Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭಾರತೀಯ ವೈದ್ಯಕೀಯ ಮತ್ತು ಹೋಮಿಯೋಪತಿ ಫಾರ್ಮಕೊಪಿಯಾ ಆಯೋಗ (ಪಿಸಿಐಎಂ & ಎಚ್)ವನ್ನು ಆಯುಷ್ ಸಚಿವಾಲಯದ ಅಧೀನ ಕಚೇರಿಯಾಗಿ ಸ್ಥಾಪಿಸಲು ಸಂಪುಟದ ಅನುಮೋದನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತೀಯ ವೈದ್ಯಕೀಯ ಮತ್ತು ಹೋಮಿಯೋಪತಿ ಫಾರ್ಮಕೋಪಿಯಾ ಆಯೋಗ (ಪಿಸಿಐಎಂ&ಎಚ್)ವನ್ನು ಆಯುಷ್ ಸಚಿವಾಲಯದ ಅಧೀನದ ಕಚೇರಿಯಾಗಿ ಮರು ಸ್ಥಾಪಿಸಲು ಅನುಮೋದನೆ ನೀಡಿತು. ಇದರಿಂದಾಗಿ 1975ರಿಂದೀಚೆಗೆ ಘಾಜಿಯಾಬಾದ್ ನಲ್ಲಿ ಸ್ಥಾಪಿಸಲಾದ ಎರಡು ಕೇಂದ್ರೀಯ ಪ್ರಯೋಗಾಲಯಗಳಾದ ಫಾರ್ಮಕೊಪಿಯಾ ಭಾರತೀಯ ಔಷಧ ಪ್ರಯೋಗಾಲಯ(ಪಿಎಲ್ಐಎಂ) ಮತ್ತು ಹೋಮಿಯೋಪತಿ ಫಾರ್ಮಕೊಪಿಯಾ ಪ್ರಯೋಗಾಲಯ(ಎಚ್ ಪಿಎಲ್)ಅನ್ನು ವಿಲೀನಗೊಳಿಸಲಾಗುವುದು.

ಪ್ರಸ್ತುತ ಫಾರ್ಮಕೊಪಿಯಾ ಭಾರತೀಯ ವೈದ್ಯಕೀಯ ಮತ್ತು ಹೋಮಿಯೋಪತಿ ಆಯೋಗ (ಪಿಸಿಐಎಂ&ಎಚ್) 2010ರಿಂದೀಚೆಗೆ ಸ್ಥಾಪನೆಗೊಂಡು, ಒಂದು ಸ್ವಾಯತ್ತ ಸಂಸ್ಥೆಯಾಗಿ ಆಯುಷ್ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿದೆ. ವಿಲೀನ ಪ್ರಕ್ರಿಯೆಯಿಂದಾಗಿ ಮೂರು ಸಂಸ್ಥೆಗಳು ಮೂಲಸೌಕರ್ಯ ವ್ಯವಸ್ಥೆಗಳು, ತಾಂತ್ರಿಕ ಮಾನವ ಶಕ್ತಿ, ಹಣಕಾಸು ಸಂಪನ್ಮೂಲಗಳನ್ನು ಗರಿಷ್ಠ ಮಟ್ಟದಲ್ಲಿ ಬಳಕೆ ಮಾಡಿಕೊಳ್ಳುವುದು, ಆ ಮೂಲಕ ಆಯುರ್ವೇದ, ಸಿದ್ಧ, ಯುನಾನಿ ಮತ್ತು ಹೋಮಿಯೋಪತಿ ಔಷಧಿಗಳಲ್ಲಿ ಗುಣಮಟ್ಟವನ್ನು ಖಾತ್ರಿಪಡಿಸುವುದು ಹಾಗೂ ಅವುಗಳ ಪರಿಣಾಮಕಾರಿ ನಿಯಂತ್ರಣ ಹಾಗೂ ಗುಣಮಟ್ಟ ನಿಯಂತ್ರಣ ಮಾಡುವ ಉದ್ದೇಶ ಹೊಂದಲಾಗಿದೆ.

ಈ ವಿಲೀನ ಪ್ರಕ್ರಿಯೆಯಿಂದಾಗಿ ಆಯುಷ್ ಔಷಧಗಳಲ್ಲಿ ಮತ್ತು ಫಾರ್ಮಕೋಪಿಯಾ ಪ್ರಕಟಣೆಗಳಲ್ಲಿ ಗುಣಮಟ್ಟ ಅಭಿವೃದ್ಧಿ ಮತ್ತು ಸಂಘಟನೆಯಲ್ಲಿ ಹೆಚ್ಚಿನ ಗಮನಹರಿಸಲಾಗುವುದು. ಅಲ್ಲದೆ ವಿಲೀನಗೊಳಿಸಿರುವ ಪಿಸಿಐಎಂ&ಎಚ್ ವ್ಯವಸ್ಥೆಗೆ ಕಾನೂನಿನ ಸ್ಥಾನಮಾನವನ್ನು ನೀಡಲು ಉದ್ದೇಶಿಸಲಾಗಿದೆ ಹಾಗೂ ಅದರ ಪ್ರಯೋಗಾಲಯಗಳು ಅಗತ್ಯ ತಿದ್ದುಪಡಿಗಳೊಂದಿಗೆ ಔಷಧಿಗಳು ಮತ್ತು ಕಾಂತಿವರ್ಧಕ (ಕಾಸ್ಮೆಟಿಕ್) ನಿಯಮ 1945ರ ವ್ಯಾಪ್ತಿಗೆ ಒಳಪಡಲಿವೆ. ಈ ಕುರಿತಂತೆ ಸಾಮಾನ್ಯ ಆರೋಗ್ಯ ಸೇವೆಗಳ ನಿರ್ದೇಶಕರು, ಔಷಧ ಮಹಾನಿಯಂತ್ರಕರು ಮತ್ತು ಆಯುರ್ವೇದ, ಸಿದ್ಧ ಹಾಗೂ ಯುನಾನಿ ಔಷಧಿಗಳ ತಾಂತ್ರಿಕ ಸಲಹಾ ಮಂಡಳಿ(ಎಎಸ್ ಯುಡಿಟಿಎಬಿ) ಜೊತೆ ಸಮಾಲೋಚಿಸಲಾಗಿದೆ. ಎಎಸ್ ಯುಡಿಟಿಎಬಿ ಸಂಸ್ಥೆ ಔಷಧಗಳು ಮತ್ತು ಕಾಂತಿವರ್ಧಕ (ಕಾಸ್ಮೆಟಿಕ್) ಕಾಯ್ದೆ 1940ರ ಅಡಿ ಎಎಸ್ಎಲ್ ಟಿ ಔಷಧಗಳಿಗೆ ಸಂಬಂಧಿಸಿದ ನಿಯಂತ್ರಣ ವಿಚಾರಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸಲಹೆ ನೀಡಲಿದೆ. ವೆಚ್ಚ ಇಲಾಖೆ, ಹಣಕಾಸು ಸಚಿವಾಲಯ ಕೂಡ ವಿಲೀನ ಪ್ರಕ್ರಿಯೆ, ಹುದ್ದೆಗಳು ಹಾಗೂ ಶ್ರೇಣೀಕೃತ ವ್ಯವಸ್ಥೆಯನ್ನು ಸಂಸ್ಥೆಗಳೊಳಗೆ ವಿಲೀನಗೊಳಿಸುವ ಪ್ರಸ್ತಾವವನ್ನು ಒಪ್ಪಿವೆ.

ಪಿಎಲ್ಐಎಂ ಮತ್ತು ಎಚ್ ಪಿಎಲ್ ಸಂಸ್ಥೆಗಳು, ಅಧೀನ ಸಂಸ್ಥೆಗಳಾಗಿದ್ದು, ಪಿಸಿಐಎಂ&ಎಚ್ ಆಯುಷ್ ಸಚಿವಾಲಯದಡಿ ಬರುವ ಸ್ವಾಯತ್ತ ಸಂಸ್ಥೆಗಳಾಗಿದ್ದವು. ಅವುಗಳೆಲ್ಲ ಸೇರಿ ಇದೀಗ ಪಿಸಿಐಎಂ&ಎಚ್ ಒಳಗೆ ವಿಲೀನಗೊಳ್ಳಲಿವೆ. ಇವುಗಳು ಸಚಿವಾಲಯದ ಅಧೀನದಲ್ಲಿ ಬರಲಿದ್ದು, ಸಾಮಾನ್ಯ ಆಡಳಿತಾತ್ಮಕ ನಿಯಂತ್ರಣ ಹೊಂದಿರುತ್ತದೆ.

ಪಿಸಿಐಎಂ&ಎಚ್ ವಿಲೀನದ ನಂತರ ಸಚಿವಾಲಯದ ಅಧೀನದಲ್ಲಿ ಸಮರ್ಪಕ ಆಡಳಿತ ವ್ಯವಸ್ಥೆ ಹೊಂದಲಿದ್ದು, ಫಾರ್ಮಕೋಪಿಯಾ ಕೆಲಸಗಳ ಫಲಿತಾಂಶ ಮತ್ತು ಸಾಮರ್ಥ್ಯವೃದ್ಧಿಗೆ ನೆರವಾಗಲಿವೆ.  ಅಲ್ಲದೆ ಆಯುರ್ವೇದ, ಸಿದ್ಧ, ಯುನಾನಿ ಮತ್ತು ಹೋಮಿಯೋಪತಿ ಔಷಧಿಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳಲು ಸಹಕಾರಿಯಾಗಲಿದ್ದು, ಕೆಲಸ ಕಾರ್ಯಗಳು ದುಪ್ಪಟ್ಟಾಗುವುದು ತಪ್ಪಲಿದೆ ಮತ್ತು ಔಷಧ ಮಾನದಂಡ ಕೆಲಸ ಹಾಗೂ ಸಂಪನ್ಮೂಲಗಳ ಗರಿಷ್ಠ ರೀತಿಯಲ್ಲಿ ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ನೆರವಾಗಲಿದೆ.