Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭಾರತೀಯ ವಾಣಿಜ್ಯ ಸೇವೆ (ಐಟಿಎಸ್)ಯ ಅಧಿಕಾರಿಗಳಿಗೆ ಹಿರಿಯ ಆಡಳಿತಾತ್ಮಕ ದರ್ಜೆ(ಎಸ್.ಎ.ಜಿ.)ಗೆ ಸಿಟು ಪದೋನ್ನತಿ ನೀಡಲು ಸಂಪುಟ ಸಮ್ಮತಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು, 1989 ರಿಂದ 1991ರವರೆಗಿನ ತಂಡದ ಭಾರತೀಯ ವಾಣಿಜ್ಯ ಸೇವೆ (ಐ.ಟಿ.ಎಸ್.)ಯ ಅಧಿಕಾರಿಗಳಿಗೆ ಹಿರಿಯ ಆಡಳಿತಾತ್ಮಕ ದರ್ಜೆ (ಎಸ್.ಎ.ಜಿ.)ಯ ಹಂತಕ್ಕೆ ವೈಯಕ್ತಿಕ ಆಧಾರದಲ್ಲಿ, ಒಂದು ಬಾರಿಯ ವಿನಾಯಿತಿಯೊಂದಿಗೆ, ಎಸ್.ಎ.ಜಿ.ಯಲ್ಲಿ ಕೇಡರ್ ಹುದ್ದೆ ಯಾವಾಗ ಹುದ್ದೆಗಳು ಸೃಷ್ಟಿಯಾಗುತ್ತವೋ ಆಗ ಈ ಅಧಿಕಾರಿಗಳನ್ನು ಖಾಲಿ ಇರುವ ಕೇಡರ್ ಹುದ್ದೆಗೆ ಹೊಂದಾಣಿಕೆ ಮಾಡಬಹುದು ಮತ್ತು ಈ ಅಧಿಕಾರಿಗಳು ಹಾಲಿ ಹೊಂದಿರುವ ಹುದ್ದೆಗಳನ್ನು ಅವರ ನಿವೃತ್ತಿಯ ನಂತರ ಕಿರಿಯ ಆಡಳಿತಾತ್ಮಕ ಗ್ರೇಡ್ (ಜೆಎಜಿ) ನ ಮೂಲ ಮಟ್ಟದಲ್ಲೇ ಉಳಿಸಿಕೊಳ್ಳುವ ಅಥವಾ ಎಸ್.ಎ.ಜಿ.ಯ ಮಂಜೂರಾದ ಮೂಲ ಬಲಕ್ಕೆ ಅದರ ವ್ಯಾಪ್ತಿಯಲ್ಲಿ ಉಳಿಸಿಕೊಳ್ಳಬಹುದು ಎಂಬ ಷರತ್ತಿನೊಂದಿಗೆ ಇನ್- ಸಿಟು ಪದೋನ್ನತಿ ನೀಡಲು ತನ್ನ ಅನುಮೋದನೆ ನೀಡಿದೆ,

ಈ ಅನುಮೋದನೆಯು, ಭಾರತದ ರಫ್ತು ವಲಯದ ಬೆಳವಣಿಗೆಯನ್ನು ಹೆಚ್ಚಿಸುವ ಗುರಿ ಸಾಧನೆ ಉದ್ದೇಶಕ್ಕಾಗಿ, ವಾಣಿಜ್ಯ ಉತ್ತೇಜನ ಮತ್ತು ವಾಣಿಜ್ಯ ರಕ್ಷಣೆಯ ಕ್ಷೇತ್ರದ ವಿವಿಧ ಗಣನೀಯ ಕ್ಷೇತ್ರಿಯ ಜ್ಞಾನ ಹೊಂದಿರುವ ಹಿರಿಯ ಐ.ಟಿ.ಎಸ್. ಅಧಿಕಾರಿಗಳನ್ನು ಲಾಭದಾಯಕವಾಗಿ ಉಳಿಸಿಕೊಳ್ಳಲು ಅವಕಾಶ ನೀಡುತ್ತದೆ, ಎಸ್.ಎ.ಜಿ. ಹಂತಕ್ಕೆ ಪದೋನ್ನತಿ ನೀಡುವ ಅಂಗೀಕಾರವು, ಈ ಅಧಿಕಾರಿಗಳನ್ನು ಕೇಂದ್ರೀಯ ಸಿಬ್ಬಂದಿ ಯೋಜನೆ ಅಡಿಯಲ್ಲಿ ಎಂಪ್ಯಾನಲ್ ಮಾಡಲು ಪರಿಗಣಿಸಲೂ ಅವಕಾಶ ನೀಡುತ್ತದೆ ಮತ್ತು ಈ ಮೇಲೆ ಹೇಳಲಾದ ಯೋಜನೆಯಲ್ಲಿ ಭಾರತ ಸರ್ಕಾರದ ವಿವಿಧ ಸಚಿವಾಲಯ/ ಇಲಾಖೆಗಳಲ್ಲಿ ಸೇವೆ ಸಲ್ಲಿಸಲು ಅವಕಾಶ ಇರುವ ಅಧಿಕಾರಿಗಳ ಪಟ್ಟಿಯಲ್ಲಿ ಸೇರಿಸಲೂ ಅವಕಾಶ ಕೊಡುತ್ತದೆ. ಭಾರತೀಯ ವಾಣಿಜ್ಯ ಸೇವೆಗಳನ್ನು ಭಾರತದ ಅಂತಾರಾಷ್ಟ್ರೀಯ ವಾಣಿಜ್ಯ ಮತ್ತು ವಾಣಿಜ್ಯ ಉತ್ತೇಜನಕ್ಕಾಗಿ ಹೆಚ್ಚುತ್ತಿದ್ದ ಅಗತ್ಯವನ್ನು ಪೂರೈಸಲು ಕೇಂದ್ರೀಯ ಗ್ರೂಪ್ ಎ ಸೇವೆ ಎಂದು ಸೃಷ್ಟಿಸಲಾಗಿತ್ತು.

******

AKT/VBA/SH