ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಜೀ, ಹಣಕಾಸು ಖಾತೆ ರಾಜ್ಯ ಸಚಿವರಾದ ಪಂಕಜ್ ಚೌಧರಿ ಜೀ, ಇಲ್ಲಿ ಉಪಸ್ಥಿತರಿರುವ ನಬಾರ್ಡ್ನ ಹಿರಿಯ ಆಡಳಿತ ಮಂಡಳಿಯ ಗೌರವಾನ್ವಿತ ಸದಸ್ಯರು, ಸ್ವಸಹಾಯ ಗುಂಪುಗಳ ಸದಸ್ಯರು, ಸಹಕಾರಿ ಬ್ಯಾಂಕುಗಳು, ರೈತ ಉತ್ಪಾದಕ ಸಂಸ್ಥೆ (FPO) ಗಳು ಇತರ ಎಲ್ಲ ಗೌರವಾನ್ವಿತ ಅತಿಥಿಗಳು, ಮಹಿಳೆಯರೇ ಮತ್ತು ಮಹನೀಯರೇ,
ನಿಮಗೆಲ್ಲರಿಗೂ 2025ರ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. 2025ರ ಆರಂಭದಲ್ಲಿ ನಡೆದ ಗ್ರಾಮೀಣ ಭಾರತ್ ಮಹೋತ್ಸವವು ಭಾರತದ ಅಭಿವೃದ್ಧಿಯ ಹಾದಿಯಲ್ಲಿ ಮತ್ತೊಂದು ಮೈಲಿಗಲ್ಲು. ಗ್ರಾಮೀಣ ಭಾರತದ ಉನ್ನತಿ ಮತ್ತು ಸಮಗ್ರ ಪ್ರಗತಿಗೆ ಈ ಮಹೋತ್ಸವವು ಒಂದು ಪ್ರೇರಣೆ. ಈ ಅದ್ಭುತ ಕಾರ್ಯಕ್ರಮವನ್ನು ಆಯೋಜಿಸಿದ ನಬಾರ್ಡ್ ಮತ್ತು ಎಲ್ಲಾ ಸಹಯೋಗಿಗಳಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು.
ಸ್ನೇಹಿತರೇ,
ನಮ್ಮಲ್ಲಿ ಹಳ್ಳಿಗಳೊಂದಿಗೆ ಸಂಪರ್ಕ ಹೊಂದಿದವರು, ಹಳ್ಳಿಗಳಲ್ಲಿ ಬೆಳೆದವರು, ಭಾರತದ ಹಳ್ಳಿಗಳ ನಿಜವಾದ ಶಕ್ತಿಯನ್ನು ಅರ್ಥಮಾಡಿಕೊಳ್ಳುತ್ತಾರೆ. ಹಳ್ಳಿಯಲ್ಲಿ ವಾಸಿಸುವ ಯಾರಿಗಾದರೂ, ಹಳ್ಳಿಯೂ ಸಹ ಅವರೊಳಗೆ ವಾಸಿಸುತ್ತದೆ. ಹಳ್ಳಿಯಲ್ಲಿ ವಾಸಿಸಿದವರಿಗೆ ಹಳ್ಳಿಯ ಜೀವನವನ್ನು ನಿಜವಾಗಿಯೂ ಹೇಗೆ ಅಳವಡಿಸಿಕೊಳ್ಳಬೇಕೆಂದು ತಿಳಿದಿದೆ. ನನ್ನ ಬಾಲ್ಯವನ್ನು ಒಂದು ಸಣ್ಣ ಪಟ್ಟಣದಲ್ಲಿ ಸಾಧಾರಣ ವಾತಾವರಣದಲ್ಲಿ ಕಳೆದಿದ್ದಕ್ಕೆ ನಾನು ನನ್ನನ್ನು ಅದೃಷ್ಟಶಾಲಿ ಎಂದು ಪರಿಗಣಿಸುತ್ತೇನೆ! ನಂತರ, ನಾನು ಮನೆಯಿಂದ ಹೊರಬಂದಾಗಲೂ, ನನ್ನ ಹೆಚ್ಚಿನ ಸಮಯವನ್ನು ದೇಶದ ಹಳ್ಳಿಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕಳೆದಿದ್ದೇನೆ. ಇದರ ಪರಿಣಾಮವಾಗಿ, ನಾನು ಗ್ರಾಮೀಣ ಜೀವನದ ಸವಾಲುಗಳನ್ನು ನೇರವಾಗಿ ಅನುಭವಿಸಿದ್ದೇನೆ ಮತ್ತು ನಮ್ಮ ಗ್ರಾಮಗಳ ಅಪಾರ ಸಾಮರ್ಥ್ಯವನ್ನು ಸಹ ಗುರುತಿಸಿದ್ದೇನೆ. ಬಾಲ್ಯದಿಂದಲೂ, ಹಳ್ಳಿಗಳಲ್ಲಿ ಜನರು ಎಷ್ಟು ಕಷ್ಟಪಟ್ಟು ಕೆಲಸ ಮಾಡುತ್ತಾರೆ ಎಂಬುದನ್ನು ನಾನು ನೋಡಿದ್ದೇನೆ, ಆದರೆ ಬಂಡವಾಳದ ಕೊರತೆಯಿಂದಾಗಿ ಅವರಿಗೆ ಸಾಕಷ್ಟು ಅವಕಾಶಗಳು ಸಿಗುವುದಿಲ್ಲ. ಹಳ್ಳಿಗಳಲ್ಲಿ ಜನರು ಹೊಂದಿರುವ ಪ್ರತಿಭೆ ಮತ್ತು ಸಾಮರ್ಥ್ಯಗಳ ನಂಬಲಾಗದ ವೈವಿಧ್ಯತೆಯನ್ನು ನಾನು ಕಂಡಿದ್ದೇನೆ! ಆದಾಗ್ಯೂ, ಈ ಸಾಮರ್ಥ್ಯವು ಜೀವನದ ಮೂಲಭೂತ ಹೋರಾಟಗಳಲ್ಲಿ ಹೆಚ್ಚಾಗಿ ಸವೆಯುತ್ತದೆ. ಕೆಲವೊಮ್ಮೆ, ನೈಸರ್ಗಿಕ ವಿಕೋಪಗಳಿಂದಾಗಿ ಬೆಳೆಗಳು ವಿಫಲಗೊಳ್ಳುತ್ತವೆ; ಇತರ ಸಮಯಗಳಲ್ಲಿ, ಮಾರುಕಟ್ಟೆಗಳಿಗೆ ಪ್ರವೇಶದ ಕೊರತೆಯಿಂದಾಗಿ ಅವರು ತಮ್ಮ ಸುಗ್ಗಿಯನ್ನು ತ್ಯಜಿಸಬೇಕಾಗುತ್ತದೆ. ಆದಾಗ್ಯೂ, ಈ ಸಾಮರ್ಥ್ಯವು ಜೀವನದ ಮೂಲಭೂತ ಹೋರಾಟಗಳಲ್ಲಿ ಹೆಚ್ಚಾಗಿ ಸವೆಯುತ್ತದೆ. ಕೆಲವೊಮ್ಮೆ, ನೈಸರ್ಗಿಕ ವಿಕೋಪಗಳಿಂದಾಗಿ ಬೆಳೆಗಳು ವಿಫಲಗೊಳ್ಳುತ್ತವೆ; ಇತರ ಸಮಯಗಳಲ್ಲಿ, ಮಾರುಕಟ್ಟೆಗಳಿಗೆ ಪ್ರವೇಶದ ಕೊರತೆಯಿಂದಾಗಿ ಅವರು ತಮ್ಮ ಸುಗ್ಗಿಯನ್ನು ತ್ಯಜಿಸಬೇಕಾಗುತ್ತದೆ. ಈ ಕಷ್ಟಗಳನ್ನು ತುಂಬಾ ಹತ್ತಿರದಿಂದ ನೋಡಿದ ನಂತರ, ಹಳ್ಳಿಗಳು ಮತ್ತು ದೀನದಲಿತರಿಗೆ ಸೇವೆ ಸಲ್ಲಿಸಲು ನನಗೆ ಸ್ಫೂರ್ತಿ ಸಿಕ್ಕಿತು. ಅವರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಸಂಕಲ್ಪವನ್ನು ನನ್ನಲ್ಲಿ ಮೂಡಿಸಿತು.
ಇಂದು ದೇಶದ ಗ್ರಾಮೀಣ ಪ್ರದೇಶಗಳಲ್ಲಿ ನಡೆಯುತ್ತಿರುವ ಕಾರ್ಯಗಳು ಹಳ್ಳಿಗಳಿಂದ ಕಲಿತ ಪಾಠಗಳು ಮತ್ತು ಅನುಭವಗಳಿಂದ ರೂಪುಗೊಂಡಿವೆ. 2014 ರಿಂದ, ನಾನು ಗ್ರಾಮೀಣ ಭಾರತದ ಸೇವೆಗಾಗಿ ಪ್ರತಿ ಕ್ಷಣವನ್ನೂ ನಿರಂತರವಾಗಿ ಮೀಸಲಿಟ್ಟಿದ್ದೇನೆ. ಹಳ್ಳಿಗಳ ಜನರಿಗೆ ಘನತೆಯ ಜೀವನವನ್ನು ಒದಗಿಸುವುದು ಈ ಸರ್ಕಾರದ ಆದ್ಯತೆಯಾಗಿದೆ. ಭಾರತದ ಹಳ್ಳಿಗಳ ಜನರನ್ನು ಸಬಲೀಕರಣಗೊಳಿಸುವುದು, ಬೇರೆಡೆ ವಲಸೆ ಹೋಗದೆ, ಹಳ್ಳಿಯೊಳಗೇ ಪ್ರಗತಿಗೆ ಸಾಕಷ್ಟು ಅವಕಾಶಗಳನ್ನು ಖಾತ್ರಿಪಡಿಸುವುದು ನಮ್ಮ ದೃಷ್ಟಿಕೋನವಾಗಿದೆ. ಹಳ್ಳಿಯ ಜೀವನವನ್ನು ಸುಲಭಗೊಳಿಸುವ ಗುರಿಯನ್ನು ನಾವು ಹೊಂದಿದ್ದೇವೆ. ಇದನ್ನು ಸಾಧಿಸಲು, ನಾವು ಪ್ರತಿ ಹಳ್ಳಿಯಲ್ಲಿ ಮೂಲಭೂತ ಸೌಲಭ್ಯಗಳನ್ನು ಖಾತ್ರಿಪಡಿಸುವ ಅಭಿಯಾನವನ್ನು ಪ್ರಾರಂಭಿಸಿದ್ದೇವೆ. ಸ್ವಚ್ಛ ಭಾರತ ಅಭಿಯಾನದ ಮೂಲಕ ನಾವು ಪ್ರತಿ ಮನೆಯಲ್ಲೂ ಶೌಚಾಲಯಗಳನ್ನು ನಿರ್ಮಿಸಿದ್ದೇವೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ, ನಾವು ಗ್ರಾಮೀಣ ಪ್ರದೇಶಗಳಲ್ಲಿ ಲಕ್ಷಾಂತರ ಕುಟುಂಬಗಳಿಗೆ ಪಕ್ಕಾ ಮನೆಗಳನ್ನು ಒದಗಿಸಿದ್ದೇವೆ. ಇಂದು ಜಲ ಜೀವನ್ ಮಿಷನ್ ಮೂಲಕ ಸಾವಿರಾರು ಗ್ರಾಮಗಳ ಪ್ರತಿ ಮನೆಗೆ ಶುದ್ಧ ಕುಡಿಯುವ ನೀರು ತಲುಪುತ್ತಿದೆ.
ಸ್ನೇಹಿತರೇ,
ಇಂದು, ಜನರು 1.5 ಲಕ್ಷಕ್ಕೂ ಹೆಚ್ಚು ಆಯುಷ್ಮಾನ್ ಆರೋಗ್ಯ ಮಂದಿರಗಳಲ್ಲಿ ಉತ್ತಮ ಆರೋಗ್ಯ ಸೇವೆಗಳನ್ನು ಪಡೆಯುತ್ತಿದ್ದಾರೆ. ಡಿಜಿಟಲ್ ತಂತ್ರಜ್ಞಾನದ ಸಹಾಯದಿಂದ, ನಾವು ಟೆಲಿಮೆಡಿಸಿನ್ ನ ಪ್ರಯೋಜನಗಳನ್ನು ಬಳಸಿಕೊಂಡು ದೇಶದ ಅತ್ಯುತ್ತಮ ವೈದ್ಯರು ಮತ್ತು ಆಸ್ಪತ್ರೆಗಳನ್ನು ಹಳ್ಳಿಗಳೊಂದಿಗೆ ಸಂಪರ್ಕಿಸಿದ್ದೇವೆ. ಗ್ರಾಮೀಣ ಪ್ರದೇಶದ ಲಕ್ಷಾಂತರ ಜನರು ಈಗಾಗಲೇ ಇ-ಸಂಜೀವನಿ ವೇದಿಕೆಯ ಮೂಲಕ ಟೆಲಿಮೆಡಿಸಿನ್ ಸೇವೆಗಳನ್ನು ಪಡೆದಿದ್ದಾರೆ. ಕೋವಿಡ್-19 ಸಾಂಕ್ರಾಮಿಕದ ಸಮಯದಲ್ಲಿ, ಭಾರತದ ಹಳ್ಳಿಗಳು ಇಂತಹ ಬಿಕ್ಕಟ್ಟನ್ನು ಹೇಗೆ ನಿಭಾಯಿಸುತ್ತವೆ ಎಂಬುದರ ಬಗ್ಗೆ ಜಗತ್ತಿಗೆ ಅನುಮಾನವಿತ್ತು. ಆದರೆ ಪ್ರತಿ ಹಳ್ಳಿಯ ಕೊನೆಯ ವ್ಯಕ್ತಿಗೂ ಸಹ ಲಸಿಕೆ ತಲುಪುವುದನ್ನು ನಾವು ಖಚಿತಪಡಿಸಿಕೊಂಡಿದ್ದೇವೆ.
ಸ್ನೇಹಿತರೇ,
ಗ್ರಾಮೀಣ ಆರ್ಥಿಕತೆಯನ್ನು ಸದೃಢಗೊಳಿಸಬೇಕಾದರೆ, ಹಳ್ಳಿಯ ಜನರ ಪ್ರತಿಯೊಂದು ವರ್ಗದ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಆರ್ಥಿಕ ನೀತಿಗಳನ್ನು ರೂಪಿಸುವುದು ಅತ್ಯಗತ್ಯ. ಕಳೆದ 10 ವರ್ಷಗಳಲ್ಲಿ, ನಮ್ಮ ಸರ್ಕಾರವು ಗ್ರಾಮೀಣ ಸಮಾಜದ ಎಲ್ಲಾ ವರ್ಗಗಳಿಗೂ ವಿಶೇಷ ಯೋಜನೆಗಳನ್ನು ರೂಪಿಸಿ, ಅವರಿಗಾಗಿ ನಿರ್ಧಾರಗಳನ್ನು ಕೈಗೊಂಡಿದೆ ಎಂಬುದು ನನಗೆ ಹೆಮ್ಮೆಯ ವಿಷಯ. ಕೆಲವೇ ದಿನಗಳ ಹಿಂದೆ, ಪಿಎಂ ಫಸಲ್ ಬಿಮಾ ಯೋಜನೆಯನ್ನು ಮತ್ತೊಂದು ವರ್ಷ ವಿಸ್ತರಿಸಲು ಮಂತ್ರಿಮಂಡಲ ಅನುಮೋದನೆ ನೀಡಿದೆ. ಜಾಗತಿಕವಾಗಿ ಡಿಎಪಿ (ಡೈ-ಅಮೋನಿಯಂ ಫಾಸ್ಫೇಟ್) ಗೊಬ್ಬರದ ಬೆಲೆ ಗಗನಕ್ಕೇರುತ್ತಿದೆ. ನಮ್ಮ ರೈತರು ಅದನ್ನು ಅಂತರರಾಷ್ಟ್ರೀಯ ಬೆಲೆಗೆ ಖರೀದಿಸಬೇಕಾದರೆ, ಅವರ ಮೇಲೆ ತೀವ್ರ ಆರ್ಥಿಕ ಹೊರೆ ಬೀಳುತ್ತದೆ, ಅದರಿಂದ ಅವರು ಚೇತರಿಸಿಕೊಳ್ಳಲೂ ಕಷ್ಟವಾಗುತ್ತದೆ. ಆದರೆ ಜಾಗತಿಕ ಪರಿಸ್ಥಿತಿ ಏನೇ ಇರಲಿ, ನಮ್ಮ ಮೇಲೆ ಎಷ್ಟೇ ಹೊರೆ ಬಿದ್ದರೂ, ಆ ಹೊರೆಯನ್ನು ನಮ್ಮ ರೈತರ ಮೇಲೆ ಬೀಳಲು ಬಿಡುವುದಿಲ್ಲ ಎಂದು ನಾವು ದೃಢ ನಿರ್ಧಾರ ಮಾಡಿದ್ದೇವೆ. ಡಿಎಪಿ ಗೊಬ್ಬರದ ಮೇಲಿನ ಸಬ್ಸಿಡಿಗಳನ್ನು ಹೆಚ್ಚಿಸಬೇಕಾದ ಅನಿವಾರ್ಯತೆ ಬಂದರೂ, ರೈತರಿಗೆ ಅದರ ಬೆಲೆಯನ್ನು ಸ್ಥಿರಗೊಳಿಸಲು ನಾವು ಆ ಕ್ರಮ ಕೈಗೊಂಡಿದ್ದೇವೆ. ನಮ್ಮ ಸರ್ಕಾರದ ಉದ್ದೇಶಗಳು, ನೀತಿಗಳು ಮತ್ತು ನಿರ್ಧಾರಗಳು ಗ್ರಾಮೀಣ ಭಾರತಕ್ಕೆ ಹೊಸ ಚೈತನ್ಯ ತುಂಬುತ್ತಿವೆ. ನಮ್ಮ ಗುರಿ ಗ್ರಾಮೀಣ ಜನರಿಗೆ ಸಾಧ್ಯವಾದಷ್ಟು ಆರ್ಥಿಕ ನೆರವು ನೀಡುವುದು. ಇದರಿಂದ ಅವರು ಕೃಷಿಯಲ್ಲಿ ತೊಡಗಿಸಿಕೊಳ್ಳುವುದರ ಜೊತೆಗೆ, ಹಳ್ಳಿಗಳಲ್ಲಿಯೇ ಉದ್ಯೋಗ ಮತ್ತು ಸ್ವಯಂ ಉದ್ಯೋಗಕ್ಕಾಗಿ ಹೊಸ ಅವಕಾಶಗಳನ್ನು ಸೃಷ್ಟಿಸಿಕೊಳ್ಳಬಹುದು. ಈ ದೃಷ್ಟಿಕೋನದೊಂದಿಗೆ, ಪಿಎಂ-ಕಿಸಾನ್ ಸಮ್ಮಾನ್ ನಿಧಿಯಡಿ ರೈತರಿಗೆ ಸುಮಾರು 3 ಲಕ್ಷ ಕೋಟಿ ರೂಪಾಯಿಗಳ ಆರ್ಥಿಕ ಸಹಾಯವನ್ನು ಒದಗಿಸಲಾಗಿದೆ. ಕಳೆದ 10 ವರ್ಷಗಳಲ್ಲಿ, ಕೃಷಿ ಸಾಲದ ಪ್ರಮಾಣವು 3.5 ಪಟ್ಟು ಹೆಚ್ಚಾಗಿದೆ. ಈಗ, ಪಶುಸಂಗೋಪನೆ ರೈತರು ಮತ್ತು ಮೀನುಗಾರರಿಗೂ ಕಿಸಾನ್ ಕ್ರೆಡಿಟ್ ಕಾರ್ಡ್ಗಳನ್ನು ನೀಡಲಾಗುತ್ತಿದೆ. ದೇಶಾದ್ಯಂತ 9,000 ಕ್ಕೂ ಹೆಚ್ಚು ರೈತ ಉತ್ಪಾದಕ ಸಂಸ್ಥೆಗಳಿಗೆ (FPO) ಆರ್ಥಿಕ ನೆರವು ನೀಡಲಾಗುತ್ತಿದೆ. ಇದಲ್ಲದೆ, ಕಳೆದ ದಶಕದಲ್ಲಿ ಹಲವಾರು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (MSP) ಅನ್ನು ನಾವು ನಿರಂತರವಾಗಿ ಹೆಚ್ಚಿಸಿದ್ದೇವೆ.
ಸ್ನೇಹಿತರೇ,
ಹಳ್ಳಿಗಳ ನಿವಾಸಿಗಳಿಗೆ ಆಸ್ತಿ ಮಾಲೀಕತ್ವದ ದಾಖಲೆಗಳನ್ನು ಒದಗಿಸುವ ಸ್ವಮಿತ್ವ ಯೋಜನೆಯಂತಹ ಉಪಕ್ರಮಗಳನ್ನು ನಾವು ಜಾರಿಗೆ ತಂದಿದ್ದೇವೆ. ಕಳೆದ 10 ವರ್ಷಗಳಲ್ಲಿ, ಎಂಎಸ್ಎಂಇ (Micro, Small, and Medium Enterprises)ಗಳನ್ನು ಉತ್ತೇಜಿಸಲು ಹಲವಾರು ನೀತಿಗಳನ್ನು ಜಾರಿಗೊಳಿಸಲಾಗಿದೆ. ಈ ಉದ್ಯಮಗಳು ಕ್ರೆಡಿಟ್ ಗ್ಯಾರಂಟಿ ಯೋಜನೆಯಿಂದ ಪ್ರಯೋಜನ ಪಡೆದಿವೆ. ಇದು ಒಂದು ಕೋಟಿಗೂ ಹೆಚ್ಚು ಗ್ರಾಮೀಣ MSMEಗಳಿಗೆ ನೇರವಾಗಿ ಆರ್ಥಿಕ ಸಹಾಯ ಒದಗಿಸಿದೆ. ಇಂದು, ಮುದ್ರಾ ಯೋಜನೆ, ಸ್ಟಾರ್ಟ್-ಅಪ್ ಇಂಡಿಯಾ ಮತ್ತು ಸ್ಟ್ಯಾಂಡ್ ಅಪ್ ಇಂಡಿಯಾದಂತಹ ಯೋಜನೆಗಳ ಮೂಲಕ ಹಳ್ಳಿಯ ಯುವಕರು ಗಣನೀಯ ಪ್ರಮಾಣದಲ್ಲಿ ಬೆಂಬಲವನ್ನು ಪಡೆಯುತ್ತಿದ್ದಾರೆ.
ಸ್ನೇಹಿತರೇ,
ಹಳ್ಳಿಗಳ ಚಿತ್ರಣವನ್ನೇ ಬದಲಾಯಿಸುವಲ್ಲಿ ಸಹಕಾರ ಸಂಘಗಳು ಮಹತ್ವದ ಪಾತ್ರ ವಹಿಸಿವೆ. ಇಂದು, ಭಾರತವು ಸಹಕಾರ ಸಂಘಗಳ ಮೂಲಕ ಸಮೃದ್ಧಿಯ ದಾರಿಯಲ್ಲಿದೆ. ಈ ಗುರಿಯನ್ನು ಮನಸ್ಸಿನಲ್ಲಿಟ್ಟುಕೊಂಡು, 2021 ರಲ್ಲಿ ಹೊಸ ಸಹಕಾರ ಸಚಿವಾಲಯವನ್ನು ಸ್ಥಾಪಿಸಲಾಯಿತು. ರೈತರು ಮತ್ತು ಗ್ರಾಮಸ್ಥರು ತಮ್ಮ ಉತ್ಪನ್ನಗಳಿಗೆ ಉತ್ತಮ ಬೆಲೆಗಳನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಮತ್ತು ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸಲು ದೇಶಾದ್ಯಂತ ಸುಮಾರು 70,000 ಪ್ರಾಥಮಿಕ ಕೃಷಿ ಸಾಲ ಸಂಘಗಳನ್ನು (PACS) ಕಂಪ್ಯೂಟರೀಕರಣಗೊಳಿಸಲಾಗುತ್ತಿದೆ.
ಸ್ನೇಹಿತರೇ,
ಕೃಷಿಯ ಜೊತೆಗೆ, ನಮ್ಮ ಹಳ್ಳಿಗಳಲ್ಲಿ ಅನೇಕ ಜನರು ಸಾಂಪ್ರದಾಯಿಕ ಕಲೆಗಳು ಮತ್ತು ಕೌಶಲ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಉದಾಹರಣೆಗೆ, ಕಮ್ಮಾರರು, ಬಡಗಿಗಳು ಮತ್ತು ಕುಂಬಾರರು – ಇವರಲ್ಲಿ ಹೆಚ್ಚಿನವರು ಹಳ್ಳಿಗಳಲ್ಲಿ ವಾಸಿಸುತ್ತಿದ್ದಾರೆ ಮತ್ತು ಕೆಲಸ ಮಾಡುತ್ತಿದ್ದಾರೆ. ಈ ಕುಶಲಕರ್ಮಿಗಳು ಗ್ರಾಮೀಣ ಮತ್ತು ಸ್ಥಳೀಯ ಆರ್ಥಿಕತೆಗೆ ಗಣನೀಯ ಕೊಡುಗೆ ನೀಡಿದ್ದಾರೆ. ಆದರೆ, ಹಿಂದೆ, ಅವರನ್ನು ಹೆಚ್ಚಾಗಿ ಉಪೇಕ್ಷಿಸಲಾಗುತ್ತಿತ್ತು. ಇದನ್ನು ನಿವಾರಿಸಲು, ಅವರಿಗೆ ಶಕ್ತಿ ತುಂಬಲು ನಾವು ವಿಶ್ವಕರ್ಮ ಯೋಜನೆಯನ್ನು ಪ್ರಾರಂಭಿಸಿದ್ದೇವೆ. ಈ ಯೋಜನೆಯು ಅವರಿಗೆ ಹೊಸ ಕೌಶಲ್ಯಗಳನ್ನು ಗಳಿಸಲು, ನವೀನ ಉತ್ಪನ್ನಗಳನ್ನು ರಚಿಸಲು ಮತ್ತು ಅವರ ಸಾಮರ್ಥ್ಯಗಳನ್ನು ಹೆಚ್ಚಿಸಲು ಕೈಗೆಟುಕುವ ಸಹಾಯವನ್ನು ಒದಗಿಸುತ್ತದೆ. ವಿಶ್ವಕರ್ಮ ಯೋಜನೆಯು ದೇಶಾದ್ಯಂತ ಲಕ್ಷಾಂತರ ಸಾಂಪ್ರದಾಯಿಕ ಕುಶಲಕರ್ಮಿಗಳಿಗೆ ಅವರ ವೃತ್ತಿಗಳಲ್ಲಿ ಪ್ರಗತಿ ಹೊಂದಲು ಮತ್ತು ಯಶಸ್ವಿಯಾಗಲು ಅವಕಾಶಗಳನ್ನು ನೀಡುತ್ತಿದೆ.
ಸ್ನೇಹಿತರೇ,
ಉದ್ದೇಶಗಳು ಉದಾತ್ತವಾಗಿದ್ದಾಗ, ಫಲಿತಾಂಶಗಳು ಸಹ ತೃಪ್ತಿಕರವಾಗಿರುತ್ತವೆ. ಕಳೆದ 10 ವರ್ಷಗಳ ಶ್ರಮವು ಈಗ ದೇಶಕ್ಕೆ ಫಲ ನೀಡಲು ಪ್ರಾರಂಭಿಸಿದೆ. ಕೆಲವೇ ದಿನಗಳ ಹಿಂದೆ, ದೇಶದಲ್ಲಿ ಒಂದು ಪ್ರಮುಖ ಸಮೀಕ್ಷೆಯನ್ನು ನಡೆಸಲಾಯಿತು, ಅದು ಹಲವಾರು ಮಹತ್ವದ ಅಂಶಗಳನ್ನು ಬಹಿರಂಗಪಡಿಸಿದೆ. 2011 ಕ್ಕೆ ಹೋಲಿಸಿದರೆ, ಗ್ರಾಮೀಣ ಭಾರತದಲ್ಲಿ ಬಳಕೆ – ಅಥವಾ ಗ್ರಾಮಸ್ಥರ ಖರೀದಿ ಶಕ್ತಿ – ಬಹುತೇಕ ಮೂರು ಪಟ್ಟು ಹೆಚ್ಚಾಗಿದೆ. ಇದರರ್ಥ ಗ್ರಾಮೀಣ ಜನರು ಈಗ ತಮ್ಮ ಇಚ್ಛೆಯ ವಸ್ತುಗಳಿಗೆ ಹೆಚ್ಚು ಖರ್ಚು ಮಾಡುತ್ತಿದ್ದಾರೆ. ಹಿಂದೆ, ಗ್ರಾಮಸ್ಥರು ತಮ್ಮ ಆದಾಯದ 50% ಕ್ಕಿಂತ ಹೆಚ್ಚಿನ ಭಾಗವನ್ನು ಆಹಾರ ಮತ್ತು ಮೂಲಭೂತ ಅವಶ್ಯಕತೆಗಳಿಗೆ ಖರ್ಚು ಮಾಡಬೇಕಾಗಿತ್ತು. ಸ್ವಾತಂತ್ರ್ಯದ ನಂತರ ಮೊದಲ ಬಾರಿಗೆ, ಗ್ರಾಮೀಣ ಪ್ರದೇಶಗಳಲ್ಲಿ ಆಹಾರದ ವೆಚ್ಚವು 50% ಕ್ಕಿಂತ ಕಡಿಮೆಯಾಗಿದೆ ಮತ್ತು ಇತರ ಅಗತ್ಯ ವಸ್ತುಗಳ ವೆಚ್ಚ ಹೆಚ್ಚಾಗಿದೆ. ಜನರು ಈಗ ತಮ್ಮ ಆರಾಮ, ಆಸೆಗಳು ಮತ್ತು ಅಗತ್ಯಗಳಿಗಾಗಿ ವಸ್ತುಗಳನ್ನು ಖರೀದಿಸುತ್ತಿದ್ದಾರೆ, ತಮ್ಮ ಜೀವನದ ಗುಣಮಟ್ಟವನ್ನು ಸುಧಾರಿಸಲು ಹೆಚ್ಚು ಹೂಡಿಕೆ ಮಾಡುತ್ತಿದ್ದಾರೆ ಎಂಬುದನ್ನು ಇದು ಸೂಚಿಸುತ್ತದೆ.
ಸ್ನೇಹಿತರೇ,
ನಗರ ಮತ್ತು ಗ್ರಾಮೀಣ ಪ್ರದೇಶಗಳ ನಡುವಿನ ಬಳಕೆಯ ಅಂತರವು ಕಡಿಮೆಯಾಗಿದೆ ಎಂಬುದು ಸಮೀಕ್ಷೆಯ ಮತ್ತೊಂದು ಪ್ರಮುಖ ಸಂಶೋಧನೆಯಾಗಿದೆ. ಹಿಂದೆ, ನಗರ ಕುಟುಂಬಗಳು ಮತ್ತು ಗ್ರಾಮೀಣ ವ್ಯಕ್ತಿಗಳು ಖರ್ಚು ಮಾಡುವ ಮೊತ್ತದ ನಡುವೆ ಗಮನಾರ್ಹ ವ್ಯತ್ಯಾಸವಿತ್ತು, ಆದರೆ ಈಗ, ಕ್ರಮೇಣ, ಗ್ರಾಮೀಣ ಜನರು ತಮ್ಮ ನಗರ ಸಹವರ್ತಿಗಳೊಂದಿಗೆ ಹೊಂದಿಕೊಳ್ಳುತ್ತಿದ್ದಾರೆ. ನಮ್ಮ ನಿರಂತರ ಪ್ರಯತ್ನಗಳ ಮೂಲಕ, ಗ್ರಾಮೀಣ ಮತ್ತು ನಗರ ಪ್ರದೇಶಗಳ ನಡುವಿನ ಈ ಅಂತರವು ಕಡಿಮೆಯಾಗುತ್ತಿದೆ. ಗ್ರಾಮೀಣ ಭಾರತವು ನಮಗೆ ಸ್ಫೂರ್ತಿ ನೀಡುವ ಅನೇಕ ಯಶೋಗಾಥೆಗಳಿಂದ ತುಂಬಿದೆ.
ಸ್ನೇಹಿತರೇ,
ನಾನು ಇಂದು ಈ ಯಶಸ್ಸನ್ನು ನೋಡಿದಾಗ, ಹಿಂದಿನ ಸರ್ಕಾರಗಳ ಅವಧಿಯಲ್ಲಿ ಈ ಕೆಲಸಗಳನ್ನು ಏಕೆ ಮಾಡಲಾಗಲಿಲ್ಲ ಎಂದು ನಾನು ಆಗಾಗ್ಗೆ ಆಶ್ಚರ್ಯ ಪಡುತ್ತೇನೆ-ನಾವು ಮೋದಿಗಾಗಿ ಏಕೆ ಕಾಯಬೇಕಾಯಿತು? ಸ್ವಾತಂತ್ರ್ಯದ ನಂತರದ ದಶಕಗಳವರೆಗೆ, ದೇಶದಾದ್ಯಂತ ಲಕ್ಷಾಂತರ ಗ್ರಾಮಗಳು ಮೂಲಭೂತ ಅಗತ್ಯಗಳಿಂದ ವಂಚಿತರಾಗಿದ್ದವು. ಹೇಳಿ, ಹೆಚ್ಚಿನ ಸಂಖ್ಯೆಯ ಪರಿಶಿಷ್ಟ ಜಾತಿಗಳು (SC), ಪರಿಶಿಷ್ಟ ಪಂಗಡಗಳು (ST), ಮತ್ತು ಇತರ ಹಿಂದುಳಿದ ವರ್ಗಗಳು (OBC) ಎಲ್ಲಿ ವಾಸಿಸುತ್ತಾರೆ? ಈ ಸಮುದಾಯಗಳು ಪ್ರಧಾನವಾಗಿ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತವೆ. ಈ SC, ST ಮತ್ತು OBC ಸಮುದಾಯಗಳ ಹೆಚ್ಚಿನ ಜನರು ಹಳ್ಳಿಗಳಲ್ಲಿ ವಾಸಿಸುತ್ತಿದ್ದಾರೆ. ಹಿಂದಿನ ಸರ್ಕಾರಗಳು ಈ ಸಮುದಾಯಗಳ ಅಗತ್ಯಗಳನ್ನು ಸಮರ್ಪಕವಾಗಿ ಪೂರೈಸಲಿಲ್ಲ. ಇದರ ಪರಿಣಾಮವಾಗಿ, ಹಳ್ಳಿಗಳಿಂದ ನಿರಂತರವಾಗಿ ವಲಸೆ ಬರುತ್ತಿತ್ತು, ಬಡತನ ಹೆಚ್ಚಾಗುತ್ತಲೇ ಇತ್ತು ಮತ್ತು ಗ್ರಾಮೀಣ ಮತ್ತು ನಗರ ಪ್ರದೇಶಗಳ ನಡುವಿನ ಅಂತರವು ವಿಸ್ತರಿಸಿತು. ನಾನು ನಿಮಗೆ ಇನ್ನೊಂದು ಉದಾಹರಣೆ ನೀಡುತ್ತೇನೆ. ನಿಮಗೆ ಗೊತ್ತಾ, ಈ ಹಿಂದೆ ನಮ್ಮ ಗಡಿ ಗ್ರಾಮಗಳ ಬಗ್ಗೆ ಯಾವ ಗ್ರಹಿಕೆ ಇತ್ತು? ಅವರನ್ನು ದೇಶದ ಕೊನೆಯ ಗ್ರಾಮಗಳು ಎಂದು ಕರೆಯಲಾಗುತ್ತಿತ್ತು. ನಾವು ಅವರನ್ನು ಕೊನೆಯ ಗ್ರಾಮ ಎಂದು ಕರೆಯುವುದನ್ನು ನಿಲ್ಲಿಸಿದೆವು ಮತ್ತು ಬದಲಿಗೆ, “ಸೂರ್ಯನ ಮೊದಲ ಕಿರಣಗಳು ಹೊರಬಂದಾಗ, ಅವು ಮೊದಲ ಹಳ್ಳಿಯ ಮೇಲೆ ಬೀಳುತ್ತವೆ ಮತ್ತು ಅದು ಕೊನೆಯ ಹಳ್ಳಿಯಲ್ಲ, ಮತ್ತು ಸೂರ್ಯ ಮುಳುಗಿದಾಗ, ಕೊನೆಯ ಕಿರಣವು ಆ ದಿಕ್ಕಿನ ಮೊದಲ ಹಳ್ಳಿಯ ಮೇಲೆ ಬೀಳುತ್ತದೆ” ಎಂದು ಹೇಳಿದೆವು. ಆದ್ದರಿಂದ, ನಮಗೆ, ಈ ಗ್ರಾಮಗಳು ಕೊನೆಯವಲ್ಲ-ಅವು ಮೊದಲನೆಯವು. ನಾವು ಅವರಿಗೆ “ಮೊದಲ ಗ್ರಾಮ” ಎಂಬ ಸ್ಥಾನಮಾನವನ್ನು ನೀಡಿದ್ದೇವೆ. ಈ ಗಡಿ ಗ್ರಾಮಗಳನ್ನು ಅಭಿವೃದ್ಧಿಪಡಿಸಲು, ನಾವು ವೈಬ್ರೆಂಟ್ ವಿಲೇಜಸ್ ಯೋಜನೆಯನ್ನು ಪ್ರಾರಂಭಿಸಿದ್ದೇವೆ. ಇಂದು, ಈ ಗ್ರಾಮಗಳ ಅಭಿವೃದ್ಧಿಯು ಅವರ ಜನರ ಆದಾಯವನ್ನು ಹೆಚ್ಚಿಸುತ್ತಿದೆ. ಇದರರ್ಥ ತಮ್ಮ ಅಗತ್ಯಗಳ ಬಗ್ಗೆ ಎಂದಿಗೂ ಕೇಳದವರನ್ನು ಮೋದಿ ಗೌರವಿಸಿದ್ದಾರೆ. ಬುಡಕಟ್ಟು ಪ್ರದೇಶಗಳ ಅಭಿವೃದ್ಧಿಗಾಗಿ ನಾವು ಪಿಎಂ ಜನ್ಮಾನ್ ಯೋಜನೆಯನ್ನು ಸಹ ಪ್ರಾರಂಭಿಸಿದ್ದೇವೆ. ದಶಕಗಳಿಂದ ಅಭಿವೃದ್ಧಿಯಿಂದ ವಂಚಿತರಾಗಿದ್ದ ಪ್ರದೇಶಗಳು ಈಗ ಸಮಾನ ಹಕ್ಕುಗಳನ್ನು ಪಡೆಯುತ್ತಿವೆ. ಕಳೆದ 10 ವರ್ಷಗಳಲ್ಲಿ, ನಮ್ಮ ಸರ್ಕಾರವು ಹಿಂದಿನ ಸರ್ಕಾರಗಳ ಅನೇಕ ತಪ್ಪುಗಳನ್ನು ಸರಿಪಡಿಸಿದೆ. ಇಂದು, ಹಳ್ಳಿಗಳ ಅಭಿವೃದ್ಧಿಯು ರಾಷ್ಟ್ರದ ಅಭಿವೃದ್ಧಿಗೆ ಕಾರಣವಾಗುತ್ತದೆ ಎಂಬ ಮಂತ್ರದೊಂದಿಗೆ ನಾವು ಮುನ್ನಡೆಯುತ್ತಿದ್ದೇವೆ. ಈ ಪ್ರಯತ್ನಗಳ ಫಲಿತಾಂಶವೇನೆಂದರೆ, ಕಳೆದ 10 ವರ್ಷಗಳಲ್ಲಿ ದೇಶದಲ್ಲಿ ಸುಮಾರು 25 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ ಮತ್ತು ಅವರಲ್ಲಿ ಹೆಚ್ಚಿನವರು ನಮ್ಮ ಹಳ್ಳಿಗಳ ಜನರು.
ನಿನ್ನೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮಹತ್ವದ ಅಧ್ಯಯನವನ್ನು ಬಿಡುಗಡೆ ಮಾಡಲಾಯಿತು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ವರದಿಯು 2012ರಲ್ಲಿ ಭಾರತದಲ್ಲಿ ಗ್ರಾಮೀಣ ಬಡತನವು ಸುಮಾರು 26% ರಷ್ಟಿತ್ತು ಎಂದು ಹೇಳುತ್ತದೆ. ಆದರೆ 2024 ರ ಹೊತ್ತಿಗೆ, ಗ್ರಾಮೀಣ ಬಡತನವು 26% ರಿಂದ 5% ಕ್ಕಿಂತ ಕಡಿಮೆಯಾಗಿದೆ. ದಶಕಗಳಿಂದ, ಕೆಲವರು “ಬಡತನ ನಿರ್ಮೂಲನೆ” ಯಂತಹ ಘೋಷಣೆಗಳನ್ನು ಕೂಗುತ್ತಿದ್ದರು. ನಿಮ್ಮ ಗ್ರಾಮದಲ್ಲಿ 70-80 ವರ್ಷ ವಯಸ್ಸಿನವರನ್ನು ನೀವು ಕೇಳಿದರೆ, ಅವರು 15-20 ವರ್ಷ ವಯಸ್ಸಿನಿಂದಲೇ “ಬಡತನ ನಿರ್ಮೂಲನೆ” ಎಂಬ ಈ ಘೋಷಣೆಗಳನ್ನು ಕೇಳುತ್ತಿದ್ದೇವೆ ಎಂದು ಅವರು ನಿಮಗೆ ತಿಳಿಸುತ್ತಾರೆ. ಈಗ, ಈ ಜನರು ತಮ್ಮ 80 ರ ದಶಕದಲ್ಲಿದ್ದಾರೆ. ಆದರೆ ಇಂದು ಪರಿಸ್ಥಿತಿ ಬದಲಾಗಿದೆ. ನಮ್ಮ ದೇಶದಲ್ಲಿ ಬಡತನ ನಿಜವಾಗಿಯೂ ಕುಸಿಯಲಾರಂಭಿಸಿದೆ
ಸ್ನೇಹಿತರೇ,
ಭಾರತದ ಗ್ರಾಮೀಣ ಆರ್ಥಿಕತೆಯಲ್ಲಿ ಮಹಿಳೆಯರು ಯಾವಾಗಲೂ ಮಹತ್ವದ ಪಾತ್ರವನ್ನು ಹೊಂದಿದ್ದಾರೆ ಮತ್ತು ನಮ್ಮ ಸರ್ಕಾರವು ಆ ಪಾತ್ರವನ್ನು ಮತ್ತಷ್ಟು ವಿಸ್ತರಿಸುತ್ತಿದೆ. ಇಂದು, ಮಹಿಳೆಯರು ಗ್ರಾಮೀಣ ಜೀವನವನ್ನು ಬ್ಯಾಂಕ್ ಸಖಿ ಮತ್ತು ಬಿಮಾ ಸಖಿ ಎಂದು ಮರು ವ್ಯಾಖ್ಯಾನಿಸುವುದನ್ನು ನಾವು ನೋಡುತ್ತಿದ್ದೇವೆ. ನಾನು ಒಮ್ಮೆ ಬ್ಯಾಂಕ್ ಸಖಿಯನ್ನು ಭೇಟಿಯಾಗಿದ್ದೇನೆ ಮತ್ತು ಎಲ್ಲಾ ಬ್ಯಾಂಕ್ ಸಖಿಯರೊಂದಿಗೆ ಮಾತನಾಡುವಾಗ, ಅವರಲ್ಲಿ ಒಬ್ಬರು ಅವರು 50-60-70 ಲಕ್ಷ ರೂಪಾಯಿಗಳ ದೈನಂದಿನ ವಹಿವಾಟುಗಳನ್ನು ನಿರ್ವಹಿಸುತ್ತಾರೆ ಎಂದು ಹೇಳಿದರು. ಹೇಗೆ ಎಂದು ನಾನು ಕೇಳಿದಾಗ, “ನಾನು 50 ಲಕ್ಷ ರೂಪಾಯಿಗಳೊಂದಿಗೆ ಬೆಳಿಗ್ಗೆ ಹೊರಡುತ್ತೇನೆ” ಎಂದು ಉತ್ತರಿಸಿದರು. ನನ್ನ ದೇಶದಲ್ಲಿ, ತನ್ನ ಚೀಲದಲ್ಲಿ 50 ಲಕ್ಷ ರೂಪಾಯಿಗಳೊಂದಿಗೆ ಸುತ್ತಾಡುತ್ತಿರುವ ಯುವತಿಯೊಬ್ಬಳು ನಮ್ಮ ದೇಶದ ಹೊಸ ಮುಖವಾಗಿದ್ದಾಳೆ. ಹಳ್ಳಿಗಳಾದ್ಯಂತ ಮಹಿಳೆಯರು ಸ್ವಸಹಾಯ ಗುಂಪುಗಳ ಮೂಲಕ ಕ್ರಾಂತಿಯನ್ನು ಸೃಷ್ಟಿಸುತ್ತಿದ್ದಾರೆ. ನಾವು 1.15 ಕೋಟಿ ಮಹಿಳೆಯರನ್ನು ಲಕ್ಷಪತಿ ದೀದಿಗಳನ್ನಾಗಿ ಮಾಡಿದ್ದೇವೆ. ಮತ್ತು ‘ಲಕ್ಷಪತಿ ದೀದಿ’ ಎಂದರೆ ಕೇವಲ ಒಮ್ಮೆ 1 ಲಕ್ಷ ರೂಪಾಯಿ ಗಳಿಸುವುದು ಎಂದರ್ಥವಲ್ಲ-ಅಂದರೆ ವಾರ್ಷಿಕವಾಗಿ 1 ಲಕ್ಷ ರೂಪಾಯಿಗಳಿಗಿಂತ ಹೆಚ್ಚು ಗಳಿಸುವುದು ಎಂದರ್ಥ. 3 ಕೋಟಿ ಮಹಿಳೆಯರನ್ನು ಲಕ್ಷಪತಿ ದೀದಿಗಳನ್ನಾಗಿ ಮಾಡುವುದು ನಮ್ಮ ಸಂಕಲ್ಪವಾಗಿದೆ. ದಲಿತರು, ಹಿಂದುಳಿದವರು ಮತ್ತು ಬುಡಕಟ್ಟು ಸಮುದಾಯಗಳ ಮಹಿಳೆಯರ ಸಬಲೀಕರಣಕ್ಕಾಗಿ ನಾವು ವಿಶೇಷ ಯೋಜನೆಗಳನ್ನು ನಡೆಸುತ್ತಿದ್ದೇವೆ.
ಸ್ನೇಹಿತರೇ,
ಇಂದು, ದೇಶದಲ್ಲಿ ಗ್ರಾಮೀಣ ಮೂಲಸೌಕರ್ಯಗಳ ಮೇಲೆ ಹಿಂದೆಂದಿಗಿಂತಲೂ ಹೆಚ್ಚಿನ ಗಮನ ಹರಿಸಲಾಗಿದೆ. ದೇಶದ ಹೆಚ್ಚಿನ ಗ್ರಾಮಗಳು ಈಗ ಹೆದ್ದಾರಿಗಳು, ಎಕ್ಸ್ ಪ್ರೆಸ್ ಮಾರ್ಗಗಳು ಮತ್ತು ರೈಲ್ವೆಗಳೊಂದಿಗೆ ಸಂಪರ್ಕ ಹೊಂದಿವೆ. ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ, ಕಳೆದ 10 ವರ್ಷಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಸುಮಾರು 4 ಲಕ್ಷ ಕಿಲೋಮೀಟರ್ ರಸ್ತೆಗಳನ್ನು ನಿರ್ಮಿಸಲಾಗಿದೆ. ಡಿಜಿಟಲ್ ಮೂಲಸೌಕರ್ಯದ ವಿಷಯದಲ್ಲಿ, ನಮ್ಮ ಗ್ರಾಮಗಳು 21ನೇ ಶತಮಾನದ ಆಧುನಿಕ ಕೇಂದ್ರಗಳಾಗುತ್ತಿವೆ. ಗ್ರಾಮೀಣ ನಿವಾಸಿಗಳಿಗೆ ಡಿಜಿಟಲ್ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಭಾವಿಸಿದವರನ್ನು ನಮ್ಮ ಹಳ್ಳಿಗಳ ಜನರು ನಿರಾಕರಿಸಿದ್ದಾರೆ. ನಾನು ಇಲ್ಲಿ ನೋಡುತ್ತೀದೆ, ಎಲ್ಲರೂ ಮೊಬೈಲ್ ಫೋನ್ ಗಳಲ್ಲಿ ವೀಡಿಯೊಗಳನ್ನು ರೆಕಾರ್ಡ್ ಮಾಡುತ್ತಿದ್ದಾರೆ-ಇವರೆಲ್ಲರೂ ಗ್ರಾಮಸ್ಥರು. ಇಂದು, ದೇಶದ 94% ಕ್ಕಿಂತ ಹೆಚ್ಚು ಗ್ರಾಮೀಣ ಕುಟುಂಬಗಳು ದೂರವಾಣಿ ಅಥವಾ ಮೊಬೈಲ್ ಫೋನ್ ಗಳನ್ನು ಹೊಂದಿವೆ. ಬ್ಯಾಂಕಿಂಗ್ ಸೇವೆಗಳು ಮತ್ತು ಯು. ಪಿ. ಐ. ನಂತಹ ವಿಶ್ವದರ್ಜೆಯ ತಂತ್ರಜ್ಞಾನಗಳು ಈಗ ಹಳ್ಳಿಗಳಲ್ಲಿ ಲಭ್ಯವಿದೆ. 2014 ಕ್ಕಿಂತ ಮೊದಲು, ನಮ್ಮ ದೇಶದಲ್ಲಿ 1 ಲಕ್ಷಕ್ಕಿಂತ ಕಡಿಮೆ ಸಾಮಾನ್ಯ ಸೇವಾ ಕೇಂದ್ರಗಳಿದ್ದವು. (CSC). ಇಂದು, ಈ ಸಂಖ್ಯೆ 5 ಲಕ್ಷಕ್ಕೂ ಹೆಚ್ಚಾಗಿದೆ. ಈ ಕೇಂದ್ರಗಳು ಆನ್ಲೈನ್ನಲ್ಲಿ ಡಜನ್ ಗಟ್ಟಲೆ ಸರ್ಕಾರಿ ಸೇವೆಗಳನ್ನು ಒದಗಿಸುತ್ತವೆ. ಈ ಮೂಲಸೌಕರ್ಯವು ಹಳ್ಳಿಗಳಲ್ಲಿ ಪ್ರಗತಿಯನ್ನು ಪ್ರೇರೇಪಿಸುತ್ತಿದೆ, ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿದೆ ಮತ್ತು ಗ್ರಾಮೀಣ ಪ್ರದೇಶಗಳನ್ನು ದೇಶದ ಬೆಳವಣಿಗೆಯ ಅವಿಭಾಜ್ಯ ಅಂಗವನ್ನಾಗಿ ಮಾಡುತ್ತಿದೆ.
ಸ್ನೇಹಿತರೇ,
ಇಲ್ಲಿ, ನಮ್ಮೊಂದಿಗೆ ನಬಾರ್ಡ್ನ ಹಿರಿಯ ನಿರ್ವಹಣಾ ವರ್ಗವಿದೆ. ಸ್ವಸಹಾಯ ಗುಂಪುಗಳಿಂದ ಕಿಸಾನ್ ಕ್ರೆಡಿಟ್ ಕಾರ್ಡ್ಗಳವರೆಗೆ ಅನೇಕ ಉಪಕ್ರಮಗಳ ಯಶಸ್ಸಿನಲ್ಲಿ ನೀವು ನಿರ್ಣಾಯಕ ಪಾತ್ರವನ್ನು ವಹಿಸಿದ್ದೀರಿ. ಮುಂದೆ, ದೇಶದ ಉದ್ದೇಶಗಳನ್ನು ಈಡೇರಿಸುವಲ್ಲಿ ನಿಮ್ಮ ಪಾತ್ರವು ಮಹತ್ವದ್ದಾಗಿರುತ್ತದೆ. ನೀವೆಲ್ಲರೂ ಎಫ್ ಪಿ ಒ ಗಳ (ರೈತ ಉತ್ಪಾದಕ ಸಂಸ್ಥೆಗಳು) ಬಲವನ್ನು ಚೆನ್ನಾಗಿ ತಿಳಿದಿದ್ದೀರಿ. ಎಫ್ ಪಿ ಒ ಗಳ ಸ್ಥಾಪನೆಯೊಂದಿಗೆ, ನಮ್ಮ ರೈತರು ಈಗ ತಮ್ಮ ಬೆಳೆಗಳಿಗೆ ಉತ್ತಮ ಬೆಲೆಗಳನ್ನು ಪಡೆಯುತ್ತಿದ್ದಾರೆ. ಹೆಚ್ಚಿನ ಎಫ್ಪಿಒಗಳನ್ನು ರಚಿಸುವ ಬಗ್ಗೆ ನಾವು ಚಿಂತಿಸಬೇಕು ಮತ್ತು ಆ ದಿಕ್ಕಿನಲ್ಲಿ ಮುನ್ನಡೆಯಬೇಕು. ಪ್ರಸ್ತುತ, ಹಾಲು ಉತ್ಪಾದನೆಯು ರೈತರಿಗೆ ಹೆಚ್ಚಿನ ಆದಾಯವನ್ನು ನೀಡುತ್ತಿದೆ. ದೇಶಾದ್ಯಂತ ಪ್ರಸಿದ್ಧಿ ಹೊಂದಿರುವ ಅಮುಲ್ನಂತಹ 5-6 ಹೆಚ್ಚಿನ ಸಹಕಾರ ಸಂಘಗಳನ್ನು ರಚಿಸಲು ನಾವು ಕೆಲಸ ಮಾಡಬೇಕಾಗಿದೆ. ದೇಶವು ಈಗ ಸಾವಯವ ಕೃಷಿಯನ್ನು ಒಂದು ಮಿಷನ್ ಆಗಿ ಮುನ್ನಡೆಸುತ್ತಿದೆ. ಸಾವಯವ ಕೃಷಿಯನ್ನು ಉತ್ತೇಜಿಸಲು ಈ ಉಪಕ್ರಮದಲ್ಲಿ ಹೆಚ್ಚಿನ ರೈತರನ್ನು ತೊಡಗಿಸಿಕೊಳ್ಳಬೇಕು. ನಮ್ಮ ಸ್ವಸಹಾಯ ಗುಂಪುಗಳನ್ನು ಸಣ್ಣ ಮತ್ತು ಸೂಕ್ಷ್ಮ ಉದ್ಯಮಗಳೊಂದಿಗೆ (MSME) ಸಂಪರ್ಕಿಸಬೇಕು. ಅವರು ತಯಾರಿಸಿದ ಉತ್ಪನ್ನಗಳಿಗೆ ದೇಶಾದ್ಯಂತ ಬೇಡಿಕೆಯಿದೆ, ಆದರೆ ನಾವು ಅವುಗಳ ಬ್ರ್ಯಾಂಡಿಂಗ್ ಮತ್ತು ಮಾರ್ಕೆಟಿಂಗ್ ಮೇಲೆ ಗಮನ ಹರಿಸಬೇಕು. ಹೆಚ್ಚುವರಿಯಾಗಿ, ನಮ್ಮ ಜಿಐ (GI) ಉತ್ಪನ್ನಗಳ ಗುಣಮಟ್ಟ, ಪ್ಯಾಕೇಜಿಂಗ್ ಮತ್ತು ಬ್ರ್ಯಾಂಡಿಂಗ್ ಮೇಲೆ ನಾವು ಗಮನ ಹರಿಸಬೇಕು.
ಸ್ನೇಹಿತರೇ,
ಗ್ರಾಮೀಣ ಆದಾಯವನ್ನು ವೈವಿಧ್ಯಗೊಳಿಸಲು ನಾವು ಕೆಲಸ ಮಾಡಬೇಕಾಗಿದೆ. ಹಳ್ಳಿಗಳಲ್ಲಿ ನೀರಾವರಿಯನ್ನು ಕೈಗೆಟುಕುವಂತೆ ಮಾಡುವುದು ಹೇಗೆ? ನಾವು ಸೂಕ್ಷ್ಮ ನೀರಾವರಿ ವ್ಯವಸ್ಥೆಗಳನ್ನು ವಿಸ್ತರಿಸುವತ್ತ ಗಮನ ಹರಿಸಬೇಕು ಮತ್ತು “ಒಂದು ಹನಿ ಹೆಚ್ಚು ಬೆಳೆ” ಎಂಬ ಮಂತ್ರವನ್ನು ಸಾಕಾರಗೊಳಿಸಬೇಕು. ನಾವು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಸರಳವಾದ ಗ್ರಾಮೀಣ ಉದ್ಯಮಗಳನ್ನು ರಚಿಸಬೇಕಾಗಿದೆ. ಹೆಚ್ಚುವರಿಯಾಗಿ, ನೈಸರ್ಗಿಕ ಕೃಷಿಯ ಅವಕಾಶಗಳು ಗ್ರಾಮೀಣ ಆರ್ಥಿಕತೆಗೆ ಸಾಧ್ಯವಾದಷ್ಟು ಪ್ರಯೋಜನವಾಗುವಂತೆ ನಾವು ಖಚಿತಪಡಿಸಿಕೊಳ್ಳಬೇಕು. ಈ ಗುರಿಗಳನ್ನು ಸಾಧಿಸಲು ಕಾಲಮಿತಿಯಲ್ಲಿ ಕೆಲಸ ಮಾಡುವಂತೆ ನಾನು ನಿಮ್ಮನ್ನು ಕೋರುತ್ತೇನೆ.
ಸ್ನೇಹಿತರೇ,
ನಿಮ್ಮ ಹಳ್ಳಿಯಲ್ಲಿ ನಿರ್ಮಿಸಲಾದ ಅಮೃತ ಸರೋವರಗಳನ್ನು ಒಟ್ಟಾಗಿ ಇಡೀ ಸಮುದಾಯವು ಆರೈಕೆ ಮಾಡಬೇಕು. ಅದೇ ಸಮಯದಲ್ಲಿ, “ಏಕ್ ಪೇಡ್ ಮಾ ಕೆ ನಾಮ್” (ತಾಯಿಯ ಹೆಸರಿನಲ್ಲಿ ಒಂದು ಮರ) ಎಂಬ ರಾಷ್ಟ್ರೀಯ ಅಭಿಯಾನವೂ ಇದೆ. ಹಳ್ಳಿಯಲ್ಲಿ ಸಾಧ್ಯವಾದಷ್ಟು ಮರಗಳನ್ನು ನೆಡುವುದನ್ನು ಖಚಿತಪಡಿಸಿಕೊಳ್ಳಲು ಈ ಉಪಕ್ರಮದಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ಭಾಗವಹಿಸುವಂತೆ ಪ್ರೇರೇಪಿಸುವುದು ಮುಖ್ಯ. ಮತ್ತೊಂದು ಮುಖ್ಯ ಅಂಶವೆಂದರೆ ನಮ್ಮ ಹಳ್ಳಿಯ ಗುರುತು ಅದರ ಏಕತೆ, ಸಾಮರಸ್ಯ ಮತ್ತು ಪ್ರೀತಿಯೊಂದಿಗೆ ಬೆಸೆದುಕೊಂಡಿದೆ. ದುರದೃಷ್ಟವಶಾತ್, ಜಾತಿಯ ಹೆಸರಿನಲ್ಲಿ ಸಮಾಜದಲ್ಲಿ ವಿಷ ಬೀಜ ಬಿತ್ತಲು ಪ್ರಯತ್ನಿಸುತ್ತಿರುವ ವ್ಯಕ್ತಿಗಳಿದ್ದಾರೆ, ನಮ್ಮ ಸಾಮಾಜಿಕ ರಚನೆಯನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಈ ಷಡ್ಯಂತ್ರಗಳನ್ನು ನಾವು ವಿಫಲಗೊಳಿಸಬೇಕು ಮತ್ತು ನಮ್ಮ ‘ಸಂಝಿ ವಿರಾಸತ್’ (ಹಂಚಿಕೆಯ ಪರಂಪರೆ) ಮತ್ತು ‘ಸಾಂಝಿ ಸಂಸ್ಕೃತಿ’ (ಹಂಚಿಕೆಯ ಸಂಸ್ಕೃತಿ) ಯನ್ನು ಕಾಪಾಡಿಕೊಳ್ಳಬೇಕು ಮತ್ತು ಬಲಪಡಿಸಬೇಕು.
ಸಹೋದರ ಸಹೋದರಿಯರೇ,
ನಮ್ಮ ಸಂಕಲ್ಪಗಳು ಪ್ರತಿ ಹಳ್ಳಿಯನ್ನೂ ತಲುಪಬೇಕು ಮತ್ತು ಈ ಗ್ರಾಮೀಣ ಭಾರತದ ಆಚರಣೆಯು ಎಲ್ಲಾ ಹಳ್ಳಿಗಳಿಗೂ ವ್ಯಾಪಿಸಬೇಕು. ನಮ್ಮ ಹಳ್ಳಿಗಳು ಬಲಿಷ್ಠವಾಗಲು ಮತ್ತು ಹೆಚ್ಚು ಸಬಲೀಕರಣಗೊಳ್ಳಲು ನಾವು ನಿರಂತರವಾಗಿ ಒಟ್ಟಾಗಿ ಕೆಲಸ ಮಾಡಬೇಕಾಗಿದೆ. ಹಳ್ಳಿಗಳ ಅಭಿವೃದ್ಧಿಗೆ ಇರುವ ಬದ್ಧತೆಯು ‘ವಿಕಸಿತ ಭಾರತ’ದ ದೃಷ್ಟಿಯನ್ನು ಈಡೇರಿಸುತ್ತದೆ ಎಂದು ನನಗೆ ವಿಶ್ವಾಸವಿದೆ. ಇಂದು, ಗ್ರಾಮಸ್ಥರು ತಂದ ಜಿಐ-ಟ್ಯಾಗ್ ಉತ್ಪನ್ನಗಳನ್ನು ಪ್ರದರ್ಶಿಸುವ ಸ್ಟಾಲ್ ಗೆ ಭೇಟಿ ನೀಡುವ ಅವಕಾಶ ನನಗೆ ಸಿಕ್ಕಿತು. ಈ ಕಾರ್ಯಕ್ರಮದ ಮೂಲಕ, ನಿಯಮಿತವಾಗಿ ಹಳ್ಳಿಗಳಿಗೆ ಭೇಟಿ ನೀಡಲು ಅವಕಾಶವಿಲ್ಲದ ದೆಹಲಿಯ ಜನರು ಕನಿಷ್ಠ ಒಂದು ಬಾರಿ ಭೇಟಿ ನೀಡಿ ನನ್ನ ಹಳ್ಳಿಯ ಸಾಮರ್ಥ್ಯವನ್ನು ನೋಡಬೇಕೆಂದು ನಾನು ಒತ್ತಾಯಿಸುತ್ತೇನೆ. ನಮ್ಮ ಹಳ್ಳಿಗಳಲ್ಲಿ ತುಂಬಾ ವೈವಿಧ್ಯತೆ ಮತ್ತು ಸಾಮರ್ಥ್ಯವಿದೆ, ಮತ್ತು ಹಳ್ಳಿಗೆ ಎಂದಿಗೂ ಭೇಟಿ ನೀಡದವರು ತಾವು ನೋಡುವುದನ್ನು ಕಂಡು ಆಶ್ಚರ್ಯಚಕಿತರಾಗುತ್ತಾರೆ ಎಂದು ನನಗೆ ಖಾತ್ರಿಯಿದೆ. ಈ ಕೆಲಸವನ್ನು ನೀವು ಮಾಡಿದ್ದೀರಿ, ಮತ್ತು ನೀವೆಲ್ಲರೂ ಅಭಿನಂದನೆಗೆ ಅರ್ಹರು. ನಿಮ್ಮಲ್ಲಿ ಪ್ರತಿಯೊಬ್ಬರಿಗೂ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸುತ್ತೇನೆ ಮತ್ತು ನಿಮ್ಮೆಲ್ಲರಿಗೂ ಧನ್ಯವಾದಗಳು.
ಸೂಚನೆ: ಇದು ಪ್ರಧಾನಮಂತ್ರಿಯವರ ಭಾಷಣದ ಭಾವಾನುವಾದವಾಗಿದೆ.ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಯಿತು.
*****
Our vision is to empower rural India by transforming villages into vibrant centres of growth and opportunity. Addressing the Grameen Bharat Mahotsav in Delhi. https://t.co/XZ20St4QX9
— Narendra Modi (@narendramodi) January 4, 2025
हमने गाँव-गाँव में मूलभूत सुविधाओं की गारंटी का अभियान चलाया: PM @narendramodi pic.twitter.com/Kqfw6nKmi6
— PMO India (@PMOIndia) January 4, 2025
हमारी सरकार की नीयत, नीति और निर्णय ग्रामीण भारत को नई ऊर्जा से भर रहे हैं: PM @narendramodi pic.twitter.com/YcCILkhUG0
— PMO India (@PMOIndia) January 4, 2025
आज भारत सहकार से समृद्धि का रास्ता तय करने में जुटा है: PM @narendramodi pic.twitter.com/LW6fVPqgvs
— PMO India (@PMOIndia) January 4, 2025
बचपन से ही मैंने गांव की समस्याओं को जिया है। इसीलिए गांव-गरीब की सेवा के संकल्प को साकार करने में निरंतर जुटा हूं। pic.twitter.com/zPpc7EtFKm
— Narendra Modi (@narendramodi) January 4, 2025
मुझे खुशी है कि हमारी सरकार की नीयत, नीति और निर्णय ग्रामीण भारत को नई ऊर्जा से भर रहे हैं। pic.twitter.com/wbd50yTr8G
— Narendra Modi (@narendramodi) January 4, 2025
बीते 10 वर्षों के हमारे प्रयासों से खर्च के मामले में गांव और शहर का अंतर बहुत कम हुआ है। pic.twitter.com/iHAEg9vmUF
— Narendra Modi (@narendramodi) January 4, 2025
आज हम गांवों के विकास से राष्ट्र के विकास का मंत्र लेकर आगे बढ़ रहे हैं। pic.twitter.com/0wWWdryEZB
— Narendra Modi (@narendramodi) January 4, 2025
भारत की ग्रामीण अर्थव्यवस्था में भी नारीशक्ति की भूमिका बहुत अहम है। महिला सशक्तिकरण की हमारी योजनाओं से उनके जीवन में एक नई क्रांति आ रही है। pic.twitter.com/IB2gJIc4Iv
— Narendra Modi (@narendramodi) January 4, 2025
डिजिटल इन्फ्रास्ट्रक्चर पर फोकस से आज हमारे गांव 21वीं सदी के आधुनिक गांव बन रहे हैं। pic.twitter.com/gob7anTPST
— Narendra Modi (@narendramodi) January 4, 2025
देश के अपने ग्रामीण भाई-बहनों से मेरा यह विशेष आग्रह… pic.twitter.com/ijKGQX1cMJ
— Narendra Modi (@narendramodi) January 4, 2025