Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭಾರತೀಯ ರೈಲ್ವೆಯ ಸಾಂಸ್ಥಿಕ ಪುನರ್ರಚನೆಗೆ ಸಂಪುಟದ ಅನುಮೋದನೆ


 

ರೈಲ್ವೆಯಲ್ಲಿ ಅಸ್ತಿತ್ವದಲ್ಲಿರುವ ಎಂಟು ಗ್ರೂಪ್ ಎ ಸೇವೆಗಳನ್ನು ಭಾರತೀಯ ರೈಲ್ವೆ ನಿರ್ವಹಣಾ ಸೇವೆ (IRMS) ಎಂಬ ಕೇಂದ್ರ ಸೇವೆಗೆ ಏಕೀಕರಿಸುವುದು. ಸೇವೆಗಳ ಏಕೀಕರಣವು ‘ಇಲಾಖಾವಾದ’ ವನ್ನು ಕೊನೆಗೊಳಿಸುತ್ತದೆ, ರೈಲ್ವೆಯ ಸುಗಮ ಕಾರ್ಯವನ್ನು ಉತ್ತೇಜಿಸುತ್ತದೆ, ತ್ವರಿತ ನಿರ್ಧಾರಕ್ಕೆ ಕಾರಣವಾಗುತ್ತದೆ, ಸಂಘಟನೆಗೆ ಸುಸಂಬದ್ಧ ದೃಷ್ಟಿಯನ್ನು ಸೃಷ್ಟಿಸುತ್ತದೆ ಮತ್ತು ನಿರ್ಧಾರ ತೆಗೆದುಕೊಳ್ಳುವ ತರ್ಕಬದ್ಧತೆಯನ್ನು ಉತ್ತೇಜಿಸುತ್ತದೆ. ಇನ್ನು ಮುಂದೆ ರೈಲ್ವೆ ಮಂಡಳಿಯು ಇಲಾಖಾ ರೂಪದಲ್ಲಿರುವುದಿಲ್ಲ, ಅದರ ಬದಲು ರೈಲ್ವೆ ಮಂಡಳಿಯು ರೈಲ್ವೆ ಮಂಡಳಿ ಅಧ್ಯಕ್ಷರ (ಸಿಆರ್‌ಬಿ) ನೇತೃತ್ವದಲ್ಲಿ ಕ್ರಿಯಾತ್ಮಕ ರೂಪದಲ್ಲಿರುತ್ತದೆ. ನಾಲ್ವರು ಸದಸ್ಯರು ಹಾಗೂ ಕೆಲವು ಸ್ವತಂತ್ರ ಸದಸ್ಯರೊಂದಿಗೆ ಅಧ್ಯಕ್ಷರು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಆಗಿರುತ್ತಾರೆ. ರೈಲ್ವೆ ಸುಧಾರಣೆಗೆ ಸೇವೆಗಳ ಏಕೀಕರಣವನ್ನು ವಿವಿಧ ಸಮಿತಿಗಳು ಶಿಫಾರಸು ಮಾಡಿದ್ದವು. 2019ರ ಡಿಸೆಂಬರ್ 7 ಮತ್ತು 8, ರಂದು ನಡೆದ ಎರಡು ದಿನಗಳ “ಪರಿವರ್ತನ ಸಂಗೋಷ್ಠಿ” ಸಮ್ಮೇಳನದಲ್ಲಿ ರೈಲ್ವೆ ಅಧಿಕಾರಿಗಳ ಅಗಾಧ ಬೆಂಬಲ ಮತ್ತು ಒಮ್ಮತದೊಂದಿಗೆ ಸುಧಾರಣೆಗಳನ್ನು ಕೈಗೊಳ್ಳಲಾಗಿದೆ.

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಭಾರತೀಯ ರೈಲ್ವೆಯ ಪರಿವರ್ತನೆಯ ಸಾಂಸ್ಥಿಕ ಪುನರ್ರಚನೆಗೆ ಅನುಮೋದನೆ ನೀಡಿದೆ. ಈ ಐತಿಹಾಸಿಕ ಸುಧಾರಣೆಯು ಭಾರತೀಯ ರೈಲ್ವೆಯನ್ನು ಭಾರತದ ವಿಕಾಸ ಯಾತ್ರೆಯ ಬೆಳವಣಿಗೆಯಲ್ಲಿ ಪ್ರಮುಖ ಯಂತ್ರವನ್ನಾಗಿ ಮಾಡುವ ಸರ್ಕಾರದ ದೃಷ್ಟಿಕೋನವನ್ನು ಸಾಧಿಸುವಲ್ಲಿ ನೆರವಾಗುತ್ತದೆ.

ಸುಧಾರಣೆಗಳು :
i. ರೈಲ್ವೆಯಲ್ಲಿ ಅಸ್ತಿತ್ವದಲ್ಲಿರುವ ಎಂಟು ಗ್ರೂಪ್ ಎ ಸೇವೆಗಳನ್ನು ಭಾರತೀಯ ರೈಲ್ವೆ ನಿರ್ವಹಣಾ ಸೇವೆ (IRMS) ಎಂಬ ಕೇಂದ್ರ ಸೇವೆಗೆ ಏಕೀಕರಿಸುವುದು.
ii. ರೈಲ್ವೆ ಮಂಡಳಿ ಅಧ್ಯಕ್ಷರ ನೇತೃತ್ವದಲ್ಲಿ ನಾಲ್ವರು ಸದಸ್ಯರು ಮತ್ತು ಕೆಲವು ಸ್ವತಂತ್ರ ಸದಸ್ಯರೊಂದಿಗೆ ರೈಲ್ವೆ ಮಂಡಳಿಯ ಮರು-ಸಂಘಟನೆ
Iii.  ಸದ್ಯ ಅಸ್ತಿತ್ವದಲ್ಲಿರುವ ಭಾರತೀಯ ರೈಲ್ವೆ ವೈದ್ಯಕೀಯ ಸೇವೆ (IRMS) ಅನ್ನು ಭಾರತೀಯ ರೈಲ್ವೆ ಆರೋಗ್ಯ ಸೇವೆ (IRHS) ಎಂದು ಮರುನಾಮಕರಣ ಮಾಡಲಾಗುವುದು.

ರೈಲ್ವೆಯು ಮುಂದಿನ 12 ವರ್ಷಗಳಲ್ಲಿ 50 ಲಕ್ಷ ಕೋ. ರೂ.ಗಳ ಹೂಡಿಕೆಯೊಂದಿಗೆ  ಪ್ರಯಾಣಿಕರಿಗೆ ಸುರಕ್ಷತೆ, ವೇಗ ಮತ್ತು ಸೇವೆಗಳ ಗುಣಮಟ್ಟವನ್ನು ಆಧುನೀಕರಿಸುವ ಮತ್ತು ಒದಗಿಸುವ ಮಹತ್ವಾಕಾಂಕ್ಷೆಯ ಕಾರ್ಯಕ್ರಮವನ್ನು ಹೊಂದಿದೆ. ಇದಕ್ಕೆ ವೇಗ ಮತ್ತು ಪ್ರಮಾಣದ ಅಗತ್ಯವಿದೆ ಮತ್ತು ಈ ಕಾರ್ಯದ ಬಗ್ಗೆ ಏಕ-ಮನಸ್ಸಿನಿಂದ ಕೆಲಸ ಮಾಡಲು ಮತ್ತು ಸವಾಲುಗಳಿಗೆ ಸ್ಪಂದಿಸುವ ಸಾಮರ್ಥ್ಯವನ್ನು ಹೊಂದಿರುವ ಏಕೀಕೃತ, ಚುರುಕುಬುದ್ಧಿಯ ಸಂಘಟನೆಯ ಅಗತ್ಯವಿದೆ. ಇಂದಿನ ಸುಧಾರಣೆಗಳು ರೈಲ್ವೆ ಬಜೆಟ್ ಅನ್ನು ಕೇಂದ್ರ ಬಜೆಟ್ ನೊಂದಿಗೆ ವಿಲೀನಗೊಳಿಸುವುದು, ಜಿಎಂಗಳು ಮತ್ತು ಕ್ಷೇತ್ರ ಅಧಿಕಾರಿಗಳನ್ನು ಸಬಲೀಕರಣಗೊಳಿಸುವ ಅಧಿಕಾರವನ್ನು ನೀಡುವುದು, ಸ್ಪರ್ಧಾತ್ಮಕ ನಿರ್ವಾಹಕರಿಗೆ ರೈಲುಗಳನ್ನು ಓಡಿಸಲು ಅವಕಾಶ ನೀಡುವುದು ಸೇರಿದಂತೆ ಪ್ರಸ್ತುತ ಸರ್ಕಾರದ ಅಡಿಯಲ್ಲಿ ಕೈಗೊಂಡ ಸುಧಾರಣೆಗಳ ಸರಣಿಯಲ್ಲಿದೆ.
ಮುಂದಿನ ಹಂತದ ಸವಾಲುಗಳನ್ನು ಎದುರಿಸಲು ಮತ್ತು ಅಸ್ತಿತ್ವದಲ್ಲಿರುವ ವಿವಿಧ ತೊಂದರೆಗಳನ್ನು ಎದುರಿಸಲು ಈ ಕ್ರಮವನ್ನು ಕೈಗೊಳ್ಳುವ ಅವಶ್ಯಕತೆಯಿತ್ತು. ವಿಶ್ವದಾದ್ಯಂತದ ರೈಲ್ವೆ ವ್ಯವಸ್ಥೆಗಳು ಕಾರ್ಪೊರೇಟ್ ಆಗಿವೆ. ಇದಕ್ಕೆ ಭಿನ್ನವಾಗಿ, ಭಾರತೀಯ ರೈಲ್ವೆಯನ್ನು ಸರ್ಕಾರವು ನೇರವಾಗಿ ನಿರ್ವಹಿಸುತ್ತದೆ. ಇದನ್ನು ಸಂಚಾರ, ಸಿವಿಲ್, ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಸಿಗ್ನಲ್ ಮತ್ತು ಟೆಲಿಕಾಂ, ಸಂಗ್ರಹ, ಸಿಬ್ಬಂದಿ ಮತ್ತು ಲೆಕ್ಕ ಮುಂತಾದ ವಿವಿಧ ವಿಭಾಗಗಳಾಗಿ ವಿಂಗಡಿಸಲಾಗಿದೆ. ಈ ಇಲಾಖೆಗಳನ್ನು ಲಂಬವಾಗಿ ಮೇಲಿನಿಂದ ಕೆಳಕ್ಕೆ ಬೇರ್ಪಡಿಸಲಾಗಿದೆ ಮತ್ತು ರೈಲ್ವೆ ಮಂಡಳಿಯ ಕಾರ್ಯದರ್ಶಿ ಮಟ್ಟದ ಅಧಿಕಾರಿ (ಸದಸ್ಯ) ನೇತೃತ್ವ ವಹಿಸುತ್ತಾರೆ. ಇಲಾಖೆಯ ಈ ಸಂಘಟನೆಯು ರೈಲ್ವೆಯ ತಳಮಟ್ಟದವರೆಗೆ ಇರುತ್ತದೆ. ಸೇವೆಗಳ ಏಕೀಕರಣವು ಈ ‘ಇಲಾಖಾವಾದ’ವನ್ನು ಕೊನೆಗೊಳಿಸುತ್ತದೆ, ರೈಲ್ವೆಯ ಸುಗಮ ಕಾರ್ಯವನ್ನು ಉತ್ತೇಜಿಸುತ್ತದೆ, ನಿರ್ಧಾರ ತೆಗೆದುಕೊಳ್ಳುವುದನ್ನು ಚುರುಕುಗೊಳಿಸುತ್ತದೆ, ಸಂಸ್ಥೆಗೆ ಸುಸಂಬದ್ಧ ದೃಷ್ಟಿಯನ್ನು ಸೃಷ್ಟಿಸುತ್ತದೆ ಮತ್ತು ತರ್ಕಬದ್ಧ ನಿರ್ಧಾರ ತೆಗೆದುಕೊಳ್ಳುವುದನ್ನು ಉತ್ತೇಜಿಸುತ್ತದೆ.
ರೈಲ್ವೆ ಸುಧಾರಣೆಗಾಗಿ ವಿವಿಧ ಸಮಿತಿಗಳು ಸೇವೆಗಳ ಏಕೀಕರಣವನ್ನು ಶಿಫಾರಸು ಮಾಡಿವೆ – ಪ್ರಕಾಶ್ ಟಂಡನ್ ಸಮಿತಿ (1994), ರಾಕೇಶ್ ಮೋಹನ್ ಸಮಿತಿ (2001), ಸ್ಯಾಮ್ ಪಿಟ್ರೊಡಾ ಸಮಿತಿ (2012) ಮತ್ತು ಬಿಬೆಕ್ ದೆಬ್ರಾಯ್ ಸಮಿತಿ (2015)
ರೈಲ್ವೆ ಅಧಿಕಾರಿಗಳ ಸಂಪೂರ್ಣ ಬೆಂಬಲ ಮತ್ತು ಒಮ್ಮತದಿಂದ ಈ ಸುಧಾರಣೆಯನ್ನು 2019 ರ ಡಿಸೆಂಬರ್ 7 ಮತ್ತು 8 ರಂದು ದೆಹಲಿಯಲ್ಲಿ ನಡೆದ ಎರಡು ದಿನಗಳ ‘ಪರಿವರ್ತನ್ ಸಂಗೋಷ್ಠಿ’ ಸಮ್ಮೇಳನದಲ್ಲಿ ಕೈಗೊಳ್ಳಲಾಗಿದೆ. ಈ ಮನೋಭಾವಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸಲು ಮತ್ತು ರೈಲ್ವೆ ಅಧಿಕಾರಿಗಳಲ್ಲಿ ವಿಶ್ವಾಸ ಮೂಡಿಸಲು ಅವರ ಸಲಹೆಗಳನ್ನು ಸ್ವೀಕರಿಸಲಾಗಿದೆ. ರೈಲ್ವೆ ಮಂಡಳಿಯು 2019 ರ ಡಿಸೆಂಬರ್ 8 ರಂದು ಸಮ್ಮೇಳನದಲ್ಲಿ ಮಂಡಳಿಯ ಸಭೆಯನ್ನು ನಡೆಸಿತು ಮತ್ತು ಹಲವಾರು ಸುಧಾರಣೆಗಳನ್ನು ಶಿಫಾರಸು ಮಾಡಿತು.
ಮುಂದಿನ ನೇಮಕಾತಿಯಿಂದ “ಇಂಡಿಯನ್ ರೈಲ್ವೆ ಮ್ಯಾನೇಜ್ಮೆಂಟ್ ಸರ್ವಿಸ್” (IRMS) ಎಂಬ ಏಕೀಕೃತ ಗುಂಪು ‘ಎ’ ಸೇವೆಯನ್ನು ಸೃಷ್ಟಿಸಲು ಈಗ ಪ್ರಸ್ತಾಪಿಸಲಾಗಿದೆ. ಮುಂದಿನ ನೇಮಕಾತಿ ವರ್ಷದಲ್ಲಿ ನೇಮಕಾತಿಗೆ ಅನುಕೂಲವಾಗುವಂತೆ ಡಿಒಪಿಟಿ ಮತ್ತು ಯುಪಿಎಸ್‌ಸಿಯೊಂದಿಗೆ ಸಮಾಲೋಚಿಸಿ ಹೊಸ ಸೇವೆಯ ರಚನೆ ನಡೆಯಲಿದೆ. ಇದು ರೈಲ್ವೆಗೆ ಎಂಜಿನಿಯರ್‌ಗಳು / ಎಂಜಿನಿಯರೇತರರನ್ನು ಅಗತ್ಯಕ್ಕೆ ತಕ್ಕಂತೆ ನೇಮಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ ಮತ್ತು ವೃತ್ತಿಜೀವನದ ಪ್ರಗತಿಯಲ್ಲಿ ಎರಡೂ ವಿಭಾಗಗಳಿಗೆ ಅವಕಾಶದ ಸಮಾನತೆಯನ್ನು ನೀಡುತ್ತದೆ. ಸೇವೆಗಳ ವಿಧಾನಗಳು ಮತ್ತು ಏಕೀಕರಣವನ್ನು ರೈಲ್ವೆ ಸಚಿವಾಲಯವು ಡಿಒಪಿಟಿಯೊಂದಿಗೆ ಸಮಾಲೋಚಿಸಿ ನ್ಯಾಯಸಮ್ಮತತೆ ಮತ್ತು ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು ಸಂಪುಟ ನೇಮಕ ಮಾಡುವ ಪರ್ಯಾಯ ಕಾರ್ಯವ್ಯವಸ್ಥೆಯ ಅನುಮೋದನೆಯೊಂದಿಗೆ ಕೆಲಸ ಮಾಡುತ್ತದೆ. ಪ್ರಕ್ರಿಯೆಯನ್ನು ಒಂದು ವರ್ಷದೊಳಗೆ ಪೂರ್ಣಗೊಳಿಸಬೇಕು.
ಹೊಸದಾಗಿ ನೇಮಕಗೊಂಡ ಅಧಿಕಾರಿಗಳು ಅಗತ್ಯಕ್ಕೆ ಅನುಗುಣವಾಗಿ ಎಂಜಿನಿಯರಿಂಗ್ ಮತ್ತು ಎಂಜಿನಿಯರಿಂಗೇತರ ವಿಭಾಗಗಳಿಂದ ಬರುತ್ತಾರೆ ಮತ್ತು ಅವರ ಸಾಮರ್ಥ್ಯ ಮತ್ತು ವಿಶೇಷತೆಯ ಪ್ರಕಾರ ಒಂದು ಕ್ಷೇತ್ರದಲ್ಲಿ ಪರಿಣತಿ ಪಡೆಯಲು, ಒಟ್ಟಾರೆ ದೃಷ್ಟಿಕೋನವನ್ನು ಅಭಿವೃದ್ಧಿಪಡಿಸಲು ಮತ್ತು ಉನ್ನತ ಮಟ್ಟದಲ್ಲಿ ಸಾಮಾನ್ಯ ನಿರ್ವಹಣಾ ಜವಾಬ್ದಾರಿಗಳನ್ನು ತೆಗೆದುಕೊಳ್ಳಲು ಅವರನ್ನು ಸಿದ್ಧಪಡಿಸುತ್ತಾರೆ. ಸಾಮಾನ್ಯ ನಿರ್ವಹಣಾ ಸ್ಥಾನಗಳಿಗೆ ಆಯ್ಕೆಯು ಅರ್ಹತೆ-ಆಧಾರಿತ ವ್ಯವಸ್ಥೆಯ ಮೂಲಕ ಇರಬೇಕು.
ರೈಲ್ವೆ ಮಂಡಳಿ ಇನ್ನು ಮುಂದೆ ಇಲಾಖೆಯ ಸ್ವರೂಪದಲ್ಲಿರುವುದಿಲ್ಲ. ಅದು ಕಾರ್ಯವಿಧಾನದ ರೂಪದಲ್ಲಿರುತ್ತದೆ. ಇದು ಅಧ್ಯಕ್ಷರನ್ನು ಹೊಂದಿದ್ದು, ಅವರು ‘ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ)’ ಆಗಿರುತ್ತಾರೆ. ಮೂಲಸೌಕರ್ಯ, ಕಾರ್ಯಾಚರಣೆ ಮತ್ತು ವ್ಯವಹಾರ ಅಭಿವೃದ್ಧಿ, ರೋಲಿಂಗ್ ಸ್ಟಾಕ್ ಮತ್ತು ಹಣಕಾಸಿನ ಜವಾಬ್ದಾರಿಯ ನಾಲ್ವರು ಸದಸ್ಯರೊಂದಿಗೆ ಇವರು ಕಾರ್ಯನಿರ್ವಹಿಸಲಿದ್ದಾರೆ. ಅಧ್ಯಕ್ಷರು ಡಿಜಿ (ಎಚ್‌ಆರ್) ನೆರವಿನೊಂದಿಗೆ ಮಾನವ ಸಂಪನ್ಮೂಲ (ಎಚ್‌ಆರ್) ಗೆ ಜವಾಬ್ದಾರರಾಗಿರುವ ಕೇಡರ್ ನಿಯಂತ್ರಣ ಅಧಿಕಾರಿಯಾಗಿರಬೇಕು. 3 ಅಪೆಕ್ಸ್ ಮಟ್ಟದ ಹುದ್ದೆಗಳನ್ನು ರೈಲ್ವೆ ಮಂಡಳಿಯು ಬಿಟ್ಟುಕೊಡಬೇಕು ಮತ್ತು ರೈಲ್ವೆ ಮಂಡಳಿಯ ಉಳಿದ ಎಲ್ಲಾ ಹುದ್ದೆಗಳು ಯಾವುದೇ ಸೇವೆಗಳಿಗೆ ಸೇರಿದ ಎಲ್ಲಾ ಅಧಿಕಾರಿಗಳಿಗೂ ತೆರೆದಿರುತ್ತವೆ. ಮಂಡಳಿಯು ಕೆಲವು ಸ್ವತಂತ್ರ ಸದಸ್ಯರನ್ನು ಸಹ ಹೊಂದಿರುತ್ತದೆ (ಕಾಲಕಾಲಕ್ಕೆ ಸಕ್ಷಮ ಪ್ರಾಧಿಕಾರವು ಸಂಖ್ಯೆಯನ್ನುನಿರ್ಧರಿಸುತ್ತದೆ), ಅವರು ಆಳವಾದ ಜ್ಞಾನ ಮತ್ತು ಉದ್ಯಮ, ಹಣಕಾಸು, ಅರ್ಥಶಾಸ್ತ್ರ ಮತ್ತು ನಿರ್ವಹಣೆಯ ಉನ್ನತ ಹಂತಗಳನ್ನು ಒಳಗೊಂಡಂತೆ 30 ವರ್ಷಗಳ ಅನುಭವ ಹೊಂದಿರುವ ವೃತ್ತಿಪರರಾಗಿರುತ್ತಾರೆ. ರೈಲ್ವೆ ಮಂಡಳಿಗೆ ಕಾರ್ಯತಂತ್ರದ ನಿರ್ದೇಶನ ನೀಡಲು ಸ್ವತಂತ್ರ ಸದಸ್ಯರು ಸಹಾಯ ಮಾಡುತ್ತಾರೆ. ಅಧಿಕಾರಿಗಳನ್ನು ಪುನರ್ರಚಿತ ಮಂಡಳಿಯಲ್ಲಿ ಅವರ ನಿವೃತ್ತಿಯ ತನಕ ಅದೇ ವೇತನ ಮತ್ತು ಶ್ರೇಣಿಯಲ್ಲಿ ಹೊಂದಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಸರಿಯಾದ ಕಾಳಜಿ ವಹಿಸಿ ಮಂಡಳಿಯ ಅನುಮೋದನೆಯನ್ನು ಪಡೆದ ನಂತರ ಪುನರ್ರಚಿಸಿದ ಮಂಡಳಿಯು ಕಾರ್ಯನಿರ್ವಹಿಸಲು ಪ್ರಾರಂಭಿಸುತ್ತದೆ.