ಗೌರವಾನ್ವಿತರೇ, ನಮಸ್ಕಾರ!
ಮೊದಲನೆಯದಾಗಿ, ಆಸ್ಟ್ರೇಲಿಯಾದಲ್ಲಿ ಕೋವಿಡ್-19 ರಿಂದ ಬಳಲುತ್ತಿರುವ ಜನರು ಮತ್ತು ಅವರ ಕುಟುಂಬಗಳಿಗೆ ವೈಯಕ್ತಿವಾಗಿ ಮತ್ತು ಇಡೀ ಭಾರತದ ಪರವಾಗಿ ನಾನು ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ಈ ಜಾಗತಿಕ ಸಾಂಕ್ರಾಮಿಕ ರೋಗವು ವಿಶ್ವದ ಎಲ್ಲಾ ರೀತಿಯ ವ್ಯವಸ್ಥೆಗಳ ಮೇಲೆ ಪರಿಣಾಮ ಬೀರಿದೆ. ನಮ್ಮ ಶೃಂಗಸಭೆಯ ಈ ಡಿಜಿಟಲ್ ರೂಪವು ಸಹ ಇದೇ ಪರಿಣಾಮಗಳ ಉದಾಹರಣೆಯಾಗಿದೆ.
ಗೌರವಾನ್ವಿತರೇ, ಈ ಡಿಜಿಟಲ್ ಮಾಧ್ಯಮದ ಮೂಲಕ ನಿಮ್ಮನ್ನು ಭೇಟಿಯಾಗುತ್ತಿರುವುದು ನನಗೆ ಸಂತೋಷ ತಂದಿದೆ. ಆದರೆ ಸ್ವಲ್ಪ ನಿರಾಶೆಯೂ ಆಗಿದೆ. ಏಕೆಂದರೆ ಭಾರತದಲ್ಲಿ ನಿಮ್ಮನ್ನು ಆತ್ಮೀಯವಾಗಿ ಸ್ವಾಗತಿಸಲು ನಮಗೆ ಅವಕಾಶ ತಪ್ಪಿ ಹೋಯಿತು. ನಿಮ್ಮ ಭಾರತ ಭೇಟಿಗಾಗಿ ನಾವು ಮೊದಲು ಜನವರಿಯಲ್ಲಿ ಮತ್ತು ನಂತರ ಕಳೆದ ತಿಂಗಳು ಕಾಯುತ್ತಿದ್ದೆವು. ಆದರೆ ದುರದೃಷ್ಟವಶಾತ್, ನಿಮ್ಮ ಎರಡೂ ಭೇಟಿಗಳನ್ನು ಮುಂದೂಡಬೇಕಾಯಿತು. ಇಂದಿನ ನಮ್ಮ ಸಭೆಯು ನಿಮ್ಮ ಭಾರತ ಭೇಟಿಗೆ ಸಾಟಿಯಾಗುವುದಿಲ್ಲ. ಪರಿಸ್ಥಿತಿ ಸುಧಾರಿಸಿದ ನಂತರ ಶೀಘ್ರದಲ್ಲೇ ತಮ್ಮ ಕುಟುಂಬದೊಂದಿಗೆ ಭಾರತಕ್ಕೆ ಭೇಟಿ ನೀಡಲು ಮತ್ತು ನಮ್ಮ ಆತಿಥ್ಯವನ್ನು ಸ್ವೀಕರಿಸಬೇಕೆಂದು ಸ್ನೇಹಿತನಾಗಿ ನಿಮ್ಮನ್ನು ಒತ್ತಾಯಿಸುತ್ತೇನೆ.
ಗೌರವಾನ್ವಿತರೇ, ಭಾರತ–ಆಸ್ಟ್ರೇಲಿಯಾ ಸಂಬಂಧಗಳು ವ್ಯಾಪಕವಾದವು ಮತ್ತು ಗಾಢವಾದವು. ಈ ಗಾಢತೆಯು ನಮ್ಮ ಹಂಚಿಕೆಯ ಮೌಲ್ಯಗಳು, ಹಂಚಿಕೆಯ ಆಸಕ್ತಿಗಳು, ಹಂಚಿಕೆಯ ಭೌಗೋಳಿಕತೆ ಮತ್ತು ಹಂಚಿಕೆಯ ಉದ್ದೇಶಗಳಿಂದ ಬಂದಿವೆ. ಕಳೆದ ಕೆಲವು ವರ್ಷಗಳಲ್ಲಿ, ನಮ್ಮ ಸಹಕಾರ ಮತ್ತು ಸಹಯೋಗವು ವೇಗವನ್ನು ಪಡೆದುಕೊಂಡಿದೆ. ನಮ್ಮ ಸಂಬಂಧದ ಒಂದು ತುದಿಯು ನಿಮ್ಮಂತಹ ಪ್ರಬಲ ಮತ್ತು ದೂರದೃಷ್ಟಿಯ ನಾಯಕರ ಕೈಯಲ್ಲಿರುವುದು ನಮ್ಮ ಅದೃಷ್ಟವಾಗಿದೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಸಂಬಂಧವನ್ನು ಮತ್ತಷ್ಟು ಬಲಪಡಿಸಲು ಇದು ಸೂಕ್ತ ಸಮಯ ಹಾಗೂ ಸೂಕ್ತ ಅವಕಾಶ ಎಂದು ನಾನು ನಂಬಿದ್ದೇನೆ.
ನಮ್ಮ ಸ್ನೇಹವನ್ನು ಬಲಪಡಿಸಲು ನಮಗೆ ಅಪಾರ ಸಾಧ್ಯತೆಗಳಿವೆ. ಈ ಸಾಧ್ಯತೆಗಳು ತಮ್ಮೊಂದಿಗೆ ಸವಾಲುಗಳನ್ನು ಸಹ ತರುತ್ತವೆ. ಈ ಸಾಧ್ಯತೆಗಳನ್ನು ವಾಸ್ತವವಾಗಿಸುವುದು ಹೇಗೆ ಎಂಬ ಸವಾಲುಗಳಿವೆ. ಇದರಿಂದ ಎರಡೂ ದೇಶಗಳ ನಾಗರಿಕರು, ವ್ಯವಹಾರಗಳು, ಶಿಕ್ಷಣ ತಜ್ಞರು, ಸಂಶೋಧಕರು ಇತ್ಯಾದಿಗಳ ನಡುವಿನ ಸಂಪರ್ಕವು ಬಲಗೊಳ್ಳುತ್ತದೆ. ನಮ್ಮ ಸಂಬಂಧಗಳು ಈ ಪ್ರದೇಶ ಮತ್ತು ಜಗತ್ತಿಗೆ ಹೇಗೆ ಸ್ಥಿರತೆಯ ಅಂಶವಾಗಬಹುದು; ಜಾಗತಿಕ ಒಳಿತಿಗಾಗಿ ನಾವು ಹೇಗೆ ಒಟ್ಟಾಗಿ ಕೆಲಸ ಮಾಡಬಹುದು; ಈ ಎಲ್ಲಾ ಅಂಶಗಳನ್ನು ಪರಿಗಣಿಸಬೇಕಾಗಿದೆ.
ಗೌರವಾನ್ವಿತರೇ, ಸಮಕಾಲೀನ ಜಗತ್ತಿನಲ್ಲಿ ಪರಸ್ಪರರ ದೇಶಗಳ ನಿರೀಕ್ಷೆಗಳು ಮತ್ತು ನಮ್ಮ ನಾಗರಿಕರ ನಿರೀಕ್ಷೆಗಳು ಹೆಚ್ಚಾಗಿವೆ. ಪ್ರಜಾಪ್ರಭುತ್ವ ಮೌಲ್ಯಗಳನ್ನು ಹಂಚಿಕೊಳ್ಳುವ ಮೂಲಕ, ಈ ನಿರೀಕ್ಷೆಗಳಿಗೆ ತಕ್ಕಂತೆ ನಡೆದುಕೊಳ್ಳುವ ಜವಾಬ್ದಾರಿ ನಮಗಿಬ್ಬರಿಗೂ ಇದೆ. ಆದ್ದರಿಂದ, ಪ್ರಜಾಪ್ರಭುತ್ವ, ಕಾನೂನು, ಸ್ವಾತಂತ್ರ್ಯ, ಪರಸ್ಪರ ಗೌರವ, ಅಂತರರಾಷ್ಟ್ರೀಯ ಸಂಸ್ಥೆಗಳಿಗೆ ಮನ್ನಣೆ ಮತ್ತು ಪಾರದರ್ಶಕತೆ ಮುಂತಾದ ಜಾಗತಿಕ ಮೌಲ್ಯಗಳನ್ನು ಎತ್ತಿಹಿಡಿಯುವುದು ಮತ್ತು ರಕ್ಷಿಸುವುದು ನಮ್ಮ ಹೊಣೆಗಾರಿಕೆಯಾಗಿದೆ. ಇದು ಒಂದು ರೀತಿಯಲ್ಲಿ ಭವಿಷ್ಯಕ್ಕಾಗಿ ನಮ್ಮ ಪರಂಪರೆಯಾಗಿದೆ. ಇಂದು ಈ ಮೌಲ್ಯಗಳಿಗೆ ಸವಾಲು ಎದುರಾದಾಗ, ನಾವು ನಮ್ಮ ಸಂಬಂಧಗಳನ್ನು ಬಲಪಡಿಸಿಕೊಳ್ಳುವ ಮೂಲಕವೇ ಅವುಗಳನ್ನು ಬಲಪಡಿಸಬಹುದು.
ಗೌರವಾನ್ವಿತರೇ, ಭಾರತವು ಆಸ್ಟ್ರೇಲಿಯಾದೊಂದಿಗಿನ ತನ್ನ ಸಂಬಂಧವನ್ನು ಸಮಗ್ರವಾಗಿ ಮತ್ತು ತ್ವರಿತವಾಗಿ ವಿಸ್ತರಿಸಲು ಬದ್ಧವಾಗಿದೆ. ಇದು ನಮ್ಮ ಎರಡು ದೇಶಗಳಿಗೆ ಮಾತ್ರವಲ್ಲದೆ ಇಂಡೋ–ಪೆಸಿಫಿಕ್ ಪ್ರದೇಶ ಮತ್ತು ಇಡೀ ವಿಶ್ವಕ್ಕೂ ಮುಖ್ಯವಾಗಿದೆ. ನಮ್ಮ ವಿವಿಧ ಸಾಂಸ್ಥಿಕ ಮಾತುಕತೆಗಳು ನಮ್ಮ ಸಂಬಂಧಗಳಿಗೆ ದೃಢತೆಯನ್ನು ಒದಗಿಸುತ್ತಿರುವುದಕ್ಕೆ ನನಗೆ ಸಂತೋಷವಾಗಿದೆ. ಉಭಯ ದೇಶಗಳ ನಡುವೆ ನಿರಂತರವಾದ ಉನ್ನತ ಮಟ್ಟದ ವಿನಿಮಯವೂ ಇದೆ. ವ್ಯಾಪಾರ ಮತ್ತು ಹೂಡಿಕೆ ಕೂಡ ಹೆಚ್ಚುತ್ತಿದೆ. ಆದರೆ ಈ ವಿಸ್ತರಣೆ ಮತ್ತು ಈ ಗತಿಯ ಬಗ್ಗೆ ನನಗೆ ತೃಪ್ತಿ ಇದೆ ಎಂದು ನಾನು ಹೇಳುವುದಿಲ್ಲ. ನಿಮ್ಮಂತಹ ನಾಯಕರು ನಮ್ಮ ಮಿತ್ರ ದೇಶವನ್ನು ಮುನ್ನಡೆಸುತ್ತಿರುವಾಗ, ನಮ್ಮ ಸಂಬಂಧಗಳಲ್ಲಿ ಅಭಿವೃದ್ಧಿಯ ಗತಿಯ ಮಾನದಂಡಗಳು ಸಹ ಮಹತ್ವಾಕಾಂಕ್ಷಿಯಾಗಿರಬೇಕು. ಇಂದು ನಾವು ನಮ್ಮ ದ್ವಿಪಕ್ಷೀಯ ಸಂಬಂಧಗಳನ್ನು ಸಮಗ್ರ ಕಾರ್ಯತಂತ್ರದ ಸಹಭಾಗಿತ್ವ ಮಟ್ಟಕ್ಕೆ ಉನ್ನತೀಕರಿಸುತ್ತಿದ್ದೇವೆ ಎಂದು ನನಗೆ ತುಂಬಾ ಸಂತೋಷವಾಗಿದೆ.
ಜಾಗತಿಕ ಸಾಂಕ್ರಾಮಿಕ ರೋಗದ ಈ ಸಂದರ್ಭಲ್ಲಿ ನಮ್ಮ ಸಮಗ್ರ ಕಾರ್ಯತಂತ್ರದ ಸಹಭಾಗಿತ್ವದ ಪಾತ್ರವು ಹೆಚ್ಚು ಮಹತ್ವದ್ದಾಗಿದೆ. ಈ ಸಾಂಕ್ರಾಮಿಕ ರೋಗದ ಆರ್ಥಿಕ ಮತ್ತು ಸಾಮಾಜಿಕ ಅಡ್ಡಪರಿಣಾಮಗಳಿಂದ ಹೊರಬರಲು ಜಗತ್ತಿಗೆ ಸಂಘಟಿತ ಮತ್ತು ಸಹಕಾರಿ ವಿಧಾನದ ಅಗತ್ಯವಿದೆ.
ಈ ಬಿಕ್ಕಟ್ಟನ್ನು ಒಂದು ಅವಕಾಶವಾಗಿ ಪರಿವರ್ತಿಸಲು ನಮ್ಮ ಸರ್ಕಾರ ನಿರ್ಧರಿಸಿದೆ. ಭಾರತದಲ್ಲಿ, ಬಹುತೇಕ ಎಲ್ಲ ಕ್ಷೇತ್ರಗಳಲ್ಲೂ ಸಮಗ್ರ ಸುಧಾರಣೆಯ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ. ಇದು ಶೀಘ್ರದಲ್ಲೇ ತಳಮಟ್ಟದಲ್ಲಿ ಫಲಿತಾಂಶಗಳನ್ನು ನೀಡಲಿದೆ. ಈ ಕಠಿಣ ಸಂದರ್ಭದಲ್ಲಿ ನೀವು ಆಸ್ಟ್ರೇಲಿಯಾದಲ್ಲಿರುವ ಭಾರತೀಯ ಸಮುದಾಯವನ್ನು, ವಿಶೇಷವಾಗಿ ಭಾರತೀಯ ವಿದ್ಯಾರ್ಥಿಗಳನ್ನು ನೋಡಿಕೊಂಡಿರುವ ರೀತಿಗೆ ನಾನು ನಿಮಗೆ ಕೃತಜ್ಞನಾಗಿದ್ದೇನೆ.
At the virtual summit with PM @ScottMorrisonMP. https://t.co/6JIpZRae21
— Narendra Modi (@narendramodi) June 4, 2020
At the virtual summit with PM @ScottMorrisonMP. https://t.co/6JIpZRae21
— Narendra Modi (@narendramodi) June 4, 2020
सबसे पहले मैं अपनी ओर से और पूरे भारत की ओर से ऑस्ट्रेलिया में COVID-19 से प्रभावित सभी लोगों और परिवारों के प्रति हार्दिक संवेदना प्रकट करना चाहूँगा: PM @narendramodi
— PMO India (@PMOIndia) June 4, 2020
इस वैश्विक महामारी ने विश्व में हर प्रकार की व्यवस्था को प्रभावित किया है। और हमारे summit का यह डिजिटल स्वरूप इसी प्रकार के प्रभावों का एक उदाहरण है: PM @narendramodi
— PMO India (@PMOIndia) June 4, 2020
हमारी आज की मुलाक़ात आपकी भारत यात्रा का स्थान नहीं ले सकती। एक मित्र के नाते, मेरा आपसे आग्रह है कि स्थिति सुधरने के बाद आप शीघ्र सपरिवार भारत यात्रा प्लान करें और हमारा आतिथ्य स्वीकार करें: PM @narendramodi
— PMO India (@PMOIndia) June 4, 2020
भारत-ऑस्ट्रेलिया संबंध विस्तृत होने के साथ-साथ गहरे भी हैं। और यह गहराई आती है हमारे shared values, shared interests, shared geography और shared objectives से: PM @narendramodi
— PMO India (@PMOIndia) June 4, 2020
मेरा मानना है कि भारत और ऑस्ट्रेलिया के संबंधों को और सशक्त करने के लिए यह perfect समय है, perfect मौक़ा है। अपनी दोस्ती को और मज़बूत बनाने के लिए हमारे पास असीम संभावनाएँ हैं: PM @narendramodi
— PMO India (@PMOIndia) June 4, 2020
कैसे हमारे संबंध अपने क्षेत्र के लिए और विश्व के लिए एक ‘factor of stability’ बनें, कैसे हम मिल कर global good के लिए कार्य करें, इन सभी पहलुओं पर विचार की आवश्यकता है: PM @narendramodi
— PMO India (@PMOIndia) June 4, 2020
भारत ऑस्ट्रेलिया के साथ अपने सम्बन्धों को व्यापक तौर पर और तेज़ गति से बढ़ाने के लिए प्रतिबद्ध है। यह न सिर्फ़ हमारे दोनों देशों के लिए महत्वपूर्ण है, बल्कि Indo-Pacific क्षेत्र और विश्व के लिए भी आवश्यक है: PM @narendramodi
— PMO India (@PMOIndia) June 4, 2020
लेकिन मैं यह नहीं कहूँगा कि मैं इस गति से, इस विस्तार से संतुष्ट हूँ। जब आप जैसा लीडर हमारे मित्र देश का नेतृत्व कर रहा हो, तो हमारे संबंधों में विकास की गति का मापदंड भी ambitious होना चाहिए: PM @narendramodi
— PMO India (@PMOIndia) June 4, 2020
वैश्विक महामारी के इस काल में हमारी Comprehensive Strategic Partnership की भूमिका और महत्वपूर्ण रहेगी। विश्व को इस महामारी के आर्थिक और सामाजिक दुष्प्रभावों से जल्दी निकलने के लिए एक coordinated और collaborative approach की आवश्यकता है: PM @narendramodi
— PMO India (@PMOIndia) June 4, 2020
हमारी सरकार ने इस Crisis को एक Opportunity की तरह देखने का निर्णय लिया है। भारत में लगभग सभी क्षेत्रों में व्यापक reforms की प्रक्रिया शुरू की जा चुकी है। बहुत जल्द ही ग्राउंड लेवल पर इसके परिणाम देखने को मिलेंगे: PM @narendramodi
— PMO India (@PMOIndia) June 4, 2020
इस कठिन समय में आपने ऑस्ट्रेलिया में भारतीय समुदाय का, और ख़ास तौर पर भारतीय छात्रों का, जिस तरह ध्यान रखा है, उसके लिए मैं विशेष रूप से आभारी हूँ: PM @narendramodi
— PMO India (@PMOIndia) June 4, 2020