Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭಾರತ –ದಕ್ಷಿಣ ಆಫ್ರಿಕಾ ವ್ಯಾಪಾರೋದ್ಯಮ ವೇದಿಕೆಯಲ್ಲಿ ಪ್ರಧಾನ ಮಂತ್ರಿ ಅವರ ಭಾಷಣದ ಪಠ್ಯ

ಭಾರತ –ದಕ್ಷಿಣ ಆಫ್ರಿಕಾ ವ್ಯಾಪಾರೋದ್ಯಮ ವೇದಿಕೆಯಲ್ಲಿ ಪ್ರಧಾನ ಮಂತ್ರಿ ಅವರ ಭಾಷಣದ ಪಠ್ಯ

ಭಾರತ –ದಕ್ಷಿಣ ಆಫ್ರಿಕಾ ವ್ಯಾಪಾರೋದ್ಯಮ ವೇದಿಕೆಯಲ್ಲಿ ಪ್ರಧಾನ ಮಂತ್ರಿ ಅವರ ಭಾಷಣದ ಪಠ್ಯ


ಪ್ರಜಾಪ್ರಭುತ್ವವಾದೀ ದಕ್ಷಿಣ ಆಫ್ರಿಕಾದ ಅಧ್ಯಕ್ಷರಾದ ಗೌರವಾನ್ವಿತ ಶ್ರೀ ಸಿರಿಲ್ ರಾಮಫೋಸಾ ಅವರೇ, ಭಾರತ ಮತ್ತು ದಕ್ಷಿಣ ಆಫ್ರಿಕಾದ ಕಾರ್ಪೊರೇಟ್ ಜಗತ್ತಿನ ನಾಯಕರೇ ಮತ್ತು ಮಹಿಳೆಯರೇ ಹಾಗು ಮಹನೀಯರೇ, ನಮಸ್ಕಾರ !.

ನಾನು ಭಾರತ –ದಕ್ಷಿಣ ಆಫ್ರಿಕಾ ವ್ಯಾಪಾರೋದ್ಯಮ ವೇದಿಕೆಯಲ್ಲಿ ನಿಮ್ಮೆಲ್ಲರೊಂದಿಗಿರಲು ಸಂತೋಷಪಡುತ್ತೇನೆ. ಗೌರವಾನ್ವಿತರಾದ ಅಧ್ಯಕ್ಷರೇ, ನೀವು ನಮ್ಮೊಂದಿಗಿರುವುದು ನಮ್ಮ ಸೌಭಾಗ್ಯ.

ನಮ್ಮ ನಾಳಿನ 70 ನೇ ಗಣರಾಜ್ಯೋತ್ಸವ ಪರೇಡ್ ಗೆ ತಾವು ಗೌರವಾನ್ವಿತ ಅತಿಥಿಯಾಗಿರುವುದೂ ನಮಗೆ ಹೆಮ್ಮೆಯ ಸಂಗತಿ. ನಮ್ಮ ಸಹಭಾಗಿತ್ವ ಭಾರತ ಮತ್ತು ದಕ್ಷಿಣ ಆಫ್ರಿಕಾದ ರಾಷ್ಟ್ರೀಯ ಚಳವಳಿಯ ಚರಿತ್ರೆಯ ಅವಿಘಟಿತ ಬಂಧವಾಗಿ ಬೆಸೆದುಕೊಂಡಿದೆ.

ಈಗ, ನಮ್ಮ ಸಹಭಾಗಿತ್ವ ಮಡಿಬಾ ಮತ್ತು ಮಹಾತ್ಮಾ ಅವರ ಕನಸುಗಳನ್ನು ನಮ್ಮ ಜನತೆಗಾಗಿ ನನಸು ಮಾಡುವುದಕ್ಕಾಗಿ ಪರಸ್ಪರ ಹಂಚಿಕೊಳ್ಳುವ ಸಮೃದ್ದ ಭವಿಷ್ಯಕ್ಕಾಗಿ ರೂಪುಗೊಂಡುದಾಗಿದೆ. ನಮ್ಮ ಜನರ ಮತ್ತು ವಿಶ್ವದ ಉತ್ತಮ ಭವಿಷ್ಯಕ್ಕಾಗಿ ನಾವು ಸತತವಾಗಿ ಮತ್ತು ಸಹಯೋಗದೊಂದಿಗೆ ತೊಡಗಿಸಿಕೊಳ್ಳಲು ಇಚ್ಚಿಸುತ್ತೇವೆ.

ನಾವು 22 ವರ್ಷಗಳ ಹಿಂದೆಯೇ ಕೆಂಪು ಕೋಟೆ ಘೋಷಣೆಯ ಮೂಲಕ ನಮ್ಮ ವ್ಯೂಹಾತ್ಮಕ ಸಹಭಾಗಿತ್ವವನ್ನು ಗಟ್ಟಿಗೊಳಿಸಿಕೊಂಡಿದ್ದೇವೆ. ಇಬ್ಬರು ಹಳೆಯ ಗೆಳೆಯರ ಮತ್ತು ಸಹಭಾಗಿಗಳ ನಡುವೆ ಸತತ, ನಿರಂತರ ಮಾತುಕತೆ ನಮ್ಮನ್ನು ಎಲ್ಲಾ ರೀತಿಯಲ್ಲೂ ಹೆಚ್ಚು ನಿಕಟಗೊಳಿಸಿದೆ ಎಂದು ನಾನು ಭಾವಿಸುತ್ತೇನೆ. ದ್ವಿಪಕ್ಷೀಯವಾಗಿ ಮತ್ತು ಬಹು ಕೋನೀಯವಾಗಿ ನಿಕಟ ಸಹಕಾರಕ್ಕೆ ನಾವು ಕಟಿಬದ್ದರಾಗಿದ್ದೇವೆ. ಇತ್ತೀಚಿನ ಕಾಲದಲ್ಲಿ ಇಬ್ಬರು ಹಳೆಯ ಗೆಳೆಯರ ನಡುವೆ ಹೊಸ ಮತ್ತು ಆಸಕ್ತಿದಾಯಕ ಬೆಳವಣಿಗೆ ಕಥಾನಕಗಳು ಸಂಭವಿಸಿವೆ.

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ವ್ಯಾಪಾರ ವಹಿವಾಟು ಹೆಚ್ಚುತ್ತಿದೆ, ಮತ್ತು ಅದು 2017-18 ರಲ್ಲಿ 10 ಬಿಲಿಯನ್ ಡಾಲರ್ ದಾಟಿದೆ. ಜೊಹಾನ್ಸ್ ಬರ್ಗ್ ನಲ್ಲಿ 2018 ರಲ್ಲಿ ನಡೆದ ಎರಡು ಉಪಕ್ರಮಗಳು ಈ ನಿಟ್ಟಿನಲ್ಲಿ ಬಹಳ ಸಹಕಾರಿಯಾದವು. ಮೊದಲನೆಯದಾಗಿ 2018 ರಲ್ಲಿ ಏಪ್ರಿಲ್ ತಿಂಗಳಲ್ಲಿ ನಡೆದ ಭಾರತ-ದಕ್ಷಿಣ ಆಫ್ರಿಕಾ ವ್ಯಾಪಾರೋದ್ಯಮ ಶೃಂಗ ಮತ್ತು ಇನ್ನೊಂದು 2018 ರ ನವೆಂಬರ್ ತಿಂಗಳಲ್ಲಿ ಜೋಹಾನ್ಸ್ ಬರ್ಗ್ ನಲ್ಲಿ ನಡೆದ ಭಾರತ ವ್ಯಾಪಾರೋದ್ಯಮ ವೇದಿಕೆಯ ಹೂಡಿಕೆ ಮೇಳ. ಆದಾಗ್ಯೂ ಇನ್ನೂ ಇಲ್ಲಿ ಅವಕಾಶಗಳು ಇವೆ. ಎಲ್ಲಾ ಭಾರತೀಯ ಮತ್ತು ದಕ್ಷಿಣ ಆಫ್ರಿಕಾ ಸರಕಾರದ ಏಜೆನ್ಸಿಗಳು, ಹೂಡಿಕೆ ಉತ್ತೇಜನ ಸಂಘಟನೆಗಳು ಜೊತೆಗೆ ಉಭಯ ದೇಶಗಳ ವ್ಯಾಪಾರೋದ್ಯಮಗಳ ನಾಯಕರು ಈ ಸಾಮರ್ಥ್ಯವನ್ನು ಬಳಸಿಕೊಳ್ಳಲು ಕ್ರಿಯಾಶೀಲವಾಗಿ ಕೆಲಸ ಮಾಡಬೇಕು ಎಂದು ನಾನು ಆಶಿಸುತ್ತೇನೆ. ನಮ್ಮ ರಾಜ್ಯಗಳಲ್ಲಿ ಆಫ್ರಿಕನ್ ದೇಶಗಳಿಂದ ಗಮನೀಯ ಪಾಲುದಾರಿಕೆ ಮತ್ತು ಹಾಜರಾತಿ ಇರುವುದನ್ನು ಕಾಣಲು ನಾನು ಹರ್ಷಿಸುತ್ತೇನೆ.

ನಾನು ಈ ಮೊದಲು ಗುಜರಾತಿನ ಮುಖ್ಯಮಂತ್ರಿ ಆಗಿದ್ದಾಗ ದಕ್ಷಿಣ ಆಫ್ರಿಕಾದ ಪ್ರಮುಖ ಭಾಗೀದಾರರನ್ನು ಸ್ವಾಗತಿಸಲು ಸಂತೋಷಪಡುತ್ತಿದ್ದೆ. ಕಳೆದ ವಾರ ನಡೆದ ರೋಮಾಂಚಕ ಗುಜರಾತ್ ನಮ್ಮ ದಕ್ಷಿಣ ಆಫ್ರಿಕಾದ ಸ್ನೇಹಿತರನ್ನು ಮತ್ತು ಪಾಲುದಾರರನ್ನು ದೊಡ್ದ ಸಂಖ್ಯೆಯಲ್ಲಿ ಸ್ವಾಗತಿಸಲು ಅನುವು ಮಾಡಿಕೊಟ್ಟಿತು ಎನ್ನುವುದು ಸಂತೃಪ್ತಿಯ ಸಂಗತಿ. ಒಂದು ದಿನವನ್ನು “ಆಫ್ರಿಕಾ ದಿನ” ಎಂಬುದಾಗಿ ನಿಗದಿ ಮಾಡಲಾಗಿತ್ತು.

ಇದು ನಾವು ಸಾಮಾನ್ಯವಾಗಿ ಪರಿಗಣಿಸಿರುವುದಕ್ಕಿಂತ ನಮ್ಮ ಬಾಂಧವ್ಯಗಳು ಹೆಚ್ಚು ಆಳವಾಗಿವೆ ಎಂಬುದನ್ನು ತೋರಿಸುತ್ತದೆ. ಇದು ನಮ್ಮ ದ್ವಿಪಕ್ಷೀಯ ಆರ್ಥಿಕ ಸಹಭಾಗಿತ್ವಕ್ಕೂ ಉತ್ತಮವಾದುದಾಗಿದೆ. ಮಹಿಳೆಯರೇ ಮತ್ತು ಮಹನೀಯರೇ, ಭಾರತದ ಆರ್ಥಿಕತೆ ಪ್ರಸ್ತುತ 2.6 ಟ್ರಿಲಿಯನ್ ಡಾಲರುಗಳಷ್ಟಾಗಿದ್ದು, ಅದು ವಿಶ್ವದಲ್ಲಿ ಅತ್ಯಂತ ತ್ವರಿತಗತಿಯಿಂದ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿದೆ.

ಮತ್ತು ನಾವು ಜಾಗತಿಕವಾಗಿ ಐದನೇ ಬೃಹತ್ ಆರ್ಥಿಕತೆಯಾಗುವ ಹಾದಿಯಲ್ಲಿದ್ದೇವೆ. ವಿಶ್ವ ಬ್ಯಾಂಕಿನ ಇತ್ತೀಚಿನ ವ್ಯಾಪಾರೋದ್ಯಮಕ್ಕೆ ಅನುಕೂಲಕರ ವಾತಾವರಣ ಕುರಿತ ವರದಿಯಲ್ಲಿ ಭಾರತದ ಸ್ಥಾನಮಾನ ಕಳೆದ ನಾಲ್ಕು ವರ್ಷಗಳಲ್ಲಿ 65 ಸ್ಥಾನಗಳಷ್ಟು ಮೇಲಕ್ಕೇರಿ 77 ನೇ ಸ್ಥಾನಕ್ಕೆ ತಲುಪಿದೆ. ಯು.ಎನ್.ಸಿ.ಟಿ.ಎ.ಡಿ. ಪಟ್ಟಿಯ ಪ್ರಕಾರ ನಾವು ಎಫ್.ಡಿ.ಐ. ಗೆ ಸಂಬಂಧಿಸಿ ಅತ್ಯುನ್ನತ ಸ್ಥಾನದಲ್ಲಿದ್ದೇವೆ. ದೈನಂದಿನ ಆಧಾರದಲ್ಲಿ , ನಾವು ಆರ್ಥಿಕ ಕ್ಷೇತ್ರದ ಪ್ರಮುಖ ವಲಯಗಳಿಗೆ ಸಂಬಂಧಿಸಿ ಅವಶ್ಯ ಬದಲಾವಣೆಗಳು ಮತ್ತು ಸುಧಾರಣೆಗಳನ್ನು ಮಾಡುತ್ತಿದ್ದೇವೆ. ನಮ್ಮ ವಿಶೇಷ ಕಾರ್ಯಕ್ರಮಗಳಾದ ಮೇಕ್ ಇನ್ ಇಂಡಿಯಾ , ಡಿಜಿಟಲ್ ಇಂಡಿಯಾ ಮತ್ತು ನವೋದ್ಯಮ ಭಾರತಗಳು ವಿಶ್ವದ ಕಲ್ಪನೆಯನ್ನು , ಗಮನವನ್ನು ಸೆಳೆದಿವೆ. ನಮ್ಮ ಕೈಗಾರಿಕಾ ವಲಯ ನಾಲ್ಕು ಅಂಶ ಶೂನ್ಯಗಳತ್ತ ಸಾಗುತ್ತಿದೆ, ಮತ್ತು ಇತರ ಉಪಕ್ರಮಗಳಾದ ಕೃತಕ ಬುದ್ದಿಮತ್ತೆ, 3-ಡಿ ಪ್ರಿಂಟಿಂಗ್ , ರೊಬಾಟಿಕ್ಸ್ ಗಳನ್ನು ಇದು ಒಳಗೊಂಡಿದೆ. ನಮ್ಮ ಸರಕಾರ ಎಲ್ಲಾ 1.3 ಬಿಲಿಯನ್ ಜನತೆಯ ಜೀವನ ಮಟ್ಟ ಸುಧಾರಣೆಗಾಗಿ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ಇವರ ಸಂಖ್ಯೆ ಮನುಕುಲದ ಆರನೇ ಒಂದಂಶದಷ್ಟಾಗುತ್ತದೆ. ನಾವು ಮುಂದಿನ ತಲೆಮಾರಿನ ಮೂಲಸೌಕರ್ಯಗಳೊಂದಿಗೆ ವೇಗ, ಕೌಶಲ್ಯಯುಕ್ತ ಮತ್ತು ಪ್ರಮಾಣಬದ್ದ ನವ ಭಾರತವನ್ನು ನಿರ್ಮಿಸಲು ಬದ್ದರಾಗಿದ್ದೇವೆ. ನಾನು ಈ ಅವಕಾಶವನ್ನು ಗೌರವಾನ್ವಿತರಾದ ತಮ್ಮನ್ನು ಅಭಿನಂದಿಸಲು ಬಳಸಿಕೊಳ್ಳುತ್ತೇನೆ.

ತಾವು 2018 ರಲ್ಲಿ ತಮ್ಮ ಚಿಂತನೆಯಾದ ನವ ದಕ್ಷಿಣ ಆಫ್ರಿಕಾ ನಿರ್ಮಾಣ ಮಾಡುವತ್ತ ಕೈಗೊಂಡಿರುವ ಉಪಕ್ರಮಗಳಿಗಾಗಿ ನಾನು ತಮ್ಮನ್ನು ಅಭಿನಂದಿಸುತ್ತೇನೆ. ತಾವು ತಮ್ಮ ಪ್ರಯತ್ನದಲ್ಲಿ ದಕ್ಷಿಣ ಆಫ್ರಿಕಾಕ್ಕೆ ವಿದೇಶಿ ವಿನಿಮಯ ಆಕರ್ಷಿಸುವಲ್ಲಿ ಯಶಸ್ವಿಯಾಗಿರಿ ಎಂದು ಹಾರೈಸುತ್ತೇನೆ , ಮೂರು ವರ್ಷಗಳಲ್ಲಿ ಒಂದು ಮಿಲಿಯನ್ ಉದ್ಯೋಗಗಳನ್ನು ಸೃಷ್ಟಿ ಮಾಡುವಲ್ಲಿ ತಮಗೆ ಯಶ ದೊರೆಯಲಿ. ಭಾರತ ಈ ಉದ್ದೇಶ ಸಾಧನೆಯಲ್ಲಿ ತನ್ನ ಕೊಡುಗೆ ನೀಡುತ್ತಿರುವುದಕ್ಕೆ ನನಗೆ ಸಂತೋಷವಿದೆ. ದಕ್ಷಿಣ ಆಫ್ರಿಕಾದಲ್ಲಿ ನಮ್ಮ ಹೂಡಿಕೆ ಸತತವಾಗಿ ಹೆಚ್ಚುತ್ತಿದೆ. ಇದು 10 ಬಿಲಿಯನ್ ಡಾಲರುಗಳಷ್ಟಾಗಿದೆ, ಸ್ಥಳೀಯವಾಗಿ 20,000 ಉದ್ಯೋಗಗಳ ಸೃಷ್ಟಿಯಾಗಿದೆ. ಸಹೋದರ ರಾಷ್ಟ್ರವಾಗಿ ಭಾರತವು ನೀತಿ ಸುಧಾರಣೆಗಳ ಅನುಭವ, ಮತ್ತು ತಳ ಮಟ್ಟದ ಏಜೆನ್ಸಿಗಳನ್ನು ಸ್ಥಾಪಿಸುವಲ್ಲಿಯ ಪರಿಣತಿಯನ್ನು ಹಂಚಿಕೊಳ್ಳಲು ಸಂತೋಷಪಡುತ್ತದೆ. ನಾವು ಭಾರತೀಯ ಕಂಪೆನಿಗಳು ದಕ್ಷಿಣ ಆಫ್ರಿಕಾದಲ್ಲಿ ಹೆಚ್ಚಿನ ಹೂಡಿಕೆ ಮಾಡುವುದನ್ನು ಪ್ರೋತ್ಸಾಹಿಸುತ್ತೇವೆ ಮತ್ತು ಹೆಚ್ಚು ದಕ್ಷಿಣ ಆಫ್ರಿಕಾದ ಕಂಪೆನಿಗಳು ಭಾರತೀಯ ಮಾರುಕಟ್ತೆ ಪ್ರವೇಶಿಸುವುದರ ಬಗ್ಗೆ ಭರವಸೆ ಹೊಂದಿದ್ದೇವೆ.

ನವ ಭಾರತವು ಲಭ್ಯ ಇರುವ ಎಲ್ಲಾ ಅವಕಾಶಗಳನ್ನು ಅವಲೋಕಿಸಲು ತಮಗೆ ಸ್ವಾಗತ ನೀಡುತ್ತದೆ ಎಂಬ ಭರವಸೆಯನ್ನು ನಾನು ನಿಮಗೆ ನೀಡುತ್ತೇನೆ. ಅದರಲ್ಲೂ ವಿಶೇಷವಾಗಿ ಆಹಾರ ಮತ್ತು ಕೃಷಿ ಸಂಸ್ಕರಣೆ , ಆಳ ಗಣಿಗಾರಿಕೆ, ರಕ್ಷಣೆ, ಹಣಕಾಸು ತಂತ್ರಜ್ಞಾನ, ವಿಮೆ ಮತ್ತು ಮೂಲ ಸೌಕರ್ಯ ವಲಯಗಳಲ್ಲಿ ತಾವು ಅವಕಾಶಗಳನ್ನು ಅರಸಬಹುದಾಗಿದೆ. ಅದೇ ರೀತಿ , ಭಾರತ ಕೂಡಾ ನವೋದ್ಯಮ, ಆರೋಗ್ಯ ರಕ್ಷಣೆ ಮತ್ತು ಔಷಧಿ ವಿಜ್ಞಾನ , ಜೈವಿಕ ತಂತ್ರಜ್ಞಾನ , ಮಾಹಿತಿ ತಂತ್ರಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ ಆಧಾರಿತ ಕ್ಷೇತ್ರಗಳಲ್ಲಿ ದಕ್ಷಿಣ ಆಫ್ರಿಕಾ ಜೊತೆ ಪಾಲುದಾರನಾಗಬಹುದು.

ಇತ್ತೀಚೆಗೆ ಆರಂಭಿಸಲಾದ ಗಾಂಧಿ ಮಂಡೇಲಾ ಕೌಶಲ್ಯ ಸಂಸ್ಥೆ ಮೂಲಕ ದಕ್ಷಿಣ ಆಫ್ರಿಕಾದ ಕೌಶಲ್ಯದ ಕಥೆಯಲ್ಲಿ ಪಾಲುದಾರರಾಗಲು ನಾವು ಸಂತೋಷಿಸುತ್ತೇವೆ. ಈ ಉಪಕ್ರಮ ಯುವಕರನ್ನು ಸಶಕ್ತೀಕರಣಗೊಳಿಸುವಂತಹದಾಗಿದೆ.

ನಮ್ಮ ಎರಡು ದೇಶಗಳ ನಡುವಿನ ಮತ್ತೊಂದು ಮುಖ್ಯ ಸಹಯೋಗ ಸಾಧ್ಯವಾಗುವುದಾದರೆ ಅದು ಮುತ್ತು ಮತ್ತು ಆಭರಣ ಕ್ಷೇತ್ರಗಳಲ್ಲಿ. ಉಭಯ ದೇಶಗಳೂ ವಜ್ರವನ್ನು ನೇರ ಖರೀದಿಯ ಅವಕಾಶಗಳನ್ನು ಅನ್ವೇಷಣೆ ಮಾಡಬಹುದು.

ನಾನು ಖರೀದಿದಾರರು ಮತ್ತು ಮಾರಾಟಗಾರರಿಗೆ ವೆಚ್ಚ ಕಡಿಮೆ ಮಾಡುವ ಆರ್ಥಿಕ ಪ್ರಮಾಣದ ಬಗ್ಗೆ ಖಾತ್ರಿ ನೀಡುತ್ತೇನೆ. ದಕ್ಷಿಣ ಆಫ್ರಿಕಾ ನಮ್ಮ ಆಂದೋಲನವಾದ ಹೊಸ ಮತ್ತು ಪುನರ್ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ, ಅದರಲ್ಲೂ ವಿಶೇಷವಾಗಿ “ ಅಂತಾರಾಷ್ಟ್ರೀಯ ಸೌರ ಮೈತ್ರಿಕೂಟ” ದ ಮೂಲಕ ಕೈಜೋಡಿಸಬಹುದು.

ವ್ಯಾಪಾರೋದ್ಯಮಿಗಳಿಗೆ ಮತ್ತು ಪ್ರವಾಸಿಗರಿಗೆ ಈಗಿರುವ ವೀಸಾ ನಿಯಮಗಳ ಸರಳೀಕರಣ , ಮತ್ತು ನೇರ ಸಂಪರ್ಕ, ವ್ಯಾಪಾರ ಮತ್ತು ಜನತೆ ಹಾಗು ಜನತೆ ನಡುವಿನ ವಿನಿಮಯವನ್ನು ಸುಲಭಗೊಳಿಸಲಿದೆ. ಮಹಿಳೆಯರೇ ಮತ್ತು ಮಹನೀಯರೇ, ಭಾರತ-ಆಫ್ರಿಕಾ ಸಹಭಾಗಿತ್ವದಲ್ಲಿ ದೊಡ್ಡ ಪ್ರಮಾಣದ ಅವಕಾಶಗಳು, ಸಾಮರ್ಥ್ಯಗಳು ಇವೆ. ನಾವು ಎರಡೂ ದೇಶಗಳ ಮತ್ತು ಜನತೆಯ ಲಾಭಕ್ಕಾಗಿ ಸಹಯೋಗದ ಅಭಿವೃದ್ದಿ ಮತ್ತು ಸಮೃದ್ದಿಗಾಗಿ ಹೊಸ ಶಕೆಯನ್ನು ನಿರ್ಮಾಣ ಮಾಡುವತ್ತ ಜತೆಗೂಡಿ ಕಾರ್ಯಪವೃತ್ತರಾಗಬೇಕು.

ಗೌರವಾನ್ವಿತರಾದ ತಮ್ಮ ಭೇಟಿ ನಮಗೆ ಈ ಬಾಂಧವ್ಯವನ್ನು ಮುಂದುವರೆಸಿಕೊಂಡು ಹೋಗಲು ಪ್ರಮುಖ ಅವಕಾಶವನ್ನು ಒದಗಿಸುತ್ತದೆ.

ಗೌರವಾನ್ವಿತರೇ, ಈ ಪರಸ್ಪರ ಜತೆಗೂಡಿ ಸಾಗುವ ಯತ್ನದಲ್ಲಿ ನಾನು ನಿಮ್ಮ ಜೊತೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡಲು ನಾನು ಬದ್ದನಾಗಿದ್ದೇನೆ

ತಮಗೆ ಧನ್ಯವಾದಗಳು,

ನಿಮಗೆ ತುಂಬಾ ತುಂಬಾ ಧನ್ಯವಾದಗಳು.