Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭಾರತ – ಟಿಬೆಟ್ ಗಡಿ ಪೊಲೀಸ್ (ಐಟಿಬಿಪಿ)ಯ ವೃಂದ “ಎ’ ಸಾಮಾನ್ಯ ಸೇವೆ (ಕಾರ್ಯಕಾರಿ) ಕೇಡರ್ ಮತ್ತು ಜಿಡಿಯೇತರ ಕೇಡರ್ ಗಳ ಪರಾಮರ್ಶೆಗೆ ಸಂಪುಟದ ಅನುಮೋದನೆ


ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತ – ಟಿಬೆಟ್ ಗಡಿ ಪೊಲೀಸ್ (ಐಟಿಬಿಪಿ)ಯ ವೃಂದ “ಎ’ ಸಾಮಾನ್ಯ ಸೇವೆ (ಕಾರ್ಯಕಾರಿ) ಕೇಡರ್ ಮತ್ತು ಜಿಡಿಯೇತರ ಕೇಡರ್ ಗಳ ಪರಾಮರ್ಶೆಗೆ ತನ್ನ ಅನುಮೋದನೆ ನೀಡಿದೆ. ಈ ಕೆಳಕಂಡ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ:

i. ವೃಂದ ‘ಎ’ ಜಿಡಿ (ಕಾರ್ಯನಿರ್ವಾಹಕ) ಕೇಡರ್ ಮತ್ತು ಜಿಡಿಯೇತರ ಕೇಡರ್ ಗಳ ಸಹಾಯಕ ಕಮಾಂಡೆಂಟ್ ನಿಂದ ಹಿಡಿದು ಹೆಚ್ಚುವರಿ ಮಹಾ ನಿರ್ದೇಶಕರವರೆಗಿನ ವಿವಿಧ ಶ್ರೇಣಿಯವರೆಗೆ ಐಟಿಬಿಪಿಯ ಹಿರಿಯ ಹುದ್ದೆಗಳಲ್ಲಿ ಮೇಲ್ವಿಚಾರಣಾ ಸಿಬ್ಬಂದಿಯ ಹೆಚ್ಚಳಕ್ಕಾಗಿ ಈ ಕೇಡರ್ ಪರಾಮರ್ಶೆ ನಿರ್ಧಾರ ಕೈಗೊಳ್ಳಲಾಗಿದೆ.

ii. ಇನ್ಸ್ ಪೆಕ್ಟರ್ ಜನರಲ್ ನೆರವಿರುವ ಹೆಚ್ಚುವರಿ ಮಹಾ ನಿರ್ದೇಶಕರುಗಳ ನೇತೃತ್ವದ ಎರಡು ಹೊಸ ಕಮಾಂಡ್ ಗಳ (ಚಂಡೀಗಢದಲ್ಲಿ ಪಶ್ಚಿಮ ಕಮಾಂಡ್ ಮತ್ತು ಗುವಾಹಟಿಯಲ್ಲಿ ಪೂರ್ವ ಕಮಾಂಡ್) ರಚನೆ.

ಪ್ರಮುಖ ಪರಿಣಾಮಗಳು:

· ಐಟಿಬಿಪಿಯಲ್ಲಿ ವೃಂದ ‘ಎ’ ಹುದ್ದೆಗಳ ಸೃಷ್ಟಿಯ ಬಳಿಕ, ಮೇಲ್ವಿಚಾರಣಾ ಕ್ಷಮತೆ ಮತ್ತು ಪಡೆಗಳ ಸಾಮರ್ಥ್ಯವರ್ಧನೆ ಹೆಚ್ಚಾಗಲಿದೆ. ಪಡೆಯಲ್ಲಿ ವೃಂದ ‘ಎ’ನಲ್ಲಿ ಕೇಡರ್ ಪರಾಮರ್ಶೆಯಡಿ ಸಕಾಲದಲ್ಲಿ ಉದ್ದೇಶಿತ ಹುದ್ದೆಗಳ ಸೃಷ್ಟಿಯು ಅದರ ಮೇಲ್ವಿಚಾರಣಾ ಮತ್ತು ಆಡಳಿತಾತ್ಮಕ ದಕ್ಷತೆಯನ್ನು ಹೆಚ್ಚಿಸಲಿದೆ.

· ವಿವಿಧ ಹಂತಗಳಲ್ಲಿ ವೃಂದ ‘ಎ’ ಕಾರ್ಯನಿರ್ವಾಹಕ ಸಾಮಾನ್ಯ ಸೇವೆಯಲ್ಲಿ 60 ಹುದ್ದೆಗಳ ಮತ್ತು ವೃಂದ ‘ಎ’ ಜಿಡಿಯೇತರ ಕೇಡರ್ ನಲ್ಲಿ 2 ಹುದ್ದೆಗಳ ಸೃಷ್ಟಿಗೆ ಪ್ರಸ್ತಾಪಿಸಲಾಗಿದೆ.

· ಈ ಪ್ರಸ್ತಾಪವು ಎರಡು ಹೊಸ ಕಮಾಂಡ್ ಗಳ (ಚಂಡೀಗಢದಲ್ಲಿ ಪಶ್ಚಿಮ ಕಮಾಂಡ್ ಮತ್ತು ಗುವಾಹಟಿಯಲ್ಲಿ ಪೂರ್ವ ಕಮಾಂಡ್) ರಚನೆಯನ್ನೂ ಒಳಗೊಂಡಿದ್ದು, ಇನ್ಸ್ ಪೆಕ್ಟರ್ ಜನರಲ್ ನೆರವಿನ ಹೆಚ್ಚುವರಿ ಮಹಾ ನಿರ್ದೇಶಕರ ನೇತೃತ್ವ ಇರಲಿದೆ.

ಅನುಷ್ಠಾನ:

ವಿಧ್ಯುಕ್ತ ಅಧಿಸೂಚನೆ/ಮಂಜೂರಾತಿಯ ಸ್ವೀಕೃತಿಯ ಮೇರೆಗೆ ಹೊಸದಾಗಿ ಸೃಷ್ಟಿಸಲಾದ ಹುದ್ದೆಗಳನ್ನು ನೇಮಕಾತಿ ನಿಯಮಗಳ ರೀತ್ಯ ಭರ್ತಿ ಮಾಡಲಾಗುವುದು.

ಪ್ರಮುಖ ಅಂಶಗಳು:

ಎ. ಜಿಡಿ ಕೇಡರ್

ವೃಂದ “ಎ’ ಹಾಲಿ ಹುದ್ದೆಗಳ ಸ್ವರೂಪದಲ್ಲಿ 1147ರಿಂದ 1207 ಹುದ್ದೆಗಳಿಗೆ ಹೆಚ್ಚಳ ಈ ಕೆಳಕಂಡಂತಿದೆ:-

1. ಹೆಚ್ಚುವರಿ ಮಹಾ ನಿರ್ದೇಶಕರುಗಳ ಹುದ್ದೆಗಳಲ್ಲಿ ನಿವ್ವಳ 02 ಹೆಚ್ಚಳ

2. ಇನ್ಸ್ ಪೆಕ್ಟರ್ ಜನರಲ್ ಹುದ್ದೆಗಳಲ್ಲಿ ನಿವ್ವಳ 10 ಹೆಚ್ಚಳ

3. ಉಪ ಇನ್ಸ್ ಪೆಕ್ಟರ್ ಜನರಲ್ ಹುದ್ದೆಗಳಲ್ಲಿ ನಿವ್ವಳ 10 ಹೆಚ್ಚಳ

4. ಕಮಾಂಡೆಂಟ್ ಹುದ್ದೆಗಳಲ್ಲಿ ನಿವ್ವಳ 13 ಹೆಚ್ಚಳ

5. 21 ಸಿ ಹುದ್ದೆಗಳಲ್ಲಿ ನಿವ್ವಳ 16 ಹೆಚ್ಚಳ

6. ಉಪ ಕಮಾಂಡೆಂಟ್ ಹುದ್ದೆಯಲ್ಲಿ ನಿವ್ವಳ 09 ಹೆಚ್ಚಳ

ಬಿ. ಜಿಡಿಯೇತರ ಕೇಡರ್

ಸಿ. ಇನ್ಸ್ ಪೆಕ್ಟರ್ ಜನರಲ್ ಗಳ ಹುದ್ದೆಯಲ್ಲಿ ಹೊಸದಾಗಿ 02 ಹೆಚ್ಚಳ

ಹಿನ್ನೆಲೆ:

1962ರಲ್ಲಿ ನಮ್ಮ ಉತ್ತರದ ಗಡಿಗಳಲ್ಲಿ ಚೈನಾದ ಆಕ್ರಮಣಕಾರಿತನದ ಹಿನ್ನೆಲೆಯಲ್ಲಿ ಭಾರತ – ಟೆಬೆಟ್ ಗಡಿ ಪೊಲೀಸ್ ಪಡೆಗಳ ಪರಿಕಲ್ಪನೆ ಮೂಡಿತು. ಪಡೆಯನ್ನು ಮೊದಲ ಬಾರಿಗೆ ನಾಲ್ಕು ಸೇವಾ ತುಕಡಿಗಳೊಂದಿಗೆ ಆರಂಭಿಸಲಾಯಿತು. ತದನಂತರ, ಅಗತ್ಯಕ್ಕೆ ಅನುಗುಣವಾಗಿ 1978 ಮತ್ತು 1987ರಲ್ಲಿ ಅನುಕ್ರಮವಾಗಿ ಪುನರ್ ಸಂಘಟನೆ ಮತ್ತು ಕೇಡರ್ ಪುನರ್ ರೂಪಿಸುವ ಮೂಲಕ ಪಡೆಗಳನ್ನು ಹಲವು ಪಟ್ಟು ವಿಸ್ತರಿಸಲಾಯಿತು.

ಪಡೆಗಳ ಪ್ರಥಮ ಕೇಡರ್ ಪರಾಮರ್ಶೆಯು 1988ರಲ್ಲಿ ನಡೆಯಿತು ಮತ್ತು ಪಡೆಗಳ ಬಲವನ್ನು 27,298ಕ್ಕೆ ಹೆಚ್ಚಿಸಲಾಯಿತು. ತದನಂತರ, ಪಡೆಗಳ ಎರಡನೇ ಕೇಡರ್ ಪರಾಮರ್ಶೆಯನ್ನು 2001ರಲ್ಲಿ ಮಾಡಲಾಯಿತು ಮತ್ತು ಆಗ ಬಲವನ್ನು 32,386ಕ್ಕೆ ಹೆಚ್ಚಿಸಲಾಯಿತು. ಪ್ರಸ್ತುತ ಪಡೆಗಳ ಬಲ 89,429 ಆಗಿದೆ.

ಪ್ರಸ್ತುತ ಡಿಜಿಯ ಒಂದು ಹುದ್ದೆಯಿದ್ದು, ಅವರು ಪಡೆಗಳ ಮುಖ್ಯಸ್ತರಾಗಿದ್ದಾರೆ ಮತ್ತು ಒಂದು ಎಡಿಜಿ ಹುದ್ದೆ ಪಡೆಗಳ ಕೇಂದ್ರ ಕಚೇರಿಯಲ್ಲಿದೆ. ಪಡೆಯಲ್ಲಿ ಇನ್ಸ್ ಪೆಕ್ಟರ್ ಜನರಲ್ ಗಳ 10 ಹುದ್ದೆಗಳು/ಜಿಡಿ (ಕಾರ್ಯಕಾರಿ) ಕೇಡರ್ ಅಧಿಕೃತವಾಗಿದೆ. ಡಿಜಿ ಮತ್ತು ಎಡಿಜಿ ಹುದ್ದೆಗಳನ್ನು ಐಪಿಎಸ್ ಅಧಿಕಾರಿಗಳ ನಿಯೋಜನೆಯ ಮೂಲಕ ಭರ್ತಿ ಮಾಡಲಾಗುತ್ತಿದ್ದರೆ, ಇನ್ಸ್ ಪೆಕ್ಟರ್ ಜನರಲ್ (ಐಜಿ) ಶ್ರೇಣಿಯಲ್ಲಿ ಶೇಕಡ 50ರಷ್ಟು ಹುದ್ದೆಗಳನ್ನು ನಿಯೋಜನೆಯಿಂದ, ಉಪ ಇನ್ಸ್ ಪೆಕ್ಟರ್ ಜನರಲ್ (ಡಿಐಜಿ) ಶ್ರೇಣಿಯ ಶೇ.80 ಹುದ್ದೆಗಳನ್ನು ಕೇಡರ್ ಅಧಿಕಾರಿಗಳ ಬಡ್ತಿಯಿಂದ ತುಂಬಲಾಗುತ್ತಿದೆ.

*****