Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

​​​​​​​ಭಾರತ್ ಮಂಟಪದ ನಟರಾಜನ ಪ್ರತಿಮೆ ಭಾರತದ ಪ್ರಾಚೀನ ಕಲಾತ್ಮಕತೆ ಮತ್ತು ಸಂಪ್ರದಾಯಗಳಿಗೆ ಸಾಕ್ಷಿಯಾಗಿದೆ: ಪ್ರಧಾನಿ ಮೋದಿ


ಭಾರತ್ ಮಂಟಪದಲ್ಲಿರುವ ಭವ್ಯವಾದ ನಟರಾಜ ಪ್ರತಿಮೆ ದೇಶದ ಶ್ರೀಮಂತ ಇತಿಹಾಸ ಮತ್ತು ಸಂಸ್ಕೃತಿಯ ಅಂಶಗಳನ್ನು ಜೀವಂತಗೊಳಿಸುತ್ತದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ‌

ಇಂದಿರಾಗಾಂಧಿ ರಾಷ್ಟ್ರೀಯ ಕಲಾ ಕೇಂದ್ರದ ಟ್ವಿಟ್ಟರ್ ಪೋಸ್ಟ್ ಗೆ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ಮೋದಿ,

“ಭಾರತ್ ಮಂಟಪದಲ್ಲಿರುವ ಭವ್ಯವಾದ ನಟರಾಜ ಪ್ರತಿಮೆಯು ನಮ್ಮ ಶ್ರೀಮಂತ ಇತಿಹಾಸ ಮತ್ತು ಸಂಸ್ಕೃತಿಯ ಅಂಶಗಳನ್ನು ಜೀವಂತಗೊಳಿಸುತ್ತದೆ. ಜಿ20 ಶೃಂಗಸಭೆಗೆ ಜಗತ್ತು ಒಗ್ಗೂಡುತ್ತಿರುವ ಸಮಯದಲ್ಲಿ, ಇದು ಭಾರತದ ಪ್ರಾಚೀನ ಕಲಾತ್ಮಕತೆ ಮತ್ತು ಸಂಪ್ರದಾಯಗಳಿಗೆ ಸಾಕ್ಷಿಯಾಗಿದೆ.‌

***