Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭಾರತ ಬದಲಾಗುತ್ತಿದೆ ಏಕೆಂದರೆ ಭಾರತೀಯರು ಬದಲಾಗಲು ನಿರ್ಧರಿಸಿದ್ದಾರೆ: ಪ್ರಧಾನಮಂತ್ರಿ

ಭಾರತ ಬದಲಾಗುತ್ತಿದೆ ಏಕೆಂದರೆ ಭಾರತೀಯರು ಬದಲಾಗಲು ನಿರ್ಧರಿಸಿದ್ದಾರೆ: ಪ್ರಧಾನಮಂತ್ರಿ

ಭಾರತ ಬದಲಾಗುತ್ತಿದೆ ಏಕೆಂದರೆ ಭಾರತೀಯರು ಬದಲಾಗಲು ನಿರ್ಧರಿಸಿದ್ದಾರೆ: ಪ್ರಧಾನಮಂತ್ರಿ

ಭಾರತ ಬದಲಾಗುತ್ತಿದೆ ಏಕೆಂದರೆ ಭಾರತೀಯರು ಬದಲಾಗಲು ನಿರ್ಧರಿಸಿದ್ದಾರೆ: ಪ್ರಧಾನಮಂತ್ರಿ


ಸೂರತ್ ನ ಪುರಭವನದಲ್ಲಿ ನಡೆದ ನವ ಭಾರತ ಯುವ ಸಮಾವೇಶದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಯುವ ವೃತ್ತಿಪರರೊಂದಿಗೆ ಸಂವಾದ ನಡೆಸಿದರು. ನವ ಬಾರತ ಯುವ ಸಮಾವೇಶದಲ್ಲಿ ಪ್ರಧಾನಮಂತ್ರಿಯವರಿಗೆ ಅಭೂತಪೂರ್ವ ಸ್ವಾಗತ ದೊರೆಯಿತು.

ದೇಶವು ಬದಲಾಗುತ್ತಿದೆ ಮತ್ತು ಉತ್ತಮ ಭಾರತಕ್ಕಾಗಿ ಜನರು ಬದಲಾಗಲು ತೀರ್ಮಾನಿಸಿರುವುದರಿಂದ ಇದು ಸಾಧ್ಯವಾಗುತ್ತಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದರು.

ಸೂರತ್ ನಲ್ಲಿಂದು ನವಭಾರತ ಯುವ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಮೊದಲು ಏನೂ ಆಗುವುದಿಲ್ಲ, ಯಾವುದೂ ಬದಲಾಗುವುದಿಲ್ಲ ಎಂಬ ಮನೋಭಾವವಿತ್ತು. ಆದರೆ ಈಗ ಈ ಮನೋಭಾವ ಬದಲಾಗಿದ್ದು, ಅದು ಸ್ಪಷ್ಟವಾಗಿ ಕಾಣಿಸುತ್ತಿದೆ ಎಂದರು. “ಒಂದು ಕಾಲದಲ್ಲಿ ಜನರಲ್ಲಿ ಯಾವುದೂ ಬದಲಾಗುವುದಿಲ್ಲ ಎಂಬ ಮನೋಭಾವವಿತ್ತು. ನಾವು ಬಂದೆವು ಮತ್ತು ಮೊದಲ ಬಾರಿಗೆ ಆ ಮನೋಭಾವ ಬದಲಾಗಿದೆ- ಈಗ ಎಲ್ಲವೂ ಬದಲಾಗಬಹುದು. ಭಾರತ ಬದಲಾಗುತ್ತಿದೆ ಏಕೆಂದರೆ ಭಾರತೀಯರು ಬದಲಾಗಲು ತೀರ್ಮಾನಿಸಿದ್ದಾರೆ” ಎಂದು ಅವರು ತಿಳಿಸಿದರು.

ಭಾರತದ ಸಾಮರ್ಥ್ಯದ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, “ಭಯೋತ್ಪಾದಕರು ಮುಂಬೈ ಮೇಲೆ ದಾಳಿ ಮಾಡಿದರು. ನಂತರ ಏನಾಯ್ತು? ನಮ್ಮ ಸರ್ಕಾರದಲ್ಲಿ ಉರಿ ಘಟನೆ ನಡೆಯಿತು. ಆ ನಂತರ ಏನಾಯ್ತು? ಇದೇ ಬದಲಾವಣೆ. ನಮ್ಮ ಸೈನಿಕರ ಎದೆಯಲ್ಲಿದ್ದ ಬೆಂಕಿ, ಪ್ರಧಾನಮಂತ್ರಿಯವರ ಎದೆಯಲ್ಲೂ ಇತ್ತು. ಸರ್ಜಿಕಲ್ ಸ್ಟ್ರೈಕ್ ಅದರ ಫಲಿತಾಂಶ. ಉರಿ ಭಯೋತ್ಪಾದನಾ ದಾಳಿ ನನಗೆ ನಿದ್ದೆಗೆಡಿಸಿತು. ಅದರ ನಂತರ ಏನಾಯಿತು ಅದು ಎಲ್ಲರಿಗೂ ಗೊತ್ತು. ಇದೇ ಬದಲಾವಣೆ.” ಎಂದರು.

ಕಪ್ಪುಹಣದ ವಿರುದ್ಧ ತಮ್ಮ ಸರ್ಕಾರದ ಕ್ರಮ ಧೈರ್ಯ ಮತ್ತು ನಿರ್ಣಾಯಕವಾದ ಹೆಜ್ಜೆಯಾಗಿತ್ತು ಎಂದು ಪ್ರಧಾನಮಂತ್ರಿ ಹೇಳಿದರು.

ನಗದು ಅಮಾನ್ಯೀಕರಣದ ನಂತರ ಮೂರು ಲಕ್ಷ ಕಂಪನಿಗಳು ಮುಚ್ಚಿದವು ಮತ್ತು ಕಪ್ಪುಹಣವನ್ನು ನಿಯಂತ್ರಿಸಬಹುದು ಎಂದು ಯಾರೊಬ್ಬರೂ ಯೋಚಿಸಿರಲಿಲ್ಲ ಎಂದರು.

“ಭಾರತೀಯರಲ್ಲಿ ಸಾರ್ವಜನಿಕ ಅಭಿಪ್ರಾಯ ಬದಲಾಗಿದೆ. ಇದು ದೇಶವನ್ನೇ ಬದಲಾಯಿಸಲಿದೆ. ನನಗೆ ಇದರಲ್ಲಿ ನಂಬಿಕೆಯಿದೆ. ಈ ಮೊದಲು ಜನರು ಎಲ್ಲವೂ ಜನರಿಂದಲೇ ಆಗುತ್ತಿದೆ ಎಂದು ಭಾವಿಸಿದ್ದರು. ನಾವು ಇದನ್ನು ಬದಲಾಯಿಸಿದೆವು. ದೇಶ ನಮ್ಮೆಲ್ಲರಿಗಿಂತಲೂ ದೊಡ್ಡದು” ಎಂದು ಅವರು ಹೇಳಿದರು.

ಇವತ್ತು ಇದು ನನ್ನ ನಾಲ್ಕನೇ ಸಾರ್ವಜನಿಕ ಕಾರ್ಯಕ್ರಮ. ಆದರೂ ನನಗೇನೂ ದಣಿವಾಗಿಲ್ಲ. ನಿಮಗೆ ದಣಿವಾಗಿದೆಯೇ ಎಂದು ಪ್ರಧಾನಮಂತ್ರಿಯವರು ಜನರನ್ನು ಪ್ರಶ್ನಿಸಿದಾಗ ಎಲ್ಲರೂ ಜೋರಾಗಿ ‘ಇಲ್ಲ’ ಎಂದರು.

ತಮ್ಮ ಒಂದು ದಿನದ ಗುಜರಾತ್ ಪ್ರವಾಸದಲ್ಲಿ ಪ್ರಧಾನಮಂತ್ರಿಯವರು ಇಂದು ಸೂರತ್ ವಿಮಾನ ನಿಲ್ದಾಣದ ಟರ್ಮಿನಲ್ ಕಟ್ಟಡದ ವಿಸ್ತರಣೆಗೆ ಶಿಲಾನ್ಯಾಸ ನೆರವೇರಿಸಿದರು ಮತ್ತು ಸೂರತ್ನಲ್ಲಿ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದರು. ಸೂರತ್ನ ರಸೀಲಾಬೆನ್ ಸೇವಂತಿಲಾಲ್ ವೀನಸ್ ಆಸ್ಪತ್ರೆಯನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ದಂಡಿಯಲ್ಲಿ ರಾಷ್ಟ್ರೀಯ ಉಪ್ಪಿನ ಸತ್ಯಾಗ್ರಹ ಸ್ಮಾರಕವನ್ನು ದೇಶಕ್ಕೆ ಸಮರ್ಪಿಸಿದರು.