Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭಾರತ ನವೀಕರಿಸಿರುವ ಜಾಫ್ನಾದ ದುರೈಯಪ್ಪ ಕ್ರೀಡಾಂಗಣ ಶ್ರೀಲಂಕಾ ಜನತೆಗೆ ನಾಳೆ ಸಮರ್ಪಣೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಶ್ರೀಲಂಕಾದ ಅಧ್ಯಕ್ಷ ಶ್ರೀ ಮೈತ್ರಿಪಾಲ ಸಿರಿಸೇನಾ ಅವರು ನಾಳೆ ಬೆಳಗ್ಗೆ ಜಾಫ್ನಾದಲ್ಲಿ ಹೊಸದಾಗಿ ನವೀಕರಿಸಲಾಗಿರುವ ದುರೈಯಪ್ಪ ಕ್ರೀಡಾಂಗಣವನ್ನು ಜಂಟಿಯಾಗಿ ಶ್ರೀಲಂಕಾದ ಜನತೆಗೆ ಸಮರ್ಪಿಸಲಿದ್ದಾರೆ. ಶ್ರೀಲಂಕಾ ಅಧ್ಯಕ್ಷ ಸಿರಿಸೇನಾ ಅವರು ಕ್ರೀಡಾಂಗಣದಲ್ಲಿ ಹಾಜರಿರುತ್ತಾರೆ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ದೆಹಲಿಯಿಂದಲೇ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ದುರೈಯಪ್ಪ ಕ್ರೀಡಾಂಗಣಕ್ಕೆ ಜಾಫ್ನಾದ ಮಾಜಿ ಮೇಯರ್ ದಿವಂಗತ ಆಲ್ಫ್ರೆಡ್ ತಂಬಿರಾಜ್ ದುರೈಯಪ್ಪ ಗೌರವಾರ್ಥ ಹೆಸರಿಡಲಾಗಿದೆ, ಈ ಕ್ರೀಡಾಂಗಣವನ್ನು ಭಾರತ ಸರ್ಕಾರ 7 ಕೋಟಿ ರೂಪಾಯಿ ವೆಚ್ಚದಲ್ಲಿ ನವೀಕರಿಸಿದೆ.

ನವೀಕರಣಗೊಂಡಿರುವ ಕ್ರೀಡಾಂಗಣ 1850 ಆಸನಗಳ ಸಾಮರ್ಥ್ಯದ್ದಾಗಿದೆ. ಇದು ಕ್ರೀಡೆ ಮತ್ತು ಮನರಂಜನಾ ಚಟುವಟಿಕೆಗಳನ್ನು ಪ್ರೋತ್ಸಾಹಿಸಲು ಅಗತ್ಯ ಮೂಲಸೌಕರ್ಯ ಒದಗಿಸಲಿದೆ ಮತ್ತು ಶ್ರೀಲಂಕಾದ ಉತ್ತರ ಪ್ರಾಂತ್ಯದ ಯುವಕರ ಸರ್ವಾಂಗೀಣ ಅಭಿವೃದ್ಧಿಗೆ ನೆರವಾಗಲಿದೆ. 1997ರಿಂದ ಈ ಕ್ರೀಡಾಂಗಣ ನಿರುಪಯುಕ್ತವಾಗಿತ್ತು.

ಪ್ರಧಾನಮಂತ್ರಿ ಮೋದಿ ಮತ್ತು ಅಧ್ಯಕ್ಷ ಸಿರಿಸೇನಾ ಅವರು ನವೀಕೃತ ಕ್ರೀಡಾಂಗಣದಲ್ಲಿ ಮೊದಲ ಪ್ರಮುಖ ಕಾರ್ಯಕ್ರಮ ಹಾಗೂ ಎರಡನೇ ಅಂತಾರಾಷ್ಟ್ರೀಯ ಯೋಗ ದಿನದ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.

ಯೋಗ ಪ್ರದರ್ಶನದಲ್ಲಿ ಸುಮಾರು 8 ಸಾವಿರ ಜನರು ಭಾಗವಹಿಸುವ ನಿರೀಕ್ಷೆ ಇದೆ.

***

AKT/HS