ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು ಗಗನ್ಯಾನ್ ಕಾರ್ಯಕ್ರಮದ ವ್ಯಾಪ್ತಿಯನ್ನು ವಿಸ್ತರಿಸುವ ಮೂಲಕ ಭಾರತೀಯ ಅಂತರಿಕ್ಷ ನಿಲ್ದಾಣದ ಮೊದಲ ಘಟಕದ ಕಟ್ಟಡಕ್ಕೆ ಅನುಮೋದನೆ ನೀಡಿದೆ. ಭಾರತೀಯ ಅಂತರಿಕ್ಷ್ ನಿಲ್ದಾಣದ (ಬಿಎಎಸ್-1) ಮೊದಲ ಮಾಡ್ಯೂಲ್ ಅಭಿವೃದ್ಧಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆಯನ್ನು ನೀಡಿದ್ದು, ಬಿಎಎಸ್ ಅನ್ನು ನಿರ್ಮಿಸಲು ಮತ್ತು ಕಾರ್ಯನಿರ್ವಹಿಸಲು ವಿವಿಧ ತಂತ್ರಜ್ಞಾನಗಳನ್ನು ಪ್ರದರ್ಶಿಸಲು ಮತ್ತು ಮೌಲ್ಯೀಕರಿಸಲು ಹಲವು ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತದೆ. BAS ಮತ್ತು ಪೂರ್ವಗಾಮಿ ಮಿಷನ್‌ಗಳಿಗಾಗಿ ಹೊಸ ತಂತ್ರಜ್ಞಾನ ಸೇರಿಸಲು ಗಗನ್‌ಯಾನ್ ಕಾರ್ಯಕ್ರಮದ ವ್ಯಾಪ್ತಿ ಮತ್ತು ನಿಧಿಯನ್ನು ಪರಿಷ್ಕರಿಸಲು ಮತ್ತು ಹಾಲಿ ಗಗನ್‌ಯಾನ್ ಕಾರ್ಯಕ್ರಮವನ್ನು ಪೂರೈಸಲು ಹೆಚ್ಚುವರಿ ಅಗತ್ಯತೆಗಳನ್ನು ಒದಗಿಸಲು ತೀರ್ಮಾನಿಸಲಾಗಿದೆ.
BAS ಗಾಗಿ ಅಭಿವೃದ್ಧಿಯ ವ್ಯಾಪ್ತಿ ಮತ್ತು ಪೂರ್ವಗಾಮಿ ಮಿಷನ್‌ಗಳನ್ನು ಸೇರಿಸಲು ಗಗನ್ಯಾನ್ ಕಾರ್ಯಕ್ರಮದಲ್ಲಿ ಪರಿಷ್ಕರಣೆ, ಮತ್ತು ಈಗಿರುವ ಗಗನ್ಯಾನ್ ಕಾರ್ಯಕ್ರಮದ ಬೆಳವಣಿಗೆಗಳಿಗಾಗಿ ಹೆಚ್ಚುವರಿ ಮಿಷನ್ ಮತ್ತು ಹೆಚ್ಚುವರಿ ಹಾರ್ಡ್‌ವೇರ್ ಅವಶ್ಯಕತೆಗಳನ್ನು ಒದಗಿಸಲು ಆದ್ಯತೆ ನೀಡಲಾಗುವುದು. ಈಗ ತಂತ್ರಜ್ಞಾನ ಅಭಿವೃದ್ಧಿ ಮತ್ತು ಪ್ರದರ್ಶನದ ಮಾನವ ಬಾಹ್ಯಾಕಾಶ ಯಾನ ಕಾರ್ಯಕ್ರಮವು ಎಂಟು ಕಾರ್ಯಾಚರಣೆಗಳ ಮೂಲಕ ಡಿಸೆಂಬರ್ 2028 ರೊಳಗೆ BAS-1 ರ ಮೊದಲ ಘಟಕವನ್ನು ಪ್ರಾರಂಭಿಸಿ ಪೂರ್ಣಗೊಳಿಸಲಾಗುವುದು
ಡಿಸೆಂಬರ್ 2018 ರಲ್ಲಿ ಅನುಮೋದಿಸಲಾದ ಗಗನ್ಯಾನ್ ಕಾರ್ಯಕ್ರಮವು ಮಾನವ ಬಾಹ್ಯಾಕಾಶ ಯಾನವನ್ನು ಕಡಿಮೆ ಭೂಮಿಯ ಕಕ್ಷೆಗೆ (LEO) ಕೈಗೊಳ್ಳಲು ಮತ್ತು ದೀರ್ಘಾವಧಿಯಲ್ಲಿ ಭಾರತೀಯ ಮಾನವ ಬಾಹ್ಯಾಕಾಶ ಪರಿಶೋಧನಾ ಕಾರ್ಯಕ್ರಮಕ್ಕೆ ಅಗತ್ಯವಾದ ತಂತ್ರಜ್ಞಾನಗಳ ಅಡಿಪಾಯವನ್ನು ಹಾಕಲು ಯೋಜಿಸಲಾಗಿತ್ತು. ಅಮೃತ್ ಕಾಲ್‌ನಲ್ಲಿ ಬಾಹ್ಯಾಕಾಶದ ದೃಷ್ಟಿ ಇತರ ವಿಷಯಗಳನ್ನು ಒಳಗೊಂಡಂತೆ, 2035 ರ ವೇಳೆಗೆ ಭಾರತೀಯ ಅಂತರಿಕ್ಷ್ ನಿಲ್ದಾಣವನ್ನು ಮತ್ತು 2040 ರ ವೇಳೆಗೆ ಇಂಡಿಯನ್ ಕ್ರೂಡ್ ಲೂನಾರ್ ಮಿಷನ್ ಅನ್ನು ರಚಿಸಲಾಗುತ್ತದೆ. ಎಲ್ಲಾ ಪ್ರಮುಖ ಬಾಹ್ಯಾಕಾಶ ಪ್ರಯಾಣದ ರಾಷ್ಟ್ರಗಳು ಅಗತ್ಯವಿರುವ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಲು ಮತ್ತು ಕಾರ್ಯಗತಗೊಳಿಸಲು ಸಾಕಷ್ಟು ಪ್ರಯತ್ನಗಳು ಮತ್ತು ಹೂಡಿಕೆಗಳನ್ನು ಮಾಡುತ್ತಿವೆ. ದೀರ್ಘಾವಧಿಯ ಮಾನವ ಬಾಹ್ಯಾಕಾಶ ಕಾರ್ಯಾಚರಣೆಗಳು ಮತ್ತು ಚಂದ್ರ ಮತ್ತು ಅದರಾಚೆಗೆ ಮತ್ತಷ್ಟು ಅನ್ವೇಷಣೆ ಕೈಗೊಳ್ಳಲು ಕ್ರಮ ಕೈಗೊಳ್ಳಲಾಗುತ್ತಿವೆ.
ಗಗನ್ಯಾನ್ ಕಾರ್ಯಕ್ರಮವು ಇಸ್ರೋ ನೇತೃತ್ವದ ರಾಷ್ಟ್ರೀಯ ಪ್ರಯತ್ನವಾಗಿದೆ, ಇದು ಕೈಗಾರಿಕೆ, ಅಕಾಡೆಮಿ ಮತ್ತು ಇತರ ರಾಷ್ಟ್ರೀಯ ಏಜೆನ್ಸಿಗಳ ಪಾಲುದಾರಿಕೆ ಹೊಂದಿದೆ. ಇಸ್ರೋದಲ್ಲಿ ಸ್ಥಾಪಿಸಲಾದ ಯೋಜನಾ ನಿರ್ವಹಣಾ ಕಾರ್ಯವಿಧಾನದ ಮೂಲಕ ಈ ಕಾರ್ಯಕ್ರಮವನ್ನು ಕಾರ್ಯಗತಗೊಳಿಸಲಾಗುತ್ತದೆ. ದೀರ್ಘಾವಧಿಯ ಮಾನವ ಬಾಹ್ಯಾಕಾಶ ಕಾರ್ಯಾಚರಣೆಗಳಿಗಾಗಿ ನಿರ್ಣಾಯಕ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವುದು ಮತ್ತು ಪ್ರದರ್ಶಿಸುವುದು ಗುರಿಯಾಗಿದೆ. ಈ ಗುರಿಯನ್ನು ಸಾಧಿಸಲು, 2026 ರ ವೇಳೆಗೆ ಗಗನ್ಯಾನ್ ಕಾರ್ಯಕ್ರಮದ ಅಡಿಯಲ್ಲಿ ISRO ನಾಲ್ಕು ಕಾರ್ಯಾಚರಣೆಗಳನ್ನು ಕೈಗೊಳ್ಳುತ್ತದೆ ಮತ್ತು BAS ನ ಮೊದಲ ಮಾಡ್ಯೂಲ್ ಮತ್ತು BAS ಗಾಗಿ ವಿವಿಧ ತಂತ್ರಜ್ಞಾನಗಳ ಪ್ರಾತ್ಯಕ್ಷಿಕೆ ಮತ್ತು ದೃಢೀಕರಣಕ್ಕಾಗಿ ನಾಲ್ಕು ಕಾರ್ಯಾಚರಣೆಗಳನ್ನು ಡಿಸೆಂಬರ್ 2028 ರೊಳಗೆ ಅಭಿವೃದ್ಧಿಪಡಿಸುತ್ತದೆ.
ಕಡಿಮೆ ಭೂಮಿಯ ಕಕ್ಷೆಗೆ ಮಾನವ ಬಾಹ್ಯಾಕಾಶ ಕಾರ್ಯಾಚರಣೆಗಳಿಗೆ ಅಗತ್ಯವಾದ ತಾಂತ್ರಿಕ ಸಾಮರ್ಥ್ಯಗಳನ್ನು ಪಡೆದುಕೊಳ್ಳುತ್ತದೆ. ಭಾರತೀಯ ಅಂತರಿಕ್ಷ್ ನಿಲ್ದಾಣದಂತಹ ರಾಷ್ಟ್ರೀಯ ಬಾಹ್ಯಾಕಾಶ ಆಧಾರಿತ ಸೌಲಭ್ಯವು ಮೈಕ್ರೋಗ್ರಾವಿಟಿ ಆಧಾರಿತ ವೈಜ್ಞಾನಿಕ ಸಂಶೋಧನೆ ಮತ್ತು ತಂತ್ರಜ್ಞಾನ ಅಭಿವೃದ್ಧಿ ಚಟುವಟಿಕೆಗಳನ್ನು ಉತ್ತೇಜಿಸುತ್ತದೆ. ಇದು ತಾಂತ್ರಿಕ ಸ್ಪಿನ್-ಆಫ್‌ಗಳಿಗೆ ಕಾರಣವಾಗುತ್ತದೆ ಮತ್ತು ಸಂಶೋಧನೆ ಮತ್ತು ಅಭಿವೃದ್ಧಿಯ ಪ್ರಮುಖ ಕ್ಷೇತ್ರಗಳಲ್ಲಿ ನಾವೀನ್ಯತೆಗಳನ್ನು ಉತ್ತೇಜಿಸುತ್ತದೆ. ಮಾನವ ಬಾಹ್ಯಾಕಾಶ ಕಾರ್ಯಕ್ರಮದಲ್ಲಿ ವರ್ಧಿತ ಕೈಗಾರಿಕಾ ಭಾಗವಹಿಸುವಿಕೆ ಮತ್ತು ಆರ್ಥಿಕ ಚಟುವಟಿಕೆಯು ಉದ್ಯೋಗ ಸೃಷ್ಟಿಗೆ ಕಾರಣವಾಗುತ್ತದೆ, ವಿಶೇಷವಾಗಿ ಬಾಹ್ಯಾಕಾಶ ಮತ್ತು ಸಂಬಂಧಿತ ವಲಯಗಳಲ್ಲಿ ಉನ್ನತ ತಂತ್ರಜ್ಞಾನದ ಕ್ಷೇತ್ರಗಳಲ್ಲಿ ಹೆಚ್ಚು ಗಮನಹರಿಸಲಾಗುತ್ತದೆ.
ಈಗಾಗಲೇ ಅನುಮೋದಿಸಲಾದ ಕಾರ್ಯಕ್ರಮದಲ್ಲಿ ₹11170 ಕೋಟಿ ನಿವ್ವಳ ಹೆಚ್ಚುವರಿ ನಿಧಿಯೊಂದಿಗೆ, ಪರಿಷ್ಕೃತ ದೊಂದಿಗೆ ಗಗನ್ಯಾನ್ ಕಾರ್ಯಕ್ರಮದ ಒಟ್ಟು ಅನುದಾನವನ್ನು ₹20193 ಕೋಟಿಗೆ ಹೆಚ್ಚಿಸಲಾಗಿದೆ.
ಈ ಕಾರ್ಯಕ್ರಮವು ವಿಶೇಷವಾಗಿ ದೇಶದ ಯುವಕರಿಗೆ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ವೃತ್ತಿಜೀವನವನ್ನು ತೆಗೆದುಕೊಳ್ಳಲು ಮತ್ತು ಮೈಕ್ರೋಗ್ರಾವಿಟಿ ಆಧಾರಿತ ವೈಜ್ಞಾನಿಕ ಸಂಶೋಧನೆ ಮತ್ತು ತಂತ್ರಜ್ಞಾನ ಅಭಿವೃದ್ಧಿ ಚಟುವಟಿಕೆಗಳಲ್ಲಿ ಅವಕಾಶಗಳನ್ನು ಪಡೆಯಲು ಒಂದು ಅನನ್ಯ ಅವಕಾಶವನ್ನು ಒದಗಿಸುತ್ತದೆ. ಪರಿಣಾಮವಾಗಿ ಆವಿಷ್ಕಾರಗಳು ಮತ್ತು ತಾಂತ್ರಿಕ ಸ್ಪಿನ್-ಆಫ್‌ಗಳು ಸಮಾಜಕ್ಕೆ ದೊಡ್ಡ ಪ್ರಮಾಣದಲ್ಲಿ ಪ್ರಯೋಜನವನ್ನು ನೀಡುತ್ತವೆ.
*****
Great news for the space sector! The Union Cabinet has approved the first step towards the Bharatiya Antariksh Station (BAS), expanding the Gaganyaan programme! This landmark decision brings us closer to a self-sustained space station by 2035 and a crewed lunar mission by 2040!…
— Narendra Modi (@narendramodi) September 18, 2024