Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆ ಮತ್ತು ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ನ   ಲೆಕ್ಕಪರಿಶೋಧಕರ ನಡುವೆ ಪರಸ್ಪರ ತಿಳುವಳಿಕೆ ಒಪ್ಪಂದಕ್ಕೆ ಕೇಂದ್ರ ಸಂಪುಟ ಅನುಮೋದನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆ ಮತ್ತು ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್   ಲೆಕ್ಕಪರಿಶೋಧಕರ (ಸಿಎ ಎಎನ್ ಝಡ್ ) ನಡುವೆ ಪರಸ್ಪರ ತಿಳುವಳಿಕೆ ಒಪ್ಪಂದ(ಎಂಒಯು)ಗೆ  ಅನುಮೋದನೆ ನೀಡಿತು.

ಪರಿಣಾಮ:

ಸದಸ್ಯರು, ವಿದ್ಯಾರ್ಥಿಗಳು ಮತ್ತು ಎರಡೂ ಸಂಸ್ಥೆಗಳ ಹಿತದೃಷ್ಟಿಯಿಂದ ಪರಸ್ಪರ ಲಾಭದಾಯಕ ಸಂಬಂಧವನ್ನು ಬೆಳೆಸಲು ಎಂಆರ್ ಉದ್ದೇಶಿಸಿದೆ ಮತ್ತು ಐಸಿಎಐ ಸದಸ್ಯರಿಗೆ ತಮ್ಮ ವೃತ್ತಿಪರ ಸದಸ್ಯರಿಗೆ ಪರಿಧಿಯನ್ನು ವಿಸ್ತರಿಸಲು ಮತ್ತು ಎರಡೂ ಲೆಕ್ಕ ಪರಿಶೋಧನಾ ಸಂಸ್ಥೆಗಳ ನಡುವೆ ಕಾರ್ಯನಿರ್ವಹಣೆ ಸಂಬಂಧವನ್ನು ಬೆಳೆಸಲು ಅವಕಾಶವನ್ನು ಒದಗಿಸಲಿದೆ ಎಂದು ನಿರೀಕ್ಷಿಸಲಾಗುತ್ತಿದೆ. ಜಾಗತಿಕ ಪರಿಸರದಲ್ಲಿ ಎದುರಾಗುವ ಹೊಸ ಬಗೆಯ ವೃತ್ತಿಪರ ಸವಾಲುಗಳನ್ನು ಎದುರಿಸುವಲ್ಲಿ ಎರಡೂ ದೇಶಗಳ ಲೆಕ್ಕಪರಿಶೋಧನಾ ಸಂಸ್ಥೆಗಳು ನಾಯಕತ್ವ ಪಾತ್ರವನ್ನು ವಹಿಸುವ ಅವಕಾಶ ದೊರಕಲಿದೆ.

ಪ್ರಯೋಜನಗಳು:

ಎರಡೂ ಸಂಸ್ಥೆಗಳ ನಡುವಿನ ಸಂಬಂಧದಿಂದಾಗಿ ಭಾರತದ ಲೆಕ್ಕಪರಿಶೋಧಕರಿಗೆ ಇನ್ನೂ ಹೆಚ್ಚಿನ ಉದ್ಯೋಗವಕಾಶಗಳು ಸೃಷ್ಟಿಯಾಗುವ ಸಾಧ್ಯತೆ ಇದೆ ಮತ್ತು ಭಾರತಕ್ಕೆ ಇನ್ನೂ ಹೆಚ್ಚಿನ ಹಣದ ಹರಿದು ಬರಲಿದೆ ಎಂದು ನಿರೀಕ್ಷಿಸಲಾಗಿದೆ.

ವಿವರ:

ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆ( ಐಸಿಎಐ) ಮತ್ತು ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ಲೆಕ್ಕ ಪರಿಶೋಧಕರ ಸಂಸ್ಥೆ (ಸಿಎ ಎಎನ್ ಝಡ್ ) ನಡುವಿನ ಪರಸ್ಪರ ತಿಳುವಳಿಕೆಯ ಒಪ್ಪಂದ (ಎಂಒಯು) ನಿಂದಾಗಿ ಪರಸ್ಪರರ ಅರ್ಹತೆಗಳನ್ನು ಗುರುತಿಸುತ್ತವೆ ಮತ್ತು ಎರಡೂ ಸಂಸ್ಥೆಗಳ ನಡುವೆ ಕಾರ್ಯ ವಿಧಾನವನ್ನು ಸೂಚಿಸುವ ಮೂಲಕ ಪರಸ್ಪರ ಸದಸ್ಯರ ಉನ್ನತೀಕರಣಕ್ಕೆ ನೆರವಾಗುತ್ತದೆ.

ಪರಸ್ಪರ ಮಾನ್ಯತೆ ಸಹಕಾರ ಒಪ್ಪಂದದಿಂದಾಗಿ, ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆ(ಐಸಿಎಐ) ಮತ್ತು ಸಿಪಿ ಎಎನ್ ಝಡ್ ನಡುವೆ ಲೆಕ್ಕ ಪರಿಶೋಧನಾ ಜ್ಞಾನ ಉನ್ನತೀಕರಣ, ವೃತ್ತಿಪರತೆ ಮತ್ತು ಬೌದ್ಧಿಕ ಸಾಮರ್ಥ್ಯವೃದ್ಧಿ, ಆಯಾ ಸಂಸ್ಥೆಗಳ ಸದಸ್ಯರ ಅಭಿವೃದ್ಧಿ ಕುರಿತು ಪರಸ್ಪರ ಸಹಕಾರ ನೀತಿ ರೂಪುಗಳ್ಳಲಿವೆ ಮತ್ತು ಭಾರತ ಹಾಗೂ ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ಗಳಲ್ಲಿ ಲೆಕ್ಕಪರಿಶೋಧನಾ ವೃತ್ತಿಯ ಅಭಿವೃದ್ಧಿಗೆ ಸಕಾರಾತ್ಮಕ ಕೊಡುಗೆ ಸಿಗಲಿದೆ

ಅನುಷ್ಠಾನ ಕಾರ್ಯತಂತ್ರ ಮತ್ತು ಗುರಿ

ಪರಸ್ಪರ ತಿಳುವಳಿಕೆ ಒಪ್ಪಂದದಿಂದಾಗಿ, ಎರಡೂ ಸಂಸ್ಥೆಗಳಲ್ಲಿ ಯಾರು ಪರೀಕ್ಷೆ, ವೃತ್ತಿಪರ ಕಾರ್ಯಕ್ರಮ ಮತ್ತು ಪ್ರಾಯೋಗಿಕ ಅನುಭವ ಪೂರ್ಣಗೊಳಿಸಿ ಸದಸ್ಯತ್ವ ಪಡೆದಿದ್ದಾರೋ ಅಂತಹ ಸದಸ್ಯರ ಅರ್ಹತೆಗಳನ್ನು ಪರಸ್ಪರ ಮಾನ್ಯತೆ ಮಾಡುವುದು ಮತ್ತು ಇತರೆ ಸಂಸ್ಥೆಗಳ ಅರ್ಹತೆಯನ್ನು ಗುರುತಿಸಲು ಸಾಧ್ಯವಾಗಲಿದೆ.

ಹಿನ್ನೆಲೆ:

ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆ (ಐಸಿಎಐ) ಒಂದು ಸಾಂಸ್ಥಿಕ ಸಂಸ್ಥೆಯಾಗಿದ್ದು, ಅದು 1949 ಲೆಕ್ಕ ಪರಿಶೋಧಕರ ಕಾಯಿದೆ ಅನ್ವಯ ಸ್ಥಾಪನೆಯಾಗಿ ಭಾರತದಲ್ಲಿ ವೃತ್ತಿಪರ ಲೆಕ್ಕಪರಿಶೋಧಕರ ನಿಯಂತ್ರಣ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ.ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ಲೆಕ್ಕ ಪರಿಶೋಧಕರು (ಸಿಎ ಎಎನ್ ಝಡ್ ), ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ಲೆಕ್ಕ ಪರಿಶೋಧಕರ ಸಂಘಗಳ ವಿಲೀನದೊಂದಿಗೆ 2014 ಅಕ್ಟೋಬರ್ ನಲ್ಲಿ ಉದಯಿಸಿತು.

***