ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಸದಸ್ಯರ ನಿರ್ವಹಣೆ, ವೃತ್ತಿಪರ ಸಿದ್ಧಾಂತ, ತಾಂತ್ರಿಕ ಸಂಶೋಧನೆ, ನಿರಂತರ ವೃತ್ತಿಪರ ಅಭಿವೃದ್ಧಿ, ವೃತ್ತಿಪರ ಲೆಕ್ಕಶಾಸ್ತ್ರ ತರಬೇತಿ, ಲೆಕ್ಕಪರಿಶೋಧನೆಯ ಗುಣಮಟ್ಟದ ನಿಗಾ, ಲೆಕ್ಕಶಾಸ್ತ್ರ ಜ್ಞಾನದ ಮುಂದುವರಿಕೆ, ವೃತ್ತಿಪರ ಮತ್ತು ಬೌದ್ಧಿಕ ಅಭಿವೃದ್ಧಿ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರದ ಚೌಕಟ್ಟಿನ ಸ್ಥಾಪನೆಗಾಗಿ ಭಾರತೀಯ ಚಾರ್ಟರ್ಡ್ ಅಕೌಂಟೆಂಟರುಗಳ ಸಂಸ್ಥೆ (ಐ.ಸಿ.ಎ.ಐ.) ಮತ್ತು ತಾಂಜೇನಿಯಾದ ಲೆಕ್ಕಿಗರು ಮತ್ತು ಲೆಕ್ಕಪರಿಶೋಧಕರ ರಾಷ್ಟ್ರೀಯ ಮಂಡಳಿ (ಎನ್.ಬಿ.ಎ.ಎ.) ನಡುವೆ ತಿಳಿವಳಿಕೆ ಒಪ್ಪಂದ (ಎಂ.ಓ.ಯು.)ಕ್ಕೆ ಅಂಕಿತ ಹಾಕಲು ತನ್ನ ಅನುಮೋದನೆ ನೀಡಿದೆ.
ಪರಿಣಾಮ:
ಈ ತಿಳಿವಳಿಕೆ ಒಪ್ಪಂದವು ಐಸಿಎಐ ಸದಸ್ಯರು, ವಿದ್ಯಾರ್ಥಿಗಳು ಮತ್ತು ಅದರ ಸಂಘಟನೆಯ ಉತ್ತಮ ಹಿತದೃಷ್ಟಿಯಿಂದ ಪರಸ್ಪರರಿಗೆ ಪ್ರಯೋಜನವಾಗುವಂಥ ಬಾಂಧವ್ಯವನ್ನು ಅಭಿವೃದ್ಧಿಪಡಿಸುತ್ತದೆ. ಈ ತಿಳಿವಳಿಕೆ ಒಪ್ಪಂದವು ಐ.ಸಿ.ಎ.ಐ.ನ ಸದಸ್ಯರಿಗೆ ತಮ್ಮ ವೃತ್ತಿಯ ದಿಗಂತವನ್ನು ವಿಸ್ತರಿಸಿಕೊಳ್ಳಲು ಅವಕಾಶ ಕಲ್ಪಿಸುತ್ತದೆ. ಈ ತಿಳಿವಳಿಕೆ ಒಪ್ಪಂದ ಐ.ಸಿ.ಎ.ಐ ಮತ್ತು ತಾಂಜೇನಿಯಾದ ಎನ್.ಬಿ.ಎ.ಎ. ನಡುವೆ ಕಾರ್ಯ ಬಾಂಧವ್ಯವನ್ನು ಬಲ ಪಡಿಸುತ್ತದೆ.
ಹಿನ್ನೆಲೆ:
ಆಫ್ರಿಕಾದಲ್ಲಿ ಲೆಕ್ಕಾಶಾಸ್ತ್ರ ಮತ್ತು ಲೆಕ್ಕಪರಿಶೋಧನೆ ವೃತ್ತಿಯನ್ನು ಅಭಿವೃದ್ಧಿಪಡಿಸಲು ನೆರವಾಗುಲು ಐ.ಸಿ.ಎ.ಐ. ಮತ್ತು ಅದರ ಸದಸ್ಯರಿಗೆ ವಿಫುಲ ಸಾಮರ್ಥ್ಯವಿದೆ. ಐ.ಸಿ.ಎ.ಐ.ನ ಸಂಘಟನೆಯು ತಾಂಜೇನಿಯಾದ ಎನ್.ಬಿ.ಎ.ಎ. ಯೊಂದಿಗೆ ಭಾರತದ ಸಿ.ಎ.ಗಳಿಗೆ ತಾಂಜೇನಿಯಾ ಮೂಲದ ಮಾಲೀಕರನಡುವೆ ಮಾನ್ಯತೆ ಮತ್ತು ಸ್ವೀಕಾರಾರ್ಹತೆಯ ಮೂಲಕ ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸುತ್ತದೆ. ಇದು ಪ್ರಸ್ತುತ ಆಫ್ರಿಕಾದ ಮಾರುಕಟ್ಟೆಯಲ್ಲಿ ಕೆಲಸ ಮಾಡುತ್ತಿರುವ ಮತ್ತು ಆಫ್ರಿಕಾ ಹಾಗೂ ತಾಂಜೇನಿಯಾ ಮಾರುಕಟ್ಟೆಗೆ ಸಾಗಲು ಬಯಸಿರುವ ಭಾರತೀಯ ಚಾರ್ಟರ್ಡ್ ಅಕೌಂಟೆಂಟರುಗಳ ಬಗ್ಗೆ ಧನಾತ್ಮಕ ಚಿತ್ರಣವನ್ನು ಕಟ್ಟಿಕೊಡುತ್ತದೆ.
ಐ.ಸಿ.ಎ.ಐ. ಭಾರತದ ಸಂಸತ್ತಿನ ಕಾಯಿದೆಯ ಮೂಲಕ ಸ್ಥಾಪನೆಗೊಂಡ ಶಾಸನಾತ್ಮಕ ಕಾಯವಾಗಿದೆ. ಚಾರ್ಟರ್ಡ್ ಅಕೌಂಟೆಂಟರುಗಳ ಕಾಯಿದೆ 1949 ಭಾರತದಲ್ಲಿ ಚಾರ್ಟರ್ಡ್ ಅಕೌಂಟೆಂಟರುಗಳ ವೃತ್ತಿಯನ್ನು ನಿಯಂತ್ರಿಸುತ್ತದೆ. ಲೆಕ್ಕಿಗರು ಮತ್ತು ಲೆಕ್ಕ ಪರಿಶೋಧಕರ ರಾಷ್ಟ್ರೀಯ ಮಂಡಳಿ (ಎನ್.ಬಿ.ಎ.ಎ.)ಯನ್ನು ತಾಂಜೇನಿಯಾದ ಸಂಸತ್ತಿನಲ್ಲಿ ರೂಪಿಸಲಾದ ಲೆಕ್ಕಪರಿಶೋಧಕರು ಮತ್ತು ಲೆಕ್ಕಿಗರ (ನೋಂದಣಿ) ಕಾಯಿದೆ ಸಂಖ್ಯೆ. 33, 1972, 1995ರಲ್ಲಿ ತಿದ್ದುಪಡಿ ಮಾಡಲಾದ 2ನೇ ಸಂಖ್ಯೆಯ ಅಡಿಯಲ್ಲಿ ಸ್ಥಾಪಿಸಲಾಗಿದ್ದು, ತಾಂಜೇನಿಯಾ ಸರ್ಕಾರದ ಹಣಕಾಸು ಸಚಿವಾಲಯದ ಬೆಂಬಲದಲ್ಲಿ ಕಾರ್ಯ ನಿರ್ವಹಿಸುತ್ತದೆ.