ಭಾರತ – ಬಾಂಗ್ಲಾದೇಶ ನಡುವೆ ಸಂಪರ್ಕ ಕಲ್ಪಿಸುವ “ ಮೈತ್ರಿ ಸೇತು” ಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಪರೆನ್ಸ್ ಮೂಲಕ ಇಂದು ಚಾಲನೆ ನೀಡಿದರು. ಅಲ್ಲದೇ ತ್ರಿಪುರಾದಲ್ಲಿ ಹಲವು ಮೂಲ ಸೌಕರ್ಯ ಯೋಜನೆಗಳನ್ನು ಉದ್ಘಾಟಿಸಿದರು ಮತ್ತು ಶಿಲಾನ್ಯಾಸ ನೆರವೇರಿಸಿದರು. ತ್ರಿಪುರ ರಾಜ್ಯಪಾಲರು ಮತ್ತು ಮುಖ್ಯಮಂತ್ರಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಬಾಂಗ್ಲಾದೇಶದಿಂದ ಅಲ್ಲಿನ ಪ್ರಧಾನಮಂತ್ರಿ ಅವರ ವಿಡಿಯೋ ಸಂದೇಶವನ್ನು ಸಹ ಪ್ರಸಾರ ಮಾಡಲಾಯಿತು.
ಸಮಾರಂಭ ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಅವರು, ತ್ರಿಪುರಾದಲ್ಲಿ ಹಿಂದಿನ 30 ವರ್ಷಗಳ ಆಡಳಿತ ಮತ್ತು ಈಗಿನ ಮೂರು ವರ್ಷಗಳ ಡಬಲ್ ಎಂಜಿನ್ ಸರ್ಕಾರದ ಆಡಳಿತ ವೈಖರಿಯನ್ನು ಜನತೆ ನೋಡುತ್ತಿದ್ದಾರೆ. ಹಿಂದಿನ ವರ್ಷಗಳಲ್ಲಿ ಭ್ರಷ್ಟಾಚಾರ ಮತ್ತು ಕಮಿಷನ್ ಸಂಸ್ಕೃತಿಯನ್ನು ನೋಡಿದ್ದ ಜನತೆ ಇದೀಗ ಸೌಲಭ್ಯಗಳು ನೇರವಾಗಿ ಫಲಾನುಭವಿಗಳ ಖಾತೆಗೆ ದೊರೆಯುತ್ತಿರುವುದನ್ನು ಕಾಣುತ್ತಿದ್ದಾರೆ. ಸರಿಯಾದ ಸಮಯಕ್ಕೆ ವೇತನ ದೊರೆಯದೇ ತೊಂದರೆಯಲ್ಲಿದ್ದ ನೌಕರರಿಗೆ ಇದೀಗ 7 ನೇ ವೇತನ ಆಯೋಗದ ಪ್ರಕಾರ ನಿಯಮಿತವಾಗಿ ಸಂಬಳ ಸಿಗುತ್ತಿದೆ. ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ತೊಂದರೆ ಎದುರಿಸುತ್ತಿದ್ದ ರೈತರಿಗೆ ತ್ರಿಪುರಾದಲ್ಲಿ ಮೊದಲ ಬಾರಿಗೆ ಕನಿಷ್ಠ ಬೆಂಬಲ ಬೆಲೆ – ಎಂ.ಎಸ್.ಪಿ ಜಾರಿಗೊಳಿಸಲಾಗಿದೆ. ಹಿಂದಿನ ಮುಷ್ಕರ ನಡೆಸುತ್ತಿದ್ದ ಸಂಸ್ಕೃತಿಯ ಜಾಗದಲ್ಲಿ ಇದೀಗ ಸುಗಮ ವ್ಯವಹಾರ ನಡೆಸುವ ವಾತಾವರಣ ಇರುವ ಬಗ್ಗೆ ಪ್ರಧಾನಮಂತ್ರಿ ಅವರು ಗಮನ ಸೆಳೆದರು. ಕೈಗಾರಿಕೆಗಳನ್ನು ಮುಚ್ಚುತ್ತಿದ್ದ ಹಿಂದಿನ ಪರಿಸ್ಥಿತಿಯಲ್ಲಿ ಬದಲಾವಣೆಯಾಗಿದ್ದು, ಹೊಸ ಹೂಡಿಕೆಗಳು ಹೆಚ್ಚಾಗುತ್ತಿವೆ. ತ್ರಿಪುರದಲ್ಲಿ ರಫ್ತು ಚಟುವಟಿಕೆ ಐದು ಪಟ್ಟು ಹೆಚ್ಚಾಗಿದೆ ಎಂದರು.
ಕಳೆದ ಆರು ವರ್ಷಗಳಲ್ಲಿ ತ್ರಿಪುರಾದ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಪ್ರತಿಯೊಂದು ಅಗತ್ಯಗಳ ಬಗ್ಗೆಯೂ ಗಮನಹರಿಸಿದೆ. ಕೇಂದ್ರದ ಅನುದಾನದಲ್ಲಿ ಗಣನೀಯ ಏರಿಕೆಯಾಗಿದೆ. 2009 – 2014 ರ ಅವಧಿಯಲ್ಲಿ ಕೇಂದ್ರದಿಂದ ತ್ರಿಪುರಾ 3,500 ಕೋಟಿ ರೂ ಅನುದಾನ ಪಡೆದಿತ್ತು. 2014 – 2019 ರ ಅವಧಿಯಲ್ಲಿ 12,000 ಕೋಟಿ ರೂ ನೀಡಲಾಗಿದೆ ಎಂದು ಹೇಳಿದರು.
ತ್ರಿಪುರದಲ್ಲಿ ನೆಲೆ ನಿಂತಿರುವ ಡಬಲ್ ಎಂಜಿನ್ ಸರ್ಕಾರದ ಲಾಭಗಳ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಮಂತ್ರಿ ಅವರು, ಎಲ್ಲಿ ಡಬ್ಬಲ್ ಎಂಜಿನ್ ಸರ್ಕಾರಗಳು ಇಲ್ಲವೋ ಅಲ್ಲಿ ಬಡವರು, ರೈತರು ಮತ್ತು ಮಹಿಳೆಯರ ಕುರಿತಾದ ಯೋಜನೆಗಳು ಅನುಷ್ಠಾನಗೊಳ್ಳುತ್ತಿಲ್ಲ ಮತ್ತು ಮಂದಗತಿ ಪ್ರಗತಿ ಕಾಣುತ್ತಿವೆ. ತ್ರಿಪುರವನ್ನು ಬಲಪಡಿಸಲು ಡಬಲ್ ಎಂಜಿನ್ ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದು ಪ್ರತಿಪಾದಿಸಿದರು. ವಿದ್ಯುತ್ ಕೊರತೆಯ ತ್ರಿಪುರಾ ರಾಜ್ಯವನ್ನು ಡಬಲ್ ಎಂಜಿನ್ ಸರ್ಕಾರ ಹೆಚ್ಚುವರಿ ವಿದ್ಯುತ್ ಹೊಂದಿರುವ ರಾಜ್ಯವನ್ನಾಗಿ ಪರಿವರ್ತಿಸಿದೆ ಎಂದರು.
ರಾಜ್ಯದ ಪರಿವರ್ತನೆಯ ಪಟ್ಟಿ ಮಾಡಿದ ಪ್ರಧಾನಮಂತ್ರಿ ಅವರು, ಎರಡು ಲಕ್ಷ ಗ್ರಾಮೀಣ ಮನೆಗಳಿಗೆ ನಳದ ಮೂಲಕ ಕುಡಿಯುವ ನೀರು ಪೂರೈಸುವ, 2.5 ಲಕ್ಷ ಕುಟುಂಬಗಳಿಗೆ ಉಚಿತ ಅಡುಗೆ ಅನಿಲ ಪೂರೈಕೆ, ತ್ರಿಪುರದ ಪ್ರತಿಯೊಂದು ಹಳ್ಳಿಯೂ ಸಹ ಬಯಲು ಶೌಚ ಮುಕ್ತವಾಗಿದ್ದು, ಮಾತೃವಂದನಾ ಯೋಜನೆ ಮೂಲಕ 50,000 ಗರ್ಭೀಣಿಯರಿಗೆ ಸೌಲಭ್ಯ, 40,000 ಬಡ ಕುಟುಂಬಗಳಿಗೆ ಹೊಸದಾಗಿ ಸೂರು ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗಿದೆ ಎಂದರು.
ಕಳೆದ ಮೂರು ವರ್ಷಗಳ ಅವಧಿಯಲ್ಲಿ ಸಂಪರ್ಕ ಸಂಬಂಧಿತ ಮೂಲ ಸೌಕರ್ಯದಲ್ಲಿ ಗಣನೀಯ ಸುಧಾರಣೆಯಾಗಿದೆ. ವಿಮಾನ ನಿಲ್ದಾಣ ನಿರ್ಮಾಣದಲ್ಲಿ ತ್ವರಿತಗೊಂಡಿರುವ ಕಾಮಗಾರಿ, ಸಮುದ್ರ ಮಾರ್ಗ, ರೈಲು ಮತ್ತು ಜಲ ಮಾರ್ಗ ವಲಯದಲ್ಲಿ ಅಂತರ್ಜಾಲ ಸೌಲಭ್ಯ ಅಭಿವೃದ್ದಿಯಾಗಿದೆ ಎಂದರು. ತ್ರಿಪುರದಲ್ಲಿ “ಹಿರಾ” ಅಭಿವೃದ್ಧಿ ಕುರಿತು ಮಾತನಾಡಿದ ಪ್ರಧಾನಮಂತ್ರಿ ಅವರು. ಎಚ್ ಎಂದರೆ ಹೆದ್ದಾರಿಗಳು, ಐ ಎಂದರೆ ಐ ವೇಗಳು, ಆರ್ – ರೈಲ್ವೇ ಮತ್ತು ಎ–ಏರ್ ವೇಸ್ ಎಂದು ವ್ಯಾಖ್ಯಾನಿಸಿದರು.
ಸಂಪರ್ಕ ಎನ್ನುವುದು ಭಾರತ – ಬಾಂಗ್ಲಾ ದೇಶ ನಡುವಿನ ಸ್ನೇಹವನ್ನಷ್ಟೇ ಬಲವರ್ಧನೆಗೊಳಿಸುವುದಿಲ್ಲ, ವ್ಯಾಪಾರಕ್ಕಾಗಿ ಬಾಂಗ್ಲಾದೇಶಕ್ಕೆ ಬಲಿಷ್ಠ ಸಂಪರ್ಕವನ್ನೂ ಸಹ ಒದಗಿಸುತ್ತದೆ. ಇಡೀ ಪ್ರದೇಶವನ್ನು ಈಶಾನ್ಯ ಭಾರತ ಮತ್ತು ಬಾಂಗ್ಲಾದೇಶದ ನಡುವಿನ ವ್ಯಾಪಾರ ಕಾರಿಡಾರ್ ಆಗಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು. ಇತ್ತೀಚಿನ ವರ್ಷಗಳಲ್ಲಿ ರೈಲು ಮತ್ತು ಜಲ ಮಾರ್ಗ ಸಂಪರ್ಕ ಯೋಜನೆಗಳನ್ನು ಈ ಸೇತುವೆಯಿಂದ ಬಲಪಡಿಸಲಾಗಿದೆ ಎಂದು ಒತ್ತಿ ಹೇಳಿದರು. ಈ ಸಂಪರ್ಕದಿಂದ ದಕ್ಷಿಣ ಅಸ್ಸಾಂ, ಮಿಜೋರಂ ಮತ್ತು ಮಣಿಪುರ ಜತೆಗೆ ತ್ರಿಪುರದೊಂದಿಗೆ ಬಾಂಗ್ಲಾದೇಶ ಮತ್ತು ದಕ್ಷಿಣ ಏಷ್ಯಾದೊಂದಿಗೆ ಸಂಪರ್ಕ ಸಾಧ್ಯವಾಗಲಿದೆ. ಈ ಸೇತುವೆ ಬಾಂಗ್ಲಾದೇಶದ ಆರ್ಥಿಕ ಅವಕಾಶಕ್ಕೂ ಉತ್ತೇಜನ ನೀಡುತ್ತದೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು.
ಈ ಸೇತುವೆ ನಿರ್ಮಾಣ ಪೂರ್ಣಗೊಳ್ಳಲು ಸಹಕಾರ ನೀಡಿದ ಬಾಂಗ್ಲಾದೇಶ ಸರ್ಕಾರ ಮತ್ತು ಅಲ್ಲಿನ ಪ್ರಧಾನಿ ಅವರಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಧನ್ಯವಾದ ತಿಳಿಸಿದರು. ತಾವು ಬಾಂಗ್ಲಾದೇಶಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಈ ಸೇತುವೆಗೆ ಶಿಲಾನ್ಯಾಸ ನೆರವೇರಿಸಲಾಗಿತ್ತು ಎಂಬುದನ್ನು ಪ್ರಧಾನಮಂತ್ರಿ ಸ್ಮರಿಸಿಕೊಂಡರು.
ಈಶಾನ್ಯ ರಾಜ್ಯಗಳಿಗೆ ಸರಕುಗಳ ಪೂರೈಕೆಗೆ ಈಗ ರಸ್ತೆ ಮಾರ್ಗವನ್ನಷ್ಟೇ ಅವಲಂಬಿಸಬೇಕಾಗಿಲ್ಲ. ಈ ನದಿಯ ಮೂಲಕ ಬಾಂಗ್ಲಾದೇಶದ ಚಿತ್ತಗಾಂಗ್ ಬಂದರನ್ನು ಈಶಾನ್ಯದೊಂದಿಗೆ ಸಂಪರ್ಕಿಸಲು ಪ್ರಯತ್ನಗಳು ನಡೆಯುತ್ತಿವೆ. ಇಲ್ಲಿ ಸಬ್ರೂಮ್ ನಲ್ಲಿರುವ ಗೋದಾಮುಗಳು ಮತ್ತು ಕಂಟೈನರ್ ಟ್ರಾನ್ಸ್ ಶಿಪ್ಪಿಂಗ್ ಸೌಲಭ್ಯಗಳೊಂದಿಗೆ ಇದು ಪೂರ್ಣ ಪ್ರಮಾಣದ ಲಾಜಿಸ್ಟಿಕ್ ಆಗಿ ಕಾರ್ಯನಿರ್ವಹಿಸಲಿದೆ ಎಂದು ಹೇಳಿದರು.
ಫೆನಿ ನದಿಯ ಮೇಲಿನ ಸೇತುವೆಯಿಂದಾಗಿ ಅಗರ್ತಲಾ ಭಾರತದ ಸಮುದ್ರದ ಅಂತಾರಾಷ್ಟ್ರೀಯ ಬಂದರಿಗೆ ಹತ್ತಿರದ ನಗರವಾಗಲಿದೆ. ಇದಕ್ಕೆ ಸಂಬಂಧಿಸಿದಂತೆ ಎನ್ಎಚ್–08 ಮತ್ತು ಎನ್ಎಚ್ –208 ಯೋಜನೆಗಳನ್ನು ಸಮರ್ಪಿಸಲಾಗಿದೆ ಮತ್ತು ಈಶಾನ್ಯವನ್ನು ಸಂರ್ಪರ್ಕಿಸುವ ಬಂದರು ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಲಾಗಿದೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು.
ಇಂದು ಉದ್ಘಾಟಿಸಿರುವ ಹಲವು ಯೋಜನೆಗಳು ಅಗರ್ತಲಾವನ್ನು ಉತ್ತಮ ನಗರ ಮಾಡುವ ಪ್ರಯತ್ನಗಳಾಗಿವೆ. ಹೊಸದಾಗಿ ಉದ್ಘಾಟಿಸಿರುವ ಕಮಾಂಡ್ ಕೇಂದ್ರದಿಂದ ಸಂಚಾರಿ ಸಮಸ್ಯಗಳ ನಿವಾರಣೆ ಮತ್ತು ಅಪರಾಧಗಳನ್ನು ನಿಯಂತ್ರಿಸಲು ಸಹಕಾರಿಯಾಗಿದೆ. ಇದೇ ಸಂದರ್ಭದಲ್ಲಿ ಬಹುಹಂತದ ಪಾರ್ಕಿಂಗ್, ವಾಣಿಜ್ಯ ಸಂಕಿರ್ಣ ಮತ್ತು ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನೂ ಸಹ ವಿಸ್ತರಣೆ ಮಾಡಲಾಗಿದೆ. ಇದರಿಂದ ಅಗರ್ತಲಾದಲ್ಲಿ ಸುಗಮ ಜೀವನ ಮತ್ತು ಸುಗಮ ವ್ಯವಹಾರ ನಡೆಸಲು ಸಹಕಾರಿಯಾಗಲಿದೆ ಎಂದು ಹೇಳಿದರು.
ಸರ್ಕಾರಗಳ ಪ್ರಯತ್ನದ ಫಲವಾಗಿ ದಶಕಗಳಷ್ಟು ಹಳೆಯದಾದ ಬ್ರೂ ನಿರಾಶ್ರಿತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡಂತಾಗಿದೆ. ಬ್ರೂ ಜನಾಂಗದ ಬದುಕಿನಲ್ಲಿ ಸಕಾರಾತ್ಮಕ ಬದಲಾವಣೆ ತರಲು 600 ಕೋಟಿ ರೂ ಮೊತ್ತದ ಪ್ಯಾಕೇಜ್ ಸಹಕಾರಿಯಾಗಲಿದೆ ಎಂದು ಪ್ರಧಾನಮಂತ್ರಿ ಅವರು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಧಾನಮಂತ್ರಿ ಅವರು ರಾಜ್ಯದ ಶ್ರೀಮಂತ ಪರಂಪರೆಯನ್ನು ಸೃಷ್ಟಿಸಿದರಲ್ಲದೇ ಅಗರ್ತಲಾ ವಿಮಾನ ನಿಲ್ದಾಣಕ್ಕೆ ಮಹಾರಾಜ ಬೀರ್ ವಿಕ್ರಮ್ ಕಿಶೋರ್ ಮಾಣಿಕ್ಯರ ಹೆಸರನ್ನು ಮರು ನಾಮಕರಣ ಮಾಡುತ್ತಿದ್ದು, ಇದು ತ್ರಿಪುರದ ಅಭಿವೃದ್ಧಿ ಕುರಿತ ಅವರ ದೃಷ್ಟಿಕೋನಕ್ಕೆ ಗೌರವ ಸಲ್ಲಿಸುವ ಸಂಕೇತವಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರು, ತ್ರಿಪುರಾದ ಶ್ರೀಮಂತ ಸಂಸ್ಕೃತಿ ಮತ್ತು ಸಾಹಿತ್ಯಕ್ಕಾಗಿ ಸೇವೆ ಸಲ್ಲಿಸಿದ ತಂಗಾ ದರ್ಲಾಂಗ್, ಸತ್ಯರಾಮ್ ರಿಂಗ್ ಮತ್ತು ಬೆನಿಚಂದ್ರ ಜಮಾತಿಯಾ ಅವರನ್ನು ಗೌರವಿಸುವ ಅವಕಾಶ ದೊರೆತಿದ್ದಕ್ಕೆ ಸಂತಸ ವ್ಯಕ್ತಪಡಿಸಿದರು. ಸ್ಥಳೀಯ ಬಿದುರು ಆಧರಿತ ಸ್ಥಳೀಯ ಕಲೆಯನ್ನು ಪ್ರಧಾನಮಂತ್ರಿ ವನ್ ಧನ್ ಯೋಜನೆಯಡಿ ಉತ್ತೇಜಿಸಲಾಗುವುದು ಮತ್ತು ಇದು ಸ್ಥಳೀಯ ಬುಡಕಟ್ಟು ಜನರಿಗೆ ಹೊಸ ಅವಕಾಶವನ್ನು ನೀಡುತ್ತದೆ ಎಂದು ಹೇಳಿದರು.
ಮೂರು ವರ್ಷಗಳನ್ನು ಪೂರೈಸಿದ ತ್ರಿಪುರ ರಾಜ್ಯ ಸರ್ಕಾರವನ್ನು ಅಭಿನಂದಿಸಿದ ಪ್ರಧಾನಮಂತ್ರಿ ಅವರು, ತ್ರಿಪುರದ ಜನರಿಗೆ ಸೇವೆ ಸಲ್ಲಿಸಲು ಸರ್ಕಾರ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
***
Furthering the growth trajectory of Tripura. https://t.co/6IBnVzWuEn
— Narendra Modi (@narendramodi) March 9, 2021
आज त्रिपुरा पुरानी सरकार के 30 साल और डबल इंजन की 3 साल की सरकार में आए बदलाव को स्पष्ट अनुभव कर रहा है।
— PMO India (@PMOIndia) March 9, 2021
जहां कमीशन और करप्शन के बिना काम होने मुश्किल थे, वहां आज सरकारी लाभ लोगों के बैंक खाते में, डायरेक्ट पहुंच रहा है: PM @narendramodi
जो कर्मचारी समय पर सैलरी पाने के लिए भी परेशान हुआ करते थे, उनको 7वें पे कमीशन के तहत सैलरी मिल रही है।
— PMO India (@PMOIndia) March 9, 2021
जहां किसानों को अपनी उपज बेचने के लिए अनेक मुश्किलें उठानी पड़तीं थीं, वहीं पहली बार त्रिपुरा में किसानों से MSP पर खरीद सुनिश्चित हुई: PM @narendramodi
जिस त्रिपुरा को हड़ताल कल्चर ने बरसों पीछे कर दिया था, आज वो Ease of Doing Business के लिए काम कर रहा है।
— PMO India (@PMOIndia) March 9, 2021
जहां कभी उद्योगों में ताले लगने की नौबत आ गई थी, वहां अब नए उद्योगों, नए निवेश के लिए जगह बन रही है: PM @narendramodi
बीते 6 साल में त्रिपुरा को केंद्र सरकार से मिलने वाली राशि में बड़ी वृद्धि की गई है।
— PMO India (@PMOIndia) March 9, 2021
वर्ष 2009 से 2014 के बीच केंद्र सरकार से त्रिपुरा को केंद्रीय विकास परियोजनाओं के लिए 3500 करोड़ रुपए की मदद मिली थी।
जबकि साल 2014 से 19 के बीच 12 हजार करोड़ रुपए से अधिक की मदद दी गई है: PM
डबल इंजन की सरकार के ये काम त्रिपुरा की बहनों-बेटियों को सशक्त करने में मदद कर रहे हैं।
— PMO India (@PMOIndia) March 9, 2021
त्रिपुरा में पीएम किसान सम्मान निधि और आयुष्मान भारत योजना का भी लाभ किसानों और गरीब परिवारों को मिल रहा है: PM @narendramodi
त्रिपुरा की कनेक्टिविटी के इंफ्रास्ट्रक्चर में बीते 3 साल में तेजी से सुधार हुआ है।
— PMO India (@PMOIndia) March 9, 2021
एयरपोर्ट का काम हो या फिर समंदर के रास्ते त्रिपुरा को इंटरनेट से जोड़ने का काम हो, रेल लिंक हो, इनमें तेज़ी से काम हो रहा है: PM @narendramodi
अपने बांग्लादेश दौरे के दौरान मैंने और प्रधानमंत्री शेख हसीना जी ने मिलकर त्रिपुरा को बांग्लादेश से सीधे जोड़ने वाले ब्रिज का शिलान्यास किया था और आज इसका लोकार्पण किया गया है: PM @narendramodi
— PMO India (@PMOIndia) March 9, 2021
फेनी ब्रिज के खुल जाने से अगरतला, इंटरनेशनल सी पोर्ट से भारत का सबसे नज़दीक का शहर बन जाएगा।
— PMO India (@PMOIndia) March 9, 2021
NH-08 और NH-208 के चौड़ीकरण से जुड़े जिन प्रोजेक्ट्स का आज लोकार्पण और शिलान्यास किया गया है, उनसे नॉर्थ ईस्ट की पोर्ट से कनेक्टिविटी और सशक्त होगी: PM @narendramodi
त्रिपुरा के ब्रू शरणार्थियों की समस्याओं को दूर करने के लिए दशकों बाद समाधान हमारी ही सरकार के प्रयासों से मिला।
— PMO India (@PMOIndia) March 9, 2021
हज़ारों ब्रू साथियों के विकास के लिए दिए गए 600 करोड़ रुपए के विशेष पैकेज से उनके जीवन में बहुत सकारात्मक परिवर्तन आएगा: PM @narendramodi