ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾರತೀಯ ಕೈಗಾರಿಕಾ ಒಕ್ಕೂಟದ [ಸಿಐಐ] ವಾರ್ಷಿಕ ಸಭೆ 2021 ಉದ್ದೇಶಿಸಿ ವಿಡಿಯೋ ಕಾನ್ಪರೆನ್ಸ್ ಮೂಲಕ ಮಾತನಾಡಿದರು. ಸಭೆಯಲ್ಲಿ ವಿವಿಧ ವಲಯಗಳಲ್ಲಿ ಕೈಗೊಂಡಿರುವ ಸುಧಾರಣೆಗಳು, ದೇಶವನ್ನು ಐದು ಟ್ರಿಲಿಯನ್ ಡಾಲರ್ ಆರ್ಥ ವ್ಯವಸ್ಥೆಯ ರಾಷ್ಟ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ಅವರ ಬದ್ಧತೆಗೆ ಕೈಗಾರಿಕಾ ವಲಯದ ನಾಯಕರು ಮೆಚ್ಚುಗೆ ವ್ಯಕ್ತಪಡಿಸಿದರು.
ಭಾರತ@75 ವಿಷಯ ಕುರಿತು ಮಾತನಾಡಿದ ಅವರು, ಸರ್ಕಾರ ಮತ್ತು ವ್ಯಾಪಾರ ವಲಯ ಸ್ವಾವಲಂಬಿ ಭಾರತ್ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿವೆ. ಇವರು ಮೂಲ ಸೌಕರ್ಯ ಸವಾಲುಗಳನ್ನು ಗೆಲ್ಲಲು, ಉತ್ಪಾದನಾ ಸಾಮರ್ಥ್ಯ ವೃದ್ಧಿಸಲು, ಆರ್ಥಿಕ ವಲಯವನ್ನು ಉಜ್ವಲಗೊಳಿಸಲು, ತಂತ್ರಜ್ಞಾನ ಕ್ಷೇತ್ರದಲ್ಲಿ ನಾಯಕತ್ವ ಸ್ಥಾನ ಪಡೆಯಲು, ತಾಂತ್ರಿಕ ಸಾಮರ್ಥ್ಯದ ವರ್ಧನೆಗಾಗಿ ಸಲಹೆಗಳನ್ನು ನೀಡಿರುವುದಾಗಿ ಹೇಳಿದರು.
ನೆರದಿದ್ದವರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಅವರು, ಈ ಸಿಐಐ ಸಭೆ 75 ನೇ ಸ್ವಾತಂತ್ರ್ಯೋತ್ಸವದ ಆಜಾ಼ದಿ ಕಾ ಅಮೃತ್ ಮಹೋತ್ಸವ್ ಸಂದರ್ಭದಲ್ಲಿ ನಡೆಯುತ್ತಿದೆ. ಭಾರತೀಯ ಕೈಗಾರಿಕೆಯ ಹೊಸ ಗುರಿಗಳು ಮತ್ತು ಹೊಸ ನಿರ್ಣಯಗಳ ನಡುವೆ ನಡೆಯುತ್ತಿದೆ. ಇದು ನಮಗೆ ದೊಡ್ಡ ಅವಕಾಶವಾಗಿದೆ. ಸ್ವಾವಲಂಬಿ ಭಾರತ್ ಅಭಿಯಾನದ ಯಶಸ್ಸಿನ ಪ್ರಮುಖ ಜವಾಬ್ದಾರಿ ಭಾರತೀಯ ಉದ್ಯಮಗಳ ಮೇಲಿದೆ ಎಂದು ಹೇಳಿದ ಪ್ರಧಾನಮಂತ್ರಿ ಅವರು, ಸಾಂಕ್ರಾಮಿಕ ಸಂದರ್ಭದಲ್ಲಿ ಉದ್ಯಮ ವಲಯದ ಪ್ರಯತ್ನವನ್ನು ಶ್ಲಾಘಿಸಿದರು.
ಭಾರತ ಅಭಿವೃದ್ಧಿ ಮತ್ತು ಸಾಮರ್ಥ್ಯದಲ್ಲಿ ಸಬಲವಾಗಿದ್ದು, ನಂಬಿಕೆಯ ವಾತಾವರಣದ ಸಂಪೂರ್ಣ ಲಾಭವನ್ನು ಪಡೆದುಕೊಳ್ಳುವಂತೆ ಉದ್ಯಮ ವಲಯವನ್ನು ಕೋರಿದರು. ಹಾಲಿ ಸರ್ಕಾರದ ಬದಲಾವಣೆಯ ಧೋರಣೆ ಮತ್ತು ಈಗಿನ ವ್ಯವಸ್ಥೆಯ ಕಾರ್ಯಶೈಲಿಯಲ್ಲಿ ಮಾಡಿರುವ ಬದಲಾವಣೆಯನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ ಅವರು, ನವ ಭಾರತ ನವ ಜಗತ್ತಿನೊಂದಿಗೆ ಮುನ್ನಡೆಯಲು ಸನ್ನದ್ಧವಾಗಿದೆ ಎಂದು ಒತ್ತಿ ಹೇಳಿದರು. ಒಂದು ಕಾಲದಲ್ಲಿ ವಿದೇಶಿ ಬಂಡವಾಳ ಪಡೆಯಲು ಹಿಂಜರಿಕೆ ಇತ್ತು, ಈಗ ಎಲ್ಲಾ ರೀತಿಯ ಹೂಡಿಕೆಯನ್ನು ಸ್ವಾಗತಿಸುತ್ತಿದೆ. ಇದೇ ರೀತಿ ಹೂಡಿಕೆದಾರರಲ್ಲಿ ನಿರಾಶೆ ಉಂಟು ಮಾಡಲು ಬಳಸುವ ತೆರಿಗೆ ನೀತಿಗಳಿದ್ದವು, ಇದೀಗ ಅದೇ ಭಾರತ ವಿಶ್ವದ ಅತ್ಯಂತ ಸ್ಪರ್ಧಾತ್ಮಕ ಮತ್ತು ಮುಖರಹಿತ ತೆರಿಗೆ ವ್ಯವಸ್ಥೆ ಹೊಂದಿರುವ ಬಗ್ಗೆ ಹೆಮ್ಮೆಪಡುತ್ತದೆ. ಹೆಚ್ಚು ನಿಯಂತ್ರಣಗಳನ್ನೊಳ ಗೊಂಡ ರೆಡ್-ಟೇಪಿಸಂ ನಲ್ಲಿ ಬದಲಾವಣೆ ತಂದ ಕಾರಣದಿಂದ ಸುಗಮ ವ್ಯವಹಾರ ಸೂಚ್ಯಂಕದಲ್ಲಿ ಗಣನೀಯ ಏರಿಕೆ ಕಾಣುವಂತಾಯಿತು. ಅಂತೆಯೇ ಕಾರ್ಮಿಕ ಕಾನೂನುಗಳ ಜಟಿಲತೆಯನ್ನು 4 ಕಾರ್ಮಿಕ ಸಂಹಿತೆಗಳನ್ನಾಗಿ ಬದಲಾಯಿಸಿದ್ದು, ಕೃಷಿಯನ್ನು ಕೇವಲ ಜೀವನೋಪಾಯದ ವಲಯವನ್ನಾಗಿ ಪರಿಗಣಿಸಲಾಗುತ್ತಿತ್ತು, ಇದಕ್ಕೆ ಈಗ ಮಾರುಕಟ್ಟೆಯನ್ನು ಸಂಪರ್ಕಿಸಿ ಸುಧಾರಣೆಗಳನ್ನು ತರಲಾಗಿದ್ದು, ಇದರ ಪರಿಣಾಮದಿಂದ ದೇಶ ದಾಖಲೆಯ ಎಫ್.ಡಿ.ಐ ಮತ್ತು ಇ.ಪಿ.ಐ ಪಡೆಯುವಂತಾಯಿತು. ವಿದೇಶೀ ಮೀಸಲು ವಲಯದಲ್ಲೂ ಕೂಡ ಸರ್ವಕಾಲಿಕ ದಾಖಲೆ ನಿರ್ಮಿಸಲಾಗಿದೆ ಎಂದು ಪ್ರಧಾನಮಂತ್ರಿ ಅವರು ಮಾಹಿತಿ ನೀಡಿದರು.
ಒಂದು ಕಾಲದಲ್ಲಿ ವಿದೇಶ ಎಂದರೆ ಅದು ಉತ್ತಮ ಎಂಬುದಕ್ಕೆ ಸಮಾನಾರ್ಥಕ ಪದವಾಗಿತ್ತು. ಕೈಗಾರಿಕಾ ವಲಯದ ದೊಡ್ಡವರು ಇಂತಹ ಮನೋವಿಜ್ಞಾನವನ್ನು ಅರ್ಥಮಾಡಿಕೊಳ್ಳುತ್ತಾರೆ. ಪರಿಸ್ಥಿತಿ ಎಷ್ಟೊಂದು ಕಟ್ಟೆದಾಗಿತ್ತು ಎಂದರೆ ಭಾರೀ ಕಷ್ಟಕಟ್ಟು ಅಭಿವೃದ್ಧಿಪಡಿಸಿದ ಸ್ಥಳೀಯ ಬ್ರಾಂಡ್ ಗಳಿಗೂ ವಿದೇಶಿ ಹೆಸರಿನೊಂದಿಗೆ ಜಾಹೀರಾತು ನೀಡಲಾಗುತ್ತಿತ್ತು. ಇಂದು ಪರಿಸ್ಥಿತಿ ಗಣನೀಯವಾಗಿ ಬದಲಾವಣೆಯಾಗಿದೆ. ಇಂದು ದೇಶದ ಜನರ ನಂಬಿಕೆ ಭಾರತದಲ್ಲಿ ಉತ್ಪಾದಿಸಿದ ಉತ್ಪನ್ನಗಳ ಮೇಲಿದೆ. ಇಂದು ಪ್ರತಿಯೊಬ್ಬ ಭಾರತೀಯರು ಭಾರತದಲ್ಲಿ ತಯಾರಿಸಿದ ಉತ್ಪನ್ನಗಳನ್ನು ಅಳವಡಿಸಿಕೊಳ್ಳಲು ಬಯಸುತ್ತಾರೆ. ಆದರೆ ಆ ಉತ್ಪನ್ನಗಳನ್ನು ತಯಾರಿಸುವ ಕಂಪೆನಿಯು ಭಾರತದ್ದೇ ಆಗಿರಬೇಕಿಲ್ಲ ಎಂದರು.
ಇಂದು ಬಾರತೀಯ ಯುವ ಸಮೂಹ ಮೈದಾನಕ್ಕೆ ಇಳಿದಿದ್ದು, ಅವರಿಗೆ ಯಾವುದೇ ಹಿಂಜರಿಕೆ ಇಲ್ಲ. ಇವರು ಕಠಿಣ ಕೆಲಸ ಮಾಡುವ, ಅಪಾಯಗಳನ್ನು ತೆಗೆದುಕೊಳ್ಳುವ ಮತ್ತು ಫಲಿತಾಂಶ ತರಲು ಬಯಸಿದವರಾಗಿದ್ದಾರೆ. ನಾವು ಈ ಸ್ಥಳಕ್ಕೆ ಸೇರಿದವರು ಎಂದು ಯುವ ಸಮೂಹ ಭಾವಿಸುತ್ತಿದೆ. 6-7 ವರ್ಷಗಳ ಹಿಂದೆ ಬಹುಶಃ ಭಾರತ 3-4 ಯೂನಿಕಾರ್ನ್ ಗಳನ್ನು ಭಾರತ ಹೊಂದಿತ್ತು, ಈಗ 60 ಯೂನಿಕಾರ್ನ್ ಗಳನ್ನು ಹೊಂದಿದ್ದು, ಕಳೆದ ಕೆಲವು ತಿಂಗಳುಗಳಿಂದ ಇನ್ನೂ 21 ಹೊಸದಾಗಿ ಅಸ್ಥಿತ್ವಕ್ಕೆ ಬರುತ್ತಿವೆ. ಯೂನಿಕಾರ್ನ್ ಗಳು ವೈವಿಧ್ಯದ ವಲಯಗಳು, ಭಾರತದಲ್ಲಿ ಪ್ರತಿ ಹಂತದಲ್ಲೂ ಬದಲಾವಣೆಗಳನ್ನು ಸೂಚಿಸುತ್ತವೆ. ಈ ನವೋದ್ಯಮಗಳಿಗೆ ಹೂಡಿಕೆದಾರರು ಅತ್ಯುತ್ತಮ ಪ್ರತಿಕ್ರಿಯೆ ನೀಡಿದ್ದಾರೆ ಮತ್ತು ಭಾರತದಲ್ಲಿ ಬೆಳವಣಿಗೆಗೆ ಅಸಾಧಾರಣ ಅವಕಾಶಗಳಿವೆ ಎಂಬುದನ್ನು ಇದು ಸೂಚಿಸುತ್ತವೆ. ಸುಗಮ ವ್ಯಾಪಾರ ಮಾಡುವ ಉದ್ಯಮದ ಮೇಲೆ ದೇಶದ ನಂಬಿಕೆಯ ಮೇಲೆ ಇದು ಪರಿಣಾಮ ಬೀರಿದೆ ಮತ್ತು ಜೀವನ ಸುಲಭವಾಗುತ್ತಿದೆ. ಕಂಪೆನಿಗಳ ಕಾಯ್ದೆಯಲ್ಲಿ ಮಾಡಿದ ಬದಲಾವಣೆಗಳು ಇದನ್ನು ಸಮರ್ಥಿಸುತ್ತವೆ ಎಂದು ಹೇಳಿದರು.
ಈ ಸರ್ಕಾರ ಕಷ್ಟಕರವಾದ ಸುಧಾರಣೆಗಳನ್ನು ಕೈಗೊಳ್ಳಲು ಸಮರ್ಥವಾಗಿದೆ, ಏಕೆಂದರೆ ಈ ಸರ್ಕಾರದ ತೀರ್ಮಾನಗಳು ಮನವರಿಕೆ ಮಾಡಿಕೊಡುವ ವಿಷಯವಾಗಿವೆ ಹೊರತು ಬಲವಂತದ ನಿರ್ಧಾರಗಳಲ್ಲ. ಇತ್ತೀಚೆಗೆ ಸಂಸತ್ ಅಧಿವೇಶದಲ್ಲಿ ಕೈಗೊಂಡ ಹಣಕಾಸು ವಹಿವಾಟು ನಿಯಂತ್ರಣ ತಿದ್ದುಪಡಿ ಮಸೂದೆ ಉತ್ತಮ ಬೆಳವಣಿಗೆಯಾಗಿದ್ದು, ಸಣ್ಣ ಉದ್ದಿಮೆದಾರರು ಸಾಲ ಪಡೆಯಲು ಇದರಿಂದ ಅನುಕೂಲವಾಗಲಿದೆ. ಠೇವಣಿ ವಿಮೆ ಮತ್ತು ಸಾಲ ಖಾತರಿ ನಿಗಮ ತಿದ್ದುಪಡಿ ಸಣ್ಣ ಠೇವಣಿದಾರರ ಹಿತ ರಕ್ಷಿಸಲಿದೆ. ಇಂತಹ ಕ್ರಮಗಳು ಸರ್ಕಾರದ ಪ್ರಯತ್ನಗಳಿಗೆ ಉತ್ತೇಜನ ನೀಡಲಿದೆ ಎಂದು ಹೇಳಿದರು.
ಹಿಂದಿನ ತಪ್ಪುಗಳನ್ನು ಸರಿಪಡಿಸಲು ಪೂರ್ವಾನ್ವಯವಾಗುವ ತೆರಿಗೆ ವ್ಯವಸ್ಥೆಯನ್ನು ತಂದಿದೆ. ಉದ್ಯಮದಿಂದ ಮೆಚ್ಚುಗೆಗೆ ಪಾತ್ರವಾಗುವ ಈ ಉಪಕ್ರಮ ಸರ್ಕಾರ ಮತ್ತು ಉದ್ಯಮದ ನಡುವಿನ ನಂಬಿಕೆಯನ್ನು ಬಲಪಡಿಸುತ್ತದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು.
ಇಂದು ಅಧಿಕಾರದಲ್ಲಿರುವ ಸರ್ಕಾರ ದೇಶದ ಹಿತ ದೃಷ್ಟಿಯಿಂದ ಅತಿ ದೊಡ್ಡ ಅಪಾಯಗಳನ್ನು ಸ್ವೀಕರಿಸುವ ಸರ್ಕಾರವಾಗಿದೆ. ಹಿಂದಿನ ಸರ್ಕಾರಗಳು ಅಪಾಯಗಳನ್ನು ಸ್ವೀಕರಿಸಲು ಸಾಧ್ಯವಾಗಿರಲಿಲ್ಲ. ಅದ ಕಾರಣ ಸರಕು ಸೇವಾ ತೆರಿಗೆ ಜಿ.ಎಸ್.ಟಿ ನನೆಗುದಿಗೆ ಬಿದ್ದಿತ್ತು. ನಾವು ಇಂದು ಜಿ.ಎಸ್.ಟಿಯನ್ನು ಅನುಷ್ಠಾನಗೊಳಿಸಿರುವುದಷ್ಟೇ ಅಲ್ಲದೇ ದಾಖಲೆ ಪ್ರಮಾಣದಲ್ಲಿ ಜಿ.ಎಸ್.ಟಿ ಸಂಗ್ರಹಕ್ಕೆ ಸಾಕ್ಷಿಯಾಗುತ್ತಿದ್ದೇವೆ ಎಂದರು.
***
Addressing the #CIIAnnualSession2021. Watch. https://t.co/HU8zczBL6g
— Narendra Modi (@narendramodi) August 11, 2021
CII की ये बैठक इस बार 75वें स्वतंत्रता दिवस के माहौल में, आज़ादी के अमृत महोत्सव के बीच हो रही है।
— PMO India (@PMOIndia) August 11, 2021
ये बहुत बड़ा अवसर है, भारतीय उद्योग जगत के नए संकल्पों के लिए, नए लक्ष्यों के लिए।
आत्मनिर्भर भारत अभियान की सफलता का बहुत बड़ा दायित्व, भारतीय उद्योगों पर है: PM @narendramodi
आज का नया भारत, नई दुनिया के साथ चलने के लिए तैयार है, तत्पर है।
— PMO India (@PMOIndia) August 11, 2021
जो भारत कभी विदेशी निवेश से आशंकित था, आज वो हर प्रकार के निवेश का स्वागत कर रहा है: PM @narendramodi
एक समय था जब हमें लगता था कि जो कुछ भी विदेशी है, वही बेहतर है।
— PMO India (@PMOIndia) August 11, 2021
इस psychology का परिणाम क्या हुआ, ये आप जैसे industry के दिग्गज भलीभांति समझते हैं।
हमारे अपने brand भी, जो हमने सालों की मेहनत के बाद खड़े किए थे, उनको विदेशी नामों से ही प्रचारित किया जाता था: PM @narendramodi
आज स्थिति तेज़ी से बदल रही है।
— PMO India (@PMOIndia) August 11, 2021
आज देशवासियों की भावना, भारत में बने प्रॉडक्ट्स के साथ है।
कंपनी भारतीय हो, ये जरूरी नहीं, लेकिन आज हर भारतीय, भारत में बने प्रॉडक्ट्स को अपनाना चाहता है: PM @narendramodi
आज भारत के युवा जब मैदान में उतरते हैं, तो उनमें वो हिचक नहीं होती।
— PMO India (@PMOIndia) August 11, 2021
वो मेहनत करना चाहते हैं, वो रिस्क लेना चाहते हैं, वो नतीजे लाना चाहते हैं।
Yes, We belong to this place- ये भाव आज हम अपने युवाओं में देख रहे हैं।
इसी प्रकार का आत्मविश्वास आज भारत के Startups में है: PM
हमारी industry पर देश के विश्वास का ही नतीजा है कि आज ease of doing business बढ़ रहा है, और ease of living में इजाफा हो रहा है।
— PMO India (@PMOIndia) August 11, 2021
Companies act में किए गए बदलाव इसका बहुत बड़ा उदाहरण हैं: PM @narendramodi
आज देश में वो सरकार है जो राष्ट्र हित में बड़े से बड़ा risk उठाने के लिए तैयार है।
— PMO India (@PMOIndia) August 11, 2021
GST तो इतने सालों तक अटका ही इसलिए क्योंकि जो पहले सरकार में वो political risk लेने की हिम्मत नहीं जुटा पाए।
हमने न सिर्फ GST लागू किया बल्कि आज हम record GST collection होते देख रहे हैं: PM