Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭಾರತೀಯ ಸಿನೆಮಾಕ್ಕಾಗಿರುವ ರಾಷ್ಟ್ರೀಯ ವಸ್ತುಸಂಗ್ರಹಾಲಯ, ಪ್ರಧಾನಮಂತ್ರಿ ಅವರಿಂದ ಉದ್ಘಾಟನೆ.

ಭಾರತೀಯ ಸಿನೆಮಾಕ್ಕಾಗಿರುವ ರಾಷ್ಟ್ರೀಯ ವಸ್ತುಸಂಗ್ರಹಾಲಯ,  ಪ್ರಧಾನಮಂತ್ರಿ ಅವರಿಂದ ಉದ್ಘಾಟನೆ.

ಭಾರತೀಯ ಸಿನೆಮಾಕ್ಕಾಗಿರುವ ರಾಷ್ಟ್ರೀಯ ವಸ್ತುಸಂಗ್ರಹಾಲಯ,  ಪ್ರಧಾನಮಂತ್ರಿ ಅವರಿಂದ ಉದ್ಘಾಟನೆ.

ಭಾರತೀಯ ಸಿನೆಮಾಕ್ಕಾಗಿರುವ ರಾಷ್ಟ್ರೀಯ ವಸ್ತುಸಂಗ್ರಹಾಲಯ,  ಪ್ರಧಾನಮಂತ್ರಿ ಅವರಿಂದ ಉದ್ಘಾಟನೆ.


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಮುಂಬಯಿಯಲ್ಲಿ ಭಾರತೀಯ ಸಿನೆಮಾಕ್ಕಾಗಿರುವ ರಾಷ್ಟ್ರೀಯ ವಸ್ತುಸಂಗ್ರಹಾಲಯದ ಹೊಸ ಕಟ್ಟಡವನ್ನು ಉದ್ಘಾಟಿಸಿದರು.

ಮಹಾರಾಷ್ಟ್ರ ರಾಜ್ಯಪಾಲ ಶ್ರೀ .ಸಿ.ವಿದ್ಯಾಸಾಗರ ರಾವ್, ಮಹಾರಾಷ್ಟ್ರ ಮುಖ್ಯಮಂತ್ರಿ ಶ್ರೀ ದೇವೇಂದ್ರ ಫಡ್ನವಿಸ್ , ಕೇಂದ್ರ ಸಹಾಯಕ ಸಚಿವರಾದ ಶ್ರೀ ರಾಮದಾಸ್ ಅಠಾವಳೆ ಮತ್ತು ಕೇಂದ್ರ ಸಹಾಯಕ ಸಚಿವರಾದ ನಿವೃತ್ತ ಕರ್ನಲ್ ರಾಜ್ಯವರ್ಧನ ರಾಥೋಡ್ ಮತ್ತು ಇತರ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ತಮ್ಮ ಭಾಷಣದಲ್ಲಿ ಪ್ರಧಾನಮಂತ್ರಿ ಅವರು ಭಾರತೀಯ ಸಿನೆಮಾ ಕುರಿತು ತಿಳಿದುಕೊಳ್ಳಲು ಮತ್ತು ಕಲಿಯಲು ಭಾರತೀಯ ಸಿನೆಮಾದ ರಾಷ್ಟ್ರೀಯ ವಸ್ತುಸಂಗ್ರಹಾಲಯ ಒಂದು ಅದ್ಭುತ ಅವಕಾಶವನ್ನು ಒದಗಿಸುತ್ತದೆ ಎಂದರು. ಈ ವಸ್ತು ಸಂಗ್ರಹಾಲಯವು ಭಾರತೀಯ ಮನೋರಂಜನಾ ಕೈಗಾರಿಕೆಯ ಇತಿಹಾಸದ ಬಗ್ಗೆ ವಿವರವಾದ ಮಾಹಿತಿಯನ್ನು, ಸಿನೆಮಾದ ವಿವಿಧ ವ್ಯಕ್ತಿಗಳು ನಡೆಸಿದ ಹೋರಾಟದ ಕಥೆಗಳೊಂದಿಗೆ ಒದಗಿಸುತ್ತದೆ ಎಂದೂ ಅವರು ಹೇಳಿದರು.

ಚಲನಚಿತ್ರ ಮತ್ತು ಸಮಾಜ ಪರಸ್ಪರ ಪ್ರತಿಬಿಂಬಗಳು ಎಂದು ಹೇಳಿದ ಪ್ರಧಾನಮಂತ್ರಿಗಳು ಸಮಾಜದಲ್ಲಿ ಏನೆಲ್ಲಾ ನಡೆಯುತ್ತದೆಯೋ ಅದು ಚಲನಚಿತ್ರಗಳ ಮೂಲಕ ಪರದೆಗಳಲ್ಲಿ ಪ್ರತಿಬಿಂಬಿಸಲ್ಪಡುತ್ತದೆ, ಹಾಗು ಚಲನಚಿತ್ರದ ಬಿಂಬಗಳು ಸಮಾಜದ ಕನ್ನಡಿಗಳೂ ಆಗಿರುತ್ತವೆ ಎಂದೂ ಅಭಿಪ್ರಾಯಪಟ್ಟರು.

ಚಾಲ್ತಿಯಲ್ಲಿರುವ ವಿಧಾನಗಳನ್ನು ಪ್ರಸ್ತಾಪಿಸಿದ ಅವರು ಬರೇ ಅಸಹಾಯಕತೆಯನ್ನು ವಿವರಿಸುತ್ತಿದ್ದ ಹಿಂದಿನ ವರ್ಷಗಳ ಚಲನಚಿತ್ರಗಳಿಗೆ ಹೋಲಿಸಿದರೆ ಈಗ ಹಲವು ಚಲನಚಿತ್ರಗಳು ಸಮಸ್ಯೆ ಮತ್ತು ಪರಿಹಾರಗಳನ್ನು ಒಳಗೊಳ್ಳುತ್ತಿರುವುದು ಒಂದು ಧನಾತ್ಮಕ ಸಂಕೇತ ಎಂದರು.

ಭಾರತವೀಗ ಅದು ಎದುರಿಸುತ್ತಿರುವ ಸಮಸ್ಯೆಗಳಿಗೆ ತನ್ನದೇ ಪರಿಹಾರಗಳನ್ನು ಹುಡುಕುವ ಆತ್ಮವಿಶ್ವಾಸ ಹೊಂದಿದೆ ಎಂದ ಪ್ರಧಾನಮಂತ್ರಿ ಅವರು ಇದು, ನವಭಾರತದ ಸಂಕೇತ , ಅದು ಸಮಸ್ಯೆಗಳನ್ನು ಕೈಗೆತ್ತಿಕೊಂಡು ಅವುಗಳನ್ನು ಪರಿಹರಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದರು.

ಭಾರತೀಯ ಸಿನೆಮಾಗಳು ಜಾಗತಿಕ ಮಟ್ಟ ತಲುಪುತ್ತಿರುವುದನ್ನು ಪ್ರಧಾನಮಂತ್ರಿ ಅವರು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದರು. ಈ ನಿಟ್ಟಿನಲ್ಲಿ ಅವರು ಭಾರತೀಯ ಗೀತೆಗಳನ್ನು ಹಾಡಬಲ್ಲ ಅನೇಕ ಜಾಗತಿಕ ನಾಯಕರ ಜೊತೆಗಿನ ತಮ್ಮ ಸಂವಾದವನ್ನೂ ಉಲ್ಲೇಖಿಸಿದರು.

ಯುವ ತಲೆಮಾರಿನ ಕಲ್ಪನೆಯನ್ನು ಸಾಕ್ಷೀಕರಿಸುವಂತಹ ಪಾತ್ರಗಳನ್ನು ರೂಪಿಸಿದ್ದಕ್ಕಾಗಿ ಚಲನಚಿತ್ರ ಕುಟುಂಬಕ್ಕೆ ತಮ್ಮ ಶುಭಾಶಯಗಳನ್ನು ಹೇಳಿದ ಪ್ರಧಾನಮಂತ್ರಿ ಅವರು ಇಂತಹ ಪಾತ್ರಗಳ ಜಾಗತಿಕ ಮನ್ನಣೆಯಿಂದಾಗಿ ಭಾರತದ ಯುವಕರು ಇಂದು ಬ್ಯಾಟ್ ಮನ್ ಗಳ ಅಭಿಮಾನಿಗಳಾಗಿ ಮಾತ್ರವಲ್ಲ ಬಾಹುಬಲಿಯ ಅಭಿಮಾನಿಗಳಾಗಿದ್ದಾರೆ ಎಂದರು.

ಭಾರತೀಯ ಸಿನೆಮಾ ಭಾರತದ ಬುದ್ದಿಶಕ್ತಿ ಎತ್ತರಿಸುವಲ್ಲಿ , ಅದರ ವಿಶ್ವಾಸಾರ್ಹತೆ ಮತ್ತು ವಿಶ್ವದಾದ್ಯಂತ ಬ್ರಾಂಡ್ ಭಾರತವನ್ನು ನಿರ್ಮಾಣ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದೆ ಎಂದೂ ಪ್ರಧಾನಮಂತ್ರಿ ಅವರು ನುಡಿದರು. ಚಲನಚಿತ್ರಗಳ ಮೂಲಕ ಪ್ರಮುಖ ಸಾಮಾಜಿಕ ವಿಷಯಗಳಾದ ನೈರ್ಮಲ್ಯೀಕರಣ, ಮಹಿಳಾ ಸಶಕ್ತೀಕರಣ, ಕ್ರೀಡೆ ಇತ್ಯಾದಿಗಳು ಈಗ ಜನರನ್ನು ತಲುಪುತ್ತಿವೆ . ರಾಷ್ಟ್ರ ನಿರ್ಮಾಣ ಮತ್ತು ಏಕ ಭಾರತ್, ಶ್ರೇಷ್ಟ ಭಾರತ್ ಭಾವನೆಯನ್ನು ಬಲಗೊಳಿಸುವಲ್ಲಿ ಚಲನಚಿತ್ರಗಳು ಪ್ರಮುಖ ಪಾತ್ರ ವಹಿಸಿವೆ . ಚಲನ ಚಿತ್ರ ಕೈಗಾರಿಕೆ ದೇಶದ ಪ್ರವಾಸೋದ್ಯಮ ಅಭಿವೃದ್ದಿಗೆ ಗಣನೀಯ ಕೊಡುಗೆ ನೀಡುವ ದೊಡ್ಡ ಸಾಮರ್ಥ್ಯವನ್ನು ಹೊಂದಿದೆ ಎಂದರು.

“ಚಲನಚಿತ್ರ ನಿರ್ಮಾಣಕ್ಕೆ ಅನುಕೂಲಕರ ವಾತಾವರಣದ ನಿರ್ಮಾಣ ಮಾಡುವಂತಹ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಸರಕಾರವು ಕಾರ್ಯಪವೃತ್ತವಾಗಿದೆ. ದೇಶದ ವಿವಿಧೆಡೆ ಚಲನ ಚಿತ್ರ ಚಿತ್ರೀಕರಣಕ್ಕೆ ಅನುಮತಿ ನೀಡಲು ಏಕ ಗವಾಕ್ಷ ಕ್ಲಿಯರೆನ್ಸ್ ವ್ಯವಸ್ಥೆಯಂತಹ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಎಂದು ಹೇಳಿದ ಪ್ರಧಾನಮಂತ್ರಿ ಅವರು ಚಲನಚಿತ್ರ ನಕಲು ಸಮಸ್ಯೆ ತಡೆಯಲು ಸಿನೆಮಾಟೋಗ್ರಾಫಿ ಕಾಯ್ದೆ 1952ಕ್ಕೆ ತಿದ್ದುಪಡಿ ತರುವ ನಿಟ್ಟಿನಲ್ಲಿಯೂ ಸರಕಾರ ಕಾರ್ಯಪ್ರವೃತ್ತವಾಗಿದೆ ಎಂದರು.

ಆನಿಮೇಶನ್ , ದೃಶ್ಯ ಪರಿಣಾಮಗಳು, ಆಟ ಮತ್ತು ಕಾಮಿಕ್ಸ್ ಕ್ಷೇತ್ರಗಳಲ್ಲಿ ಶ್ರೇಷ್ಟತೆಗಾಗಿ ರಾಷ್ಟ್ರೀಯ ಕೇಂದ್ರವನ್ನು ಸ್ಥಾಪಿಸುವ ನಿಟ್ಟಿನಲ್ಲಿಯೂ ಕೇಂದ್ರ ಕಾರ್ಯನಿರತವಾಗಿದೆ ಎಂದ ಪ್ರಧಾನ ಮಂತ್ರಿ ಅವರು ಸಂವಹನ ಮತ್ತು ಮನೋರಂಜನೆಗಾಗಿ ಪ್ರತ್ಯೇಕ ವಿಶ್ವವಿದ್ಯಾಲಯ ಇಂದಿನ ಆವಶ್ಯಕತೆಯಾಗಿದೆ ಮತ್ತು ಈ ನಿಟ್ಟಿನಲ್ಲಿ ಚಲನಚಿತ್ರರಂಗದ ಗಣ್ಯರು ಸಲಹೆ ನೀಡುವಂತೆ ಮನವಿ ಮಾಡಿದರು. ದಾವೋಸ್ ಶೃಂಗ ಮಾದರಿಯಲ್ಲಿ ಭಾರತದ ಸಿನೆಮಾಕ್ಕೆ ಮಾರುಕಟ್ಟೆ ವಿಸ್ತರಿಸುವ ಉದ್ದೇಶದಿಂದ ಜಾಗತಿಕ ಚಲನಚಿತ್ರ ಶೃಂಗದ ಹಮ್ಮಿಕೊಳ್ಳುವ ನಿಟ್ಟಿನಲ್ಲಿ ಚಿಂತನೆ ನಡೆಸುವಂತೆಯೂ ಸಲಹೆ ಮಾಡಿದರು.

***