Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭಾರತ-ಚೀನಾ ಗಡಿ ಪ್ರದೇಶಗಳ ಪರಿಸ್ಥಿತಿ ಚರ್ಚೆಗೆ ಪ್ರಧಾನಿಯವರಿಂದ ಸರ್ವಪಕ್ಷ ಸಭ


 

 

ಭಾರತಚೀನಾ ಗಡಿ ಪ್ರದೇಶಗಳಲ್ಲಿನ ಪರಿಸ್ಥಿತಿ ಕುರಿತು ಚರ್ಚಿಸಲು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸರ್ವಪಕ್ಷ ಸಭೆ ನಡೆಸಿದರುಸಭೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಅಧ್ಯಕ್ಷರು ಭಾಗವಹಿಸಿದ್ದರು.

ಸಶಸ್ತ್ರ ಪಡೆಗಳ ಪರಾಕ್ರಮ

ನಮ್ಮ ಗಡಿಗಳನ್ನು ರಕ್ಷಿಸುವ ಸೈನಿಕರೊಂದಿಗೆ ಇಂದು ನಾವೆಲ್ಲರೂ ಒಗ್ಗೂಡಿ ನಿಂತಿದ್ದೇವೆ ಮತ್ತು ಅವರ ಧೈರ್ಯ ಮತ್ತು ಸಾಹಸದ ಬಗ್ಗೆ ಸಂಪೂರ್ಣ ನಂಬಿಕೆಯನ್ನು ಹೊಂದಿದ್ದೇವೆ ಎಂದು ಪ್ರಧಾನಿ ಒತ್ತಿಹೇಳಿದರುಸರ್ವಪಕ್ಷ ಸಭೆಯ ಮೂಲಕಹುತಾತ್ಮರ ಕುಟುಂಬಗಳೊಂದಿಗೆ ಇಡೀ ದೇಶವು ನಿಲ್ಲುತ್ತದೆ ಎಂದು ಭರವಸೆ ನೀಡುತ್ತೇನೆ ಎಂದು ಅವರು ಹೇಳಿದರು.

ನಮ್ಮ ಭೂಪ್ರದೇಶದೊಳಗೆ ಯಾರೂ ಬಂದಿಲ್ಲ ಅಥವಾ ನಮ್ಮ ಯಾವುದೇ ನೆಲೆಯನ್ನು ವಶಪಡಿಸಿಕೊಂಡಿಲ್ಲ ಎಂದು ಪ್ರಾರಂಭದಲ್ಲಿಯೇ ಪ್ರಧಾನಿ ಸ್ಪಷ್ಟಪಡಿಸಿದರುನಮ್ಮ ಧೈರ್ಯಶಾಲಿ ಸೈನಿಕರಲ್ಲಿ ಇಪ್ಪತ್ತು ಮಂದಿ ಲಡಾಖ್ನಲ್ಲಿ ರಾಷ್ಟ್ರಕ್ಕಾಗಿ ಸರ್ವೋಚ್ಚ ತ್ಯಾಗ ಮಾಡಿದರು ಆದರೆ ನಮ್ಮ ತಾಯಿನಾಡಿನ ಕಡೆಗೆ ನೋಡುವ ಧೈರ್ಯ ಮಾಡಿದವರಿಗೆ ಪಾಠವನ್ನೂ ಕಲಿಸಿದರು ಎಂದು ಅವರು ಹೇಳಿದರುರಾಷ್ಟ್ರವು ಅವರ ಶೌರ್ಯ ಮತ್ತು ತ್ಯಾಗವನ್ನು ಶಾಶ್ವತವಾಗಿ ಸ್ಮರಿಸಿಕೊಳ್ಳುತ್ತದೆ ಎಂದರು.

ಎಲ್ಎಸಿಯಲ್ಲಿ ಚೀನಾದ ಕ್ರಮಗಳ ಬಗ್ಗೆ ಇಡೀ ದೇಶ ನೋವುಂಡಿದೆ ಮತ್ತು ಕೋಪಗೊಂಡಿದೆ ಎಂದು ಪ್ರಧಾನಿ ಹೇಳಿದರುನಮ್ಮ ಸಶಸ್ತ್ರ ಪಡೆಗಳು ದೇಶವನ್ನು ರಕ್ಷಿಸಲು ಯಾವುದೇ ಅವಕಾಶವನ್ನೂ ಕಳೆದುಕೊಳ್ಳುವುದಿಲ್ಲ ಎಂದು ಅವರು ನಾಯಕರಿಗೆ ಭರವಸೆ ನೀಡಿದರುಅದು ನಿಯೋಜನೆಯಾಗಿರಲಿಕ್ರಮವಾಗಿರಲಿ ಅಥವಾ ಪ್ರತಿ ಕ್ರಮವಾಗಿರಲಿಭೂಮಿಸಮುದ್ರ ಅಥವಾ ಗಾಳಿಯ ಮೂಲಕ ನಮ್ಮ ಪಡೆಗಳು ದೇಶವನ್ನು ರಕ್ಷಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆದೇಶವು ಇಂದು ಅಂತಹ ಸಾಮರ್ಥ್ಯವನ್ನು ಹೊಂದಿದೆ ಎಂದು ಅವರು ಒತ್ತಿಹೇಳಿದರುನಮ್ಮ ಭೂಮಿಯ ಒಂದು ಅಂಗುಲದ ಕಡೆಗೂ ನೋಡುವ ಧೈರ್ಯ ಯಾರಿಗೂ ಇಲ್ಲಇಂದುಭಾರತೀಯ ಪಡೆಗಳು ಕ್ಷೇತ್ರಗಳಾದ್ಯಂತ ಒಟ್ಟಾಗಿ ಚಲಿಸುವ ಸಾಮರ್ಥ್ಯವನ್ನು ಹೊಂದಿವೆ ಎಂದು ಅವರು ಹೇಳಿದರುಒಂದೆಡೆಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಸೈನ್ಯಕ್ಕೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆಹಾಗೆಯೇ ಭಾರತವು ಚೀನಾಕ್ಕೆ ತನ್ನ ಅಭಿಪ್ರಾಯವನ್ನು ರಾಜತಾಂತ್ರಿಕ ಮಾರ್ಗಗಳ ಮೂಲಕ ಸ್ಪಷ್ಟವಾಗಿ ತಿಳಿಸಿದೆ ಎಂದು ಪ್ರಧಾನಿ ತಿಳಿಸಿದರು.

ಗಡಿ ಮೂಲಸೌಕರ್ಯವನ್ನು ಹೆಚ್ಚಿಸುವುದು

ಭಾರತವು ಶಾಂತಿ ಮತ್ತು ಸ್ನೇಹವನ್ನು ಬಯಸುತ್ತದೆಆದರೆ ತನ್ನ ಸಾರ್ವಭೌಮತ್ವವನ್ನು ಕಾಪಾಡುವುದು ಮೊದಲ ಪ್ರಾಶಸ್ತ್ಯವಾಗಿದೆ ಎಂದು ಪ್ರಧಾನಿ ಒತ್ತಿಹೇಳಿದರುನಮ್ಮ ಗಡಿಗಳನ್ನು ಹೆಚ್ಚು ಸುರಕ್ಷಿತವಾಗಿಸಲು ಗಡಿ ಪ್ರದೇಶದ ಮೂಲಸೌಕರ್ಯಗಳ ಅಭಿವೃದ್ಧಿಗೆ ಸರ್ಕಾರ ಆದ್ಯತೆ ನೀಡಿದೆ ಎಂದು ಅವರು ಹೇಳಿದರುಯುದ್ಧ ವಿಮಾನಗಳುಆಧುನಿಕ ಹೆಲಿಕಾಪ್ಟರ್ಗಳುಕ್ಷಿಪಣಿ ರಕ್ಷಣಾ ವ್ಯವಸ್ಥೆಗಳು ಮತ್ತು ನಮ್ಮ ಪಡೆಗಳ ಇತರ ಅಗತ್ಯಗಳಿಗೆ ಸಹ ಅವಕಾಶ ಕಲ್ಪಿಸಲಾಗಿದೆಇತ್ತೀಚೆಗೆ ಅಭಿವೃದ್ಧಿಪಡಿಸಿದ ಮೂಲಸೌಕರ್ಯಗಳ ಮೂಲಕಎಲ್ಎಸಿಯಲ್ಲಿ ಗಸ್ತು ತಿರುಗುವ ಸಾಮರ್ಥ್ಯವೂ ಹೆಚ್ಚಾಗಿದೆಇದರ ಮೂಲಕ ಎಲ್ಎಸಿಯ ಬೆಳವಣಿಗೆಗಳ ಬಗ್ಗೆ ನಮಗೆ ಉತ್ತಮ ಮಾಹಿತಿ ದೊರೆಯುತ್ತಿದೆಪರಿಣಾಮವಾಗಿ ಉತ್ತಮ ಮೇಲ್ವಿಚಾರಣೆ ಮತ್ತು ಉನ್ನತ ಪ್ರತಿಕ್ರಿಯೆ ಸಾಧ್ಯವಾಗುತ್ತಿದೆ ಎಂದು ಅವರು ಹೇಳಿದರುಮೊದಲು ಯಾವುದೇ ಅಡೆತಡೆಯಿಲ್ಲದೆ ನಡೆಯುತ್ತಿದ್ದ ಚಲನವಲನಗಳನ್ನು ಈಗ ನಮ್ಮ ಸೈನಿಕರು ತಡೆದಿದ್ದಾರೆಇದು ಕೆಲವೊಮ್ಮೆ ಉದ್ವೇಗ ಹೆಚ್ಚಾಗಲು ಕಾರಣವಾಗುತ್ತದೆಉತ್ತಮ ಮೂಲಸೌಕರ್ಯಗಳ ಮೂಲಕ ಕಷ್ಟಕರವಾದ ಭೂಪ್ರದೇಶದಲ್ಲಿ ಸೈನಿಕರಿಗೆ ಸಾಮಗ್ರಿಗಳು ಮತ್ತು ಅಗತ್ಯ ವಸ್ತುಗಳ ಪೂರೈಕೆ ಸುಲಭವಾಗಿದೆ ಎಂದು ಅವರು ಹೇಳಿದರು.

ದೇಶ ಮತ್ತು ಅದರ ನಾಗರಿಕರ ಕಲ್ಯಾಣಕ್ಕಾಗಿ ಸರ್ಕಾರದ ಬದ್ಧತೆಯನ್ನು ಪ್ರಧಾನಿ ಒತ್ತಿಹೇಳಿದರು ಅದು ವ್ಯಾಪಾರವಾಗಲೀಸಂಪರ್ಕವಾಗಲೀ ಅಥವಾ ಭಯೋತ್ಪಾದನೆ ನಿಗ್ರಹವಾಗಲೀ ಸರ್ಕಾರವು ಯಾವಾಗಲೂ ಬಾಹ್ಯ ಒತ್ತಡಕ್ಕೆ ಬಗ್ಗುವುದಿಲ್ಲ ಎಂದು ಹೇಳಿದರುರಾಷ್ಟ್ರೀಯ ಭದ್ರತೆ ಮತ್ತು ಅಗತ್ಯ ಮೂಲಸೌಕರ್ಯಗಳ ನಿರ್ಮಾಣಕ್ಕೆ ಅಗತ್ಯವಾದ ಎಲ್ಲಾ ಕ್ರಮಗಳನ್ನು ತ್ವರಿತಗತಿಯಲ್ಲಿ ಮುಂದುವರಿಸಲಾಗುವುದು ಎಂದು ಅವರು ಭರವಸೆ ನೀಡಿದರುನಮ್ಮ ಗಡಿಗಳನ್ನು ರಕ್ಷಿಸುವ ಸಶಸ್ತ್ರ ಪಡೆಗಳ ಸಾಮರ್ಥ್ಯದ ಬಗ್ಗೆ ಅವರು ನಾಯಕರಿಗೆ ಭರವಸೆ ನೀಡಿದರುಅಗತ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲು ಅವರಿಗೆ ಮುಕ್ತ ಸ್ವಾತಂತ್ರ್ಯ ನೀಡಲಾಗಿದೆ ಎಂದು ತಿಳಿಸಿದರು.

ಹುತಾತ್ಮರ ತ್ಯಾಗವನ್ನು ರಾಷ್ಟ್ರ ಎಂದಿಗೂ ಮರೆಯುವುದಿಲ್ಲ ಎಂದು ರಕ್ಷಣಾ ಸಚಿವ ಶ್ರೀ ರಾಜನಾಥ್ ಸಿಂಗ್ ಹೇಳಿದರುಗಡಿ ನಿರ್ವಹಣೆ ಕುರಿತು ಭಾರತ ಮತ್ತು ಚೀನಾ ನಡುವಿನ ಒಪ್ಪಂದಗಳ ಬಗ್ಗೆ ವಿದೇಶಾಂಗ ಸಚಿವ ಡಾ.ಎಸ್.ಜೈಶಂಕರ್ ಪಕ್ಷಿನೋಟ ನೀಡಿದರು, 1999 ರಲ್ಲಿ ಸಂಪುಟವು ಗುರುತಿಸಿದ ಮತ್ತು ಅನುಮೋದಿಸಿದ ಗಡಿ ಪ್ರದೇಶಗಳಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲು 2014 ರಲ್ಲಿ ಪ್ರಧಾನಿಯವರು ನೀಡಿದ ನಿರ್ದೇಶನಗಳ ಬಗ್ಗೆ ಮಾಹಿತಿ ನೀಡಿದರುಮತ್ತು ಇತ್ತೀಚಿನ ಬೆಳವಣಿಗೆಗಳ ವಿವರಗಳನ್ನು ಸಹ ಹಂಚಿಕೊಂಡರು.

ರಾಜಕೀಯ ಪಕ್ಷಗಳ ನಾಯಕರು ಮಾತು

ಲಡಾಖ್ನಲ್ಲಿ ಸಶಸ್ತ್ರ ಪಡೆಗಳು ಪ್ರದರ್ಶಿಸಿದ ಧೈರ್ಯವನ್ನು ರಾಜಕೀಯ ಪಕ್ಷಗಳ ಮುಖಂಡರು ಶ್ಲಾಘಿಸಿದರು ಸಂದರ್ಭದಲ್ಲಿ ಅವರು ಪ್ರಧಾನ ಮಂತ್ರಿಯವರ ನಾಯಕತ್ವದಲ್ಲಿ ನಂಬಿಕೆ ಮತ್ತು ಸರ್ಕಾರದೊಂದಿಗೆ ಒಟ್ಟಾಗಿ ನಿಲ್ಲುವ ಬದ್ಧತೆಯನ್ನು ವ್ಯಕ್ತಪಡಿಸಿದರುಪರಿಸ್ಥಿತಿಯನ್ನು ಎದುರಿಸುವ ಬಗ್ಗೆ ಅವರು ತಮ್ಮ ಆಲೋಚನೆಗಳು ಮತ್ತು ಅಭಿಪ್ರಾಯಗಳನ್ನು ಹಂಚಿಕೊಂಡರು.

ತಮ್ಮ ಪಕ್ಷವು ಸರ್ಕಾರದೊಂದಿಗೆ ಬಲವಾಗಿ ನಿಂತಿದೆ ಎಂದು ಶ್ರೀಮತಿ ಮಮತಾ ಬ್ಯಾನರ್ಜಿ ಹೇಳಿದರುನಾಯಕರ ನಡುವೆ ಯಾವುದೇ ಭಿನ್ನಾಭಿಪ್ರಾಯಗಳು ಇರಬಾರದು ಮತ್ತು ಇತರ ರಾಷ್ಟ್ರಗಳು ದುರುಪಯೋಗ ಮಾಡಿಕೊಳ್ಳಬಹುದಾದ ಯಾವುದೇ ಭಿನ್ನಾಭಿಪ್ರಾಯಗಳಿಗೆ ಪಕ್ಷಗಳು ಅವಕಾಶ ನೀಡಬಾರದು ಎಂದು ಶ್ರೀ ನಿತೀಶ್ ಕುಮಾರ್ ಹೇಳಿದರುಪ್ರಧಾನಿ ನಾಯಕತ್ವದಲ್ಲಿ ದೇಶ ಸುರಕ್ಷಿತವಾಗಿದೆ ಎಂದು ಶ್ರೀ ಚಿರಾಗ್ ಪಾಸ್ವಾನ್ ಹೇಳಿದರುಪ್ರಧಾನಿಯವರನ್ನು ಶ್ಲಾಘಿಸಿದ ಶ್ರೀ ಉದ್ಧವ್ ಠಾಕ್ರೆಇಡೀ ದೇಶವು ಒಟ್ಟಾಗಿ ಪ್ರಧಾನ ಮಂತ್ರಿಯವರೊಂದಿಗೆ ಇದೆ ಎಂದು ಹೇಳಿದರು.

ನಾಯಕರು ಹಲವು ವಿವರಗಳ ಬಗ್ಗೆ ಇನ್ನೂ ಕತ್ತಲೆಯಲ್ಲಿದ್ದಾರೆಗುಪ್ತಚರ ವರದಿಗಳು ಮತ್ತು ಇತರ ಸಂಬಂಧಿತ ವಿಷಯಗಳ ಬಗ್ಗೆ ಸರ್ಕಾರವನ್ನು ಪ್ರಶ್ನಿಸಿದ್ದಾರೆ ಎಂದು ಶ್ರೀಮತಿ ಸೋನಿಯಾ ಗಾಂಧಿ ಹೇಳಿದರುಸೈನಿಕರು ಶಸ್ತ್ರಾಸ್ತ್ರಗಳನ್ನು ಒಯ್ಯುತ್ತಾರೋ ಇಲ್ಲವೋ ಎಂಬ ವಿಷಯಗಳು ಅಂತರರಾಷ್ಟ್ರೀಯ ಒಪ್ಪಂದಗಳಿಂದ ನಿರ್ಧರಿಸಲ್ಪಡುತ್ತವೆ ಮತ್ತು ಅಂತಹ ವಿಷಯಗಳಲ್ಲಿ ಇರುವ ಸೂಕ್ಷ್ಮತೆಗಳನ್ನು ಪಕ್ಷಗಳು ಗೌರವಿಸುವ ಅಗತ್ಯವಿದೆ ಎಂದು ಶ್ರೀ ಶರದ್ ಪವಾರ್ ಒತ್ತಿ ಹೇಳಿದರುಪ್ರಧಾನಿಯವರು ಈಶಾನ್ಯದಲ್ಲಿ ಮೂಲಸೌಕರ್ಯಗಳ ಬಗ್ಗೆ ಕೆಲಸ ಮಾಡುತ್ತಿದ್ದಾರೆ ಮತ್ತು ಅದು ಮುಂದುವರಿಯಬೇಕು ಎಂದು ಶ್ರೀ ಕಾನ್ರಾಡ್ ಸಂಗ್ಮಾ ಹೇಳಿದರುಶ್ರೀಮತಿ ಮಾಯಾವತಿ ಮಾತನಾಡಿಇದು ರಾಜಕೀಯದ ಸಮಯವಲ್ಲಪ್ರಧಾನಿಯವರು ತೆಗೆದುಕೊಳ್ಳುವ ಯಾವುದೇ ನಿರ್ಧಾರಗಳ ಜೊತೆಗೆ ದೃಢವಾಗಿ ನಿಲ್ಲುತ್ತೇವೆ ಎಂದು ಹೇಳಿದರು ಕುರಿತು ಪ್ರಧಾನಿಯವರು ಇತ್ತೀಚೆಗೆ ನೀಡಿದ ಹೇಳಿಕೆಯನ್ನು ಶ್ರೀ ಎಂ.ಕೆ.ಸ್ಟಾಲಿನ್ ಸ್ವಾಗತಿಸಿದರು.

ಸಭೆಯಲ್ಲಿ ಭಾಗವಹಿಸಿದ್ದಕ್ಕಾಗಿ ಮತ್ತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಕ್ಕಾಗಿ ಪ್ರಧಾನಿಯವರು ಪಕ್ಷಗಳ ನಾಯಕರಿಗೆ ಧನ್ಯವಾದ ತಿಳಿಸಿದರು.

***