಿನ ಸಂಪರ್ಕವನ್ನು ವಿಸ್ತರಿಸಿದ್ದೇವೆ ಮತ್ತು ಹೊಸ ಮಾರ್ಗಗಳನ್ನು ಸೇರಿಸಿದ್ದೇವೆ.

ಇದೆಲ್ಲವೂ ನಮ್ಮ ಬಾಂಧವ್ಯವನ್ನು ಬಲಪಡಿಸುವ ನಮ್ಮ ಉದ್ದೇಶವನ್ನು ಬಿಂಬಿಸುತ್ತದೆ.

ಘನತೆವೆತ್ತರೆ,

ಮುಜಿಬ್ ಚಿರಂತರ್” – ಬಂಗಬಂಧುವಿನ ಸಂದೇಶ ಶಾಶ್ವತವಾಗಿದೆ ಮತ್ತು ಸ್ಫೂರ್ತಿಯೊಂದಿಗೆ ನಾವು ಅವರ ಪರಂಪರೆಯನ್ನು ಗೌರವಿಸುತ್ತೇವೆ

ಬಂಗಬಂಧು ಪರಂಪರೆ ನಿಮ್ಮ ಅದ್ಭುತ ನಾಯಕತ್ವದಲ್ಲಿ ಬಿಂಬಿತವಾಗಿದೆ. ಜೊತೆಗೆ ನಮ್ಮ ದ್ವಿಪಕ್ಷೀಯ ಬಾಂಧವ್ಯ ಕುರಿತ ನಿಮ್ಮ ವೈಯಕ್ತಿಕ ಬದ್ಧತೆ ಸ್ಪಷ್ಟವಾಗಿದೆ.

ಬಂಗಬಂಧುವಿನ ಗೌರವಾರ್ಥ ಇಂದು ನಾನು ಅಂಚೆ ಚೀಟಿ ಬಿಡುಗಡೆ ಮಾಡುವ ಅವಕಾಶವನ್ನು ಪಡೆಯುತ್ತಿದ್ದೇನೆ ಮತ್ತು ನಿಮ್ಮೊಂದಿಗೆ ಬಾಪೂಜಿ ಮತ್ತು ಬಂಗಬಂಧು ಕುರಿತು ಡಿಜಿಟಲ್ ಪ್ರದರ್ಶನವನ್ನು ಉದ್ಘಾಟಿಸುತ್ತಿರುವುದು ನನಗೆ ಹೆಮ್ಮೆಯ ವಿಷಯವಾಗಿದೆ. ಬಾಪು ಮತ್ತು ಬಂಗಬಂಧುವಿನ ಪ್ರದರ್ಶನವು ನಮ್ಮ ಯುವಕರಿಗೆ ಸ್ಫೂರ್ತಿ ನೀಡುತ್ತದೆ ಎಂದು ನಾನು ಭಾವಿಸುತ್ತೇನೆ, ಇದರಲ್ಲಿ ವಿಶೇಷ ವಿಭಾಗವನ್ನು ಕಸ್ತೂರಬಾ ಗಾಂಧಿ ಅವರಿಗೆ ಮತ್ತು ಪೂಜ್ಯ ಬೊಂಗ್ಮಾತಾಜಿಗೆ ಸಮರ್ಪಿಸಲಾಗಿದೆ.

ಘನತೆವೆತ್ತರೆ,

ಈಗ ನಾನು ನಿಮ್ಮನ್ನು ಪ್ರಾಸ್ತಾವಿಕ ನುಡಿಗಳಿಗೆ ಆಹ್ವಾನಿಸುತ್ತೇನೆ.

ಘೋಷಣೆ: ಇದು ಪ್ರಧಾನಮಂತ್ರಿಯರ ಭಾಷಣದ ಅಂದಾಜು ಭಾಷಾಂತರ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಗಿದೆ.

***